BMTC recruitment: 2500 BMTC ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ…! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ…!
ನಮಸ್ಕಾರ ಬಂಧುಗಳೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿರುವ 500 BMTC ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ…! ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಸರ್ಕಾರಿ ಹುದ್ದೆಯನ್ನು ಪಡೆದುಕೊಳ್ಳಬೇಕು ಎಂಬ ಇರುವ ಅಭ್ಯರ್ಥಿಗಳು BMTC ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. BMTC ಹುದ್ದೆಯಲ್ಲಿ ಕಂಡಕ್ಟರ್ ಹುದ್ದೆಗೆ ಸೇರಬೇಕು ಎಂದುಕೊಂಡಿದ್ದಲ್ಲಿ ಒಟ್ಟು 2500 ಕಂಡಕ್ಟರ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಹಾಗಾದರೆ ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಬೇಕೆಂದರೆ ಈ ಹುದ್ದೆಗೆ ಅರ್ಹತೆ, ಅರ್ಜಿ ಶುಲ್ಕ, ವಯೋಮಿತಿ, ವೇತನ, ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲ ವಿವರವನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
2500 BMTC ಕಂಡಕ್ಟರ್ ಹುದ್ದೆಗಳು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಒಟ್ಟು 2500 BMTC ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಅದರಲ್ಲಿ ಮಿಕ್ಕುಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆ, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ನಿರ್ವಾಹಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ಈ ಹುದ್ದೆಗೆ ಬೇಕಾಗುವ ಎಲ್ಲ ವಿವರವನ್ನು ಈ ಕೆಳಭಾಗದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
- ಉದ್ಯೋಗದ ಸಂಸ್ಥೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
- ಹುದ್ದೆಯ ಹೆಸರು: ನಿರ್ವಾಹಕ [ಕಂಡಕ್ಟರ್]
- ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 2500
- ಹುದ್ದೆಗಳ ವಿಂಗಡನೆ: ಮಿಕ್ಕುಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆ, ಸ್ಥಳೀಯ ವೃಂದದಲ್ಲಿ 214
- ನೇಮಕಾತಿಯ ಪ್ರಕ್ರಿಯೆ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಅಧಿಕೃತ ವೆಬ್ಸೈಟ್: https://cetonline.karnataka.gov.in/kea/kbknrk2023
ವಯೋಮಿತಿ
BMTC ಕಂಡಕ್ಟರ್ ಹುದ್ದೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು. 35 ವರ್ಷ ಮೀರಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಈ ಹುದ್ದೆಗೆ ವಯಸ್ಸಿನ ಸಡಲಿಕೆಯು ಸಹ ಮಾಡಲಾಗಿದೆ
ವಯಸ್ಸಿನ ಮಿತಿ
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, 2A ಅಥವಾ 2B ಅಥವಾ 3A ಅಥವಾ 3B ವರ್ಗದ ಅಭ್ಯರ್ಥಿಯಗಳಿಗೆ 38 ವರ್ಷ
- ಪರಿಶಿಷ್ಟ ಜಾತಿ ಮತ್ತು ವರ್ಗದ ಹಾಗೂ ಪ್ರವರ್ಗ -1 ರ ಅಭ್ಯರ್ಥಿಗಳಿಗೆ 40 ವರ್ಷ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 40 ವರ್ಷ
ಅರ್ಜಿ ಶುಲ್ಕದ ವಿವರ
ನೀವೇನಾದರೂ BMTC ಕಂಡಕ್ಟರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅರ್ಜಿ ಸಲ್ಲಿಸುವ ಶುಲ್ಕವನ್ನು ಅಭ್ಯರ್ಥಿಯ ವರ್ಗದ ಆಧಾರದ ಮೇಲೆ ವಿಂಗಡನೆ ಮಾಡಲಾಗುತ್ತದೆ
- ಜೆನೆರಲ್ ಕೆಟಗರಿ ಅಥವಾ ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ: ರೂ.750
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ: ರೂ.500
ವೇತನ
ನೀವೇನಾದರೂ ಈ ಹುದ್ದೆಗೆ ಅರ್ಹ ಅಭ್ಯರ್ಥಿಯಾಗಿದ್ದು BMTC ನಿರ್ವಾಹಕ ಹುದ್ದೆಗೆ ಮಾಸಿಕ ವೇತನ 18660 ರೂಪಾಯಿಯಿಂದ 25300 ವರೆಗೆ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯ ಪಡೆದ ವಿದ್ಯಾಲಯದಿಂದ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಅಥವಾ ಮೂರು ವರ್ಷದ ಡಿಪ್ಲೋಮೋ ಮುಗಿಸಿರಬೇಕು. ಹಾಗಾದರೆ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
ಪ್ರಮುಖ ದಿನಾಂಕಗಳು
BMTC ಕಂಡಕ್ಟರ್ ಹುದ್ದೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 18-05-2024 ಆಗಿರುತ್ತದೆ. ಹಾಗೆಯೇ ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕವು 19-05-2024 ಆಗಿದೆ. ಇದರಿಂದ ಯಾರೆಲ್ಲ ಈ ಹುದ್ದೆಗೆ ಅರ್ಹರಾಗಿದ್ದೀರಾ ಆದಷ್ಟು ಬೇಗ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.
ಎತ್ತರದ ನಿಯಮಗಳು
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪುರುಷರ ಅಭ್ಯರ್ಥಿಗಳ ಕನಿಷ್ಠ ಎತ್ತರ 160cm ಮತ್ತು ಮಹಿಳಾ ಅಭ್ಯರ್ಥಿಗಳ ಕನಿಷ್ಠ ಎತ್ತರ 150cm ಹೊಂದಿರಬೇಕು. ಹಾಗಾದರೆ ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗುತ್ತಾರೆ.
BMTC ಕಂಡಕ್ಟರ್ ಹುದ್ದೆಯ ಪರೀಕ್ಷೆಯ ವಿಧಾನ
ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ನಂತರ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಎರಡು ಪತ್ರಿಕೆಗಳಲ್ಲಿ ತಲಾ 100 ಅಂಕಗಳಿಗೆ ನಡೆಸಲಾಗುತ್ತದೆ. ನಂತರ ಇದರಲ್ಲಿನ ಶೇಕಡ 75 ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಗೆ ಶೇಕಡ 25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಯ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
BMTC ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ
ಹೌದು ಗೆಳೆಯರೇ, ನೀವೇನಾದರೂ ಈ ಮೇಲೆ ನೀಡಿರುವ ಅರ್ಹತೆಗಳಿಗೆ ಬದ್ಧವಾಗಿದ್ದರೆ ಅಥವಾ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಯಾಗಿದ್ದರೆ ನೀವು ಸುಲಭವಾಗಿ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ಮೂಲಕ BMTC ಕಂಡಕ್ಟರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಭಾಗದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
- ಮೊದಲು ನೀವು ಕರ್ನಾಟಕ ಪರೀಕ್ಷ ಪ್ರಾಧಿಕಾರದ ಅಧಿಕೃತ https://cetonline.karnataka.gov.in/kea/kbknrk2023 ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ
- ಈಗ ನಿಮಗೆ ಹೋಂಪೇಜ್ ಅಥವಾ ವೆಬ್ಸೈಟ್ ಓಪನ್ ಆಗುತ್ತದೆ, ಅಲ್ಲಿ ನಿಮಗೆ HK / NHK ಎಂಬ ಎರಡು ಹುದ್ದೆಯ ಅರ್ಜಿಗಳ ಲಿಂಕ್ ಕಾಣುತ್ತದೆ.
- ಅಲ್ಲಿ ನೀವು ಮಿಕ್ಕುಳಿದ ವೃಂದದ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ HK, ಸ್ಥಳೀಯ ವೃಂದದ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ NHK ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ನೀವು ಯಾವ ವೃಂದದ ಹುದ್ದೆಗೆ ಅರ್ಜಿಯನ್ನು ಹಾಕಲು ಬಯಸುವಿರಾ ಅದರ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಕೆಇಎ ಯ ಮತ್ತೊಂದು ಹೊಸ ವೆಬ್ಸೈಟ್ ಓಪನ್ ಆಗುತ್ತದೆ, ಇಲ್ಲಿ ಮೊದಲ ಬಾರಿಗೆ ನೀವು ಈ ವೆಬ್ಸೈಟ್ ನಲ್ಲಿ ಹುದ್ದೆಗೆ ಅರ್ಜಿ ಹಾಕುವವರಾಗಿದ್ದರೆ.
- ನೀವು ಅಪ್ಲಿಕೇಶನ್ ರಿಜಿಸ್ಟರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಕೇಳುವ ಎಲ್ಲ ಮಾಹಿತಿಯನ್ನು ನೀಡಿ ಅರ್ಜಿಯನ್ನು ರಿಜಿಸ್ಟರ್ ಪಡೆಯಿರಿ.
- ನಂತರ ನೀವು ರಿಜಿಸ್ಟರ್ ಪಡೆದಿರುವ ರಿಜಿಸ್ಟರ್ ಸಂಖ್ಯೆ, ಹೆಸರಿನ ಮೊದಲು 5 ಅಕ್ಷರ ನೀಡಿ ಲಾಗಿನ್ ಮಾಡಿಕೊಳ್ಳಿ.
- ಈಗ ನಿಮಗೆ ಅರ್ಜಿ ಸಲ್ಲಿಸುವ ಪೋಸ್ಟ್ ಓಪನ್ ಆಗುತ್ತದೆ, ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅದಲ್ಲದೆ ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲೋಡ್ ಮಾಡಲು ಕೇಳುತ್ತದೆ ಅಪ್ಲೋಡ್ ಮಾಡಿ.
- ಅಪ್ಲೋಡ್ ಮಾಡಿದ ನಂತರ ಕೊನೆಯ ಹಂತದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
- ಕೊನೆಯ ಹಂತದಲ್ಲಿ ಅರ್ಜಿಯನ್ನು ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ಸುಲಭವಾಗಿ BMTC ಕಂಡಕ್ಟರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನಿಮಗೇನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೇವ ಕೇಂದ್ರ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಗಮನಿಸಿ
ಹೌದು ಗೆಳೆಯರೇ, ನೀವೇನಾದರೂ ಯಾವುದೇ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಆ ಹುದ್ದೆಯ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ. ಏಕೆಂದರೆ ನಾವು ಈ ಮಾಧ್ಯಮದಲ್ಲಿ ಈ ಹುದ್ದೆಗೆ ಬೇಕಾಗುವ ಪ್ರಮುಖ ಮಾಹಿತಿಯನ್ನು ಒದಗಿಸಲಾಗುತ್ತದೆ, ಈ ಕಾರಣದಿಂದ ಈ ಹುದ್ದೆಯ ಎಲ್ಲಾ ಮಾಹಿತಿಯನ್ನು ಅಧಿಸೂಚನೆಯಲ್ಲಿ ತಿಳಿದುಕೊಳ್ಳಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಅದಲ್ಲದೆ ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಯನ್ನು ಒದಗಿಸಿ ಮತ್ತು ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ ಇಲ್ಲವಾದಲ್ಲಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಏಕೆಂದರೆ ಒಂದು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಈ ಕಾರಣದಿಂದ ಸರಿಯಾದ ದಾಖಲೆಯನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು