New Voter ID list 2024: ಹೊಸ ಮತದಾರರ ಪಟ್ಟಿ ಬಿಡುಗಡೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಿ…!
ನಮಸ್ಕಾರ ಬಂಧುಗಳೇ 2024ರ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣವಾಗಿದ್ದರೂ ಸಹ ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಕಾಲಾವಕಾಶ ಇದೆ. ಹೊಸದಾಗಿ ಗುರುತಿನ ಚೀಟಿ [Voter ID] ಗೆ ಅರ್ಜಿಯನ್ನು ಸಲ್ಲಿಸಲು ಮತ್ತು ಹೆಸರು ಬಿಟ್ಟು ಹೋಗಿರುವವರು, ಒಮ್ಮೆ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತ್ತೆ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಗಳನ್ನು ಪರಿಶೀಲನೆ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ.
ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಪ್ರಾರಂಭವಾಗಲಿದ್ದು ಈ ಚುನಾವಣೆಗೆ ನೀವು ಮತವನ್ನು ಹಾಕಬೇಕೆಂದರೆ ನಿಮ್ಮ ಹತ್ತಿರ ಗುರುತಿನ ಚೀಟಿ [Voter ID] ಹೊಂದಿರಬೇಕು. ಒಂದು ವೇಳೆ ನಿಮಗೆ 18 ವರ್ಷ ತುಂಬಿದ್ದು ಅಂತಹ ಅಭ್ಯರ್ಥಿಗಳು ಗುರುತಿನ ಚೀಟಿ [Voter ID] ಗೆ ಅರ್ಜಿ ಸಲ್ಲಿಸಬಹುದು. ನೀವು ಗುರುತಿನ ಚೀಟಿ [Voter ID]ಗೆ ಅರ್ಜಿಯನ್ನು ಸಲ್ಲಿಸಿದರೆ. 2024ರ ಹೊಸ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಇಂದು ನೀವು ಸುಲಭವಾಗಿ ಮೊಬೈಲ್ ಬಳಸಿಕೊಂಡು ಪರಿಶೀಲನೆ ಮಾಡಬಹುದು.
ಗುರುತಿನ ಚೀಟಿ [Voter ID]
ಭಾರತದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತದ ಅಭ್ಯರ್ಥಿಯ ಗುರುತಿನ ಚೀಟಿ [Voter ID] ಯನ್ನು ಪಡೆದುಕೊಳ್ಳಬಹುದು. ನಿಮಗೆ 18 ವರ್ಷ ತುಂಬಿದ್ದು ನೀವು ಇನ್ನೂ ಗುರುತಿನ ಚೀಟಿಗೆ ಅರ್ಜಿಯನ್ನು ಸಲ್ಲಿಸಿಲ್ಲವೆಂದರೆ ಅರ್ಜಿಯನ್ನು ಸಲ್ಲಿಸಲು ಇನ್ನೂ ಕಾಲಾವಕಾಶವಿದೆ. ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಈಗಾಗಲೇ 2024ರ ಅಂತಿಮ ಮತದಾರರ ಪಟ್ಟಿಯು ಬಿಡುಗಡೆ ಮಾಡಲಾಗಿದೆ. ಈ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.
ಅಂತಿಮ ಮತದಾರರ ಪಟ್ಟಿ 2024
ಮುಖ್ಯ ಚುನಾವಣಾಧಿಕಾರಿಯು ಅಂತಿಮ ಮತದಾರರ ಪಟ್ಟಿಯನ್ನು ಹೊರಡಿಸಿದ್ದಾರೆ. ಕರ್ನಾಟಕ ಕಛೇರಿಯ ರಾಜ್ಯದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಮತದಾರರಿಗೆ ಒದಗಿಸುವುದರ ಜೊತೆಗೆ ಮತದಾರರಲ್ಲಿ ಚುನಾವಣಾ ಜಾಗೃತಿ ಮೂಡಿಸಲು ಮುಂದಾಗಿದೆ. ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಇದ್ದು ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕರ್ನಾಟಕದ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೋ ಎಂದು ತಿಳಿದುಕೊಳ್ಳಲು ಈ ಕೆಳಭಾಗದಲ್ಲಿ ಇರುವ ಮಾಹಿತಿಯನ್ನು ಓದಿ.
ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂದು ಈ ರೀತಿ ನೋಡಿ
EPIC [ಇಪಿಐಸಿ] ವೋಟರ್ ಐಡಿಯಾ ಸಂಖ್ಯೆಯನ್ನು ಹಾಕಿ ಆನ್ಲೈನ್ ನಲ್ಲಿ ಚೆಕ್ ಮಾಡುವ ವಿಧಾನ
- ಮೊದಲು ನೀವು ಚುನಾವಣಾ ಆಯೋಗದ ಅಧಿಕೃತ https://voters.eci.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ
- ನಂತರ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಸರ್ಚ್ ಇನ್ ಎಲೆಕತೋರಲ್ ರೋಲ್ [Search in Electoral Roll] ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು EPIC [ಇಪಿಐಸಿ] ನಂಬರ್ ಅನ್ನು ಹಾಕಬೇಕಾಗುತ್ತದೆ. ಇಲ್ಲಿ EPIC [ಇಪಿಐಸಿ] ನಂಬರ್ ಅನ್ನು ಹಾಕಿ ಬಲಭಾಗದಲ್ಲಿ ಸ್ಟೇಟ್ [state] ಎಂಬ ಆಯ್ಕೆ ಯಲ್ಲಿ ಕರ್ನಾಟಕ [karnataka] ಆಯ್ಕೆಯನ್ನು ಮಾಡಿ.
- ನಂತರ ಕೆಳಭಾಗದಲ್ಲಿ ಕ್ಯಾಪ್ಚ ಕೋಡ್ ಅನ್ನು ಎಂಟರ್ ಮಾಡಲು ಕೇಳುತ್ತದೆ. ಇಲ್ಲಿ ನೀವು ಎಂಟರ್ ಕ್ಯಾಪ್ಚ [Enter Captcha] ಅನ್ನು ಎಂಟರ್ ಮಾಡಿ ಸರ್ಚ್ [search] ಮೇಲೆ ಕ್ಲಿಕ್ ಮಾಡಿ.
ಈ ರೀತಿ ಮಾಡಿದರೆ ಸಾಕು ನಿಮ್ಮ ಗುರುತಿನ ಚೀಟಿ [Voter ID] ಯ ವಿವರವನ್ನು ತಿಳಿಸುತ್ತದೆ. ಇಲ್ಲಿ ನಿಮ್ಮ ಗುರುತಿನ ಚೀಟಿ [Voter ID] ವಿವರ ಇದ್ದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದರ್ಥ. ಒಂದು ವೇಳೆ ಈ ವಿಧಾನ ಕಷ್ಟಕರವಾದರೆ ನಿಮ್ಮ ಊರಿನ ಗುರುತಿನ ಚೀಟಿ [Voter ID] ಲಿಸ್ಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಅಲ್ಲಿ ನಿಮ್ಮ ಹೆಸರು ಇದೆಯೇ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗಾದರೆ ಆ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ನಿಮ್ಮ ಊರಿನ ವೋಟರ್ ಲಿಸ್ಟ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳುವ ವಿಧಾನ
ಈಗಾಗಲೇ ಅಂತಿಮ ಮತದಾರರ ಪಟ್ಟಿಯನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅವರ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗಿದೆ. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಅಂತಿಮ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು..
- ಮೊದಲು ನೀವು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ರವರ ಅಧಿಕೃತ https://ceo.karnataka.gov.in/#. ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಇಲ್ಲಿ ನಿಮಗೆ ಬಲಭಾಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಚುನಾವಣಾ ಮತದಾರರ ಪಟ್ಟಿ 2024 ಆಪ್ಷನ್ ಕಾಣುತ್ತದೆ, ನೀವು ಅದರ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಭಾಷೆ ಕೇಳುತ್ತದೆ. ಈ ಎಲ್ಲಾ ವಿವರವನ್ನು ಭರ್ತಿ ಮಾಡಿ. ನಂತರ ನಿಮಗೆ ಕ್ಯಾಪ್ಚರ್ ಎಂಟರ್ ಮಾಡಲು ಕೇಳುತ್ತದೆ. ಕ್ಯಾಪ್ಚವನ್ನು ಇಂಟರ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ನಿಮ್ಮ ವಿಧಾನಸಭಾ ಕ್ಷೇತ್ರದ ಊರಿನ ವೋಟರ್ ಲಿಸ್ಟ್ ನಿಮಗೆ ಕಾಣುತ್ತದೆ. ಸರ್ಚ್ ಬಾರ್ ನಲ್ಲಿ ನೀವು ಮತ ಹಾಕುವ ಊರಿನ ಹೆಸರನ್ನು ಹಾಕಿ ಸರ್ಚ್ ಮಾಡಿ.
- ಅಲ್ಲಿ ನಿಮ್ಮ ಊರಿನ ಹೆಸರು ಕಾಣುತ್ತದೆ. ಅಲ್ಲಿ ನೀವು ಮತದಾರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
- ಡೌನ್ಲೋಡ್ ಮಾಡಿಕೊಂಡಿದ್ದ ನಂತರ ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.
ಒಂದು ವೇಳೆ ಅಂತಿಮ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೆಂದರೆ ಹೆದರಬೇಕಂತಿಲ್ಲ ಮತ್ತೊಮ್ಮೆ ಮತದಾರರ ಪಟ್ಟಿಗೆ ಅರ್ಜಿಯನ್ನು ಸಲ್ಲಿಸಬಹುದು.
ಹೊಸ ಮತದಾರರ ಪಟ್ಟಿಗೆ
ಈಗಾಗಲೇ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅವರ ಅಧಿಕೃತ ವೆಬ್ಸೈಟ್ನಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದಲ್ಲಿ ಹಾಗೂ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಏ. 9 ರ ವರೆಗೆ ಕಾಲಾವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೆಂದರೆ ಆದಷ್ಟು ಬೇಗ ಹೊಸ ಗುರುತಿನ ಚೀಟಿ [Voter ID] ಗೆ ಅರ್ಜಿಯನ್ನು ಸಲ್ಲಿಸಿ ಹಾಗಾದರೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಆನ್ಲೈನ್ ಮೂಲಕ ಹೊಸ ಗುರುತಿನ ಚೀಟಿ [Voter ID] ಗೆ ಸುಲಭವಾಗಿ ಅರ್ಜಿ ಸಲ್ಲಿಸುವ ವಿಧಾನ
- ಮೊದಲು ನೀವು ಗುರುತಿನ ಚೀಟಿ [Voter ID] ಅಪ್ಲೈ ಮಾಡುವ WWW.NVSP.IN ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಅಲ್ಲಿ ನೀವು ರಿಜಿಸ್ಟರ್ ಆಫ್ ನ್ಯೂ ಗುರುತಿನ ಚೀಟಿ [Voter ID] ಎಂಬ ವಿಭಾಗದ ಮೇಲೆ ಆಯ್ಕೆ ಮಾಡಿಕೊಳ್ಳಿ.
- ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಮಾಡಿಕೊಳ್ಳಿ.
- ನಂತರ ನಿಮಗೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ಸಿಗುತ್ತದೆ, ಇದನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.
- ನಂತರ ಈ ವೆಬ್ ಸೈಟ್ ನಲ್ಲಿ ಫಾರಂ 6 ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ.ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳುವ ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
- ಭರ್ತಿ ಮಾಡಿದ ನಂತರ ಅಲ್ಲಿ ನಿಮಗೆ ಸ್ಕ್ಯಾನ್ ಮಾಡುವ ಮೂಲಕ ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಅದಲ್ಲದೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಅಪ್ಲೋಡ್ ಮಾಡಬೇಕಾಗುತ್ತದೆ. ಈ ಎಲ್ಲ ದಾಖಲೆಗಳನ್ನು ಸಲ್ಲಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಈ ಮೇಲೆ ನೀಡಿರುವ ವಿಧಾನದಲ್ಲಿ ನೀವು ಸುಲಭವಾಗಿ ಆನ್ಲೈನ್ ಮೂಲಕ ಹೊಸ ಗುರುತಿನ ಚೀಟಿ [Voter ID] ಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ನಿಮಗೆ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೆಂದರೆ ಆದಷ್ಟು ಬೇಗ ಈ ವಿಧಾನದಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ.
ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ
ಹೌದು ಗೆಳೆಯರೇ ನಿಮಗೇನಾದರೂ 18 ವರ್ಷವಾಗಿದ್ದು ಹೊಸ ಗುರುತಿನ ಚೀಟಿ [Voter ID] ಯನ್ನು ಪಡೆದುಕೊಳ್ಳಬೇಕೆಂದರೆ ಅಂಥವರು ಅರ್ಜಿ ಸಲ್ಲಿಸಲು ಮುಖ್ಯ ಚುನಾವಣಾಧಿಕಾರಿ ಅವಕಾಶ ನೀಡಿದ್ದಾರೆ. ನಾನು ನಿಮಗೆ ಈ ಮೇಲೆ ತಿಳಿಸಿಕೊಟ್ಟಿರುವ ರೀತಿಯಲ್ಲಿ ನೀವು ಸುಲಭವಾಗಿ ಆನ್ಲೈನ್ ಮೂಲಕ ಹೊಸ ಗುರುತಿನ ಚೀಟಿ [Voter ID] ಗೆ ಅರ್ಜಿಯನ್ನು ಸಲ್ಲಿಸಬಹುದು. ಇನ್ನೇನು ಲೋಕಸಭಾ ಚುನಾವಣೆ ಕೆಲವೇ ದಿನಗಳು ಇರುವುದರಿಂದ ಗುರುತಿನ ಚೀಟಿ [Voter ID] ಗೆ ಅರ್ಜಿಯನ್ನು ಸಲ್ಲಿಸಿ. ಹಾಗೆಯೇ ನಿಮ್ಮ ಗೆಳೆಯರಿಗೆ ಈ ಮಾಹಿತಿಯನ್ನು ತಿಳಿಸಿ ಅವರು ಸಹ ಆದಷ್ಟು ಬೇಗ ಗುರುತಿನ ಚೀಟಿ [Voter ID] ಯನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು