Bara parihara: 34 ಲಕ್ಷದ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ..! ಹೀಗೆ ಚೆಕ್ ಮಾಡಿಕೊಳ್ಳಿ..!

Bara parihara: 34 ಲಕ್ಷದ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ..! ಹೀಗೆ ಚೆಕ್ ಮಾಡಿಕೊಳ್ಳಿ..!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ರಾಜ್ಯದ ರೈತರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು, ರಾಜ್ಯದಲ್ಲಿ ಹಲವು ರೈತರು ಬೆಳೆ ನಷ್ಟದ ಬರ ಪರಿಹಾರದ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 3454 ಕೋಟಿ ಬರ ಪರಿಹಾರ ಜಮಾ ಆಗಿದೆ. ಈ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಯಾವಾಗ ಜಮವಾಗಲಿದೆ ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಬರ ಪರಿಹಾರ 2024

ಹೌದು ಗೆಳೆಯರೇ, ರಾಜ್ಯದಲ್ಲಿ ಒಟ್ಟು 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ತೀವ್ರ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿರುವುದರಿಂದ ಈ ಎಲ್ಲ ತಾಲೂಕಿನ ರೈತರಿಗೆ ಆರ್ಥಿಕವಾಗಿ ಸರ್ಕಾರದಿಂದ ಸಹಾಯಧನವನ್ನು ನೀಡಲು ಮುಂದಾಗಿದೆ. ಮೊದಲು ರಾಜ್ಯ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ಮೊದಲ ಕಂತಿನ 2000 ಬರ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮಾಡಲಾಗಿದೆ. ಈ ಹಣವನ್ನು ಹಲವು ರೈತರು ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಸುಮಾರು ಅಂದರೆ 34 ಲಕ್ಷ ರೈತರ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಂಡು ಈ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಿದ್ದಾರೆ ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡರವರು ತಿಳಿಸಿದ್ದಾರೆ. ಈಗಾಗಲೇ ಮೊದಲ ಕಂತಿನ 2,000 ಹಣವನ್ನು ಜಮಾ ಮಾಡಲಾಗಿದೆ, ಅದೇ ರೀತಿ ಎರಡನೇ ಕಂತಿನ ಪರಿಹಾರದ ಹಣವನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಜಿಲ್ಲಾವಾರು ಹಂತ ಹಂತವಾಗಿ ಬರ ಪರಿಹಾರದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ.

2023ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ ಬರಗಾಲದಿಂದ ರೈತರು ಬಹಳಷ್ಟು ಬೆಳೆ ನಷ್ಟ ಉಂಟಾಗಿದೆ. ಈ ಹಿನ್ನಲೆಯಿಂದ 2024ರ ಜನವರಿಯಲ್ಲಿ ರೈತರಿಗೆ ಬರ ಪರಿಹಾರದ ಮೊದಲನೇ ಕಂತಿನ 2000 ಹಣವನ್ನು ಜಮಾ ಮಾಡಲಾಗಿತ್ತು. ರಾಜ್ಯದಲ್ಲಿ ಸುಮಾರು 34 ಲಕ್ಷ ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದಿಂದ ನೀಡಿರುವ 3454 ಕೋಟಿ ರೂ ಹಣವನ್ನು ಇನ್ ಪುಟ್ ಸಬ್ಸಿಡಿಯ ಬಾಕಿ ಮೊತ್ತವನ್ನು ಡಿವಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಸಿಗಲಿದೆ

ಹೌದು ಗೆಳೆಯರೇ, ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಬಂದಿರುವ 3454 ಕೋಟಿ ರೂ ಅನ್ನು ಇನ್ ಪುಟ್ ಸಬ್ಸಿಡಿ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ರಾಜ್ಯದ ರೈತರಿಗೆ 2000 ಬರ ಪರಿಹಾರದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಅದೇ ರೀತಿ ಎರಡನೇ ಕಂತಿನ ಹಣವನ್ನು ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಮಾಡಲಿದ್ದಾರೆ. ಹಾಗಾದರೆ ಯಾವ ಬೆಳೆಗೆ ಎಷ್ಟು ಪರಿಹಾರ ಸಿಗಲಿದೆ ಎಂಬ ಮಾಹಿತಿ ಕೆಳಭಾಗದಲ್ಲಿ ನೀಡಲಾಗಿದೆ.

  • ಮಳೆಯಾಶ್ರಿತ ಬೆಳೆಗಳಿಗೆ: ರೂ.8500
  • ಬಹುವಾರ್ಷಿಕ ಬೆಳೆಗಳಿಗೆ: ರೂ.22500
  • ನೀರಾವರಿ ಬೆಳೆಗಳಿಗೆ: ರೂ.17000

ಈ ರೀತಿ ಹಂತ ಹಂತವಾಗಿ ಬೆಳೆಗಳ ಆಧಾರದ ಮೇಲೆ ಪರಿಹಾರವನ್ನು ನೀಡಲಿದ್ದಾರೆ. ಹಾಗಾದರೆ ಪರಿಹಾರ ವಿತರಣೆಗೆ ಅರ್ಹರಿರುವ ನಿಮ್ಮ ಹಳ್ಳಿಯ ರೈತರ ಪಟ್ಟಿ ನೋಡುವ ವಿಧಾನ ಅಥವಾ ಹಳ್ಳಿಯ ಬರ ಪರಿಹಾರ ಪಟ್ಟಿಯನ್ನು ನೋಡುವ ವಿಧಾನವನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.

ನಿಮ್ಮ ಹಳ್ಳಿಯ ಬರ ಪರಿಹಾರದ ಪಟ್ಟಿಯನ್ನು ನೋಡುವುದು ಹೇಗೆ

ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ ನಿಮ್ಮ ಊರಿನ ಬರ ಪರಿಹಾರದ ಪಟ್ಟಿಯನ್ನು ನೋಡಬಹುದಾಗಿದೆ. ಇನ್ ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಭಾಗದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.

  • ಮೊದಲು ನೀವು ಬರ ಪರಿಹಾರದ ಪಟ್ಟಿಯನ್ನು ನೋಡಬೇಕೆಂದರೆ ಸರ್ಕಾರದ ಅಧಿಕೃತ https://parihara.karnataka.gov.in/service89/PaymentDetailsReport.aspx ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ಮೊದಲನೇ ಆಪ್ಷನ್ ಅದ ‘ವರ್ಷ ಆಯ್ಕೆ ಮಾಡಿ/Select year’ ಎಂಬ ಆಪ್ಷನ್ ನಲ್ಲಿ ‘2023-24’ ಎಂದು ಆಯ್ಕೆ ಮಾಡಿಕೊಳ್ಳಿ.
  • ‘ಋತು ಆಯ್ಕೆ ಮಾಡಿ/Select season’ ಎಂಬ ಆಪ್ಷನ್ ನಲ್ಲಿ ‘ಮುಂಗಾರು’ ಎಂದು ಆಯ್ಕೆ ಮಾಡಿ ‘ವಿಪತ್ತಿನ ವಿಧ/Calamity Type’ ಎಂಬ ಆಪ್ಷನ್ ನಲ್ಲಿ ‘ಬರ’ ಎಂದು ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನೀವು ‘ಗೆಟ್ ರಿಪೋರ್ಟ್/Get Report’ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಗೆಟ್ ರಿಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ‘ಇನ್ ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Payment Details’ ಎಂದು ಕಾಣಿಸುತ್ತದೆ.
  • ಇದರಲ್ಲಿ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಮೊದಲ ಕಂತಿನ 2000 ಬರ ಪರಿಹಾರ ಜಮವಾಗಿದೆ ಎಂಬ ಎಲ್ಲ ವಿವರವನ್ನು ಇಲ್ಲಿ ತಿಳಿದುಕೊಳಬಹುದಾಗಿದೆ.
  • ಅದೇ ರೀತಿ ಎರಡನೇ ಕಂತಿನ ಬರ ಪರಿಹಾರದ ಹಣ ಜಮಾ ವಾಗಿರುವ ದಾಖಲೆಯೂ ಸಹ ಇಲ್ಲಿ ನೋಡಬಹುದಾಗಿದೆ.

ಬ್ಯಾಂಕ್ ಖಾತೆಗೆ ಹಣ ಜಮಾ ವಾಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ

ಸುಲಭವಾಗಿ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ ವಾಗಿರುವುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಚೆಕ್ ಮಾಡಿಕೊಳ್ಳುವ ವಿಧಾನವನ್ನು ಹಂತ ಹಂತವಾಗಿ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ಅನ್ನು ಓಪನ್ ಮಾಡಿಕೊಂಡು.
  • ಅಲ್ಲಿ ನೀವು ‘ಡಿವಿಟಿ ಕರ್ನಾಟಕ/DBT Karnataka’ ಎಂಬ ಅಪ್ಲಿಕೇಶನ್ ಅನ್ನು ಅಥವಾ ಅಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು ಡಿವಿಟಿ ಕರ್ನಾಟಕ/DBT Karnataka ಆಪ್ ಅನ್ನು ಓಪನ್ ಮಾಡಿಕೊಳ್ಳಿ, ಅಲ್ಲಿ ನಿಮಗೆ ಎಂಟರ್ ಆಧಾರ್ ನಂಬರ್ ಎಂದು ಕಾಣಿಸುತ್ತದೆ.
  • ಅಲ್ಲಿ ನೀವು ಫಲಾನುಭವಿಗಳ ‘ಆಧಾರ ಸಂಖ್ಯೆಯನ್ನು ಎಂಟರ್’ ಮಾಡಿ ‘ಗೆಟ್ ಓಟಿಪಿ/Get OTP’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ಫಲಾನುಭವಿಗಳ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ಎಂಟರ್ ಮಾಡಿ ‘ವೆರಿಫೈ/Verify’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನಿಮಗೆ ಫಲಾನುಭವಿಗಳ ವೈಯಕ್ತಿಕ ವಿವರಗಳು ಕಾಣಿಸುತ್ತದೆ ನಂತರ ನಿಮಗೆ ಮೊಬೈಲ್ ನಂಬರ್ ಎಂಟರ್ ಮಾಡಲು ಕಾಣಿಸುತ್ತದೆ ಅಲ್ಲಿ ನೀವು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ ಓಕೆ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ‘Create mPIN’ ಎಂದು ತಿಳಿಸಲಾಗುತ್ತದೆ. ಅಲ್ಲಿ ನೀವು ನಿಮಗೆ ನೆನಪಿನಲ್ಲಿಟ್ಟುಕೊಳ್ಳಬಹುದಾದ ನಾಲ್ಕು ಅಂಕಿಯ mPIN ಅನ್ನು ಎಂಟರ್ ಮಾಡಿ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ‘Select Beneficiary’ ಎಂಬ ಆಪ್ಷನ್ ನಲ್ಲಿ ನೀವು add ಮಾಡಿರೋ ಫಲಾನುಭವಿಯನ್ನು ಆಯ್ಕೆ ಮಾಡಿಕೊಳ್ಳಿ.
  • ಈಗ ನಿಮಗೆ ಕ್ರಿಯೇಟ್ ಮಾಡಿಕೊಂಡಿರುವ mPIN ಎಂಟರ್ ಮಾಡಲು ಕೇಳುತ್ತದೆ. ಎಂಟರ್ ಮಾಡಿಕೊಂಡು ‘Login’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ‘Payment Status’ ಎಂಬ ಮೊದಲನೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನಿಮಗೆ ನಾಲ್ಕು ಆಪ್ಷನ್ ಗಳು ಕಾಣಿಸುತ್ತದೆ, ಅಲ್ಲಿ ನೀವು ‘input subsidy for crop loss’ ಎಂಬ ಮೂರನೇ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಈಗ ನಿಮಗೆ ರಾಜ್ಯ ಸರ್ಕಾರದಿಂದ ಬರ ಪರಿಹಾರದ 2000 ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ವಾಗಿರುವ ಎಲ್ಲ ವಿವರವನ್ನು ಇಲ್ಲಿ ಕಾಣಿಸುತ್ತದೆ.
  • ಅದಲ್ಲದೆ ಯಾವ ದಿನಾಂಕದಂದು ಹಣ ವರ್ಗಾವಣೆಯಾಗಿದೆ ಎಂಬ ಎಲ್ಲ ವಿವರವನ್ನು ಇಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

ಬರ ಪರಿಹಾರದ ಹಣ ಜಮವಾಗಿಲ್ಲವೆಂದರೆ ಏನು ಮಾಡಬೇಕು

ಹೌದು ಗೆಳೆಯರೇ, ನೀವೇನಾದರೂ ಮೊಬೈಲ್ ಮೂಲಕ ನಿಮ್ಮ ಹಳ್ಳಿಯ ಬರ ಪರಿಹಾರ ಪಟ್ಟಿಯನ್ನು ಚೆಕ್ ಮಾಡಿಕೊಂಡು ಅಲ್ಲಿ ನಿಮ್ಮ ಹೆಸರು ಇಲ್ಲವೆಂದರೆ ಅಥವಾ ಬರ ಪರಿಹಾರ ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗಿಲ್ಲವೆಂದರೆ ಅಂತಹ ಸಮಯದಲ್ಲಿ ನಿಮ್ಮ ಊರಿನ ಹತ್ತಿರವಿರುವ ಗ್ರಾಮ ಲೆಕ್ಕಾಧಿಕಾರಿ ಯನ್ನು ಭೇಟಿ ನೀಡಿ, ಅಲ್ಲಿ ನೀವು ಏಕೆ ನಿಮ್ಮ ಹಳ್ಳಿಯ ಬರ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 3454 ಕೋಟಿ ಬರ ಪರಿಹಾರದ ಹಣವನ್ನು ಜಮಾವಾಗಿದೆ. ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡರವರು ಕರ್ನಾಟಕದಲ್ಲಿ ಒಟ್ಟು 34 ಲಕ್ಷ ರೈತರ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಕೆಲವೇ ದಿನಗಳಲ್ಲಿ ಜಿಲ್ಲಾವಾರು ಹಂತ ಹಂತವಾಗಿ ಬರ ಪರಿಹಾರದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಳೆ ಇಲ್ಲದ ಕೊರತೆಗೆ ಒಳಗಾಗುತ್ತಿರುವ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಎಂದು ಹೇಳಬಹುದು. ಈಗಾಗಲೇ ರೈತರು ಜನವರಿ ತಿಂಗಳಲ್ಲಿ ಮೊದಲನೇ ಕಂತಿನ ಬರ ಪರಿಹಾರದ ಹಣವನ್ನು ಪಡೆದುಕೊಂಡಿದ್ದಾರೆ ಅದೇ ರೀತಿ ಎರಡನೇ ಕಂತಿನ ಹಣವನ್ನು ಫಲಾನುಭವಿಗಳು ಕೆಲವೇ ದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ.

WhatsApp Group Join Now
Telegram Group Join Now

Leave a Comment