CIBIL Score: ಕ್ರೆಡಿಟ್ ಸ್ಕೋರ್ ಹೆಚ್ಚಿಸಬೇಕಾ ಹಾಗಾದ್ರೆ ಈ ಸುಲಭ ಮಾರ್ಗಗವನ್ನು ಬಳಸಿ…
ನಮಸ್ಕಾರ ಬಂಧುಗಳೇ ನೀವೇನಾದರೂ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಬೇಕೆಂದರೆ ಬ್ಯಾಂಕಿನವರು ಮೊದಲು ನೋಡುವುದೇ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್. ಬ್ಯಾಂಕಿನಲ್ಲಿ ಎಷ್ಟು ಹಣ ಪಡೆಯುತ್ತೀರಿ ಮತ್ತು ಎಷ್ಟು ಬಡ್ಡಿ ಪಡೆಯುತ್ತೀರಿ ಎಂದು ನೋಡುವುದು ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಆಗಿದೆ. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಹೆಚ್ಚಿನ ಪ್ರಮಾಣದ ಸಾಲ ಒದಗಿಸುತ್ತದೆ. ಅದಲ್ಲದೆ ಬಹುತೇಕ ಜನರಿಗೆ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಎಂದರೇನು ಗೊತ್ತಿಲ್ಲ ಮತ್ತು ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೇಗೆ ಹೆಚ್ಚಿಸಬೇಕು ಹಾಗೆ ಇನ್ನಿತರ ಮಾಹಿತಿಯನ್ನು ಈ ಕೆಳಭಾಗದಲ್ಲಿ ನೀಡಲಾಗಿದೆ.
ಸಿಬಿಲ್ ಸ್ಕೋರ್ [CIBIL Score]
ಹೌದು ಗೆಳೆಯರೇ ಒಂದು ಮಾತಿನಲ್ಲಿ ಹೇಳಬೇಕೆಂದರೆ ನಾವು ಸಾಲವನ್ನು ಪಡೆಯುವಾಗ ಎಷ್ಟು ಸಾಲ ಪಡೆಯುತ್ತೇವೆ, ಕಂತುಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತೇವೆ ಎಂಬುದರ ಆಧಾರದ ಮೇಲೆ ಸಿಬಿಲ್ ಸ್ಕೋರನ್ನು ನೀಡಲಾಗುತ್ತದೆ. ನಮ್ಮ ಭಾರತದಲ್ಲಿ ಸಿಬಿಲ್ ಸ್ಕೋರ್ 300 ರಿಂದ 900 ವರೆಗೆ ನೀಡಲಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ 700ಕ್ಕಿಂತ ಮೇಲೆ ಇದ್ದರೆ ಉತ್ತಮ ಎಂದು ಹೇಳಬಹುದು. ಈ ಸಿಬಿಲ್ ಸ್ಕೋರ್ ನಿಂದ ಎಲ್ಲಿ ಬೇಕಾದರೂ ಸಾಲ, ಇನ್ನಿತರ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇನ್ನು ಕೆಲವರಿಗೆ ಸಿಬಿಲ್ ಸ್ಕೋರ್ ಮತ್ತು ಕ್ರೆಡಿಟ್ ಸ್ಕೋರ್ ಬೇರೆ ಬೇರೆ ಎಂದುಕೊಂಡಿದ್ದಾರೆ. ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಎಂದು ಎರಡು ರೀತಿಯಲ್ಲೂ ಸಹ ಕರೆಯುತ್ತಾರೆ. ಹಾಗಾದರೆ ನಮ್ಮ ಭಾರತದಲ್ಲಿ ಸಿಬಿಲ್ ಸ್ಕೋರ್ ವಿವರದ ಬಗ್ಗೆ ತಿಳಿದುಕೊಳ್ಳೋಣ.
ಎಷ್ಟು ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಇದ್ದರೆ ಉತ್ತಮ
- -500 – ಕೆಟ್ಟದು
- -500-650 – ಕೆಟ್ಟದು
- -650-750 – ಒಳ್ಳೆಯದು
- -750 ಕ್ಕಿಂತ ಹೆಚ್ಚು – ಉತ್ತಮ
- -750-900 – ಅತ್ಯುತ್ತಮ
ಯಾವ ಸಮಯದಲ್ಲೂ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಅದು ಉತ್ತಮ ಎಂದು ಹೇಳಬಹುದು. ನಿಮಗೆ ಹೆಚ್ಚಿನ ಸಾಲ ಅಥವಾ ಹೆಚ್ಚಿನ ಲಿಮಿಟ್ ಇರುವ ಸೌಲಭ್ಯ ಸಿಗುತ್ತದೆ.
ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಯಾರು ನೀಡುತ್ತಾರೆ
ಆರ್‌ಬಿಐ [RBI] ಬ್ಯಾಂಕು 4 ಏಜೆನ್ಸಿ ಗಳಿಗೆ ಅಧಿಕಾರ ನೀಡಿದೆ, ಸಿಬಿಲ್, ಎಕ್ಸ್‌ಪೀರಿಯಾ, ಅಕ್ವಿಫ್ಯಾಕ್ಸ್ ಮತ್ತು ಹಿಮಾರ್ಕ್ಸ್ ಈ ಕಂಪನಿಗಳು ಬ್ಯಾಂಕುಗಳು ಎನ್‌ಬಿಎಫ್‌ಸಿಗಳು, ಫಿನ್‌ಟೆಕ್ ಕಂಪನಿಗಳು ಮುಂತಾದ ಬ್ಯಾಂಕುಗಳ ಮೂಲಗಳಿಂದ ಸಾಲ ಸೇರಿದಂತೆ ಮತ್ತು ಅದರ ಮರುಪಾವತಿ ಸೇರಿದಂತೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಆಧಾರದ ಮೇಲೆ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ತಯಾರಿ ಮಾಡಲಾಗುತ್ತದೆ ಅಥವಾ ನೀಡಲಾಗುತ್ತದೆ.
ಹಾಗಾದರೆ ಕೆಲವರಿಗೆ ಸಿಬಿಲ್ ಸ್ಕೋರ್ ಅನ್ನು ಉತ್ತಮಗೊಳಿಸಲು ಈ ಕೆಳಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಇವುಗಳನ್ನು ನೀವು ಪಾಲಿಸಿದರೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಬಹುದು.
ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಲು ಈ ಮಾರ್ಗಗಳನ್ನು ಬಳಸಿ
ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ
ಹೌದು ಗೆಳೆಯರೇ ಕೆಲವು ಜನರು ಮಾಡುವ ಮೊದಲು ತಪ್ಪೇ ಇದು, ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಉತ್ತಮಗೊಳಿಸಬೇಕೆಂದರೆ ನಿಗದಿತ ಸಮಯದಲ್ಲಿ ಸಾಲದ ಕಂತುಗಳನ್ನು ಮರುಪಾವತಿಸಿದರೆ ಉತ್ತಮವಾಗುತ್ತದೆ. ಇಲ್ಲವೆಂದರೆ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಸಮಯದಲ್ಲಿ ಪಾವತಿ ಮಾಡುವ ದಿನಾಂಕವನ್ನು ಮರೆತರೆ ಅಥವಾ ಟ್ರ್ಯಾಕ್ ಮಾಡಲು ಕಷ್ಟಕರವಾದ ಸಮಯದಲ್ಲಿ ಈ ಮಾರ್ಗವನ್ನು ಬಳಸಿ. ವಿವಿಧ ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೆ ಪಾವತಿಗಳನ್ನು ಸ್ವಯಂ ಚಾಲಿತಗೊಳಿಸುವುದು ಉತ್ತಮ ಎಂದು ಹೇಳಬಹುದು. ಏಕೆಂದರೆ ಇದು ಸರಿಯಾದ ಸಮಯಕ್ಕೆ ಪಾವತಿ ಮಾಡುವ ಮೂಲಕ, ಪಾವತಿ ಮಾಡುವುದರಿಂದ ನೀವು ತಡವಾಗಿ ಪಾವತಿ ಮತ್ತು ಬಡ್ಡಿ ಶುಲ್ಕಗಳನ್ನು ತಪ್ಪಿಸಬಹುದು. ಇದರಿಂದ ನಿಮ್ಮ ಸಾಲವು ಸಹ ಹೆಚ್ಚಾಗುತ್ತದೆ ಮತ್ತು ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಸಹ ಹೆಚ್ಚಾಗಲು ಸಹಾಯ ಮಾಡುತ್ತದೆ. ನಿಗದಿತ ಸಮಯದಲ್ಲೇ ಅಥವಾ ದಿನಾಂಕದಲ್ಲೇ ತಪ್ಪದೇ ಹಣವನ್ನು ಪಾವತಿ ಮಾಡಿ.
ಸಾಲವನ್ನು ಪಡೆಯುವ ಮುನ್ನ ಎಚ್ಚರವಿರಲಿ
ಒಂದೇ ಸಮಯದಲ್ಲಿ ಹಲವು ಸಾಲಗಳನ್ನು ಪಡೆಯುವುದು ಒಳ್ಳೆಯದಲ್ಲ, ನೀವೇನಾದರೂ ವೈಯಕ್ತಿಕ ಸಾಲಗಳನ್ನು ಪಡೆಯುವ ಬದಲು ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೊಂದುವುದು ಉತ್ತಮ ಎಂದು ಹೇಳಬಹುದು. ಒಂದು ವೇಳೆ ನಿಮ್ಮ ಹತ್ತಿರ ಹಣವಿದ್ದು ಒಂದೇ ಬಾರಿ ಮೊತ್ತವನ್ನು ಪಾವತಿಸಿ ವಾಹನ, ಇನ್ನಿತರ ವಸ್ತುಗಳನ್ನು ಖರೀದಿ ಮಾಡುವ ಬದಲು ಅದನ್ನು ಸಾಲದ ರೀತಿಯಲ್ಲಿ ಪಡೆದುಕೊಂಡು ಹಣವನ್ನು ಪಾವತಿ ಮಾಡಿ ಸಾಲವನ್ನು ಸರಿಯಾದ ಸಮಯದಲ್ಲಿ ಕಂತುಗಳನ್ನು ಪಾವತಿಸಿದರೆ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಹೆಚ್ಚಾಗುತ್ತದೆ. ಮತ್ತೊಮ್ಮೆ ನೀವು ಬ್ಯಾಂಕಿನಲ್ಲಿ ಸಾಲವನ್ನು ಪಡೆಯುವಾಗ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಹೆಚ್ಚಾದರೆ ಸಾಲದ ಮೊತ್ತವು ಸಹ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಅದೇ ರೀತಿ ಒಂದೇ ಸಮಯದಲ್ಲಿ ಹಲವು ಸಾಲಗಳನ್ನು ಪಡೆದುಕೊಳ್ಳಬೇಡಿ. ಇದರಿಂದ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಒಂದು ಸಾಲವನ್ನು ಪಡೆದುಕೊಂಡಿದ್ದ ನಂತರ ಅದನ್ನು ಪೂರ್ಣಗೊಳಿಸಿ ಮತ್ತೊಮ್ಮೆ ಸಾಲವನ್ನು ಪಡೆದುಕೊಳ್ಳಿ ಇದರಿಂದ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಸಹ ಹೆಚ್ಚಾಗುತ್ತದೆ ಮತ್ತು ಸಾಲದ ಮೊತ್ತವು ಸಹ ಹೆಚ್ಚಾಗುತ್ತದೆ.
ಹೊಸ ಕ್ರೆಡಿಟ್ ಕಾರ್ಡನ್ನು ಪಡೆದುಕೊಳ್ಳುವುದು
ನಿಮ್ಮ ಬಳಿ ಮೊದಲೇ ಕ್ರೆಡಿಟ್ ಕಾರ್ಡ್ ಇದ್ದು ಇನ್ನೊಂದು ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಅರ್ಜಿ ಸಲ್ಲಿಸಿದರೆ. ಅದು ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಅಸ್ತಿತ್ವದಲ್ಲಿರುವ ಕಾರ್ಡನ್ನೇ ಬಳಸುವುದು ಉತ್ತಮ ಎಂದು ಹೇಳಬಹುದು. ಸದಸ್ಯತ್ವದ ಹೂಡಿಕೆಯ ಮೇಲಿನ ಪ್ರತಿಫಲ ಬಹಳ ಚೆನ್ನಾಗಿದ್ದರಷ್ಟೇ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಅಥವಾ ಪಡೆದುಕೊಳ್ಳಬಹುದು. ಇಲ್ಲವಾದಲ್ಲಿ ಹಳೆಯ ಕಾರ್ಡನ್ನೇ ಮುಂದುವರಿಸುವುದು ಉತ್ತಮ ಎಂದು ಹೇಳಬಹುದು. ಇದರಿಂದ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿರುತ್ತದೆ, ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಬಹುದು.
ಪದೇ ಪದೇ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸುವುದು
ಕೆಲವು ಜನರು ಈ ತಪ್ಪನ್ನು ಮಾಡುತ್ತಾರೆ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸುವುದರಿಂದ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ ಎಂದು ತಿಳಿದುಕೊಂಡಿದ್ದೀರಾ ಆದರೆ ಹಣಕಾಸು ಸಂಸ್ಥೆಯೊಂದು ತಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡಿದರೆ ಅವರು ಸಾಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಿಕೊಂಡು ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪ್ರತಿ ಬಾರಿಯೂ ಕಡಿಮೆ ಮಾಡಲಾಗುತ್ತದೆ. ಇದರಿಂದ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ತಾನಗೆ ಕಡಿಮೆಯಾಗುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ನೀವೇ ಪರಿಶೀಲಿಸುವುದರಿಂದ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಿಂದ ನೀವು ಹಣಕಾಸು ಸಂಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಬೇಡಿ ಒಂದು ವೇಳೆ ನೀವು ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಪರಿಶೀಲಿಸಬೇಕೆಂದರೆ ನಮ್ಮದೇ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ನಾವೇ ಪರಿಶೀಲಿಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.
ನಿಮಗೆ ಎಷ್ಟು ಮೊತ್ತ ಬೇಕು ಅಷ್ಟು ಮೊತ್ತವನ್ನು ಮಾತ್ರ ತೆಗೆದುಕೊಳ್ಳಿ
ಹೌದು ಗೆಳೆಯರೇ ಈಗಿನ ಕಾಲದಲ್ಲಿ ಸಾಲವನ್ನು ಮಾಡುವುದು ಮತ್ತು ತೆಗೆದುಕೊಳ್ಳುವುದು ತುಂಬಾ ಸುಲಭ. ಅನಗತ್ಯ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಮೊದಲು ನೀವು ನಿಮ್ಮ ಮರುಪಾವತಿ ಸಾಮರ್ಥ್ಯ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ. ನಿಮಗೆ ಎಷ್ಟು ಸಾಲ ಬೇಕು ಅಷ್ಟು ಸಾಲವನ್ನು ಮಾತ್ರ ಪಡೆದುಕೊಳ್ಳಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಪಡೆದರೆ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಇದರಿಂದ ನಿಮಗೆ ಅಗತ್ಯವಿರುವ ಮೊತ್ತದ ಸಾಲವನ್ನು ಮಾತ್ರ ಪಡೆಯಿರಿ, ಹಾಗೆಯೇ ಸರಿಯಾದ ಸಮಯದಲ್ಲಿ ಅಥವಾ ಸರಿಯಾದ ದಿನಾಂಕದಲ್ಲಿ ಹಣವನ್ನು ಪಾವತಿ ಮಾಡಿ. ಇದರಿಂದ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿರುತ್ತದೆ ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕ್ರೆಡಿಟ್ ಬಳಕೆಯನ್ನು ಕಡಿಮೆ ಮಾಡಿ
ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಅಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನೀಡಲಾಗುತ್ತದೆ. ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ನ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಕ್ರೆಡಿಟ್ ಲಿಮಿಟ್ 30% ಗಿಂತ ಕಡಿಮೆ ಇರಬೇಕು. ಅದು ಏನೆಂದರೆ ನಿಮ್ಮ ಆದಾಯದಲ್ಲಿ 30% ಗಿಂತ ಹೆಚ್ಚು ಸಾಲ ಮಾಡಬೇಡಿ ಇದರಿಂದ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ 30% ಗಿಂತ ಕಡಿಮೆ ಸಾಲವನ್ನು ಪಡೆದುಕೊಳ್ಳಿ.
ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಲು ಈ ಕೆಲವು ಉಪಯೋಗ ಮಾಹಿತಿಗಳನ್ನು ತಿಳಿದುಕೊಳ್ಳಿ
- ಕ್ರೆಡಿಟ್ ಕಾರ್ಡ್ ನಲ್ಲಿ ಸಾಲವನ್ನು ಪಡೆದುಕೊಂಡು ಮರುಪಾವತಿಯ ಸಮಯದಲ್ಲಿ ಅಥವಾ ಸರಿಯಾದ ಸಮಯಕ್ಕೆ ಕಂತುಗಳನ್ನು ಪಾವತಿ ಮಾಡಿ.
- ನಿಮ್ಮ ಆದಾಯದಲ್ಲಿ 30% ಗಿಂತ ಹೆಚ್ಚು ಸಾಲ ಮಾಡಬೇಡಿ ಇದರಿಂದ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
- ಪದೇ ಪದೇ ಅಥವಾ ಸುಖ ಸುಮ್ಮನೆ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಡಿ.
- ನಿಮಗೆ ಅಗತ್ಯವಿರುವ ಸಮಯದಲ್ಲಿ ಮಾತ್ರ ಸಾಲವನ್ನು ಪಡೆದುಕೊಳ್ಳಿ.
- ದೀರ್ಘಾವಧಿ ಸಾಲವನ್ನು ತೆಗೆದುಕೊಳ್ಳುವುದರಿಂದ ಕಂತು ಕೂಡ ಕಡಿಮೆಯಾಗುತ್ತದೆ. ಇದರಿಂದ ಪಾವತಿ ಮಾಡಲು ಸಹ ಸುಲಭವಾಗುತ್ತದೆ.
- ಒಂದೇ ಕ್ರೆಡಿಟ್ ಕಾರ್ಡನ್ನು ಬಳಸಿ.
ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಎಷ್ಟಿದ್ದರೆ ಉತ್ತಮ
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಪ್ರಶ್ನೆ ಇದ್ದೇ ಇರುತ್ತದೆ. ನಿಮಗೇನಾದರೂ ಯಾವುದೇ ತೊಂದರೆ ಅಥವಾ ದಾಖಲೆಗಳು ಇಲ್ಲದೆ ದೊಡ್ಡ ಮಟ್ಟದಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಉತ್ತಮ ಎಂದು ಹೇಳಬಹುದು. ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಯಾವುದೇ ತೊಂದರೆ ಇಲ್ಲದೆ ಹೆಚ್ಚಿನ ಸಾಲ, ಹೆಚ್ಚಿನ ಲಿಮಿಟ್ ದೊರೆಯುತ್ತದೆ.
ಬ್ಯಾಂಕಿನಲ್ಲಿ ಹೇಗೆ ಸಾಲ ಪಡೆದುಕೊಳ್ಳಬಹುದು
ಹೆಚ್ಚಿನ ಜನರು ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಭೂಮಿ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳುತ್ತಾರೆ, ವಾಹನದ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳುತ್ತಾರೆ ಮತ್ತು ಇನ್ನಿತರ ದಾಖಲೆಗಳ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ 750ಕ್ಕಿಂತ ಉತ್ತಮವಾಗಿದ್ದರೆ. ಈ ಮೇಲಿರುವ ಯಾವುದೇ ದಾಖಲೆ ಇಲ್ಲದೆ ಅತಿ ಹೆಚ್ಚಿನ ಮೊತ್ತದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಯಾವುದೇ ದಾಖಲೆ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು.
ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ಇದನ್ನು ತಿಳಿದುಕೊಳ್ಳಿ
ನೀವೇನಾದರೂ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಿದ್ದರೆ ಅಥವಾ ಕ್ರೆಡಿಟ್ ಕಾರ್ಡನ್ನು ಪಡೆದುಕೊಳ್ಳಬೇಕೆಂದರೆ ಈ ಕೆಲವು ವಿಚಾರಗಳನ್ನು ತಿಳಿದುಕೊಳ್ಳಿ. ನೀವು ಕ್ರೆಡಿಟ್ ಕಾರ್ಡ್ ನಿಂದ ಸಾಲವನ್ನು ಪಡೆದುಕೊಂಡು ಅದನ್ನು ಸರಿಯಾದ ದಿನಾಂಕದಂದು ಮರುಪಾವತಿ ಮಾಡಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳಬೇಡಿ ಮತ್ತು ಅಗತ್ಯವಿದ್ದಾಗ ಮಾತ್ರ ಸಾಲವನ್ನು ಪಡೆದುಕೊಳ್ಳಿ. ಒಂದು ವೇಳೆ ನೀವು ಸರಿಯಾದ ಸಮಯದಲ್ಲಿ ಸಾಲವನ್ನು ಪಾವತಿ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿಯನ್ನು ವಿಧಿಸುತ್ತಾರೆ ಅಥವಾ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಮೊದಲು ಈ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಿ. ಈ ಮೇಲೆ ನಾನು ತಿಳಿಸಿಕೊಟ್ಟಿರುವ ಕೆಲವು ಮಾರ್ಗಗಳನ್ನು ಪಾಲಿಸಿದರೆ ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಹೆಚ್ಚಿಸಲು ಸಹಾಯ ಮಾಡುತ್ತದೆ.