Aadhar Link to RTC: ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ…!
ನಮಸ್ಕಾರ ಬಂಧುಗಳೇ ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ರೈತರಿಗೆ ಉಪಯೋಗವಾಗಲಿ ಎಂದು ಒಂದಲ್ಲ ಒಂದು ಹೊಸ ಯೋಜನೆಯನ್ನು ತರುತ್ತಿದೆ. ಅದೇ ರೀತಿ ರೈತರ ಜಮೀನಿನ ದಾಖಲೆಗಳ ಸಂಗ್ರಹ ಸುಗಮಗೊಳಿಸಲು ಸಾಕಷ್ಟು ಪ್ರಯತ್ನ ಸರ್ಕಾರ ಮಾಡುತ್ತಿದೆ. ಈಗ ರಾಜ್ಯ ಸರ್ಕಾರವು ಒಂದು ಹೊಸ ತಂತ್ರಾಂಶವನ್ನು ಅಳವಡಿಸುವುದರ ಮೂಲಕ ರೈತರ ಜಮೀನಿನ ದಾಖಲೆಗಳ ಗೊಂದಲಕ್ಕೆ ನಾಂದಿ ಹಾಡಲಿದೆ.
ಸರ್ಕಾರವು ಭೂ ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಎಂದು ಯೋಜನೆಯನ್ನು ಜಾರಿಗೊಳಿಸಿದೆ. ಕಂದಾಯ ಇಲಾಖೆಯು ಈಗಾಗಲೇ ಅಂದರೆ ಕಳೆದು ತಿಂಗಳಿನಿಂದಲೇ ರೈತರು ಕಡ್ಡಾಯವಾಗಿ ಜಮೀನಿನ ಎಲ್ಲಾ ಸರ್ವೆ ನಂಬರ್ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಕಂದಾಯ ಇಲಾಖೆಯು ಗ್ರಾಮೀಣ ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳು ಆರ್ಟಿಸಿಗಳಿಗೆ ಆಧಾರ್ ಲಿಂಕ್ ಮಾಡಲಾಗುತ್ತದೆ. ಹಾಗಾದರೆ ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಿಸಬೇಕು? ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದು ಏಕೆ? ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ? ಎಂಬ ಎಲ್ಲ ಮಾಹಿತಿ ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಿಸಬೇಕು
ಜಮೀನು ಹೊಂದಿರುವ ಪ್ರತಿಯೊಬ್ಬ ರೈತರು ಅವರ ಸರ್ವೇ ನಂಬರ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು ಎಂದು ಕಂದಾಯ ಇಲಾಖೆಯು ತಿಳಿಸಿದೆ. ಆದರೆ ಹೆಚ್ಚಿನ ಜನರಿಗೆ ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಿಸಬೇಕು ಎಂಬ ಪ್ರಶ್ನೆ ಇದೆ.
ಇದಕ್ಕೆ ಉತ್ತರವೇನೆಂದರೆ ಪ್ರಮುಖವಾಗಿ ಜಮೀನಿನ ಮಾಲೀಕರು ತಮ್ಮ ಜಮೀನನ್ನು ನಿಖರವಾಗಿ ತಿಳಿದುಕೊಳ್ಳಲು ಮತ್ತು ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್ ಬಂದ್ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಿಖರವಾದ ಆಕಾರ್ ಬಂದ್ ಇಲ್ಲದೆ RTC ಜೋಡಣೆಗೆ ಸಾಧ್ಯವಿಲ್ಲ. ಈ ಕಾರಣದಿಂದ ಕಂದಾಯ ಇಲಾಖೆಯು ಪಹಣಿಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಲು ತಿಳಿಸಿದೆ.
ಅದಲ್ಲದೆ ಕಂದಾಯ ಇಲಾಖೆಯು ಮುಂದಿನ ತಿಂಗಳುಗಳಲ್ಲಿ 65 ಲಕ್ಷ ಆಕಾರ್ ಬಂದ್ ಡಿಜಿಟಲಿಕರಣ ಗೊಳಿಸಲು ಇಲಾಖೆಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಇದುವರೆಗೂ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ನೀವು ಪಹಣಿ ಆಧಾರ್ ಜೋಡಣೆ ಮಾಡುವುದರಿಂದ ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದುತ್ತಾರೆ, ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಯನ್ನು ಒಂದೇ ಕಡೆ ಸಿಗುತ್ತದೆ. ಈ ಕಾರಣದಿಂದ ಪ್ರಮುಖವಾಗಿ ಪಹಣಿ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ.
ಪಹಣಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದು ಹೇಗೆ
ರೈತರ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದು. ಕಡ್ಡಾಯವಾಗಿದೆ ರೈತರೂ ಪಹಣಿಗೆ ಆಧಾರ್ ಲಿಂಕ್ ಮಾಡಿಸುವುದರಿಂದ ಈ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಾ?
- ರೈತರ ಜಮೀನಿನ ದಾಖಲೆಗಳು ಸುರಕ್ಷತೆ ಆಗಿರುತ್ತದೆ
- ದಾಖಲೆಗಳ ಗೊಂದಲಕ್ಕೆ ಒಳಪಡಿಸಬೇಕಾಗಿಲ್ಲ
- ಸರ್ಕಾರಿ ಯೋಜನೆ ರೈತರಿಗೆ ಬೇಗ ತಲುಪುವುದು
- ಅಧಿಕಾರಿಗಳು ಮತ್ತು ರೈತರ ನಡುವೆ ಪಾರದರ್ಶಕತೆ
- ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿ ಒಂದೇಕಡೆ ಸಿಗುತ್ತದೆ
- ಡಿಜಿಟಲೀಕರಣ ಮಾಡುವುದರಿಂದ ಜಮೀನಿನ ದಾಖಲೆ ಸುರಕ್ಷತೆಯಾಗಿರುತ್ತದೆ
ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದರಿಂದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ
ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಪಹಣಿ ಆಧಾರ್ ಲಿಂಕ್ ಮಾಡಿಕೊಳ್ಳಬಹುದಾಗಿದೆ.
- ಮೊದಲು ನೀವು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನಿಮಗೆ ಲಾಗಿನ್ ಆಪ್ಷನ್ ಕೇಳುತ್ತದೆ, ಅಲ್ಲಿ ನೀವು ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾಪ್ ಕೋಡ್ ಎಂಟರ್ ಮಾಡಿ ಸೆಂಡ್ ಒಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ನೀವು ನೀಡಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿ ಬರುತ್ತದೆ, ಓಟಿಪಿಯನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಲಾಗಿನ್ ಮಾಡಿಕೊಂಡಿದ ನಂತರ ಅರ್ಜಿದಾರರ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಭರ್ತಿ ಮಾಡಿ, ವೆರಿಫೈ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸೂಚನೆ ನೀಡಲಾಗುತ್ತದೆ ನೀವು ಇದಕ್ಕೆ ಓಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
- ನಂತರ ನಿಮಗೆ ಅಂದರೆ ಇದೇ ಪೇಜ್ ನಲ್ಲಿ ಕೆಳಗೆ ತೋರಿಸುವ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ಮತ್ತೊಮ್ಮೆ ಅರ್ಜಿದಾರರ ಆಧಾರ್ ಸಂಖ್ಯೆ ನಂಬರ್ ಅನ್ನು ಹಾಕಿ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ.
- ಮೊಬೈಲ್ ನಂಬರ್ ಗೆ 6 ಅಂಕಿಯ ಒಟಿಪಿ ಬರುತ್ತದೆ ಓಟಿಪಿಯನ್ನು ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಈ ಪೇಜ್ ನ ಮುಖಪುಟದ ಎಡಬದಿಯಲ್ಲಿ ಕಾಣುವ ಲಿಂಕ್ ಆಧಾರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದೇ ಪುಟದಲ್ಲಿ ಕೆಳಗಡೆ ಕಾಣುವ ನಿಮ್ಮ ಸರ್ವೇ ನಂಬರ್ ಒಂದನ್ನು ಟಿಕ್ ಮಾಡಿಕೊಂಡು ಅದರ ಮೇಲೆ ಕಾಣುವ ಲಿಂಕ್ ಬಟನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಮತ್ತೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ, 6 ಅಂಕಿಯ ಓಟಿಪಿಯನ್ನು ನಮೂದಿಸಿ ನಮೂಂದಿಸಿದ ನಂತರ ವೇರಿಫೈ ಓಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ ಎಂಬ ಆಪ್ಷನ್ ಕಾಣುತ್ತದೆ, ಅಲ್ಲಿ ನೀವು ಎಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಎಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪಹಣಿ ಜೊತೆಗೆ ಆಧಾರ್ ಲಿಂಕ್ ಆಗಿರುತ್ತದೆ.
ಈ ಮೇಲೆ ತಿಳಿಸಿಕೊಟ್ಟಿರುವ ರೀತಿಯಲ್ಲಿ ನೀವು ಸುಲಭವಾಗಿ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ.
ಆಫ್ಲೈನ್ ಮೂಲಕ ಕಚೇರಿಗೆ ಭೇಟಿ ನೀಡಿ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಿ
ಹೌದು ಗೆಳೆಯರೇ, ನಿಮಗೆ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಥವಾ ಕೃಷಿ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ.
ನಾನು ನಿಮಗೆ ತಿಳಿಸುವುದೇನೆಂದರೆ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಲು ಕಷ್ಟಕರವಾಗಿರುವುದರಿಂದ ಆಫ್ಲೈನ್ ಮೂಲಕ ಲಿಂಕ್ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಒಂದು ವೇಳೆ ನೀವು ಇನ್ನೂ ಕೂಡ ಪಹಣಿಗೆ ಆಧಾರ್ ಲಿಂಕ್ ಮಾಡಿಸಿಲ್ಲವೆಂದರೆ ಆದಷ್ಟು ಬೇಗ ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ. ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯವೆಂದು ಕಂದಾಯ ಇಲಾಖೆಯು ತಿಳಿಸಿದೆ.