Voter ID: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ / ಕೆಲವೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳಬಹುದು…
ನಮಸ್ಕಾರ ಬಂಧುಗಳೇ ಭಾರತದಲ್ಲಿ ಏಪ್ರಿಲ್ 19 ರಿಂದ ಜೂನ್ 4 ರವರೆಗೆ ಲೋಕಸಭಾ ಚುನಾವಣೆ ನಡೆಯಲಿದೆ, ನಡೆಯಲು ಇನ್ನು ಕೆಲವೇ ತಿಂಗಳು ಬಾಕಿ ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಾವು ಲೋಕಸಭಾ ಚುನಾವಣೆಗೆ ಮತ ಹಾಕಬೇಕೆಂದರೆ ನಮಗೆ 18 ವರ್ಷ ತುಂಬಿರಬೇಕು. ಕೆಲವರು 18 ವರ್ಷ ತುಂಬಿದರು ಸಹ ಅಂತಹ ಅಭ್ಯರ್ಥಿಗಳು ಗುರುತಿನ ಚೀಟಿ [Voter ID] ಪಡೆಯಲು ಅರ್ಜಿ ಸಲ್ಲಿಸಿಲ್ಲ ಅಂತವರಿಗೆ ಈ ಮಾಹಿತಿ ಉಪಯೋಗವಾಗಬಹುದು.
ಚುನಾವಣೆ
ಕಳೆದ ಬಾರಿ ಲೋಕಸಭಾ ಚುನಾವಣೆ ರೀತಿಯೇ ಈ ಬಾರಿಯೂ 7 ಹಂತದಲ್ಲಿ ಚುನಾವಣೆ ನಡೆಯಲಿದೆ. 18 ವರ್ಷ ತುಂಬಿದ ಭಾರತದ ಪ್ರತಿಯೊಬ್ಬ ವ್ಯಕ್ತಿಯು ಮತದಾನ ಮಾಡಬಹುದು. ಒಂದು ವೇಳೆ ನಿಮಗೆ 18 ವರ್ಷ ತುಂಬಿದ್ದು ಗುರುತಿನ ಚೀಟಿ [Voter ID] ಪಡೆದುಕೊಂಡಿಲ್ಲವೆಂದರೆ ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ನೀವು ಅರ್ಜಿಯನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ನೀವು ಸುಲಭವಾಗಿ ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಎಲ್ಲ ಮಾಹಿತಿ ಕೆಳಭಾಗದಲ್ಲಿ ನೀಡಲಾಗಿದೆ
ಮೊದಲು ನಾವು ಗುರುತಿನ ಚೀಟಿ [Voter ID]ಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ
- ಮೊದಲು ನೀವು ವೋಟರ್ ಐಡಿ ಅಪ್ಲೈ ಮಾಡುವ WWW.NVSP.IN ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಅಲ್ಲಿ ನೀವು ರಿಜಿಸ್ಟರ್ ಆಫ್ ನ್ಯೂ ವೋಟರ್ ಐಡಿ ಎಂಬ ವಿಭಾಗದ ಮೇಲೆ ಆಯ್ಕೆ ಮಾಡಿಕೊಳ್ಳಿ.
- ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಮಾಡಿಕೊಳ್ಳಿ.
- ನಂತರ ನಿಮಗೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ಸಿಗುತ್ತದೆ, ಇದನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.
- ನಂತರ ಈ ವೆಬ್ ಸೈಟ್ ನಲ್ಲಿ ಫಾರಂ 6 ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳುವ ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
- ಭರ್ತಿ ಮಾಡಿದ ನಂತರ ಅಲ್ಲಿ ನಿಮಗೆ ಸ್ಕ್ಯಾನ್ ಮಾಡುವ ಮೂಲಕ ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಅದಲ್ಲದೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಅಪ್ಲೋಡ್ ಮಾಡಬೇಕಾಗುತ್ತದೆ. ಈ ಎಲ್ಲ ದಾಖಲೆಗಳನ್ನು ಸಲ್ಲಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಈ ರೀತಿ ಸುಲಭವಾಗಿ ಗುರುತಿನ ಚೀಟಿ [Voter ID]ಗೆ ಅರ್ಜಿಯನ್ನು ಸಲ್ಲಿಸಬಹುದು. ನೀವು ಸಲ್ಲಿಸಿದ ಗುರುತಿನ ಚೀಟಿ [Voter ID]ಯ ಸ್ಟೇಟಸ್ ಅನ್ನು ಸುಲಭವಾಗಿ ಸಹ ಪರಿಶೀಲಿಸಬಹುದು.
ಈ ಮೇಲೆ ನೀಡಿರುವ ಹಾಗೆ ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ನೀವು ಆ ಅರ್ಜಿಯನ್ನು ಸಲ್ಲಿಸಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ಭಾಗದ ಮಾಹಿತಿಯನ್ನು ಓದಿ.
ಆನ್ಲೈನ್ ಮೂಲಕ ಸುಲಭವಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದೆಯ್ಯ ಎಂದು ನೋಡುವ ವಿಧಾನ
- ನಿಮ್ಮ ಹತ್ತಿರ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಯಾವುದಾದರೂ ಒಂದು ಉಪಕರಣ ಇದ್ದರೆ ಸಾಕು
- ಮೊದಲು ನೀವು ಅಧಿಕೃತ https://electoralsearch.eci.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ನಂತರ ನಿಮಗೆ ಹಲವಾರು ಆಯ್ಕೆಗಳು ಕಾಣಬಹುದು, ಅಲ್ಲಿ ನಿಮಗೆ ವಿವರಗಳ ಮೂಲಕ ಹುಡುಕಿ, EPIC ಮೂಲಕ ಹುಡುಕಿ, ಮೊಬೈಲ್ ಮೂಲಕ ಹುಡುಕಿ ಎಂಬ ಮೂರು ವಿಭಾಗಗಳು ಕಾಣಬಹುದು.
- ಅಲ್ಲಿ ನೀವು ಯಾವ ವಿಭಾಗದಲ್ಲೂ ಬೇಕಾದರೂ ಮತದಾರರ ಪಟ್ಟಿಯನ್ನು ಹುಡುಕಬಹುದು, ಮೊದಲು ನೀವು ಮೊದಲನೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ವಿವರಗಳ ಮೂಲಕ ಹುಡುಕಿ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ನಿಮ್ಮ ಹೆಸರು, ತಂದೆಯ ಹೆಸರು, ಲಿಂಗ ಮತ್ತು ಹುಟ್ಟಿದ ದಿನಾಂಕ ಈ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
- ನಂತರ ನಿಮಗೆ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರದ ಮಾಹಿತಿಯ ಬಗ್ಗೆ ತಿಳಿಸಬೇಕಾಗುತ್ತದೆ. ನಂತರ ನಿಮಗೆ ಕ್ಯಾಪ್ಚರ್ ಕೋಡ್ ಕಾಣುತ್ತದೆ ಅದನ್ನು ನಮೂಂದಿಸಿ ಈಗ ನಿಮಗೆ ಮತದಾರರ ಪಟ್ಟಿ ಕಾಣುತ್ತದೆ.
- ಈ ಕೆಳಭಾಗದಲ್ಲಿ ಮೂರು ವಿಭಾಗಗಳ ವಿವರವನ್ನು ತಿಳಿಸಲಾಗಿದೆ
- ಸರ್ಚ್ ಬೈ ಡಿಟೈಲ್ಸ್ ಇದು ಮೊದಲನೇ ಆಯ್ಕೆಯಾಗಿದೆ ಇಲ್ಲಿ ನೀವು ಹೆಸರು, ಉಪನಾಮ, ಜನನ, ದಿನಾಂಕ, ಇನ್ನು ಕೆಲವು ವಿವರಗಳನ್ನು ಸೇರಿಸಬೇಕಾಗುತ್ತದೆ. ಸೇರಿಸಿದ ನಂತರ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು.
- ಸರ್ಚ್ ಬೈ EPIC ಇದು ಎರಡನೇ ವಿಧಾನವಾಗಿದೆ ಇದರಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ವೋಟರ್ ಐಡಿಯಾ ನಂಬರ್, ರಾಜ್ಯ ಹಾಕಿ. ಹಾಕಿದ ನಂತರ ಕ್ಯಾಪ್ಚರನ್ನು ಎಂಟರ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಸರ್ಚ್ ಬೈ ಮೊಬೈಲ್ ಇದು ಮೂರನೇ ವಿಧಾನವಾಗಿದೆ ಈ ವಿಧಾನದಲ್ಲಿ ನೀವು ರಾಜ್ಯ, ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿ ಮಾಡಿಕೊಂಡಿದ್ದ ನಂತರ ಗುರುತಿನ ಚೀಟಿಯೊಂದಿಗೆ ನೋಂದಾಯಿಸಲಾದ ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾವನ್ನು ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಈ ಮೇಲೆ ನೀಡಿರುವ ಮೂರು ವಿಧಾನದಲ್ಲಿ ಮತದಾನ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಸುಲಭವಾಗಿ ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ ನೀವು ಚುನಾವಣೆಯಲ್ಲಿ ಮತದಾನ ಹಾಕಬಹುದು. ಮತದಾನ ಹಾಕಲು ಯಾವುದೇ ಗುರುತಿನ ಚೀಟಿ ಬೇಕಾಗಿಲ್ಲ ಆಧಾರ್ ಕಾರ್ಡ್ಇದ್ದರೆ ಮತದಾನ ಹಾಕಬಹುದು. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ನೋ ರೆಕಾರ್ಡ್ ಫೌಂಡ್ [No Record Found] ಎಂದು ಬರುತ್ತದೆ. ಈ ರೀತಿ ಬಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಅರ್ಥ ಹಾಗಾದರೆ ಏನು ಮಾಡಬೇಕು ಎಂದು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಈ ರೀತಿ ಮಾಡಿ
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಪ್ರಾರಂಭವಾಗಲಿದೆ, ಇಂತಹ ಸಮಯದಲ್ಲಿ ಗುರುತಿನ ಚೀಟಿ [Voter ID] ಪ್ರಮುಖವಾಗುತ್ತದೆ. ಒಂದು ವೇಳೆ ಅರ್ಜಿಯನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಈ ರೀತಿ ಮಾಡಿ.
ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಆನ್ಲೈನ್ ವೋಟರ್ ರಿಜಿಸ್ಟರ್ ಲಿಂಕ್ ಮೂಲಕ ನೋಂದಣಿ ಮಾಡಬೇಕಾಗುತ್ತದೆ. ನೊಂದಣಿ ಮಾಡಲು ಚುನಾವಣೆಯ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಯೂಸರ್ ನೇಮ್, ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ಸೈನ್ ಅಪ್ ಆಗಬೇಕು. ನಂತರ ಫೋಟೋ ವಿಳಾಸ ಗುರುತಿನ ದಾಖಲು ಇನ್ನಿತರ ಮಾಹಿತಿಗಳನ್ನು ಸೇರಿಸಬೇಕಾಗುತ್ತದೆ.
ಒಂದು ವೇಳೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಹತ್ತಿರ ಇರುವ ಚುನಾವಣಾ ಆಯೋಗಕ್ಕೆ ಭೇಟಿ ನೀಡುವ ಮೂಲಕ ಅಥವಾ ಮತದಾನ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ, ಅಲ್ಲಿ ನೀವು ಗುರುತಿನ ಚೀಟಿಯ ಅರ್ಜಿ ಸಲ್ಲಿಸುವ ಫಾರಂ ಅನ್ನು ತೆಗೆದುಕೊಂಡು ಅದನ್ನು ಭರ್ತಿ ಮಾಡಿ. ನಂತರ ಮತದಾರ ಕೇಂದ್ರಕ್ಕೆ ನೀಡಬೇಕಾಗುತ್ತದೆ. ಇದು ಆಫ್ಲೈನ್ನ ಸುಲಭ ವಿಧಾನ ಎಂದು ಹೇಳಬಹುದು. ಈ ರೀತಿ ನೀವು ಅರ್ಜಿ ಸಲ್ಲಿಸಿದ ನಂತರ ಮೇಲೆ ನೀಡಿರುವ ಹಾಗೆಯೇ ಗುರುತಿನ ಚೀಟಿ [Voter ID]ಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಿ ಒಂದರಿಂದ ಎರಡು ವಾರ ಆದ ನಂತರ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಮೇಲಿನ ಭಾಗದಲ್ಲಿ ನೀಡಿರುವ ಹಾಗೆಯೇ ಚೆಕ್ ಮಾಡಿಕೊಳ್ಳಿ.
ಕೆಲವೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ [digital voter id] ಯನ್ನು ಪಡೆದುಕೊಳ್ಳಬಹುದು
ಹೌದು ಸ್ನೇಹಿತರೆ, ನೀವೇನಾದರೂ ನಿಮ್ಮ ಗುರುತಿನ ಚೀಟಿ [Voter ID] ಕಳೆದುಕೊಂಡಿದ್ದರೆ ಅಥವಾ ನಿಮಗೆ ಗುರುತಿನ ಚೀಟಿ [Voter ID] ಅರ್ಜಿಯನ್ನು ಸಲ್ಲಿಸಿ ಇನ್ನೂ ಬಂದಿಲ್ಲವೆಂದರೆ ನೀವು ಸುಲಭವಾಗಿ ಡಿಜಿಟಲ್ ವೋಟರ್ ಐಡಿ [digital voter id]ಯನ್ನು ಪಡೆದುಕೊಳ್ಳಬಹುದು. ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ, ಈ ಸಮಯದಲ್ಲಿ ಗುರುತಿನ ಚೀಟಿ [Voter ID] ಪ್ರಮುಖವಾಗುತ್ತದೆ. ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ನಿಮ್ಮ ಗುರುತಿನ ಚೀಟಿ [Voter ID] ಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು..
ಐದು ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ [digital voter id] ಪಡೆದುಕೊಳ್ಳುವ ವಿಧಾನ
- ಡಿಜಿಟಲ್ ವೋಟರ್ ಐಡಿ [digital voter id] ಪಡೆದುಕೊಳ್ಳಲು ನಿಮ್ಮ ಹತ್ತಿರ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಯಾವುದಾದರೂ ಒಂದು ವಸ್ತು ನಿಮ್ಮ ಹತ್ತಿರವಿರಬೇಕಾಗುತ್ತದೆ.
- ನಂತರ ನೀವು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ವೆಬ್ಸೈಟ್ ಗೆ ಭೇಟಿ ನೀಡುವ ಮೊದಲು ನಿಮ್ಮ ಗುರುತಿನ ಚೀಟಿ [Voter ID] ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
- ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನೀವು ಮೊದಲೇ ಈ ಪೋರ್ಟಲ್ ಅನ್ನು ಬಳಸುತ್ತಿದ್ದರೆ ಸೈನ್ ಇನ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಫೋನ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
- ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಿ, ಅಲ್ಲಿ ನಿಮಗೆ ಕಾಣಬಹುದು ಡೌನ್‌ಲೋಡ್ e-EPIC ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು EPIC ನಂಬರನ್ನು ಹಾಕಬೇಕಾಗುತ್ತದೆ, ಇದು ಯಾವ ನಂಬರ್ ಇಂದು ಹೆದರಬೇಡಿ, ಇದು ನಿಮ್ಮ ಗುರುತಿನ ಚೀಟಿ [Voter ID] 10 ಅಂಕಿಯ ಐಡಿ ನಂಬರ್ ಆಗಿದೆ.
- ಈ ನಂಬರನ್ನು ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಡಿಜಿಟಲ್ ವೋಟರ್ ಐಡಿ [digital voter id] ಸಿಗುತ್ತದೆ, ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳುವುದು.
ಗುರುತಿನ ಚೀಟಿ
ಬಂಧುಗಳೇ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು / ಪ್ರತಿಯೊಬ್ಬ ಭಾರತದ ವ್ಯಕ್ತಿಯು ಮತದಾನ ಮಾಡಲು ಹಕ್ಕಿದೆ, ಅಂತಹ ಅಭ್ಯರ್ಥಿಗಳು ಗುರುತಿನ ಚೀಟಿ [Voter ID]ಯನ್ನು ಪಡೆದುಕೊಂಡಿಲ್ಲವೆಂದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಇದರಿಂದ ಲೋಕಸಭಾ ಚುನಾವಣೆಗೆ ಮತವನ್ನು ಹಾಕಬಹುದು.
ಒಂದು ವೇಳೆ ನೀವು ಗುರುತಿನ ಚೀಟಿ [Voter ID]ಗೆ ಅರ್ಜಿಯನ್ನು ಸಲ್ಲಿಸಿ, ಇದುವರೆಗೂ ಗುರುತಿನ ಚೀಟಿ [Voter ID] ಬಂದಿಲ್ಲವೆಂದರೆ ಮೊದಲು ನೀವು ನಾನು ಮೇಲೆ ತಿಳಿಸಿರುವ ಹಾಗೆಯೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಪರಿಶೀಲಿಸಿ. ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಆನ್ಲೈನ್ ವೋಟರ್ ರಿಜಿಸ್ಟರ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಅದಲ್ಲದೆ ನೀವು ಸುಲಭವಾಗಿ ಮೊಬೈಲ್ ಅನ್ನು ಬಳಸಿಕೊಂಡು ಡಿಜಿಟಲ್ ವೋಟರ್ ಐಡಿ [digital voter id]ಯನ್ನು ಸಹ ಪಡೆದುಕೊಳ್ಳಬಹುದು, ಅದನ್ನು ಪಡೆದುಕೊಳ್ಳಲು ನಾನು ಮೇಲ್ ಭಾಗದಲ್ಲಿ ಎಲ್ಲ ಮಾಹಿತಿಯನ್ನು ತಿಳಿಸಿದ್ದೇನೆ. ನೀವು ಡಿಜಿಟಲ್ ವೋಟರ್ ಐಡಿ [digital voter id]ಯನ್ನು ಪಡೆದುಕೊಳ್ಳಲು ಮೊದಲು ನಿಮ್ಮ ಗುರುತಿನ ಚೀಟಿ [Voter ID] ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
ಸುಲಭವಾಗಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಹೌದು ಗೆಳೆಯರೇ ನಿಮಗೇನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟವಾದರೆ ನೀವು ಸುಲಭವಾಗಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಹತ್ತಿರವಿರುವ ಅಂಗನವಾಡಿ ಅಥವಾ ಮತದಾನ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀಡುವ ಫಾರಂ ಅನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಿದ ನಂತರ ಮೇಲೆ ನೀಡಿರುವ ಹಾಗೆಯೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು