Crop Relief: 12,000 ರೈತರಿಗೆ ಇನ್ನೂ ಬರ ಪರಿಹಾರ ಹಣ ಜಮೆ ಆಗಿಲ್ಲ..!
ನಮಸ್ಕಾರ ಬಂಧುಗಳೇ ಬರ ಪರಿಹಾರದ ಹಣವು ಈಗಾಗಲೇ ಹಲವು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನುಳಿದ ರೈತರಿಗೆ ಇನ್ನೂ ಸಹ ಬರ ಪರಿಹಾರ ಹಣ ಜಮಾವಾಗಿಲ್ಲ. ಆದರೆ ಈ ಜಿಲ್ಲೆಗಳಲ್ಲಿ 12 ಸಾವಿರ ರೈತರಿಗೆ ತಾಂತ್ರಿಕ ಕಾರಣಗಳಿಂದ ಬರ ಪರಿಹಾರದ ಹಣ ಅವರ ಬ್ಯಾಂಕ್ ಖಾತೆಗೆ ಜಮಾವಾಗಿಲ್ಲ. ಹಾಗಾದ್ರೆ ಏಕೆ ಬರ ಪರಿಹಾರದ ಹಣ ಜಮಾವಾಗಿಲ್ಲ ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ಬರ ಪರಿಹಾರ
ಕೆಲವು ತಿಂಗಳುಗಳಿಂದ ಮಳೆ ಬರದ ಕಾರಣ ಸರ್ಕಾರವು ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿತ್ತು. ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಅನುದಾನದಲ್ಲಿ ಎಸ್ ಡಿ ಆರ್ ಎಫ್[SDRF], ಎನ್ ಡಿ ಆರ್ ಎಫ್[NDRF] ನಿಯಮಾನುಸಾರ ಜಮಾ ಮಾಡಲಾಗುತ್ತಿದೆ. ಮಳೆಯಾಶ್ರೀತ ಪ್ರತಿ ಹೆಕ್ಟೇರ್ ಗೆ 8,500 ನೀರಾವರಿಯ ಪ್ರತಿ ಹೆಕ್ಟೇರ್ ಗೆ 17000 ದಂತೆ ಒಬ್ಬ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್ ವರೆಗೆ ನೀಡಲಾಗುತ್ತದೆ. ಪರಿಹಾರದ ಹಣ ಜಮಾವಾಗದ ರೈತರು ಆಯಾ ತಾಲ್ಲೂಕಿನಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಈಗಾಗಲೇ ಸರ್ಕಾರ ತಿಳಿಸಿದೆ.
ಬೆಳೆ ಹಾನಿಯ ಹಣವನ್ನು ರೈತರ ನೀಡಿರುವ ದಾಖಲೆ ಆಧಾರದ ಮೇಲೆ ಮತ್ತು ಬೆಳೆ ಸಮೀಕ್ಷೆ ವರದಿ ಆಧಾರದ ಮೇಲೆ ಹಣವನ್ನು ಪಾವತಿ ಮಾಡಲು ಕ್ರಮವಹಿಸಲಾಗುತ್ತದೆ. ಈಗಾಗಲೇ ಹಲವು ರೈತರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರದ ಹಣ ಜಮವಾಗಿದೆ. ಆದರೆ ಇನ್ನೂ ಹೆಚ್ಚಿನ ರೈತರಿಗೆ ಪರಿಹಾರದ ಹಣ ಜಮವಾಗಿಲ್ಲ ಅಂಥವರು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಈಗಾಗಲೇ ಸರ್ಕಾರದಿಂದ 1 ರಿಂದ 9ನೇ ಹಂತದವರೆಗೆ ಜಿಲ್ಲೆಯ 1,69,175 ರೈತರಿಗೆ ತಲಾ 2,000 ದಂತೆ ಫೆಬ್ರವರಿ ತಿಂಗಳಿನಲ್ಲಿಯೇ 33.53 ಕೋಟ್ಯಾ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳ ತಾಲ್ಲೂಕನ್ನು ತೀವ್ರ ಬರಪೀಡಿತ ಎಂದು ಘೋಷಿಸಿ ಆ ತಾಲ್ಲೂಕಿನ ರೈತರಿಗೆ ಸರ್ಕಾರದಿಂದ ಬರ ಪರಿಹಾರ ನೀಡಲಾಗಿದೆ.
12 ಸಾವಿರ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾವಾಗಿಲ್ಲ
ಒಟ್ಟು 12,406 ರೈತರಿಗೆ ಬರ ಪರಿಹಾರದ ಹಣ ಜಮವಾಗಿಲ್ಲ ಏಕೆಂದರೆ ರೈತರ ಬ್ಯಾಂಕ್ ಖಾತೆಗಳಿಂದ ಸಂಬಂಧಿಸಿದ ವಿವಿಧ ತಾಂತ್ರಿಕ ಕಾರಣಗಳಿಂದ ಪರಿಹಾರದ ಹಣ ಜಮಾವಾಗಿಲ್ಲ. ಈ ಕುರಿತು ಈಗಾಗಲೇ ಎಲ್ಲ ತಹಶೀಲ್ದಾರರಿಗೆ ರೈತರ ಪಟ್ಟಿಯನ್ನು ಗ್ರಾಮವಾರು ವಿಂಗಡಿಸಿ ಕಳುಹಿಸಲಾಗಿದ್ದು, ಅಂತಹ ಖಾತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರೈತರ ಬ್ಯಾಂಕ್ ಖಾತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿದ ನಂತರ ಮುಂದಿನ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾವಾಗಲಿದೆ ಎಂದು ತಿಳಿಸಲಾಗಿದೆ.
ಜಿಲ್ಲೆಗಳಲ್ಲಿ ಬರದಿಂದ ತೋಟಗಾರಿಕೆ ಮತ್ತು ಕೃಷಿ ಸೇರಿ ಒಟ್ಟು 1,93,805 ಕ್ಷೇತ್ರದ ಬೆಳೆ ಹಾನಿಯಿಂದ ಸುಮಾರು ರೂ.1,997 ಕೋಟಿ ನಷ್ಟ ಉಂಟಾಗಿದೆ. ಇದರಲ್ಲಿ 264 ಕೋಟಿ ಇನ್ ಪುಟ್ ಸಬ್ಸಿಡಿಯನ್ನು ಎಸ್ ಡಿ ಆರ್ ಎಫ್[SDRF], ಎನ್ ಡಿ ಆರ್ ಎಫ್[NDRF] ನಿಯಮಾವಳಿಗಳ ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರ ಅನ್ವಯದಿಂದ ಈಗ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಬಿಡುಗಡೆಯಾಗುತ್ತಿದೆ.
ಬರ ಪರಿಹಾರದ ಹಣ ಬಂದಿಲ್ಲದವರು ಈ ದಾಖಲೆಯನ್ನು ಸರಿಪಡಿಸಿಕೊಳ್ಳಿ
ಹೌದು ಗೆಳೆಯರೇ, ಈಗಾಗಲೇ ಸರ್ಕಾರವು ಹಲವು ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ ಮಾಡಲಾಗಿದೆ. ಆದರೆ ಕೆಲವು ರೈತರ ಬ್ಯಾಂಕ್ ಖಾತೆಗೆ ಅಂದರೆ 12000 ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಇನ್ನು ಜಮವಾಗಿಲ್ಲ, ಅಂಥವರು ಈ ಕೆಲವು ಸಮಸ್ಯೆಗಳಿಗೆ ಒಳಗಾಗಿರುತ್ತೀರಿ.
ಈ ಕೆಲವು ಸಮಸ್ಯೆಗಳೆಂದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡದೇ ಇರುವುದು [ಅಂದರೆ ಹತ್ತು ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು], ರೈತರ ಬ್ಯಾಂಕ್ ಖಾತೆ ಬಂದಾಗಿರುವುದು, ತಪ್ಪಾದ ಬ್ಯಾಂಕ್ ಸಂಖ್ಯೆಯನ್ನು ನೀಡಿರುವುದರಿಂದ, ಪಹಣಿಗೆ ಆಧಾರ್ ಜೋಡಣೆ ಆಗಿರದ ಕಾರಣ, ಇದೇ ರೀತಿ ವಿವಿಧ ತಾಂತ್ರಿಕ ದೋಷಗಳಿಂದ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾವಾಗಿಲ್ಲ. ಈ ಸಮಸ್ಯೆಗಳಿಗೆ ಒಳಗಾಗಿದ್ದರೆ ಆದಷ್ಟು ಬೇಗ ಸರಿಯಾದ ದಾಖಲೆಗಳನ್ನು ಸೇರ್ಪಡಿಸಿಕೊಳ್ಳಿ. ಹಾಗಾದರೆ ಆನ್ಲೈನ್ ಮೂಲಕ ಬರ ಪರಿಹಾರದ ಹಣ ಜಮಾವಾಗಿದೆಯೋ ಇಲ್ಲವೋ ಎಂಬುದನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಆನ್ಲೈನ್ ಮೂಲಕ ಬರ ಪರಿಹಾರದ ಹಣ ಜಮಾ ವಾಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ
ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ ವಾಗಿರುವುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಚೆಕ್ ಮಾಡಿಕೊಳ್ಳುವ ವಿಧಾನವನ್ನು ಹಂತ ಹಂತವಾಗಿ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ಅನ್ನು ಓಪನ್ ಮಾಡಿಕೊಂಡು.
- ಅಲ್ಲಿ ನೀವು ‘DBT Karnataka’ ಎಂಬ ಅಪ್ಲಿಕೇಶನ್ ಅನ್ನು ಅಥವಾ ಅಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು DBT Karnataka ಆಪ್ ಅನ್ನು ಓಪನ್ ಮಾಡಿಕೊಳ್ಳಿ, ಅಲ್ಲಿ ನಿಮಗೆ ಎಂಟರ್ ಆಧಾರ್ ನಂಬರ್ ಎಂದು ಕಾಣಿಸುತ್ತದೆ.
- ಅಲ್ಲಿ ನೀವು ಫಲಾನುಭವಿಗಳ ‘ಆಧಾರ ಸಂಖ್ಯೆಯನ್ನು ಎಂಟರ್’ ಮಾಡಿ ‘Get OTP’ ಬಟನ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ಫಲಾನುಭವಿಗಳ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ಎಂಟರ್ ಮಾಡಿ ‘Verify’ ಬಟನ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮಗೆ ಫಲಾನುಭವಿಗಳ ವೈಯಕ್ತಿಕ ವಿವರಗಳು ಕಾಣಿಸುತ್ತದೆ ನಂತರ ನಿಮಗೆ ಮೊಬೈಲ್ ನಂಬರ್ ಎಂಟರ್ ಮಾಡಲು ಕಾಣಿಸುತ್ತದೆ ಅಲ್ಲಿ ನೀವು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ ಓಕೆ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ‘Create mPIN’ ಎಂದು ತಿಳಿಸಲಾಗುತ್ತದೆ. ಅಲ್ಲಿ ನೀವು ನಿಮಗೆ ನೆನಪಿನಲ್ಲಿಟ್ಟುಕೊಳ್ಳಬಹುದಾದ ನಾಲ್ಕು ಅಂಕಿಯ mPIN ಅನ್ನು ಎಂಟರ್ ಮಾಡಿ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ‘Select Beneficiary’ ಎಂಬ ಆಪ್ಷನ್ ನಲ್ಲಿ ನೀವು add ಮಾಡಿರೋ ಫಲಾನುಭವಿಯನ್ನು ಆಯ್ಕೆ ಮಾಡಿಕೊಳ್ಳಿ.
- ಈಗ ನಿಮಗೆ ಕ್ರಿಯೇಟ್ ಮಾಡಿಕೊಂಡಿರುವ mPIN ಎಂಟರ್ ಮಾಡಲು ಕೇಳುತ್ತದೆ. ಎಂಟರ್ ಮಾಡಿಕೊಂಡು ‘Login’ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ‘Payment Status’ ಎಂಬ ಮೊದಲನೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮಗೆ ನಾಲ್ಕು ಆಪ್ಷನ್ ಗಳು ಕಾಣಿಸುತ್ತದೆ, ಅಲ್ಲಿ ನೀವು ‘input subsidy for crop loss’ ಎಂಬ ಮೂರನೇ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಈಗ ನಿಮಗೆ ರಾಜ್ಯ ಸರ್ಕಾರದಿಂದ ಬರ ಪರಿಹಾರದ 2000 ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ವಾಗಿರುವ ಎಲ್ಲ ವಿವರವನ್ನು ಇಲ್ಲಿ ಕಾಣಿಸುತ್ತದೆ.
- ಅದಲ್ಲದೆ ಯಾವ ದಿನಾಂಕದಂದು ಹಣ ವರ್ಗಾವಣೆಯಾಗಿದೆ ಎಂಬ ಎಲ್ಲ ವಿವರವನ್ನು ಇಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
ಈ ರೀತಿ ನೀವು ಸುಲಭವಾಗಿ ಆನ್ಲೈನ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾವಾಗಿದೆಯೋ ಇಲ್ಲವೋ ಎಂದು ಆನ್ಲೈನ್ ಮೂಲಕ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ .
ಬರ ಪರಿಹಾರದ ಹಣ ಜಮಾವಾಗಿಲ್ಲದವರು ಇದನ್ನು ಗಮನಿಸಿ
ಹೌದು ಗೆಳೆಯರೇ, ಈಗಾಗಲೇ ಹೆಚ್ಚಿನ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾವಾಗಿದೆ. ಆದರೆ ಕೆಲವರು ರೈತರಿಗೆ ಮಾತ್ರ ಬರ ಪರಿಹಾರದ ಹಣ ಜಮವಾಗಿಲ್ಲ. ಈಗಾಗಲೇ ಆನ್ಲೈನ್ ಮೂಲಕ ನಿಮ್ಮ ಹಳ್ಳಿಯ ಬರ ಪರಿಹಾರದ ಪಟ್ಟಿಯನ್ನು ಚೆಕ್ ಮಾಡಿಕೊಂಡು ಅಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೋ ಎಂದು ಪರಿಶೀಲನೆ ಮಾಡಿಕೊಡಬಹುದಾಗಿದೆ.
ಒಂದು ವೇಳೆ ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಎಂದರೆ ನಿಮ್ಮ ಊರಿನ ಹತ್ತಿರವಿರುವ ಗ್ರಾಮ ಲೆಕ್ಕಾಧಿಕರಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯಕ್ಕೆ 3454 ಕೋಟಿ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ. ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ರಾಜ್ಯ ಸರ್ಕಾರವು 34 ಲಕ್ಷ ರೈತರ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡರವರು ತಿಳಿಸಿದ್ದಾರೆ.
ಈಗಾಗಲೇ ಹೆಚ್ಚಿನ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಆದರೆ ಕೆಲವರು ಇತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಇನ್ನೂ ಜಮಾವಾಗಿಲ್ಲ. ಅಂಥವರಿಗೆ ಏಕೆ ಜಮಾ ವಾಗಿಲ್ಲ ಎಂದರೆ ಅವರ ದಾಖಲೆಗಳ ತಾಂತ್ರಿಕ ದೋಷದಿಂದ ಮತ್ತು ಇನ್ನಿತರ ಸಮಸ್ಯೆಗಳಿಂದ ಬ್ಯಾಂಕ್ ಖಾತೆಗೆ ಹಣ ಜಮಾವಾಗಿಲ್ಲ. ಬರ ಪರಿಹಾರದ ಹಣ ಜಮಾವಾಗದ ರೈತರು ಆಯಾ ತಾಲ್ಲೂಕಿನಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ಅಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಏಕೆ ಬರ ಪರಿಹಾರದ ಹಣ ಜಮವಾಗಿಲ್ಲದ ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.