BPNL Recruitment 2024: ಭಾರತೀಯ ಪಶುಪಾಲನಾ ನಿಗಮದಲ್ಲಿ ಖಾಲಿ ಇರುವ 5250 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!
ನಮಸ್ಕಾರ ಬಂಧುಗಳೇ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ 5,000ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟ ಮಾಡಲಾಗಿದೆ. ಒಟ್ಟು 5250 ಕೃಷಿ ನಿರ್ವಹಣಾ ಅಧಿಕಾರಿ [Farming Management Officer], ಕೃಷಿ ಅಭಿವೃದ್ಧಿ ಅಧಿಕಾರಿ [Agricultural Development Officer], ರೈತ ಪ್ರೇರಕರು [Agricultural inspiration] ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 02.06.2024 ಆಗಿದೆ. ಈ ಹುದ್ದೆಯ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಹಾಗಾದರೆ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಒಟ್ಟು 5250 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಯೋಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ವಿಧಾನ ಈ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ಹುದ್ದೆಯ ವಿವರಗಳು
- ಸಂಸ್ಥೆಯ ಹೆಸರು: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್
- ಒಟ್ಟು ಖಾಲಿ ಇರುವ ಹುದ್ದೆಗಳು: 5250
- ಹುದ್ದೆಯ ವಿವರಗಳು: ಕೃಷಿ ನಿರ್ವಹಣಾ ಅಧಿಕಾರಿ [Farming Management Officer], ಕೃಷಿ ಅಭಿವೃದ್ಧಿ ಅಧಿಕಾರಿ [Agricultural Development Officer], ರೈತ ಪ್ರೇರಕರು [Agricultural inspiration]
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 02.06.2024
- ಅರ್ಜಿ ಸಲ್ಲಿಸುವ ಸ್ಥಳ: ಭಾರತದಲ್ಲಿ ಎಲ್ಲಿ ಬೇಕಾದರೂ
- ಅಧಿಕೃತ ಲಿಂಕ್: www.bharatiyapashupalan.com
ಖಾಲಿ ಇರುವ ಒಟ್ಟು ಹುದ್ದೆಗಳ ವಿವರ
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಒಟ್ಟು 5250 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಶುಪಾಲನಾ ನಿಗಮದ ಹುದ್ದೆಗಳಲ್ಲಿ ಮೂರು ಹುದ್ದೆಗಳಾಗಿ ವಿಂಗಡಿಸಲಾಗಿದೆ.
- ಕೃಷಿ ನಿರ್ವಹಣಾ ಅಧಿಕಾರಿ [Farming Management Officer]: 250 ಹುದ್ದೆಗಳು
- ಕೃಷಿ ಅಭಿವೃದ್ಧಿ ಅಧಿಕಾರಿ [Agricultural Development Officer]: 1250 ಹುದ್ದೆಗಳು
- ರೈತ ಪ್ರೇರಕರು [Agricultural inspiration]: 3750 ಹುದ್ದೆಗಳು
ಒಟ್ಟು 5250 ಹುದ್ದೆಗಳನ್ನು ಒಳಗೊಂಡಿದೆ.
ವಿದ್ಯಾರ್ಹತೆ
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನ ಖಾಲಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಡೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10ನೇ ತರಗತಿ ಅಥವಾ ಪಿಯುಸಿ ಅಥವಾ ಪದವಿಯನ್ನು ಮುಗಿಸಿರಬೇಕು. ಹಾಗಾದರೆ ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
ವೇತನ
ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಆಧಾರದ ಮೇಲೆ ವೇತನವನ್ನು ನೀಡಲಾಗುತ್ತದೆ.
- ಕೃಷಿ ನಿರ್ವಹಣಾ ಅಧಿಕಾರಿ [Farming Management Officer]: ತಿಂಗಳಿಗೆ ರೂ.31000
- ಕೃಷಿ ಅಭಿವೃದ್ಧಿ ಅಧಿಕಾರಿ [Agricultural Development Officer]: ತಿಂಗಳಿಗೆ ರೂ.28000
- ರೈತ ಪ್ರೇರಕರು [Agricultural inspiration]: ತಿಂಗಳಿಗೆ ರೂ.22000
ಈ ರೀತಿ ಹುದ್ದೆಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.
ವಯೋಮಿತಿ
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನ ಖಾಲಿ ಹುದ್ದೆಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನು ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಕೃಷಿ ನಿರ್ವಹಣಾ ಅಧಿಕಾರಿ [Farming Management Officer]: 25-45 ವರ್ಷ
- ಕೃಷಿ ಅಭಿವೃದ್ಧಿ ಅಧಿಕಾರಿ [Agricultural Development Officer]: 21-40 ವರ್ಷ
- ರೈತ ಪ್ರೇರಕರು [Agricultural inspiration]: 18-40 ವರ್ಷ
ಈ ರೀತಿ ಹುದ್ದೆಗಳ ಆಧಾರದ ಮೇಲೆ ವಯೋಮಿತಿಯನ್ನು ವಿಂಗಡನೆ ಮಾಡಲಾಗಿದೆ. ಅದಲ್ಲದೆ ಈ ಹುದ್ದೆಯಲ್ಲಿ ಗರಿಷ್ಠ ವಯೋಮಿತಿ ಸಡಿಲಿಕೆಯು ಸಹ ಮಾಡಲಾಗಿದೆ.
ಗರಿಷ್ಠ ವಯಮಿತಿಯ ಸಡಿಲಿಕೆ
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ [SC/ST]: 5 ವರ್ಷ
- ಇತರೆ ಹಿಂದೂಳಿದ ವರ್ಗ [OBC] : 03 ವರ್ಷ
- ಅಂಗವಿಕಲ [PWD]: ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆಯನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ವಿಧಿಸಬೇಕಾಗುತ್ತದೆ.
- ಕೃಷಿ ನಿರ್ವಹಣಾ ಅಧಿಕಾರಿ [Farming Management Officer]: ರೂ.944
- ಕೃಷಿ ಅಭಿವೃದ್ಧಿ ಅಧಿಕಾರಿ [Agricultural Development Officer]: ರೂ.826
- ರೈತ ಪ್ರೇರಕರು [Agricultural inspiration]: ರೂ.708
ಅರ್ಜಿ ಶುಲ್ಕವನ್ನು ಸುಲಭವಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಆನ್ಲೈನಲ್ಲಿ ಹಣವನ್ನು ಪಾವತಿ ಮಾಡಬಹುದಾಗಿದೆ.
ಆಯ್ಕೆ ವಿಧಾನ
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ವಿಧಾನವನ್ನು ಆನ್ಲೈನ್ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಉದ್ಯೋಗದ ಸ್ಥಳ
ಖಾಲಿ ಇರುವ ಹುದ್ದೆಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸುವ ಪ್ರಾರಂಭದಲ್ಲಿ ದಿನಾಂಕ 23.05.2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 02.06.2024
ಅರ್ಜಿ ಸಲ್ಲಿಸುವ ವಿಧಾನ
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು 02.06.2024 ಕೊನೆಯ ದಿನಾಂಕವಾಗಿರುವುದರಿಂದ ಅರ್ಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು BPNLನ ಅಧಿಕೃತ www.bharatiyapashupalan.com ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಕೆಲವು ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಗಮನಿಸಿ
ಹೌದು ಗೆಳೆಯರೇ, ಯಾವುದೇ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಆ ಹುದ್ದೆಯ ಅಧಿಸೂಚನೆಯನ್ನು ಗಮನಿಸಿ. ಏಕೆಂದರೆ ನಾವು ಈ ಮಾಧ್ಯಮದಲ್ಲಿ ಹುದ್ದೆಗೆ ಬೇಕಾಗುವ ಪ್ರಮುಖ ಮಾಹಿತಿಯನ್ನು ನೀಡಲಾಗಿರುತ್ತದೆ. ಈ ಕಾರಣದಿಂದ ಯಾವುದೇ ಹುದ್ದೆಯ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಅಧಿಸೂಚನೆಯನ್ನು ಗಮನಿಸಬೇಕಾಗುತ್ತದೆ.
ನೀವೇನಾದರೂ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯನ್ನು ತಿಳಿದುಕೊಳ್ಳಬೇಕೆಂದರೆ BPNLನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಯನ್ನು ಒದಗಿಸಿ ಮತ್ತು ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ ಇಲ್ಲವಾದಲ್ಲಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
ಇದೇ ರೀತಿ ಜಾಬ್ ನ್ಯೂಸ್ ಮತ್ತು ಅಗ್ರಿಕಲ್ಚರ್ ನ್ಯೂಸ್ ಪ್ರತಿದಿನ ತಿಳಿದುಕೊಳ್ಳಬೇಕೆಂದರೆ ನಮ್ಮ ವೆಬ್ ಸೈಟ್ ಅನ್ನು ಫಾಲೋ ಮಾಡಿಕೊಳ್ಳಿ. ಅದಲ್ಲದೆ ಇಲ್ಲಿ ನೀಡಲಾಗಿರುವ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಗ್ರೂಪ್ ನಲ್ಲಿ ನಾನು ಪ್ರತಿದಿನ ನ್ಯೂಸ್ ಅನ್ನು ಅಪ್ಡೇಟ್ ಮಾಡ್ತೇನೆ.