ಸ್ವಂತ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತರಿಗೆ 25000 ಸಿಗುತ್ತದೆ…! ಯಾವ ರಾಜ್ಯದ ರೈತರಿಗೆ ಸಿಗುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ..!

ಸ್ವಂತ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತರಿಗೆ 25000 ಸಿಗುತ್ತದೆ…! ಯಾವ ರಾಜ್ಯದ ರೈತರಿಗೆ ಸಿಗುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ..!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ರೈತರಿಗೆ ಉಪಯೋಗವಾಗಲಿ ಎಂದು ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರ ಕೂಡ ರಾಜ್ಯದಲ್ಲಿ ವಾಸಿಸುತ್ತಿರುವ ರೈತರಿಗೆ ಒಂದು ಹೊಸ ಯೋಜನೆಯನ್ನು ತಂದಿದೆ. ರೈತರಿಗೆ ಉಪಯೋಗವಾಗಲಿ ಎಂದು ಸರ್ಕಾರವು ಒಂದಲ್ಲ ಒಂದು ಹೊಸ ಯೋಜನೆಯನ್ನು ತರುತ್ತಿದೆ. ಸ್ವಂತ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರದಿಂದ 25,000 ಹಣವನ್ನು ಪಡೆದುಕೊಳ್ಳಲು ಸಾಧ್ಯವಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಜಂಟಿಯಾಗಿ ದೇಶದ ರೈತರಿಗಾಗಿ ಹಲವಾರು ರೀತಿಯಲ್ಲಿ ಉಪಯೋಗವಾಗುವ ಯೋಜನೆಯನ್ನು ಜಾರಿಗೆ ತಂದಿವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಂತೆ ಈ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ರೂ.25000 ಗಳನ್ನು ಪಡೆದುಕೊಳ್ಳಬಹುದು.

ಏನಿದು ಹೊಸ ಯೋಜನೆ? ಯಾವ ರಾಜ್ಯದವರು ಪಡೆದುಕೊಳ್ಳಬಹುದು?

ಮೂರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿತು, ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ 6 ಸಾವಿರ ಹಣವನ್ನು ಜಮಾ ಮಾಡಲಾಗುತ್ತಿತ್ತು. ಪ್ರತಿ ಕಂತಿನಂತೆ ಅಂದರೆ 4 ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ 2000 ಹಣವನ್ನು ಜಮಾ ಮಾಡಲಾಗಿತ್ತು. ಇದೀಗ ಜಾರ್ಖಂಡ್ ಸರ್ಕಾರವು ತನ್ನ ರಾಜ್ಯದಲ್ಲಿ ವಾಸಿಸುತ್ತಿರುವ ರೈತರಿಗೆ ಮತ್ತೊಂದು ಹೊಸ ಯೋಜನೆ ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ ಸ್ವಂತ ಜಮೀನನ್ನು ಹೊಂದಿರುವ ರೈತರು ಸರ್ಕಾರದಿಂದ 25,000 ಸಹಾಯಧನವನ್ನು ಪಡೆದುಕೊಳ್ಳಬಹುದು.

ಜಾರ್ಖಂಡ್ ರೈತರಿಗೆ ಎಷ್ಟು ಭೂಮಿ ಹೊಂದಿದ್ದರೆ ಎಷ್ಟು ಹಣ ಸಿಗುತ್ತದೆ

ಜಾರ್ಖಂಡ್ ಸರ್ಕಾರವು ಅಲ್ಲಿರುವ ರೈತರಿಗೆ ಉಪಯೋಗವಾಗಲಿ ಎಂದು ಒಂದು ಹೊಸ ಯೋಜನೆಯನ್ನು ತಂದಿದೆ. ಈ ಯೋಜನೆ ಅಡಿಯಲ್ಲಿ 25000 ವರೆಗೂ ಸಹಾಯಧನವನ್ನು ಪಡೆದುಕೊಳ್ಳಬಹುದು. ಹಾಗಾದರೆ ಎಷ್ಟು ಎಕರೆ ಜಮೀನನ್ನು ಹೊಂದಿದರೆ ಹಣ ಸಿಗುತ್ತದೆ, ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

  • 1 ಎಕರೆ ಜಮೀನನ್ನು ಹೊಂದಿರುವ ರೈತರಿಗೆ ವರ್ಷಕ್ಕೆ ರೂ.10000 ಸಿಗುತ್ತದೆ.
  • 2 ಎಕರೆ ಜಮೀನನ್ನು ಹೊಂದಿರುವ ರೈತರಿಗೆ ವರ್ಷಕ್ಕೆ ರೂ.15000 ಸಿಗುತ್ತದೆ.
  • 4 ಎಕರೆ ಜಮೀನನ್ನು ಹೊಂದಿರುವ ರೈತರಿಗೆ ವರ್ಷಕ್ಕೆ ರೂ.20000 ಸಿಗುತ್ತದೆ.
  • 5 ಎಕರೆ ಜಮೀನನ್ನು ಹೊಂದಿರುವ ರೈತರಿಗೆ ವರ್ಷಕ್ಕೆ ರೂ.25000 ಸಿಗುತ್ತದೆ.

ಈ ರೀತಿ ಎಕರೆ ಆಧಾರದ ಮೇಲೆ ಜಾರ್ಖಂಡ್ ಸರ್ಕಾರವು ರೈತರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಜಾರ್ಖಂಡ್ ದ ರೈತರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ವರ್ಷಕ್ಕೆ 6 ಸಾವಿರ ಮತ್ತು ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ ರೂ.25,000 ಒಟ್ಟು ರೂ.31000 ಪಡೆದುಕೊಳ್ಳಬಹುದು. ಹಾಗಾದರೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಬಗ್ಗೆ ತಿಳಿದುಕೊಳ್ಳೋಣ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ರೈತರ ಸ್ವಂತ ಜಾಮೀನಿನ ಪಹಣಿ
  • ಪಾಸ್ಪೋರ್ಟ್ ಅಳತೆಯ ಫೋಟೋ
  • ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆ

ಎಲ್ಲಾ ದಾಖಲೆಗಳು ಇದ್ದರೆ ಜಾರ್ಖಂಡ್ ರಾಜ್ಯದ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ಈ ಯೋಜನೆ ಅಡಿಯಲ್ಲಿ 25000 ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು.

ಈ ಯೋಜನೆ ಕರ್ನಾಟಕದಲ್ಲಿ ಬರಬಹುದೇ

ಸದ್ಯದ ಸಮಯದಲ್ಲಿ ಜಾರ್ಖಂಡ್ ರಾಜ್ಯ ಸರ್ಕಾರ ತನ್ನ ರೈತರಿಗೆ ಉಪಯೋಗವಾಗಲಿ ಎಂದು ಈ ಒಂದು ಹೊಸ ಯೋಜನೆಯನ್ನು ತಂದಿದೆ. ಕರ್ನಾಟಕ ಸರ್ಕಾರ ಈ ಯೋಜನೆಯನ್ನು ರಾಜ್ಯದಲ್ಲಿಯೂ ಬರಬಹುದಾ ಎನ್ನುವುದನ್ನು ಕಾದು ನೋಡೋಣ. ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ತಂದರೆ ಕರ್ನಾಟಕದ ರೈತರಿಗೆ ಉಪಯೋಗವಾಗುತ್ತದೆ ಹಾಗಾದರೆ ಈ ಯೋಜನೆ ಕರ್ನಾಟಕದಲ್ಲಿ ಯಾವಾಗ ಬರುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಕೇಂದ್ರ ಸರ್ಕಾರವು ದೇಶದ ಪ್ರತಿಯೊಬ್ಬ ರೈತರಿಗೆ ಉಪಯೋಗವಾಗಲಿ ಎಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತರಲಾಗಿತ್ತು. ಈ ಯೋಜನೆ ಅಡಿಯಲ್ಲಿ ಹೆಚ್ಚಿನ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕತೆಗೆ ನೆರವಾಗಲಿ ಎಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತರಲಾಗಿದೆ. ಇದುವರೆಗೂ ಸುಮಾರು 16 ಕಂತಿನವರೆಗೂ ಈ ಯೋಜನೆಯ ಫಲಾನುಭವಿಗಳ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ವಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರು 6,000 ಹಣವನ್ನು ಪಡೆದುಕೊಳ್ಳುತ್ತಾರೆ, ಅಂದರೆ ವರ್ಷಕ್ಕೆ 3 ಕಂತಿನಂತೆ 4 ತಿಂಗಳಿಗೊಮ್ಮೆ 2,000 ಹಣವನ್ನು ಫಲಾನುಭವಿಗಳ ರೈತರ ಬ್ಯಾಂಕ್ ಖಾತೆಗೆ ಜಮಾವಾಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಥಿತಿ[ಸ್ಟೇಟಸ್]

ನೀವೇನಾದರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಅಂತವರಿಗೆ 4 ತಿಂಗಳಿಗೊಮ್ಮೆ 2000 ಹಣವನ್ನು ಪಡೆದುಕೊಳ್ಳುತ್ತೀರಾ. ಈ ಹಣವನ್ನು ನೀವು ಸುಲಭವಾಗಿ ಮೊಬೈಲ್ ಅನ್ನು ಬಳಸಿಕೊಂಡು ಹಣದ ಸ್ಥಿತಿ[ಸ್ಟೇಟಸ್]ಯನ್ನು ಚೆಕ್ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಬರುವ ಹಣವನ್ನು ಬಳಸಿಕೊಂಡು ರೈತರು ಗೊಬ್ಬರ ಮತ್ತು ಇನ್ನಿತರ ವಸ್ತುಗಳ ಖರೀದಿ ಮಾಡಲು ಉಪಯೋಗವಾಗುತ್ತದೆ. ರೈತರಿಗೆ ಉಪಯೋಗವಾಗಲಿ ಎಂದು ಈ ಯೋಜನೆಯನ್ನು ತರಲಾಗಿದೆ. ಹಾಗಾದರೆ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಸುಲಭವಾಗಿ ಹಣದ ಸ್ಥಿತಿ[ಸ್ಟೇಟಸ್]ಯನ್ನು ಚೆಕ್ ಮಾಡಿಕೊಳ್ಳುವ ಬಗ್ಗೆ ತಿಳಿದುಕೊಳ್ಳೋಣ.

ಆನ್ಲೈನ್ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತಿನ ಸ್ಥಿತಿ[ಸ್ಟೇಟಸ್]ಯನ್ನು ಪರಿಶೀಲನೆ ಮಾಡುವ ವಿಧಾನ

ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ pm ಕಿಸಾನ್ ಯೋಜನೆ ಅಡಿಯಲ್ಲಿ ಬರುವ ಹಣದ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.

  • ಮೊದಲು ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ pmkisan.gov.in ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ನಂತರ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನಿಮಗೆ ಫಾರ್ಮರ್ ಕಾರ್ನರ್ ಅಥವಾ ರೈತರ ಕಾರ್ನರ್ ವಿಭಾಗದಲ್ಲಿ ಫಲಾನುಭವಿ ಸ್ಥಿತಿ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, pm ಕಿಸಾನ್ ಯೋಜನೆಯ ಖಾತೆಯ ಸಂಖ್ಯೆ ಅಥವಾ ನಿಮ್ಮ ನೋಂದಣಿ ಆದ ಮೊಬೈಲ್ ಸಂಖ್ಯೆ ಅನ್ನು ಹಾಕಿ ನಮೂಂದಿಸಿ.
  • ನಮೂಂದಿಸಿದ ನಂತರ ಗೇಟ್ ಡೇಟಾ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಫಲಾನುಭವಿಗಳ ಸ್ಥಿತಿ[ಸ್ಟೇಟಸ್]ಯನ್ನು ನೋಡಲು ಅಥವಾ pm ಕಿಸಾನ್ ಯೋಜನೆಯ ಹಣದ ಸ್ಥಿತಿಯನ್ನು ನೋಡಲು ಕಾಣುತ್ತದೆ.
  • ಇಲ್ಲಿ ನೀವು ಈ ಯೋಜನೆ ಅಡಿಯಲ್ಲಿ ಕಂತಿನ ಸ್ಥಿತಿ[ಸ್ಟೇಟಸ್]ಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.

pm ಕಿಸಾನ್ ಯೋಜನೆಯ ಆಪ್ ಡೌನ್ಲೋಡ್ ಮಾಡಿಕೊಂಡು ಸ್ಥಿತಿ[ಸ್ಟೇಟಸ್]ಯನ್ನು ಪರಿಶೀಲನೆ ಮಾಡಿ

  • ಹೌದು ಗೆಳೆಯರೇ ನಿಮಗೇನಾದರೂ ಆನ್ಲೈನ್ ಮೂಲಕ ಹಣದ ಸ್ಥಿತಿಯನ್ನು ಪರಿಶೀಲನೆ ಮಾಡಲು ಕಷ್ಟಕರವಾದರೆ.
  • ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ಅನ್ನು ಓಪನ್ ಮಾಡಿಕೊಂಡು pm ಕಿಸಾನ್ / pmkisan ಎಂದು ಸರ್ಚ್ ಮಾಡಿ.
  • ನಂತರ ಆ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ಡೌನ್ಲೋಡ್ ಮಾಡಿಕೊಂಡಿದ ನಂತರ ಅಪ್ ಅನ್ನು ಓಪನ್ ಮಾಡಿ. ಈ ಮೇಲೆ ತಿಳಿಸಿಕೊಟ್ಟಿರುವ ಹಾಗೆಯೇ ವಿವರಗಳನ್ನು ಭರ್ತಿ ಮಾಡಿ.
  • ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು pm ಕಿಸಾನ್ ಯೋಜನೆಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.

pm ಕಿಸಾನ್ ಯೋಜನೆ ಅಡಿಯಲ್ಲಿ ಹಣ ಬರುತ್ತಿಲ್ಲವೆಂದರೆ ಈ ರೀತಿ ಮಾಡಿ

ಹೌದು ಗೆಳೆಯರೇ ಹೆಚ್ಚಿನ ರೈತರಿಗೆ ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ 6 ಸಾವಿರ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವೇ ರೈತರು ಮಾತ್ರ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುತ್ತಿಲ್ಲ, ಏಕೆಂದರೆ ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ ಅವರ ದಾಖಲೆಗಳ ಸಮಸ್ಯೆಯಿಂದ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥವರು ನಿಮ್ಮ ಊರಿನ ಹತ್ತಿರವಿರುವ ರೈತರ ಕಚೇರಿಗೆ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಈ ಯೋಜನೆ ಅಡಿಯಲ್ಲಿ ಏಕೆ ಹಣ ಬರುತ್ತಿಲ್ಲವೆಂದು ಪರಿಶೀಲನೆ ಮಾಡಿಕೊಳ್ಳಿ. ಹೆಚ್ಚಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದ ಕಾರಣ ಮತ್ತು ಇನ್ನಿತರ ಸಮಸ್ಯೆಗಳಿಂದ ಈ ಯೋಜನೆ ಅಡಿಯಲ್ಲಿ ಹಣ ಬರುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿದ ನಂತರ ನೀವು ಅರ್ಜಿ ಸಲ್ಲಿಸಿದ ಸಮಯದಿಂದ ಬರಬೇಕಾದ ಎಲ್ಲಾ ಹಣವನ್ನು ಒಂದೇ ಬಾರಿ ಬ್ಯಾಂಕ್ ಖಾತೆಗೆ ಜಮಾ ವಾಗುತ್ತದೆ.

ಇದನ್ನು ಗಮನಿಸಿ

ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ

ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.

ಧನ್ಯವಾದಗಳು

WhatsApp Group Join Now
Telegram Group Join Now

Leave a Comment