New Rules Driving Licence: ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಗೆ ಜೂನ್ 1ರಿಂದ ನಿಯಮ ಬದಲಾವಣೆ ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಹೊಸ ನಿಯಮಾವಳಿಗಳನ್ನು ರಾಜ್ಯ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಇತ್ತೀಚಿಗೆ ಹೊಸ ಘೋಷಣೆ ಮಾಡಿತ್ತು. ಈ ನಿಯಮವನ್ನು ಜೂನ್ 1ರಿಂದ ಜಾರಿಗೆ ಬರಲಿದೆ ಇದರ ಅನ್ವಯದಿಂದ ಸರ್ಕಾರಿ ಆರ್ಟಿಓಗಳ ಬದಲು ಜನರು ಖಾಸಗಿ ಚಾಲನೆ ತರಬೇತಿ ಕೇಂದ್ರಗಳಲ್ಲಿ ಚಾಲನ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಹಾಗಾದರೆ ಜೂನ್ 1ರಿಂದ ಯಾವ ನಿಯಮವನ್ನು ತರಲಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
RTO ನ ಹೊಸ ನಿಯಮ
ಹೌದು ಗೆಳೆಯರೆ, ಆರ್ಟಿಓ ದಿಂದ ಅಧಿಕಾರ ಪಡೆದ ಕೇಂದ್ರಗಳು ಮತ್ತು ಡ್ರೈವಿಂಗ್ ಟೆಸ್ಟ್ ಗಳನ್ನು ನಡೆಸಲು ಮತ್ತು ಚಾಲನ ಅರ್ಹತೆಯ ಪ್ರಮಾಣ ಪತ್ರ ನೀಡಬಹುದಾಗಿದೆ. ಹೊಸ ನಿಯಮದಿಂದ ಅಂದಾಜು 9,00,000 ಹಳೆ ಸರ್ಕಾರಿ ವಾಹನಗಳನ್ನು ರದ್ದುಗೊಳಿಸಲಾಗಿದೆ. ಇದರ ಜೊತೆಗೆ ಇನ್ನಷ್ಟು ಕಠಿಣ ಕಾರ್ ಎಮಿಷನ್ ನಿಯಮಾವಳಿಗಳನ್ನು ನೀಡಲು ಮುಂದಾಗಿದೆ. ಹಾಗೆ ಅತಿ ಹೆಚ್ಚು ವಾಹನ ಚಾಲನೆಗೆ ಇರುವ ದಂಡವು 1,000 ದಿಂದ ಎರಡು 2,000ರವರೆಗೆ ಇರಲಿದೆ ಎಂದು ಆರ್ಟಿಓ ಹೊಸ ನಿಯಮವನ್ನು ವರದಿ ಮಾಡಿದೆ.
ಅದಲ್ಲದೆ ಅಪ್ರಪ್ತ ವಯಸ್ಕರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ 25,000 ದಷ್ಟು ದೊಡ್ಡ ಮೊತ್ತದ ಹಣವನ್ನು ತರಬೇಕಾಗುತ್ತದೆ. ಅಲ್ಲದೆ ವಾಹನ ಮಾಲೀಕನ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ ಹಾಗೆ ಅಪ್ರಾಪ್ತನ ವಯಸ್ಸು 20 ವರ್ಷ ತುಂಬುವವರೆಗೂ ಚಾಲನ ಪರವಾನಿಗೆ ಪಡೆಯಲು ಅನರ್ಹನಾಗುತ್ತಾನೆ ಎನ್ನಲಾಗಿದೆ. ಈ ರೀತಿ ಆರ್ಟಿಓ ನಿಂದ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್
ಹೌದು ಗೆಳೆಯರೇ, ಸರ್ಕಾರವು ಈಗಾಗಲೇ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ಗಡುವು ವಿಸ್ತರಣೆಯನ್ನು ಮಾಡಲಾಗಿದೆ. ಅಂದರೆ ಹತ್ತು ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಹೊಂದಿರುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಸರ್ಕಾರವು ನಾಕು 4 ತಿಂಗಳು ಹಿಂದೆಯೇ ತಿಳಿಸಲಾಗಿತ್ತು. ಒಂದು ವೇಳೆ ನೀವು ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಹೊಂದಿದ್ದರೆ ಇನ್ನೂ ಕೂಡ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಂಡಿಲ್ಲವೆಂದರೆ ಜೂನ್ 14 ಕೊನೆಯ ದಿನಾಂಕ ವಾಗಿದೆ.
ಜೂನ್ 14ರ ಒಳಗಡೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಂಡಿಲ್ಲವೆಂದರೆ ಅಂಥವರಿಗೆ ದಂಡವನ್ನು ಕಟ್ಟುವ ಮೂಲಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಈ ಸಮಸ್ಯೆಗೆ ಒಳಗಾಗಬಾರದು ಎಂದರೆ ಆದಷ್ಟು ಬೇಗ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. ನೀವು ಆನ್ಲೈನ್ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ ಅದಲ್ಲದೆ ಆಫ್ಲೈನ್ ಮೂಲಕ ಸಹ ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು.
ನೀವು ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ರೂ.50 ಹಣವನ್ನು ಪಾವತಿ ಮಾಡುವ ಮೂಲಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ ಕೊಡಬಹುದಾಗಿದೆ.
ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್
ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ನಾನು ನಿಮಗೆ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ಈ ಮಾಧ್ಯಮದಲ್ಲಿ ಮೊದಲೇ ತಿಳಿಸಲಾಗಿದೆ ನೀವು ಅದನ್ನು ವೀಕ್ಷಣೆ ಮಾಡಬಹುದಾಗಿದೆ.
ನಾನು ನಿಮಗೆ ತಿಳಿಸುವುದೇನೆಂದರೆ ಆನ್ಲೈನ್ ಮೂಲಕ ಅಪ್ಡೇಟ್ ಮಾಡಿಕೊಳ್ಳಲು ಸ್ವಲ್ಪ ಕಷ್ಟಕರವಾಗಿರುವುದರಿಂದ ನಿಮ್ಮ ಊರಿನ ಹತ್ತಿರವಿರುವ ಕೆಲವು ಸೇವಾ ಕೇಂದ್ರಗಳಿಗೆ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು 10 ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಇನ್ನೂ ಕೂಡ ಅಪ್ಡೇಟ್ ಮಾಡಿಕೊಂಡಿಲ್ಲವೆಂದರೆ ಆದಷ್ಟು ಬೇಗ ಅಪ್ಡೇಟ್ ಮಾಡಿಕೊಳ್ಳಿ ಇಲ್ಲವಾದಲ್ಲಿ ಶುಲ್ಕವನ್ನು ವಿಧಿಸುವ ಮೂಲಕ ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.