Solar Pumpset: ಸೋಲಾರ್ ಪಂಪ್ ಸೆಟ್ ಖರೀದಿಗೆ 80% ಸಹಾಯಧನ, ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಸೋಲಾರ್ ಪಂಪ್ ಸೆಟ್ ಯೋಜನೆ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಸೋಲಾರ್ ಕೃಷಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ..! ನೀವೇನಾದರೂ ಸೋಲಾರ್ ಕೃಷಿ ಪಂಪ್ ಸೆಟ್ ಖರೀದಿ ಮಾಡಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವಾಗ ಅರ್ಜಿ ಸಲ್ಲಿಸಬೇಕು? ಎಂಬ ಎಲ್ಲಾ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.
ಸೋಲಾರ್ ಕೃಷಿ ಪಂಪ್ ಸೆಟ್ [Solar Agricultural Pump Set Scheme]
ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ 40,000 ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವೇನಾದರೂ ಸೋಲಾರ್ ಕೃಷಿ ಪಂಪ್ ಸೆಟ್ ಅನ್ನು ಖರೀದಿ ಮಾಡಿದರೆ 80% ದರದಲ್ಲಿ ಸಹಾಯಧನ ಸಿಗಲಾಗುತ್ತದೆ. ಹಾಗಾದರೆ ಅದರ ಬಗ್ಗೆ ತಿಳಿದುಕೊಳ್ಳೋಣ.
ಇಂಧನ ಇಲಾಖೆ ಕಂಪನಿಯಲ್ಲಿ ಸೋಲಾರ್ ಕೃಷಿ ಪಂಪ್ ಸೆಟ್ ಗೆ ಸಬ್ಸಿಡಿ ಪಡೆಯುವುದು ಹೇಗೆ
ರಾಜ್ಯ ಸರ್ಕಾರದಿಂದ ತೆರೆದ ಅಥವಾ ಕೊರೆದ ಬಾವಿಗೆ ಸೋಲಾರ್ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸುವವರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. 3 HP ಯಿಂದ 10 HP ವರೆಗೆ ಸೋಲಾರ್ ಕೃಷಿ ಪಂಪ್ ಸೆಟ್ ಅನ್ನು ನೀಡಲಾಗುತ್ತದೆ. ಕರ್ನಾಟಕದ ರಾಜ್ಯ ಸರ್ಕಾರವು ಸೋಲಾರ್ ಕೃಷಿ ಪಂಪ್ ಸೆಟ್ ಅನ್ನು ಪಡೆಯಲು ಸಹಾಯಧನ ಶೇಕಡ 50% ಅನ್ನು ಹೆಚ್ಚಿಸಿದ್ದಾರೆ ಮತ್ತು ಕೇಂದ್ರ ಸರ್ಕಾರವು ಸಹ 30% ರಷ್ಟು ಸಹಾಯಧನ ದೊರೆಯಲಿದ್ದು. ರೈತರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು.
ಹೌದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಟ್ಟು 80% ಸೋಲಾರ್ ಕೃಷಿ ಪಂಪ್ ಸೆಟ್ ನ ಸಹಾಯಧನ ದೊರೆಯಲಿದೆ. ಉದಾಹರಣೆಗೆ ಹೇಳಬೇಕೆಂದರೆ ನೀವು ಒಂದು ಸೋಲಾರ್ ಕೃಷಿ ಪಂಪ್ ಸೆಟ್ ಅನ್ನು ತೆಗೆದುಕೊಳ್ಳಬೇಕೆಂದರೆ 2 ಲಕ್ಷ ಖರ್ಚಾದರೆ ಪಡೆದ ಅಭ್ಯರ್ಥಿಗೆ 40,000 ಪಾವತಿಸಬೇಕಾಗುತ್ತದೆ. ಉಳಿದ ಹಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು ಸಹಾಯಧನದ ರೂಪದಲ್ಲಿ ಹಣವನ್ನು ಪಾವತಿಸಲಾಗುತ್ತದೆ. ಹಾಗಾದರೆ ಸೋಲಾರ್ ಕೃಷಿ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಲು ಈ ಕೆಳಗಡೆ ಗಮನಿ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ
- ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯಲ್ಲಿ ಸೋಲಾರ್ ಕೃಷಿ ಪಂಪ್ ಸೆಟ್ ಅನ್ನು ಪಡೆಯಬಹುದು.
- ಒಂದು ಯಂತ್ರೋಪಕರಣಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲೇ ಸರ್ಕಾರದಿಂದ ಯಂತ್ರೋಪಕರಣಕ್ಕೆ ಸಹಾಯಧನ ಪಡೆದಿದ್ದರೆ ಅಂತಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಲ್ಲ.
ಈ ಯೋಜನೆಯ ಪ್ರಯೋಜನ ಏನು
- ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸೋಲಾರ್ ಪಂಪ್ ಸೆಟ್ ಅನ್ನು ಖರೀದಿ ಮಾಡಿದರೆ, ಈ ಯೋಜನೆಯ ಮೂಲಕ ಹೆಚ್ಚಿನ ಲಾಭವನ್ನು ಗಳಿಸಲು ಸಹಾಯವಾಗುತ್ತದೆ.
- ಈ ಯೋಜನೆಗಳನ್ನು ಬಳಕೆ ಮಾಡುವುದರಿಂದ ಕೃಷಿ ಕಾರ್ಯಗಳನ್ನು ಕೂಡ ನೀವು ಸುಲಭ ರೀತಿಯಲ್ಲಿ ನಡೆದುಕೊಂಡು ಹೋಗಬಹುದು. ಈ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಅಭ್ಯರ್ಥಿಯ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಭೂಮಿಯ ದಾಖಲು [ಪಹಣಿ]
- ಬಾಂಡ್ ಪೇಪರ್ [ರೂ. 20]
ಸೋಲಾರ್ ಕೃಷಿ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸುವ ವಿಧಾನ
- ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ
- ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ
- ಮೊದಲು ನೀವು ಸೋಲಾರ್ ಕೃಷಿ ಪಂಪ್ ಸೆಟ್ https://souramitra.com/solar/beneficiary/register/Kusum-Yojana-Component-B ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನಿಮಗೆ ನೋಟಿಫಿಕೇಶನ್ ಎಂದು ತೋರಿಸುತ್ತದೆ ಅದನ್ನು ಓದಿಕೊಂಡು ಕ್ಲೋಸ್[close] ಮಾಡಿ
- ನಂತರ ನಿಮಗೆ ಕೆಲವು ಪ್ರಶ್ನೆಗಳು ಕೇಳುತ್ತದೆ ಅದು ಏನೆಂದರೆ ಹೊಸ ಸಂಪರ್ಕಕ್ಕಾಗಿ (UNIP) ನೀವು ಈಗಾಗಲೇ ಯಾವುದೇ ಮೊತ್ತವನ್ನು ಪಾವತಿಸಿದ್ದೀರಾ [Have you already Paid any amount for new connection (UNIP)] ಎಂದು ಕೇಳುತ್ತದೆ ಅದಕ್ಕೆ ನೀವು ಇಲ್ಲ[no] ಎಂದು ಕ್ಲಿಕ್ ಮಾಡಿ.
- ಈಗ ನಿಮಗೆ ಹಲವು ಮಾಹಿತಿಗಳನ್ನು ಭರ್ತಿ ಮಾಡಲು ಕೇಳುತ್ತದೆ. ಅಲ್ಲಿ ನೀವು ಓದಿಕೊಂಡು ಸರಿಯಾದ ರೀತಿಯಲ್ಲಿ ಸರಿಯಾದ ಮಾಹಿತಿಯನ್ನು ಸಲ್ಲಿಸಿ.
- ಸಲ್ಲಿಸಿದ ನಂತರ ಅರ್ಜಿಯನ್ನು ಸಲ್ಲಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ಸಂಪೂರ್ಣವಾಗಿ ಅರ್ಜಿಯನ್ನು ಸಲ್ಲಿಸಲಾಗುತ್ತದೆ.
- ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸೋಲಾರ್ ಕೃಷಿ ಪಂಪ್ ಸೆಟ್ ಪಡೆಯಲು ಕೆಲವು ಆದ್ಯತೆಗಳನ್ನು ಅಳವಡಿಸಲಾಗಿದೆ, ಅದನ್ನು ಮೊದಲು ನೀವು ತಿಳಿದುಕೊಳ್ಳಿ.
ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ
- ನಿಮ್ಮ ಊರಿನಲ್ಲಿರುವ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಫಾರಂ ಅನ್ನು ಪಡೆದುಕೊಳ್ಳಬಹುದು.
- ಅಲ್ಲಿ ನೀವು ಸೋಲಾರ್ ಕೃಷಿ ಪಂಪ್ ಸೆಟ್ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು.
- ನಂತರ ಅವರು ನೀಡಿರುವ ಅರ್ಜಿಯನ್ನು ಭರ್ತಿ ಮಾಡಿ ಕಚೇರಿಗೆ ನೀಡಬೇಕಾಗುತ್ತದೆ.
ಈ ರೀತಿ ನೀವು ಸುಲಭವಾಗಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನಗಿಂತ ಆಫ್ ಲೈನ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಎಲ್ಲ ಮಾಹಿತಿಯನ್ನು ಅಲ್ಲೇ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ಸೋಲಾರ್ ಪಂಪ್ ಸೆಟ್
ನೀವೇನಾದರೂ ಸೋಲಾರ್ ಪಂಪ್ ಸೆಟ್ ಅನ್ನು ಪಡೆದುಕೊಳ್ಳಬೇಕೆಂದರೆ ಇದು ಒಳ್ಳೆಯ ಸಮಯ ಇದು ಹೇಳಬಹುದು ಏಕೆಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ 80% ಸಬ್ಸಿಡಿಯನ್ನು ನೀಡುತ್ತಿದ್ದಾರೆ. ನೀವೇನಾದರೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಮೇಲೆ ತಿಳಿಸಿರುವ ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀಡುವ ಫಾರಂ ಅನ್ನು ಬರ್ತೀನಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯು 30 ರಿಂದ 40 ದಿನಗಳವರೆಗೆ ಮಾತ್ರ ಅವಕಾಶವಿರುವುದರಿಂದ ಆದಷ್ಟು ಬೇಗ ಈ ಯೋಜನೆಯನ್ನು ಬಳಸಿಕೊಳ್ಳಿ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.