HSRP Number Plate: HSRP ನಂಬರ್ ಪ್ಲೇಟ್ ನ ನೋಂದಣಿಯ ಡೆಡ್ ಲೈನ್..! HSRP ನಂಬರ್ ಪ್ಲೇಟ್ ಅಳವಡಿಸದ್ದಿರುವವರು ಇದನ್ನು ಗಮನಿಸಿ..!
ನಮಸ್ಕಾರ ಬಂಧುಗಳೇ HSRP ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಗಡುವು ವಿಸ್ತರಣೆ ಮಾಡಲಾಗಿದೆ. ಅಂದರೆ ಇದೇ ತಿಂಗಳು ಮೇ 31ರ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಬೇಕಾಗಿದೆ. ಒಂದು ವೇಳೆ ಮೇ 31ರ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಹಾಗಾದ್ರೆ HSRP ನಂಬರ್ ಪ್ಲೇಟ್ ನ ನೋಂದಣಿಯ ಡೆಡ್ ಲೈನ್ ಏನು? ಎಂಬ ಎಲ್ಲ ಮಾಹಿತಿನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
HSRP ನಂಬರ್ ಪ್ಲೇಟ್
ವರ್ಷ ವರ್ಷಕ್ಕೆ ಹೊಸ ಹೊಸ ವಾಹನಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತಾಳೇರುತ್ತವೆ, ಅಷ್ಟೇ ಅದಲ್ಲದೆ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಇತರೆ ವಾಹನಗಳಿಗೆ ಪೈಪೋಟಿ ಕೊಡಲು ಸಜ್ಜಾಗುತ್ತಿವೆ. ವಾಹನಗಳ ಕಂಪನಿಗಳು ಜನರನ್ನು ಸೆಳೆಯಲು ಹೊಸ ಹೊಸ ರೀತಿಯಲ್ಲಿ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಅದಲ್ಲದೆ ವಾಹನಗಳು ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಗಳು ಕೆಲವೊಂದು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ.
ಸಾರಿಗೆ ಇಲಾಖೆಯು ಈಗಾಗಲೇ ಟ್ರಾಫಿಕ್ ನಿಯಮಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು ವಾಹನ ಸವಾರರಿಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ. ಅದೇ ರೀತಿ 2019ರ ಒಳಗಡೆ ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ನೀಡಿದೆ. HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಈಗಾಗಲೇ ಹಲವು ರೀತಿಯ ಗಡುವು ವಿಸ್ತರಣೆ ಮಾಡಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಗಡುವ ವಿಸ್ತರಣೆಯ ದಿನಾಂಕವು ಮುಕ್ತಾಯವಾಗಲು ಬಂದಿದೆ. ಅಂದರೆ ಮೇ 31ರ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ. ಹಾಗಾದರೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡದಿದ್ದರೆ ಎಷ್ಟು ದಂಡ ಹಾಕುತ್ತಾರೆ ಎಂಬ ಎಲ್ಲ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
HSRP ನಂಬರ್ ಪ್ಲೇಟ್ ಕಡ್ಡಾಯ
ರಾಜ್ಯ ಸರ್ಕಾರವು ಈಗಾಗಲೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಕಡ್ಡಾಯ ಎಂದು ತಿಳಿಸಲಾಗಿದೆ. ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಲು ಸಾರಿಗೆ ಇಲಾಖೆ ಆದೇಶ ನೀಡಿದೆ. ಈಗಾಗಲೇ ಸುಮಾರು 2 ಕೋಟಿ ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲಾಗಿದೆ ಆದರೆ ಇನ್ನು 35 ಲಕ್ಷ ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಸಿಕೊಂಡಿಲ್ಲ. ಈ ಕಾರಣದಿಂದ ಈಗಾಗಲೇ ಸರ್ಕಾರವು ಹಲವು ಬಾರಿಗಳು ಗಡುವು ವಿಸ್ತರಣೆ ಮಾಡಲಾಗಿದೆ. ಸರ್ಕಾರವು ನೀಡಿರುವ ಮೇ 31 ಕೊನೆಯ ದಿನಾಂಕವಾಗಿದ್ದು ಯಾರೆಲ್ಲಾ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ ಆದಷ್ಟು ಬೇಗ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಿ ಇಲ್ಲವಾದಲ್ಲಿ ದಂಡವನ್ನು ವಿಧಿಸಲಾಗುತ್ತದೆ.
ಇನ್ನೂ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ
HSRP ನಂಬರ್ ಪ್ಲೇಟ್ ಅನ್ನು ಹೆಚ್ಚಿನ ವಾಹನಗಳು ಅಳವಡಿಕೆ ಮಾಡಿಕೊಂಡಿದ್ದಾರೆ ಆದರೆ ಹಲವು ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲ. ಸರ್ಕಾರವು 2023 ನವೆಂಬರ್ 17ರ ವರೆಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಸುವಂತೆ ಸೂಚನೆ ನೀಡಲಾಗಿತ್ತು ನಂತರ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಗಡುವು ವಿಸ್ತರಣೆ ಮಾಡಲಾಗಿತ್ತು. ನಂತರ ಸರ್ಕಾರವು ಮತ್ತೆ ಮೇ 31ರವರೆಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಸರ್ಕಾರವು ಆದೇಶ ನೀಡಲಾಗಿದೆ. ಒಂದು ವೇಳೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಸರ್ಕಾರವು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ
ರಾಜ್ಯ ಸಾರಿಗೆ ಇಲಾಖೆಯು ಹಲವು ಬಾರಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಅವಕಾಶ ನೀಡಿದೆ. ಇದೀಗ ಮೇ 31ರವರೆಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಅವಕಾಶ ನೀಡಿದೆ. ಇಷ್ಟು ಬಾರಿಯೂ ಸಹ ಅವಕಾಶ ನೀಡಿದರು ಸಹ ಹೆಚ್ಚಿನ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ನಿರಾಸಕ್ತಿ ತೋರಿಸಿದ್ದಾರೆ
ಅಂಥವರಿಗೆ ಜೂನ್ 1 ರಿಂದ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡದಿದ್ದವರಿಗೆ ದಂಡ ವಿಧಿಸಲು ಈಗಾಗಲೇ ಸಾರಿಗೆ ಇಲಾಖೆ ನಿರ್ಧರಿಸಲಾಗಿದೆ. HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ರೂ. 500 ರಿಂದ ರೂ.1000 ವರೆಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಒಂದು ವೇಳೆ ನೀವು ಇನ್ನೂ ಕೂಡ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಆದಷ್ಟು ಬೇಗ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಿ.
HSRP ನಂಬರ್ ಪ್ಲೇಟ್ ಕಾನೂನು ನಿಯಮದ ಪ್ರಕಾರ ಕಡ್ಡಾಯ ನಿಯಮವನ್ನು ಜಾರಿಗೊಳಿಸಿದೆ
HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಲು ಕಡ್ಡಾಯ ಎಂದು ರಾಜ್ಯ ಸರ್ಕಾರವು ಈಗಾಗಲೇ ತಿಳಿಸಿದೆ. ಏಕೆಂದರೆ ವಾಹನಗಳ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು HSRP ನಂಬರ್ ಪ್ಲೇಟ್ ಪ್ರಮುಖ ಪಾತ್ರವಹಿಸುತ್ತದೆ. ಮೋಟಾರ್ ಕಾಯಿದೆ 1989 ಸೆಕ್ಷನ್ 90 ಹಾಗೂ 51ರ ಅನ್ವಯ ಈ ನಿಯಮ ಕಡ್ಡಾಯ ಎಂಬುದನ್ನು ಜಾರಿ ಮಾಡಲಾಗಿದೆ.
HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳುವುದರಿಂದ ನಿಮ್ಮ ವಾಹನ ಕಳ್ಳತನ ಆದ ಸಮಯದಲ್ಲಿ HSRP ನಂಬರ್ ಪ್ಲೇಟ್ ನಿಂದ ಪತ್ತೆ ಹಚ್ಚಲು ಸುಲಭವಾಗುತ್ತದೆ ಮತ್ತು ವಾಹನ ಭದ್ರತೆ ಹಾಗೂ ಸುರಕ್ಷತೆಗೆ HSRP ನಂಬರ್ ಪೆಟ್ ಪ್ರಮುಖ ಪಾತ್ರವಹಿಸುತ್ತದೆ. ಈ ಕಾರಣದಿಂದ ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಒಂದು ವೇಳೆ ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದರೆ ಶೋರೂಮ್ ನವರೇ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಡಬೇಕು ಎಂಬ ನಿಯಮ ಕೂಡ ಜಾರಿಯಲ್ಲಿದೆ. ಹಾಗಾದರೆ ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ
HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡ ಮೂಲಕ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ https://www.siam.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಬುಕ್ HSRP ನಂಬರ್ ಪ್ಲೇಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು ನಿಮ್ಮ ವಾಹನದ RC card ನಲ್ಲಿ ಇರುವ ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ, ಫೋನ್ ಸಂಖ್ಯೆ, ಇತರೆ ದಾಖಲೆಗಳನ್ನು ನಮೂದಿಸಬೇಕು.
- ನಮೂದಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮ್ಮ ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. ಈಗ ನೀವು ನಿಮ್ಮ ವಾಹನದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನೀವು ನಿಮ್ಮ ವಾಹನದ ಕಂಪನಿಯನ್ನು ನಮೂದಿಸಿ.
- ಅಲ್ಲಿ ನೀವು ಎಲ್ಲಾ ವಿವರವನ್ನು ನಮೂದಿಸಿದ ನಂತರ ಎರಡು ಆಪ್ಷನ್ ಕಾಣುತ್ತದೆ.
- ಹೋಂ ಡೇಲಿವೇರಿ ಮತ್ತು ಶೋರೂಮ್ ಎಂಬ ಎರಡು ಆಪ್ಷನ್ ಕಾಣುತ್ತದೆ, ಇದರಲ್ಲಿ ನಿಮಗೆ ಯಾವುದು ಸೂಕ್ತ ಆಯ್ಕೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ ನೀವು ನೋಂದಣಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ಕೊನೆಯ ಹಂತದಲ್ಲಿ ನೀವು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
- ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡಿದ ನಂತರ HSRP ನಂಬರ್ ಪ್ಲೇಟ್ ನೋಂದಣಿ ಆಗುತ್ತದೆ. ನೋಂದಣಿ ಆದ ನಂತರ ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದ ಸಂಖ್ಯೆ ಅಥವಾ ಫೋಟೋವನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಕೆಲವು ದಿನಗಳ ನಂತರ ನೀವು ಆಯ್ಕೆ ಮಾಡಿಕೊಂಡಿರೋ ಶೋರೂಮ್ ಗೆ ಆರ್ಡರ್ ಬಂದರೆ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ. ಒಂದು ವೇಳೆ ಹೋಂ ಡೇಲಿವೇರಿ ಮಾಡಿಕೊಂಡಿದ್ದಾರೆ ನಿಮ್ಮ ಮನೆಗೆ ಬಂದು ಅವರೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಡುತ್ತಾರೆ.
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟ ಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೇವಾ ಕೇಂದ್ರ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ನಿಮ್ಮ ವಾಹನದ RC ಕಾರ್ಡ್ ಅನ್ನು ನೀಡಿ ಅಲ್ಲಿ ನೀವು ಸುಲಭವಾಗಿ HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಿದ ನಂತರ, ಕೆಲವು ದಿನಗಳಾದ ನಂತರ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಂಖ್ಯೆ ಅಥವಾ ವಾಹನದ ಸಂಖ್ಯೆಯನ್ನು ನಮೂದಿಸಿ ಅರ್ಜಿಯ ಸ್ಥಿತಿಯನ್ನು ಸಹ ಪರಿಶೀಲನೆ ಮಾಡಿಕೊಳ್ಳಬಹುದು.