Bele Vime Status 2024: ಮೊಬೈಲ್ ಮೂಲಕ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ…! ಇಲ್ಲಿಯವರೆಗೂ ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ…!
ನಮಸ್ಕಾರ ಬಂಧುಗಳೇ ರಾಜ್ಯದಲ್ಲಿ ಬರಗಾಲ ಎದುರಾಗಿದೆ, ರಾಜ್ಯದ ರೈತರಿಗೆ ಆರ್ಥಿಕವಾಗಿ ಅತ್ಯಂತ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. 2023-24ನೇಯ ಮುಂಗಾರು ಮತ್ತು ಹಿಂಗಾರು ಬೆಳೆ ವಿಮೆ ಬಿಡುಗಡೆಯಾಗಿದೆ. ಮುಂಗಾರು ಮತ್ತು ಹಿಂಗಾರಿನ ಬೆಳೆ ವಿಮೆಯನ್ನು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಮುಂಗಾರು ಮತ್ತು ಹಿಂಗಾರಿನ ಬೆಳೆ ವಿಮೆ ಅರ್ಜಿ ಸಲ್ಲಿಕೆ ಪೂರ್ಣಗೊಂಡು ಬೆಳೆ ಸಮೀಕ್ಷೆ ಕೂಡ ಆಗಿದೆ. ವಿಮೆ ಕಂಪನಿಯು ರೈತರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣವನ್ನು ಜಮಾ ಮಾಡಲಾಗುತ್ತಿದೆ. ಹಾಗಾದರೆ ನೀವು ಯಾವ ಬೆಳೆಗೆ ವಿಮೆ ಅರ್ಜಿ ಸಲ್ಲಿಸಿದ್ದಿರ ಅದರ ಹಣದ ಸ್ಟೇಟಸ್ ಅನ್ನು ಸುಲಭವಾಗಿ ಮೊಬೈಲ್ ಬಳಸಿಕೊಂಡು ಚೆಕ್ ಮಾಡಿಕೊಳ್ಳಿ.
ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆಯ ಹಣವನ್ನು ಚೆಕ್ ಮಾಡುವ ವಿಧಾನ
ರೈತರು ಮೊಬೈಲ್ ಅನ್ನು ಬಳಸಿಕೊಂಡು ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು. ಹಾಗಾದರೆ ಆನ್ಲೈನ್ ಮೂಲಕ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ
- ಮೊದಲು ನೀವು ಬೆಳೆ ವಿಮೆ ಚೆಕ್ ಮಾಡುವ ಅಧಿಕೃತ https://samrakshane.karnataka.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅಥವಾ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಎರಡು ಆಪ್ಷನ್ ಕಾಣುತ್ತದೆ.
- ಮೊದಲನೇ ಆಪ್ಷನ್ ನಲ್ಲಿ ವರ್ಷ [Year] ಆಯ್ಕೆ ಮಾಡಲು ಕೇಳುತ್ತಿದೆ ನೀವು ಅದರಲ್ಲಿ 2023-24 ಅನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮಗೆ ಎರಡನೇ ಆಪ್ಷನ್ ಅಲ್ಲಿ ನಿಮಗೆ ರಬ್ಬಿ [Rabi] ಮತ್ತು ಖಾರೀಫ್ [Kharif] ಎಂಬ ಎರಡು ಆಪ್ಷನ್ ಕಾಣುತ್ತದೆ. ಅಲ್ಲಿ ನೀವು ಮುಂಗಾರು ಹಂಗಾಮಿನ ಬೆಳೆಯ ಸ್ಟೇಟಸ್ ನೋಡಬೇಕೆಂದರೆ ಖಾರೀಫ್ [Kharif] ಎಂದು ಆಯ್ಕೆ ಮಾಡಿಕೊಳ್ಳಿ. ಮುಂಗಾರು ಬೆಳೆ ವಿಮೆ ನೋಡಬೇಕೆಂದರೆ ರಬ್ಬಿ [Rabi] ಎಂದು ಆಯ್ಕೆ ಮಾಡಿಕೊಳ್ಳಿ.
- ಆಯ್ಕೆ ಮಾಡಿಕೊಂಡಿದ್ದ ನಂತರ ಗೋ [Go] ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಬೆಳೆ ವಿಮೆ ನೋಡುವ ಹೋಂಪೇಜ್ ಓಪನ್ ಆಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಕಾಣುತ್ತದೆ, ಅಲ್ಲಿ ನೀವು ಫಾರ್ಮರ್ಸ್ [Former] ಎಂಬ ಆಯ್ಕೆಯ ಕೆಳಗಡೆ ಚೆಕ್ ಸ್ಟೇಟಸ್ [Check Status] ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಲು ಕೇಳುತ್ತದೆ. ಅಲ್ಲಿ ನಿಮಗೆ ಯಾವುದು ಸರಿಯಾಗಿ ಸೂಕ್ತ ಸಂಖ್ಯೆ ಆ ಸಂಖ್ಯೆಯನ್ನು ನಮೂದಿಸಿ ನಂತರ ಕ್ಯಾಪ್ಚವನ್ನು ಎಂಟರ್ ಮಾಡಬೇಕಾಗುತ್ತದೆ.
- ಕ್ಯಾಪ್ಚವನ್ನು ಎಂಟರ್ ಮಾಡಿದ ನಂತರ ಸರ್ಚ್[Search] ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಸಾಕು.
- ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ವಿಮೆಯ ಸ್ಟೇಟಸ್ ಅನ್ನು ಸುಲಭವಾಗಿ ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಲಿಂಕ್ ಆಗದ ಬೆಳೆ ಹಾನಿ ರೈತರ ಪಟ್ಟಿ ಬಿಡುಗಡೆ
ರಾಜ್ಯದಲ್ಲಿ ಬರಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯದ ರೈತರಿಗೆ ಸರ್ಕಾರದಿಂದ ಬೆಳೆ ನಷ್ಟಕ್ಕೆ 2000 ಹಣವನ್ನು ನೀಡಲಾಗುತ್ತಿದೆ. ಆದರೆ ರೈತರು ಆಧಾರ್ ಕಾರ್ಡ್ ಲಿಂಕ್ ಮಾಡಿಸಿದರೆ ಮಾತ್ರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಜಮವಾಗುತ್ತದೆ. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬೆಳೆ ಹಾನಿಯ ಪರಿಹಾರ / ಬರಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮವಾಗುವುದಿಲ್ಲ. ಆಧಾರ್ ಕಾರ್ಡ್ ಲಿಂಕ್ ಆಗದೆ ಬೆಳೆ ಹಾನಿ ರೈತರ ಪಟ್ಟಿ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಆಧಾರ್ ಕಾರ್ಡ್ ಲಿಂಕ್ ಆಗದ ಪಟ್ಟಿಯ ಹೆಸರನ್ನು ಚೆಕ್ ಮಾಡಿಕೊಳ್ಳುವ ವಿಧಾನ
- ಮೊದಲು ನೀವು ಆಧಾರ್ ಕಾರ್ಡ್ ಲಿಂಕ್ ಆಗದ ಪಟ್ಟಿಯನ್ನು ನೋಡಲು ಅಧಿಕೃತ https://fruitspmk.karnataka.gov.in/MISReport/AadharNotSeededReport.aspx ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನೀವು ನಿಮ್ಮ ಜಿಲ್ಲೆಯ ಹೆಸರಿನ, ತಾಲೂಕಿನ ಹೆಸರು, ಹೋಬಳಿಯ ಹೆಸರನ್ನು ಕ್ಲಿಕ್ ಮಾಡಿದರೆ ಸಾಕು.
- ಅಲ್ಲಿ ನಿಮಗೆ ಆಧಾರ್ ಕಾರ್ಡ್ ಲಿಂಕ್ ಆಗದ ಪಟ್ಟಿ ಬರುತ್ತದೆ. ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಭೇಟಿ ನೀಡಿ. ಆಧಾರ್ ಕಾರ್ಡ್ ಲಿಂಕ್ ಮಾಡಿಸಿದರೆ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗುತ್ತದೆ.
NPCI Status ನಲ್ಲಿ ಆಕ್ಟಿವ್ [Active] ಇದ್ದರೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದರ್ಥ
ಹೌದು ಗೆಳೆಯರೇ ಒಂದು ವೇಳೆ NPCI Status ನಲ್ಲಿ ಆಕ್ಟಿವ್ [Active] ಎಂದು ಇದ್ದರೆ ನಿಮ್ಮ ಆಧಾರ್ ಕಾರ್ಡ್ ಬೆಳೆ ಪರಿಹಾರಕ್ಕೆ ಲಿಂಕ್ ಆಗಿದೆ ಎಂದರ್ಥ ಹಾಗಾದರೆ NPCI Status ಅನ್ನು ತಿಳಿದುಕೊಳ್ಳುವ ವಿಧಾನದ ಬಗ್ಗೆ ಕೆಳಭಾಗದಲ್ಲಿ ತಿಳಿಸಲಾಗಿದೆ.
- ಮೊದಲು ನೀವು NPCI Status ನೀಡಿರುವ ಅಧಿಕೃತ https://fruits.karnataka.gov.in/OnlineUserLogin.aspx ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನಿಮಗೆ Citizen Registration ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಆಧಾರ್ ಸಂಖ್ಯೆಯನ್ನು ನಮೂಂದಿಸಿ I Agree ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಕೊನೆಯದಾಗಿ ಸಬ್ಮಿಟ್ [Submit] ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಾಕಿ ಪ್ರೋಸೀಡ್ [Proceed] ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ [OTP] ಯ ಹಾಕಿ ಸಬ್ಮಿಟ್ [Submit] ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾದ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದು.
- ಈಗ ನಿಮಗೆ ರಿಜಿಸ್ಟರ್ ಮಾಡಿಕೊಳ್ಳುವ ಹಂತ ಮುಗಿಯುತ್ತದೆ. ನಂತರ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಹಾಕಿ ಮತ್ತು ಕ್ಯಾಪ್ಚರ್ ಕೋಡ್ ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.
- ಈಗ ನಿಮಗೆ ಹೋಂ ಪೇಜ್ [Home Page] ಓಪನ್ ಆಗುತ್ತದೆ, ಅಲ್ಲೇ ಎಡ ಭಾಗದಲ್ಲಿ ಮೂರು ಗೆರೆಗಳು ಕಾಣಿಸುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ಸರ್ಚ್ [Search] ಬರ ನಲ್ಲಿ NPCI Status ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ NPCI Active ಎಂದು ಕಾಣಿಸಿದರೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದರ್ಥ ಒಂದು ವೇಳೆ NPCI Active ಆಗಿಲ್ಲವೆಂದರೆ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಂಕಿಗೆ ಹೋಗಿ ಅಲ್ಲಿ ನೀವು NPCI Mapping ಮಾಡಿಸಿಕೊಳ್ಳಬಹುದು.
FID ಇದ್ದವರಿಗೆ ಮಾತ್ರ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸಿಗುತ್ತದೆ
ರೈತರು ಬರ ಪರಿಹಾರದ ಹಣವನ್ನು ಪಡೆದುಕೊಳ್ಳಬೇಕೆಂದರೆ FID ಯನ್ನು ಮಾಡಿಸಿಕೊಂಡಿರಬೇಕು, ಒಂದು ವೇಳೆ FID ಯನ್ನು ಮಾಡಿಸಿಕೊಂಡಿಲ್ಲವೆಂದರೆ ಅಂತವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗೋದಿಲ್ಲ. FID ಯನ್ನು ಮಾಡಿಸಿಕೊಂಡಿಲ್ಲವೆಂದರೆ ನಿಮ್ಮ ಊರಿನ ಹತ್ತಿರ ಇರುವ ಸೇವಕೇಂದ್ರ ಅಥವಾ ಹೋಬಳಿ ಮಟ್ಟದ ರೈತ ಕಚೇರಿಗೆ ಭೇಟಿ ನೀಡಿ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮುಂತಾದ ದಾಖಲೆಗಳನ್ನು ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ FID ಯನ್ನು ಮಾಡಿಸಿಕೊಳ್ಳಬಹುದು. ಹಾಗಾದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ನಮೂದಿಸುವ ಮೂಲಕ FID ಯನ್ನು ತಿಳಿದುಕೊಳ್ಳಿ.
ಆಧಾರ್ ಕಾರ್ಡ್ ಮೂಲಕ ನಿಮ್ಮ FID ಯನ್ನು ತಿಳಿದುಕೊಳ್ಳುವ ವಿಧಾನ
- FID ಮಾಡಿಸಿಕೊಂಡಿದ್ದೀರ ಇಲ್ಲವೋ ಎಂದು ತಿಳಿದುಕೊಳ್ಳಲು ಮೊದಲು ಅಧಿಕೃತ https://fruitspmk.karnataka.gov.in/MISReport/GetDetailsByAadhaar.aspx ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನಿಮಗೆ ಆಧಾರ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಈಗ ನಿಮಗೆ FID ನಂಬರ್ ದೊರೆಯುತ್ತದೆ ಒಂದು ವೇಳೆ FID ನಂಬರ್ ದೊರೆಯುತ್ತಿಲ್ಲ ಎಂದರೆ FID ಯನ್ನು ಮಾಡಿಸಿಲ್ಲ ಎಂದರ್ಥ.
FID ನೊಂದಣಿ ಮಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ಸುಲಭವಾಗಿ ಆನ್ಲೈನ್ ಮೂಲಕ FID ಯನ್ನು ನೋಂದಣಿ ಮಾಡಿಕೊಳ್ಳಬಹುದು. ಆದರೆ ನನಗೆ ತಿಳಿದಿರುವ ಪ್ರಕಾರ ಮೊಬೈಲ್ ನಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಈ ಕಾರಣದಿಂದ ನಿಮ್ಮ ಊರಿನ ಹತ್ತಿರವಿರುವ ಕೃಷಿ ಇಲಾಖೆ ಅಥವಾ ಕೆಲವು ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿ ನೀವು ಸುಲಭವಾಗಿ FID ಯನ್ನು ಮಾಡಿಸಿಕೊಳ್ಳಬಹುದು. ಈ ರೀತಿ ಮಾಡಿಸಿಕೊಳ್ಳುವುದು ಸುಲಭ ವಿಧಾನ ಎಂದು ಹೇಳಬಹುದು.
ಈ ರೀತಿ ನೀವು FID ಯನ್ನು ಮಾಡಿಸಿಕೊಳ್ಳುವುದರಿಂದ ಪಿಎಂ ಕಿಸಾನ್ ಯೋಜನೆ, ಬೆಳೆ ಸಾಲ, ಬೆಳೆ ವಿಮೆ, ಇನ್ನಿತರ ಸರ್ಕಾರಿ ಸೌಲಭ್ಯಗಳ ಹಣವನ್ನು ಯಾವುದೇ ದಾಖಲೆಗಳ ಸಮಸ್ಯೆ ಇಲ್ಲದೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗುತ್ತದೆ. ಹಾಗಾದರೆ ಇನ್ನು ಕೂಡ ನೀವು FID ಯನ್ನು ಮಾಡಿಸಿಕೊಂಡಿಲ್ಲವೆಂದರೆ ಆದಷ್ಟು ಬೇಗ ಮಾಡಿಸಿಕೊಳ್ಳಿ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು