Crop Insurance Status: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ…! ಸ್ಟೇಟಸ್ ಚೆಕ್ ಮಾಡಿಕೊಳ್ಳಿ…

Crop Insurance Status: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ…! ಸ್ಟೇಟಸ್ ಚೆಕ್ ಮಾಡಿಕೊಳ್ಳಿ…

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ರಾಜ್ಯದ ರೈತರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. 13 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಜಮವಾಗಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮ್ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ. ಹಾಗಾದ್ರೆ ಯಾವ ರೈತರಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ. ಎಷ್ಟು ಹಣ ಬಿಡುಗಡೆಯಾಗಿದೆ ಮತ್ತು ಬಿಡುಗಡೆಯಾದ ಹಣವನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ

ಕಳೆದ ವರ್ಷ ಅಂದರೆ 2023ರಲ್ಲಿ ಮುಂಗಾರು ಹಾಗೂ ಹಿಂಗಾರಿನ ಹಂಗಾಮಿನ ಬೆಳೆಯ ವಿಮೆ ಮಾಡಿಸಿದ ರೈತರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಇದೇ ತಿಂಗಳು ಅಂತ್ಯದಲ್ಲಿ ರೈತರಿಗೆ ಗುಡ್ ನ್ಯೂಸ್ ಸಿಗಲಿದೆ. ರಾಜ್ಯದಲ್ಲಿ ಈ ವರ್ಷ ಬರಗಾಲದಿಂದ ತತ್ತರಿಸುತ್ತಿರುವ ರೈತರು ನಿರಾಳರಾಗುವ ಸಾಧ್ಯತೆ ಇದೆ. ಸಂಕಷ್ಟದಲ್ಲಿರುವ ರೈತರಿಗೆ ಅತಿ ಶೀಘ್ರದಲ್ಲೇ ಬೆಳೆವಿಮೆ ಹಣ ಜಮವಾಗಲಿದೆ. ಈ ಹಣದಿಂದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಖರೀದಿಗೆ ಸಹಾಯವಾಗಲಿದೆ. 2023ರಲ್ಲಿ ಮಳೆ ಬರದೇ ಇರದ ಕಾರಣ ರಾಜ್ಯ ಸರ್ಕಾರ ಒಟ್ಟು 122 ತಾಲೂಕ್ ಅನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿತ್ತು. ಈ ಕಾರಣದಿಂದ ಸರ್ಕಾರವು ಬರಪೀಡಿತ ಪ್ರದೇಶಗಳಿಗೆ ಹಿಂಗಾರು ಬೆಳೆ ವಿಮೆ ತುಂಬಲು ಮುಂದಾಗಿದೆ. ಹಾಗಾದರೆ ಹಿಂಗಾರು ಹಂಗಾಮಿನ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಅದನ್ನು ಚೆಕ್ ಮಾಡಿಕೊಳ್ಳಿ.

ಹಿಂಗಾರು ಹಂಗಾಮಿನ ಬೆಳೆ ವಿಮೆಯ ಹಣವನ್ನು ಚೆಕ್ ಮಾಡುವ ವಿಧಾನ

ರೈತರು ಸುಲಭವಾಗಿ ಆನ್ಲೈನ್ ಮೂಲಕ ಹಿಂಗಾರು ಹಂಗಾಮಿನ ಯಾವ ಯಾವ ಬೆಳೆಗೆ ಎಷ್ಟು ಹಣ ಜಮೆಯಾಗಿದೆ ಎಂದು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

  • ಮೊದಲು ನೀವು ಬೆಳೆ ವಿಮೆಯನ್ನು ಚೆಕ್ ಮಾಡಿ ಕೊಳ್ಳಲು https://samrakshane.karnataka.gov.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಎರಡು ಆಪ್ಷನ್ ಕಾಣುತ್ತದೆ. ಮೊದಲ ಆಪ್ಶನ್ ಆದ ವರ್ಷ [Year] ದ ಆಯ್ಕೆ ಅಲ್ಲಿ ನೀವು 2023-24 ಅನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನೀವು ಎರಡನೇ ಆಪ್ಷನ್ ಆದ ಋತು [Season] ಆಯ್ಕೆ ಅಲ್ಲಿ ನೀವು ರಬ್ಬಿ [Rabi] ಅನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿಕೊಂಡು ಗೋ [GO] ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ಹೋಂ ಪೇಜ್ ಕಾಣುತ್ತದೆ, ಅಲ್ಲಿ ನೀವು ಫಾರ್ಮರ್ಸ್ [Former] ಎಂಬ ಆಯ್ಕೆಯ ಕೆಳಗಡೆ ಚೆಕ್ ಸ್ಟೇಟಸ್ [Check Status] ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಲು ಕೇಳುತ್ತದೆ.
  • ಅಲ್ಲಿ ನಿಮಗೆ ಯಾವುದು ಸೂಕ್ತ ಆ ಸಂಖ್ಯೆಯನ್ನು ಹಾಕಿ, ನಂತರ ಕ್ಯಾಪ್ಚವನ್ನು ಎಂಟ್ರಿ ಮಾಡಬೇಕಾಗುತ್ತದೆ.
  • ಕ್ಯಾಪ್ಚವನ್ನು ಎಂಟ್ರಿ ಮಾಡಿದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಹಿಂಗಾರು ಹಂಗಾಮಿನ ಬೆಳೆ ವಿಮೆಯ ಸ್ಟೇಟಸ್ ಅನ್ನು ಸುಲಭವಾಗಿ ಮಾಡಿಕೊಳ್ಳಬಹುದು.
Crop Insurance status check
Crop Insurance status check

ಮುಂಗಾರು ಬೆಳೆ ವಿಮೆ

ಹೌದು ಗೆಳೆಯರೇ 2023-24ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ. ಎರಡು ಹಂತದಲ್ಲೂ ಸಹ ಬೆಳೆ ವಿಮೆ ಬಿಡುಗಡೆ ಯಾಗಿರುವುದರಿಂದ ರೈತರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ನೀವೇನಾದರೂ ಮುಂಗಾರು ಹಂಗಾಮಿನ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಹಿಂಗಾಮಿನ ಬೆಳೆ ವಿಮೆಯ ಸ್ಟೇಟಸ್ ರೀತಿಯ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಹಾಗಾದರೆ ಅದರ ಬಗ್ಗೆ ತಿಳಿದುಕೊಳ್ಳೋಣ.

ಮುಂಗಾರು ಹಂಗಾಮಿನ ಬೆಳೆ ವಿಮೆಯ ಹಣವನ್ನು ಚೆಕ್ ಮಾಡುವ ವಿಧಾನ

  • ರೈತರು ಸುಲಭವಾಗಿ ಆನ್ಲೈನ್ ಮೂಲಕ ಮುಂಗಾರು ಹಂಗಾಮಿನ ಯಾವ ಯಾವ ಬೆಳೆಗೆ ಎಷ್ಟು ಹಣ ಜಮೆಯಾಗಿದೆ ಎಂದು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
  • ಮೊದಲು ನೀವು ಬೆಳೆ ವಿಮೆಯನ್ನು ಚೆಕ್ ಮಾಡಿ ಕೊಳ್ಳಲು https://samrakshane.karnataka.gov.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಎರಡು ಆಪ್ಷನ್ ಕಾಣುತ್ತದೆ. ಮೊದಲ ಆಪ್ಶನ್ ಆದ ವರ್ಷ [Year] ದ ಆಯ್ಕೆ ಅಲ್ಲಿ ನೀವು 2023-24 ಅನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನೀವು ಎರಡನೇ ಆಪ್ಷನ್ ಆದ ಋತು [Season] ಆಯ್ಕೆ ಅಲ್ಲಿ ನೀವು ಖಾರೀಫ್ [Kharif] ಅನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿಕೊಂಡು ಗೋ [GO] ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ಹೋಂ ಪೇಜ್ ಕಾಣುತ್ತದೆ, ಅಲ್ಲಿ ನೀವು ಫಾರ್ಮರ್ಸ್ [Former] ಎಂಬ ಆಯ್ಕೆಯ ಕೆಳಗಡೆ ಚೆಕ್ ಸ್ಟೇಟಸ್ [Check Status] ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಲು ಕೇಳುತ್ತದೆ.
  • ಅಲ್ಲಿ ನಿಮಗೆ ಯಾವುದು ಸೂಕ್ತ ಆ ಸಂಖ್ಯೆಯನ್ನು ಹಾಕಿ, ನಂತರ ಕ್ಯಾಪ್ಚವನ್ನು ಎಂಟ್ರಿ ಮಾಡಬೇಕಾಗುತ್ತದೆ.
  • ಕ್ಯಾಪ್ಚವನ್ನು ಎಂಟ್ರಿ ಮಾಡಿದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಮುಂಗಾರು ಹಂಗಾಮಿನ ಬೆಳೆ ವಿಮೆಯ ಸ್ಟೇಟಸ್ ಅನ್ನು ಸುಲಭವಾಗಿ ಮಾಡಿಕೊಳ್ಳಬಹುದು.

ಬೆಳೆ ವಿಮೆಯನ್ನು ರೈತರು ಪಡೆಯುವುದರಿಂದ ಅವರು ಆನ್ಲೈನ್ ಮೂಲಕ ಬೆಳೆ ವಿಮೆಯ ಸ್ಟೇಟಸ್ ಅನ್ನು ನೋಡಲು ಕಷ್ಟಕರವಾದರೆ ಅವರು ನಿಮ್ಮ ಊರಿನ ಹತ್ತಿರವಿರುವ ಕೆಲವು ಸೈಬರ್ಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಿ ಸುಲಭವಾಗಿ ಬೆಳೆ ವಿಮೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಹಣ ಬಿಡುಗಡೆ ಯಾವಾಗ

ಹಿಂಗಾರು ಬೆಳೆಗಳಾದ ಹುರುಳಿ, ಜೋ,ಳ ಕಡಲೆ ಈ ಬೆಳೆಗಳಿಗೆ ಆಯಾ ಪ್ರದೇಶಗಳ ಅನುಗುಣವಾಗಿ ಬೆಳೆ ಅರ್ಜಿ ಹಾಕಿದ್ದರು ಮತ್ತು ಆಯಾ ಪ್ರದೇಶಗಳ ಬೆಳೆ ಸಮೀಕ್ಷೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಬೆಳೆ ಮಾಹಿತಿ ಈಗಾಗಲೇ ಕೃಷಿ ಕೇಂದ್ರಗಳು ಮತ್ತು ಇನ್ಸೂರೆನ್ಸ್ ಕಂಪನಿ ಗಳಿಗೆ ಸೇರಿರುತ್ತದೆ. ಈಗಾಗಲೇ ಮುಂಗಾರು ಬೆಳೆ ವಿಮೆಯನ್ನು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

2023ರ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆಯನ್ನು ರೈತರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣವನ್ನು ಜಮಾ ಮಾಡಲಾಗಿದೆ. ಈ ಮೇಲೆ ತಿಳಿಸಿಕೊಟ್ಟಿರುವ ಹಾಗೆ ನೀವು ಸುಲಭವಾಗಿ ಆನ್ಲೈನ್ ಮೂಲಕ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಸ್ಟೇಟಸ್ ಅನ್ನು ಚೆಕ್ ಮಾಡಿದರೂ ಸಹ ನಿಮಗೆ ಬೆಳೆ ವಿಮೆ ಬಂದಿಲ್ಲವೆಂದರೆ ನೀವು ಹೆದರ ಬೇಕಂತಿಲ್ಲ. ಏಕೆಂದರೆ ಈ ವಿಮೆಯ ಹಣವನ್ನು ಹಂತ ಹಂತವಾಗಿ ನೀಡುವುದರಿಂದ ಕೆಲವು ದಿನಗಳು ತೆಗೆದುಕೊಳ್ಳಬಹುದು.

2023-24ರ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ

2023-24ರ ಸಾಲಿನಲ್ಲಿ ರಾಜ್ಯದಲ್ಲಿ ಮಳೆ ಬರದ ಕಾರಣ ರೈತರು ಕಂಗಲಾಗಿ ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಸಿಗದೆ ಇಲ್ಲದ ಕಾರಣ ಮತ್ತು ಹಿಂಗಾರು ಮಳೆಯೂ ಕೂಡ ಬರದೇ ಇರದ ಕಾರಣ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಘೋಷಣೆ ಮಾಡಲಾಗಿದೆ. 2023ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ರೈತರು ತಮ್ಮ ಜಮೀನಿನ ಬೆಳೆ ಹಾನಿ ಆಗಿರುವ ವಿವರವನ್ನು ಅರ್ಜಿಯ ಮೂಲಕ ಮತ್ತು ಬೆಳೆ ಸಮೀಕ್ಷೆಯ ಮೂಲಕ ಅರ್ಜಿಯನ್ನು ಸಲ್ಲಿಸಿದರು. ಅದರ ಸ್ಟೇಟಸ್ ಅನ್ನು ಸಹ ನೀವು ಸುಲಭವಾಗಿ ನಿಮ್ಮ ಮೊಬೈಲ್ ನಿಂದ ತಿಳಿದುಕೊಳ್ಳಬಹುದು.

ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳಿಗೆ ಬರ ಪರಿಹಾರ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿ ಜಿಲ್ಲೆಗೂ ಇಂತಿಷ್ಟು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ ಹಾಗಾದರೆ ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರದ ಅನುದಾನ ಬಿಡುಗಡೆಯಾಗಿದೆಯಾ ಎಂದು ತಿಳಿದುಕೊಳ್ಳಬೇಕಾ ಹಾಗಾದರೆ ಈ ಕೆಳಭಾಗದ ಮಾಹಿತಿಯನ್ನು ಓದಿ.

  • ಮೊದಲು ನೀವು ಕರ್ನಾಟಕದ ಸರ್ಕಾರ ಬೆಳೆ ಪರಿಹಾರ ಹಣವನ್ನು ಚೆಕ್ ಮಾಡಲು ಅಧಿಕೃತ https://parihara.karnataka.gov.in/PariharaPayment/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅಲ್ಲಿ ನಿಮಗೆ ಎರಡು ಆಪ್ಷನ್ ಕಾಣುತ್ತದೆ. ಅಲ್ಲಿ ನೀವು ಆಧಾರ್ ಸಂಖ್ಯೆ [Aadhar Number] ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ಕ್ಲೈಮೇಟ್ ಟೈಪ್ [Calamity Type] ಕಾಣುತ್ತದೆ. ಅಲ್ಲಿ ನೀವು ದ್ರೌಘಟ್ [Drought] ನಿಮ್ ಆಪ್ಶನ್ನು ಆಯ್ಕೆ ಮಾಡಿ.
  • ನಂತರ ವರ್ಷ [Year] ಕೇಳುತ್ತದೆ, 2023 24 ಅನ್ನು ಆಯ್ಕೆ ಮಾಡಿ.
  • ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ಮತ್ತು ಕ್ಯಾಪ್ಚವನ್ನು ಎಂಟ್ರಿ ಮಾಡಿ ಗೋ [Go] ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ಯಾವ ವರ್ಷ ಎಷ್ಟು ಬೆಳೆ ಪರಿಹಾರ ಜಮೆ ಆಗಿದೆ ಮತ್ತು ಬೆಳೆ ಹಾನಿ ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮವಾಗಿದೆಯೇ ಇಲ್ಲವೇ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಇದನ್ನು ಗಮನಿಸಿ

ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ

ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ.

ಧನ್ಯವಾದಗಳು

WhatsApp Group Join Now
Telegram Group Join Now

Leave a Comment