PMAY Scheme: ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ…! ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ…!
ನಮಸ್ಕಾರ ಬಂಧುಗಳೇ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತ ಬಂದ ನಂತರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬಗಳಿಗೆ ಸ್ವಂತ ಮನೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ನಡೆಸುತ್ತಿದೆ. ಹಾಗೆಯೇ ಈ ಯೋಜನೆಗೆ ಹೊಸ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಬ್ಯಾಂಕ್ ನಲ್ಲಿ ಸಾಲ ಮಾಡಿ ಮನೆ ಕಟ್ಟುವವರಿಗೆ ಸಬ್ಸಿಡಿ ಹಣವನ್ನು ಸರ್ಕಾರ ನೀಡುತ್ತದೆ. ನೀವೇನಾದರೂ ಮನೆ ಕಟ್ಟಿಸಬೇಕೆಂದರೆ ಅಂತವರಿಗೆ ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಸಾಲದ ಜೊತೆಗೆ ಸಬ್ಸಿಡಿ ನೀಡುವುದರಿಂದ ಈ ಯೋಜನೆ ಉಪಯೋಗವಾಗುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY]
ಈ ಯೋಜನೆಯು 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮನೆ ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಕನಸನ್ನು ಹೊತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಯನ್ನು ಪ್ರಾರಂಭಿಸಿದರು, ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮನೆ ಇಲ್ಲದೆ ವಾಸಿಸುತ್ತಿರುವ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆಯನ್ನು ನಿರ್ಮಾಣ ಮಾಡಲು ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಪ್ರಾರಂಭ ಮಾಡಲಾಗಿತ್ತು.
ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಇದುವರೆಗೂ 40 ಮಿಲಿಯನ್ ಮನೆಗಳನ್ನು ನಿರ್ಮಿಸುವಲ್ಲಿ ಕೇಂದ್ರ ಸರ್ಕಾರವು ಯಶಸ್ವಿಯಾಗಿದೆ. ಕಳೆದ ವರ್ಷ ಅಂದರೆ 2023ರ ಕೊನೆಯಲ್ಲಿ ಈ ಯೋಜನೆ ಅಡಿಯಲ್ಲಿ 100 ಮಿಲಿಯನ್ ಮನೆಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕೇಂದ್ರ ಸರ್ಕಾರವು ಭಾರತದ ವಸತಿ ಸಮಸ್ಯೆಯನ್ನು ಪರಿಹರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ದೇಶದ ಲಕ್ಷಾಂತರ ಜನರಿಗೆ ಸ್ವಂತ ಮನೆ ನಿರ್ಮಾಣ ಮಾಡಲು ಈ ಯೋಜನೆ ಜನರಿಗೆ ಉಪಯೋಗವಾಗುತ್ತದೆ.
ಹಾಗಾದರೆ ಮೊದಲೇ ನೀವು ಪ್ರಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಗೆ ಅರ್ಜಿ ಸಲ್ಲಿಸಿ ಹೊಸ ಪಟ್ಟಿಯಲ್ಲಿ ಬಿಡುಗಡೆಯಾದ ಫಲಾನುಭವಿಗಳ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು? ಈ ಯೋಜನೆ ಅಡಿ ಪ್ರಯೋಜನ ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ? ಬೇಕಾಗುವ ದಾಖಲೆಗಳು? ಮುಂತಾದ ವಿವರಗಳು ಈ ಕೆಳಭಾಗದಲ್ಲಿ ನೀಡಲಾಗಿದೆ.
ಈ ಯೋಜನೆ ಅಡಿಯಲ್ಲಿ ಎಷ್ಟು ಸಹಾಯಧನ ನೀಡಲಾಗುತ್ತದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಸಬ್ಸಿಡಿ ಮೊತ್ತವನ್ನು ನೇರವಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮವಾಗುತ್ತದೆ. ಈ ಯೋಜನೆಯು ನಗರ ಮತ್ತು ಗ್ರಾಮೀಣ ಎರಡು ವಿಭಾಗದಲ್ಲಿ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ 1,20,000 ಹಾಗೂ ನಗರ ಪ್ರದೇಶದ ಸ್ವಂತ ಮನೆ ನಿರ್ಮಾಣಕ್ಕೆ 2,50.000 ಸಹಾಯಧನವನ್ನು ಸರ್ಕಾರ ನೀಡಲಾಗುತ್ತದೆ. ನೀವು ಗೃಹ ಸಾಲವನ್ನು ಸಹ ಪಡೆಯಬಹುದು ಇದರ ಮೇಲೆ 6.5% ವರೆಗೆ ಬಡ್ಡಿ ಸಹಾಯಧನವನ್ನು ಒದಗಿಸಲಾಗುತ್ತದೆ. ಈ ಸಾಲವನ್ನು 20 ವರ್ಷಗಳಲ್ಲಿ ಮರುಪಾವತಿ ಮಾಡಲು ಸರ್ಕಾರ ಒದಗಿಸಿದೆ.
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಗೆ ಅರ್ಜಿ ಸಲ್ಲಿಸಲು ಈ ಕೆಲವು ವರದಿಗಳನ್ನು ಹೊಂದಿರಬೇಕು
- ಮೊದಲು ನೀವು ಭಾರತೀಯ ನಿವಾಸಿಯಾಗಿರಬೇಕು
- ಸರ್ಕಾರಿ ನೌಕರರಾಗಿರಬಾರದು
- ರೇಷನ್ ಕಾರ್ಡ್
- 5 ಎಕರೆಗಿಂತ ಜಾಸ್ತಿ ಜಮೀನನ್ನು ಹೊಂದಿರಬಾರದು
- ಈ ಹಿಂದೆ ಯಾವುದೇ ಸಬ್ಸಿಡಿ ಹಣವನ್ನು ಪಡೆದುಕೊಂಡಿರಬಾರದು
- ಆಧಾರ್ ಕಾರ್ಡ್ ಮತ್ತು ಬ್ಯಾಂಕಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು
ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆದಾಯ ಪ್ರಮಾಣ ಪತ್ರ
- ವಿಳಾಸದ ವರದಿಯ ಪುರಾವೆಗಳು
- ಜಾತಿ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಫೋಟೋ
- ರೇಷನ್ ಕಾರ್ಡ್
- ಬ್ಯಾಂಕ್ ವಿವರಗಳು
- ಆಧಾರ್ ಕಾರ್ಡ್
- ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಈ ಎಲ್ಲ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಹಾಯ ವಾಗುತ್ತದೆ.
2024ರ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ
- ಹೌದು ಗೆಳೆಯರೇ ನೀವೇನಾದರೂ ಮೊದಲೇ ಅರ್ಜಿಯನ್ನು ಸಲ್ಲಿಸಿದರೆ ಅಂತವರು ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಯ ಹೊಸ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು
- ಮೊದಲು ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಯ ಅಧಿಕೃತ http://pmaymis.gov.in ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನೀವು Search Benefiviary ಆಯ್ಕೆ ಮೇಲೆ Beneficiary wise Funds Released ಬಟನ್ ಮೇಲೆ ಕ್ಲಿಕ್ ಮಾಡಿ.
- Beneficiary wise Funds Released ಮೇಲೆ ಕ್ಲಿಕ್ ಮಾಡಿದ ನಂತರ ನೀವು ಅರ್ಜಿ ಸಲ್ಲಿಸಿದ ಮೊಬೈಲ್ ಸಂಖ್ಯೆಯನ್ನು ಹಾಕಿ Send OTP [ಸೆಂಡ್ ಒಟಿಪಿ] ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಓಟಿಪಿ [OTP] ಯನ್ನು ನಮೂದಿಸಿದಾಗ ನಿಮಗೆ There is no fund release details available for this beneficiary ಎಂದು ತೋರಿಸಿದರೆ ಈ ಯೋಜನೆ ಅಡಿಯಲ್ಲಿ ನಿಮಗೆ ಹಣ ಸಂದಾಯವಾಗಿಲ್ಲ ಎಂದು ಅರ್ಥ.
- ಒಂದು ವೇಳೆ ನೀವು ಓಟಿಪಿ [OTP] ಹಾಕಿ ಈ ಯೋಜನೆ ಅಡಿಯಲ್ಲಿ ನೀವು ಸೌಲಭ್ಯ ಪಡೆಯಲು ಅರ್ಹ ಎಂದು ತೋರಿಸುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾರಲ್ಲ ಅರ್ಹರಾಗುತ್ತಾರೆ
ನೀವೇನಾದರೂ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕೆಂದರೆ ಸ್ವಂತ ಮನೆ ಹೊಂದಿರಬಾರದು. ಸ್ವಂತ ಮನೆ ಹೊಂದಿದ್ದರೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹ ಆಗುವುದಿಲ್ಲ. ಪ್ರಮುಖವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಭಾರತೀಯ ರಾಗಿರಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ವಸತಿ ಪ್ರಯೋಜನ ಅಥವಾ ಸಬ್ಸಿಡಿಯನ್ನು ಪಡೆದುಕೊಂಡಿರಬಾರದು. ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ಅನುಸಾರ ವರ್ಗಆಗಿರಬೇಕು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಾಲ್ಕು ವಿಭಾಗಗಳಿವೆ
- ಆರ್ಥಿಕವಾಗಿ ದುರ್ಬಲ ವಿಭಾಗ (EWS): ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಹೆಚ್ಚಿರಬಾರದು.
- ಕಡಿಮೆ ಆದಾಯದ ಗುಂಪು (LIG): ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷದಿಂದ ರೂ. 6 ಲಕ್ಷ ಹೆಚ್ಚಿರಬಾರದು.
- ಮಧ್ಯಮ ಆದಾಯ ಗುಂಪು (MIG-I): ಕುಟುಂಬದ ವಾರ್ಷಿಕ ಆದಾಯ ರೂ. 6 ಲಕ್ಷದಿಂದ ರೂ. 18 ಲಕ್ಷ ಒಳಗಿರಬೇಕು.
- ಮಧ್ಯಮ ಆದಾಯ ಗುಂಪು (MIG-II): ಕುಟುಂಬದ ವಾರ್ಷಿಕ ಆದಾಯ ರೂ.18 ಲಕ್ಷ ಮೀರಿರಬಾರದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು
- ಮೊದಲು ನೀವು PMAYಗೆ ಅರ್ಹತೆ ಪಡೆದ ವರ್ಗವನ್ನು ಗುರುತಿಸಿ.
- ನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಧಿಕೃತ http://pmaymis.gov.in. ವೆಬ್‌ಸೈಟ್‌ಗೆ ಭೇಟಿ ನೀಡಿ:
- ಈಗ ಹೋಮ್ ಪೇಜ್ ಓಪನ್ ಆಗುತ್ತದೆ ಅಲ್ಲಿ ‘Citizen Assessment’ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿದಾರರ ವರ್ಗವನ್ನು ಆಯ್ಕೆ ಮಾಡಿ.
- ಈಗ ಬೇರೆ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ, ಅಲ್ಲಿ ನಿಮ್ಮ ಆಧಾರ್ ವಿವರಗಳನ್ನು ನಮೂದಿಸಬೇಕು.
- ನಿಮ್ಮ ವೈಯಕ್ತಿಕ, ಆದಾಯ, ಬ್ಯಾಂಕ್ ಖಾತೆ ವಿವರಗಳು ಮತ್ತು ಪ್ರಸ್ತುತ ವಸತಿ ವಿಳಾಸದೊಂದಿಗೆ ಆನ್‌ಲೈನ್ PMAY ಅರ್ಜಿಯನ್ನು ಭರ್ತಿ ಮಾಡಿ.
- ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ನಿಖರತೆಗಾಗಿ ವಿವರಗಳನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.
- ಈ ರೀತಿ ಮಾಡಿದರೆ ಸಾಕು ಸುಲಭವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು.
[ಅಥವಾ]
ನೀವೇನಾದರೂ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕೆಂದರೆ ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ. PMAY(U) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಅಪ್ಲಿಕೇಶನ್ ಮೂಲಕ ನೀವು ಸುಲಭವಾಗಿ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆಫ್ ಲೈನ್ ಮೂಲಕವೂ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಗೆ ಅರ್ಜಿ ಸಲ್ಲಿಸಿ
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ನಿಮ್ಮ ದಾಖಲೆಗಳನ್ನು ನೀಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆದಷ್ಟು ಬೇಗ ಅರ್ಜಿ
ಕೇಂದ್ರ ಸರ್ಕಾರವು ಸ್ವಂತ ಮನೆ ಇಲ್ಲದವರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಲು ಒಂದು ಒಳ್ಳೆಯ ಯೋಜನೆಯನ್ನು ತಂದಿದೆ. ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಪಡೆದುಕೊಳ್ಳಬೇಕೆಂದರೆ ಆದಷ್ಟು ಬೇಗ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆ, ಅರ್ಹತೆ ಈ ಎಲ್ಲ ವಿವರವನ್ನು ನಾನು ಮೇಲ್ಬಾಗದಲ್ಲಿ ತಿಳಿಸಿಕೊಟ್ಟಿದೆ. ಇದೇ ರೀತಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಊರಿನ ಹತ್ತಿರವಿರುವ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗೆಯೇ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಒಂದು ವೇಳೆ ನೀವು ಅರ್ಜಿಯನ್ನು ಸಲ್ಲಿಸಿ ಅದರ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಅಥವಾ ಪ್ರಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಯ ಹೊಸ ಪಟ್ಟಿಯ ಫಲಾನುಭವಿಗಳ ಹೆಸರನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಮೇಲ್ಭಾಗದಲ್ಲಿ ತಿಳಿಸಿಕೊಟ್ಟಿರುವ ರೀತಿಯಲ್ಲಿ ಸುಲಭವಾಗಿ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ನೀವೇನಾದರೂ ಸ್ವಂತ ಮನೆ ನಿರ್ಮಾಣ ಮಾಡಬೇಕೆಂದರೆ ಈ ಯೋಜನೆ ತುಂಬ ಉಪಯೋಗವಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ [PMAY] ಗೆ ನೀವು ಅರ್ಹರಾಗಿದ್ದು ಇನ್ನು ಕೂಡ ಈ ಯೋಜನೆಯಲ್ಲಿ ಸಹಾಯಧನವನ್ನು ಪಡೆದುಕೊಂಡಿಲ್ಲವೆಂದರೆ ಆದಷ್ಟು ಬೇಗ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸ್ವಂತ ಮನೆ ಕಟ್ಟಲು ಸಹಾಯಧನ ಪಡೆದುಕೊಳ್ಳಬೇಕು ಎಂಬ ಗೆಳೆಯರಿಗೂ ಸಹ ಈ ಮಾಹಿತಿಯನ್ನು ಒದಗಿಸಿ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು