Deleted Files Recovery: ಅಪ್ಪಿ ತಪ್ಪಿ ನಿಮ್ಮ ಮೊಬೈಲ್ ನಲ್ಲಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದ್ರೆ ಸುಲಭವಾಗಿ ವಾಪಸ್ ಪಡೆಯಿರಿ..!
ನಮಸ್ಕಾರ ಬಂಧುಗಳೇ ಈಗಿನ ಪ್ರತಿಯೊಬ್ಬ ವ್ಯಕ್ತಿಯು ಸ್ಮಾರ್ಟ್ ಫೋನ್ ಅನ್ನು ಬಳಕೆ ಮಾಡುತ್ತಾರೆ, ಸ್ಮಾರ್ಟ್ ಫೋನ್ ನಿಂದ ಒಂದಲ್ಲ ಒಂದು ರೀತಿಯ ಉಪಯೋಗ ಆಗೆ ಆಗುತ್ತದೆ. ಅದೇ ರೀತಿ ಹೆಚ್ಚಿನ ಜನರು ಸ್ಮಾರ್ಟ್ ಫೋನ್ ನಲ್ಲಿ ಫೋಟೋವನ್ನು ತೆಗೆಯಲು ಬಳಸುತ್ತಾರೆ, ಅದನ್ನು ಹೆಚ್ಚಿನ ವರ್ಷದವರೆಗೂ ಫೋನ್ನಲ್ಲಿ ಇಟ್ಟುಕೊಳ್ಳಬೇಕು ಎಂಬ ಆಸಕ್ತಿ ಇದ್ದೇ ಇರುತ್ತದೆ ಆದರೆ ಅಪ್ಪಿ ತಪ್ಪಿ ಫೋನ್ನಲ್ಲಿರೋ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಬೇಸರ ಉಂಟಾಗುತ್ತದೆ. ಆ ಸಮಯದಲ್ಲಿ ಏನು ಮಾಡಬೇಕು ಎಂದು ಘೋಚರಿಸುವುದಿಲ್ಲ, ಆದರೆ ಹೆಚ್ಚಿನ ಜನರಿಗೆ ಫೋಟೋ ವಿಡಿಯೋ ಮತ್ತು ಫೈಲ್ ಗಳು ಡಿಲೀಟ್ ಆದರೆ ಅದನ್ನು ಮರಳಿ ಪಡೆಯಲು ಸುಲಭ ಎಂದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ.
ಹೌದು ಗೆಳೆಯರೇ ನಿಮ್ಮ ಫೋನ್ನಲ್ಲಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಅದನ್ನು ನೀವು ಸುಲಭವಾಗಿ ಗ್ಯಾಲರಿಗೆ ರೀಸ್ಟೋರ್ ಮಾಡಿಕೊಳ್ಳಬಹುದು. ಈಗಿನ ತಂತ್ರಜ್ಞಾನ ಸಾಕಷ್ಟು ಅಪ್ಡೇಟ್ ಆಗಿರುವುದರಿಂದ ಡಿಲೀಟ್ ಆಗಿರೋ ಫೋಟೋಗಳನ್ನು ಸುಲಭವಾಗಿ ಮರಳಿ ಪಡೆದುಕೊಳ್ಳಬಹುದು. ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್ ಮಾಡಿಕೊಳ್ಳಬಹುದು.
ಡಿಲೀಟ್ ಆದ ಫೋಟೋ ಮತ್ತು ವಿಡಿಯೋವನ್ನು ಸುಲಭವಾಗಿ ವಾಪಸ್ ಪಡೆಯಲು ಯಾವ ಆಪ್ ಬೆಸ್ಟ್
ಈ ಗೊಂದಲ ಎಲ್ಲರಿಗೂ ಇದೆ ಏಕೆಂದರೆ ಫೋಟೋವನ್ನು ವಾಪಸ್ ಮರಳಿ ಪಡೆದುಕೊಳ್ಳಬೇಕೆಂದರೆ ಹೆಚ್ಚಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದರಿಂದ ಯಾವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಎಂಬ ಗೊಂದಲ ಹೆಚ್ಚಿನ ಜನರಿಗೆ ಇದ್ದೇ ಇರುತ್ತದೆ. ಇದರಿಂದ ನಾನು ನಿಮಗೆ ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಗ್ಗೆ ತಿಳಿಸಿಕೊಡುತ್ತೇನೆ ಇದರಿಂದ ನೀವು ಸುಲಭವಾಗಿ ಡಿಲೀಟ್ ಆದ ಫೋಟೋ ಮತ್ತು ವಿಡಿಯೋವನ್ನು ರಿಕವರಿ ಮಾಡಿಕೊಳ್ಳಬಹುದು, ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಸುರಕ್ಷತೆಯಿಂದ ಡೌನ್ಲೋಡ್ ಮಾಡಿಕೊಳ್ಳಿ ಏಕೆಂದರೆ ಈ ಕೆಲವು ಆಪ್ಗಳು ಥರ್ಡ್ ಪಾರ್ಟಿ ಆಪ್ ಆಗಿರುತ್ತದೆ ಇದರಿಂದ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಹಾಗಾದರೆ ಫೋಟೋ ಮತ್ತು ವಿಡಿಯೋವನ್ನು ರಿಕವರಿ ಮಾಡಲು ಯಾವ ಅಪ್ ಉತ್ತಮ ಎಂದು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಡಿಲೀಟೆಡ್ ಫೋಟೋ ಆಪ್
ಆಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿರುವವರಿಗೆ ಇದು ಉತ್ತಮ ಆಪ್ ಎಂದು ಹೇಳಬಹುದು. ಒಂದು ವೇಳೆ ಅಪ್ಪಿ ತಪ್ಪಿ ನಿಮ್ಮ ಫೋನ್ನಲ್ಲಿರುವ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಅಂತಹ ಸಮಯದಲ್ಲಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಸುಲಭವಾಗಿ ವಾಪಸ್ ಗ್ಯಾಲರಿಗೆ ಫೋಟೋ ಮತ್ತು ವಿಡಿಯೋವನ್ನು ರಿಕವರಿ ಮಾಡಿಕೊಳ್ಳಬಹುದು.
ಈ ಆಪ್ ಡಿಲೀಟ್ ಆದ ವಿಡಿಯೋ ರಿಕವರಿ ಮಾಡಲು ಉತ್ತಮ ಅಪ್ ಎಂದು ಹೇಳಬಹುದು. ಈ ಆಪ್ ಅನ್ನು ನೀವು ಸುಲಭವಾಗಿ ಬಳಸಬಹುದು ಬಾಹ್ಯ ಮೆಮೊರಿ ಮತ್ತು ಫೋನ್ ಆಂತರಿಕ ಮೆಮೊರಿ ಎರಡು ಸ್ಟೋರೇಜ್ ಗಳಲ್ಲಿ ಡಿಲೀಟ್ ಫೈಲ್ಗಳನ್ನು ರಿಕವರಿ ಒದಗಿಸುತ್ತದೆ. ಇದರಿಂದ ಇದು ಉತ್ತಮ ಆಪ್ ಎಂದು ಹೇಳಬಹುದು.
ಡಿಸ್ಕ್ ಡಿಗ್ಗರ್ ಫೋಟೋ ರಿಕವರಿ
ಈ ಆಪ್ ಅನ್ನು defiant technologies ಅಭಿವೃದ್ಧಿಪಡಿಸಿದೆ, ಈ ಆಪ್ ಸಹ ಫೋಟೋ ಮತ್ತು ವಿಡಿಯೋವನ್ನು ರಿಕವರಿ ಮಾಡಲು ಅತ್ಯುತ್ತಮ ಆಪ್ ಎಂದು ಹೇಳಬಹುದು. ಈ ಆಪ್ ನಲ್ಲಿ ನೀವು ಅನ್‌ಡಿಲೀಟ್ ಮತ್ತು ಡಿಲೀಟ್ ಆದ ಫೈಲ್ಗಳನ್ನು ರಿಕವರಿ ಮಾಡಿಕೊಳ್ಳಬಹುದು. ಈ ಆಪ್ ನಲ್ಲಿ ಮೆಮೊರಿ ಕಾರ್ಡ್ ಮತ್ತು ಫೋನ್ ಮೆಮೊರಿ ಎರಡು ಸ್ಟೋರೇಜ್ ಗಳ ಫೈಲ್ಗಳನ್ನು ರಿಕವರಿ ಮಾಡುತ್ತದೆ. ರಿಕವರಿ ಮಾಡಲಾದ ಫೈಲನ್ನು ಡೈರೆಕ್ಟಾಗಿ ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಮತ್ತು ಇ-ಮೇಲ್ ಈ ಮೂರು ಅಪ್ಲಿಕೇಶನ್ ಗಳಿಗೆ ಫೋಟೋವನ್ನು ಸೆಂಡ್ ಸಹ ಮಾಡಿಕೊಳ್ಳಬಹುದು.
ಡಂಪಸ್ಟರ್ ರಿಕವರಿ ಆಪ್
ಈ ಆಪ್ ಒಂದು ಸರಳ ಡಿಲೀಟ್ ಆದ ಫೋಟೋ ಮತ್ತು ವಿಡಿಯೋ ರಿಸ್ಟೋರ್ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಈ ಆಪ್ ಸುಮಾರು 30 ಮಿಲಿಯನ್ ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಪ್ಪಿ ತಪ್ಪಿ ಅಥವಾ ಆಕಸ್ಮಿಕವಾಗಿ ಡಿಲೀಟ್ ಆದ ಫೋಟೋ ಮತ್ತು ವಿಡಿಯೋವನ್ನು ಬೇಕನೆ ರಿಸ್ಟೋರ್ ಮಾಡಿಕೊಳ್ಳಲು ಇದು ಉತ್ತಮ ಎಂದು ಹೇಳಬಹುದು.
ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸುವ ಮೊದಲು ಎಚ್ಚರಿಕೆಯಿಂದ ಬಳಸಿ
ಹೌದು ಗೆಳೆಯರೇ ನಿಮ್ಮ ಫೋನ್ನಲ್ಲಿ ಅಕಸ್ಮಿಕವಾಗಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದ್ರೆ ಅಂತಹ ಸಮಯದಲ್ಲಿ ಆ ಫೋಟೋ ವಿಡಿಯೋಗಳು ಪ್ರಮುಖವಾಗಿ ಬೇಕೆಂದರೆ ಹಾಗಾದರೆ ಮಾತ್ರ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ಇಲ್ಲದಿದ್ದರೆ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿಂದ ನಿಮ್ಮ ಫೋನ್ನ ಕೆಲವು ಡೇಟಾ ಗಳನ್ನು ಸಂಗ್ರಹಿಸುತ್ತದೆ. ಇದರಿಂದ ಸುರಕ್ಷತೆಯಿಂದ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ಇಲ್ಲದಿದ್ದರೆ ಕೆಲವು ಸಮಸ್ಯೆಗಳಿಗೆ ಒಳಗಾಗ ಬೇಕಾಗುತ್ತದೆ. ಡಿಲೀಟ್ ಆದ ಫೋಟೋ ಮತ್ತು ವಿಡಿಯೋ ಮುಖ್ಯವಾಗಿದ್ದರೆ ಮಾತ್ರ ಈ ಅಪ್ಲಿಕೇಶನ್ ಅನ್ನು ಬಳಸಿ.
ಈ ಆಪ್ ನಲ್ಲಿ ಫೋಟೋವನ್ನು ಸೇವ್ ಮಾಡಿದರೆ ಫೋಟೋಗಳು ಡಿಲೀಟ್ ಆಗಿರುವುದಿಲ್ಲ
ಹೌದು ಗೆಳೆಯರೇ, ನೀವೇನಾದರೂ ಐಕ್ಲೋಟ್, ಗೂಗಲ್ ಡ್ರೈವ್, ಗೂಗಲ್ ಫೋಟೋಸ್ ಈ ಅಪ್ಲಿಕೇಶನ್ ಗಳಲ್ಲಿ ನಿಮ್ಮ ಫೋಟೋವನ್ನು ಸೇವ್ ಮಾಡಿಕೊಂಡಿದ್ದರೆ. ಮೊಬೈಲ್ ನಲ್ಲಿ ಈ ಫೋಟೋಗಳು ಡಿಲೀಟ್ ಆದರೂ ಈ ಆಪ್ ಗಳಲ್ಲಿ ಫೋಟೋಗಳು ಡಿಲೀಟ್ ಆಗಿರುವುದಿಲ್ಲ. ಒಂದು ವೇಳೆ ಈ ಆಪ್ ನಲ್ಲೂ ಸಹ ಫೋಟೋಗಳು ಡಿಲೀಟ್ ಆಗಿದ್ದರೆ ಅವುಗಳನ್ನು ಸಹ ಸುಲಭವಾಗಿ ಪಡೆದುಕೊಳ್ಳಬಹುದು. ಅದು ಹೇಗೆ ಎಂದು ತಿಳಿದುಕೊಳ್ಳಬೇಕೆಂದರೆ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ.
ಆಕಸ್ಮಿಕವಾಗಿ ನಿಮ್ಮ ಫೋನ್ನಲ್ಲಿರುವ ಐಕ್ಲೋಟ್ ಮತ್ತು ಗೂಗಲ್ ಫೋಟೋ ಅಪ್ಲಿಕೇಶನ್ ನಲ್ಲಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಈ ರೀತಿ ಮಾಡಿ
ಗ್ಯಾಲರಿಯಲ್ಲಿ ಫೋಟೋ ಡಿಲೀಟ್ ಆದರೆ ಒಂದು ವೇಳೆ ನೀವು ಗೂಗಲ್ ಡ್ರೈವ್, ಗೂಗಲ್ ಫೋಟೋಸ್, ಐಕ್ಲೋಟ್ ಈ ಅಪ್ಲಿಕೇಶನ್ ನೀವು ಫೋಟೋ ಮತ್ತು ವಿಡಿಯೋವನ್ನು ಸೇವ್ ಮಾಡಿದರೆ ಆ ಫೋಟೋಗಳು ಒಂದು ವೇಳೆ ಡಿಲೀಟ್ ಆದರೆ ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಐಕ್ಲೋಟ್ ನಿಂದ ಫೋಟೋ ಡಿಲೀಟ್ ಆದರೆ ಮರಳಿ ಪಡೆಯುವುದು ಹೇಗೆ
ಒಂದು ವೇಳೆ ನೀವು ಐಕ್ಲೋಟ್ ನಲ್ಲಿ ಫೋಟೋವನ್ನು ಸೇವ್ ಮಾಡಿ, ಆ ಫೋಟೋಗಳು ಆಕಸ್ಮಿಕವಾಗಿ ಡಿಲೀಟ್ ಆದರೆ ಅಂತಹ ಸಮಯದಲ್ಲಿ ಮರಳಿ ಪಡೆಯಲು ನೀವು ನಿಮ್ಮ ಫೋನ್ನಲ್ಲಿರುವ ಬ್ರೌಸರ್ ಗೆ ಹೋಗಿ iCloud.com ಎಂದು ಸರ್ಚ್ ಮಾಡಿ. ಅಲ್ಲಿ ನೀವು ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ, ಅಲ್ಲಿ ನಿಮಗೆ ಆಪಲ್ ಐಡಿ [APPLE ID] ಯೊಂದಿಗೆ ಲಾಗಿನ್ ಮಾಡಿಕೊಳ್ಳಲು ಕೇಳುತ್ತದೆ ಲಾಗಿನ್ ಮಾಡಿಕೊಳ್ಳಿ. ಲಾಗಿನ್ ಮಾಡಿಕೊಂಡಿದ್ದ ನಂತರ ಸೈಡ್ ಬಾರ್ ನಲ್ಲಿ ರೀಸೆಂಟ್ಲಿ ಡಿಲೀಟೆಡ್ [Recently Deleted] ಫೋಲ್ಡರ್ ಅನ್ನು ನೋಡುತ್ತೀರಿ ನೀವು ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಡೇಟ್ ವೈಸ್ ಪ್ರಕಾರ ವಿಡಿಯೋ, ಫೋಟೋ ಮತ್ತು ಫೈಲ್ ಅನ್ನು ನೀವು ಕಾಣಬಹುದಾಗಿದೆ. ಇಲ್ಲಿ ನಿಮಗೆ ಯಾವ ಫೋಟೋವನ್ನು ರಿಕವರಿ ಮಾಡಿಕೊಳ್ಳಬೇಕು, ಆ ಫೋಟೋವನ್ನು ನೀವು ಸುಲಭವಾಗಿ ರೆಸ್ಟೋರ್ ಮಾಡಿಕೊಳ್ಳಬಹುದು.
ಗೂಗಲ್ ಫೋಟೋಸ್ ನಿಂದ ಫೋಟೋ ಡಿಲೀಟ್ ಆದರೆ ಮರಳಿ ಪಡೆಯುವುದು ಹೇಗೆ
ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಹೆಚ್ಚಾಗಿ ಗೂಗಲ್ ಫೋಟೋಸ್ ನಲ್ಲಿ ಫೋಟೋ ಮತ್ತು ವಿಡಿಯೋವನ್ನು ಸೇವ್ ಮಾಡಿರುತ್ತೀರಿ. ಒಂದು ವೇಳೆ ಫೋಟೋ ಮತ್ತು ವಿಡಿಯೋಗಳು ಡಿಲೀಟ್ ಆದರೆ ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ ಅಂತಹ ಸಮಯದಲ್ಲಿ ಈ ವಿಧಾನ ಉತ್ತಮ ಎಂದು ಹೇಳಬಹುದು.
ಒಂದು ವೇಳೆ ಗೂಗಲ್ ಫೋಟೋಸ್ ನಲ್ಲಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಮೊದಲು ನೀವು ಗೂಗಲ್ ಫೋಟೋಸ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ. ಅಲ್ಲಿ ನಿಮಗೆ ಮೆನು ಪೇಜ್ ನ ಕೆಳಭಾಗದಲ್ಲಿ ಲೈಬ್ರರಿ ಎಂಬ ಆಕ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ಟ್ರಾಶ್ ಎಂದು ಸರ್ಚ್ ಮಾಡಬೇಕಾಗುತ್ತದೆ. ಟ್ರಾಶ್ ಎಂದು ಸರ್ಚ್ ಮಾಡಿದ ನಂತರ ಡಿಲೀಟ್ ಆದ ಎಲ್ಲಾ ಫೈಲ್ ಗಳು ಕಾಣುತ್ತದೆ. ನಿಮಗೆ ಅಲ್ಲಿ ಯಾವ ಫೋಟೋ ಮತ್ತು ವಿಡಿಯೋ ಫೈಲ್ ಗಳು ಬೇಕು ಅದರ ಮೇಲೆ ಲಾಂಗ್ ಪ್ರೆಸ್ ಮಾಡಿ ರಿಸ್ಟೋರ್ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಫೋಟೋ ಮತ್ತು ವಿಡಿಯೋವನ್ನು ರಿಸ್ಟೋರ್ ಮಾಡಿಕೊಳ್ಳಬಹುದು
ಇದನ್ನು ಗಮನಿಸಲೇಬೇಕು ನೀವು ಗೂಗಲ್ ಫೋಟೋಸ್ ನಾ ಟ್ರಾಶ್ ಫೋಲ್ಡರ್ ನಲ್ಲಿ 1.5 GB ವರೆಗೂ ಡೇಟಾವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ 1.5 GB ಗಿಂತ ಹೆಚ್ಚಿನ ಫೈಲ್ ಅನ್ನು ಸೇರಿದರೆ ಫೈಲ್ ಗಳು ಶಾಶ್ವತವಾಗಿ ಡಿಲೀಟ್ ಆಗುತ್ತದೆ. ಇದರಿಂದ ನೀವು ಗೂಗಲ್ ಫೋಟೋಸ್ ನಲ್ಲಿ ಟ್ರಾಶ್ ಅನ್ನು ಕ್ಲಿಯರ್ ಮಾಡಿಕೊಳ್ಳಿ. ಇದರಿಂದ ಆಕಸ್ಮಿಕವಾಗಿ ಫೋಟೋ ಡಿಲೀಟ್ ಆದ ಸಮಯದಲ್ಲಿ ಉಪಯೋಗವಾಗುತ್ತದೆ.
ಐಕ್ಲೋಟ್ ಮತ್ತು ಗೂಗಲ್ ಫೋಟೋಸ್ ನಲ್ಲಿ ಆಟೋಮೆಟಿಕ್ ಬ್ಯಾಕ್ ಅಪ್ ಸೆಟ್ ಮಾಡಿಕೊಳ್ಳಬಹುದು
ಹೌದು ಗೆಳೆಯರೇ ಆಕಸ್ಮಿಕ ಸಮಯದಲ್ಲಿ ನಿಮ್ಮ ಫೋನ್ನಲ್ಲಿರುವ ಫೋಟೋ ಮತ್ತು ವಿಡಿಯೋ ಡಿಲೀಟ್ ಆದರೆ ಅಂತಹ ಸಮಯದಲ್ಲಿ ಈ ವಿಧಾನ ಉತ್ತಮ ಎಂದು ಹೇಳಬಹುದು. ಆಟೋಮೆಟಿಕ್ ಬ್ಯಾಕಪ್ ಸೆಟ್ ಮಾಡಲು ಕಷ್ಟಕರವಾಗಿಲ್ಲ ಸುಲಭವಾಗಿ ಐಕ್ಲೋಟ್ ಮತ್ತು ಗೂಗಲ್ ಫೋಟೋಸ್ ಅಪ್ಲಿಕೇಶನ್ ಗಳಲ್ಲಿ ಆಟೋಮೆಟಿಕ್ ಬ್ಯಾಕಪ್ ಸೆಟ್ ಮಾಡಿಕೊಳ್ಳಬಹುದು. ಈ ರೀತಿ ಆಟೋಮೆಟಿಕ್ ಬ್ಯಾಕಪ್ ಮಾಡುವುದರಿಂದ ನಿಮ್ಮ ಡೇಟ್ ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತದೆ.
ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ, ಇಲ್ಲವೇ ಫೋನ್ನಲ್ಲಿರುವ ಫೋಟೋ ಮತ್ತು ವಿಡಿಯೋ ಆಕಸ್ಮಿಕವಾಗಿ ಡಿಲೀಟ್ ಆದರೆ ಫೋಟೋ ಮತ್ತು ವಿಡಿಯೋ ಫೈಲ್ಗಳನ್ನು 30 ದಿನಗಳಲ್ಲಿ ನೀವು ಸುಲಭವಾಗಿ ಫೋಟೋ ಮತ್ತು ವಿಡಿಯೋವನ್ನು ರೀಸ್ಟೋರ್ ಮಾಡಿಕೊಳ್ಳಬಹುದು. ಮತ್ತು ಫೋಟೋಗಳು ಆಕಸ್ಮಿಕವಾಗಿ ಡಿಲೀಟ್ ಆದರೆ ಎರಡೂ ಕ್ಲೌಡ್ ಸೇವೆಗಳಲ್ಲೂ ನಿಮ್ಮ ಡಿಲೀಟ್ ಮೀಡಿಯಾ ಫೈಲ್‌ಗಳನ್ನು 30 ದಿನಗಳವರೆಗೆ (iCloud) ಅಥವಾ 60 ದಿನಗಳವರೆಗೆ (Google ಫೋಟೋಸ್) ಹೊಂದಿರುತ್ತವೆ. ಈ ದಿನಗಳ ನಡುವೆ ಅವುಗಳನ್ನು ಮತ್ತೆ ರಿಸ್ಟೋರ್ ಮಾಡಬಹುದಾಗಿದೆ. ಒಂದು ವೇಳೆ ನೀವು ಐಕ್ಲೋಟ್ ಮತ್ತು ಗೂಗಲ್ ಫೋಟೋಸ್ ನಲ್ಲಿ ಫೋಟೋಗಳನ್ನು ಸೇವ್ ಮಾಡಿಕೊಂಡಿಲ್ಲವೆಂದರೆ ಇಂಥ ಸಮಯದಲ್ಲಿ ಈ ಮೇಲೆ ನೀಡಿರುವ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ನಿಮಗೆ ಫೋಟೋ ಮತ್ತು ವಿಡಿಯೋ ಮುಖ್ಯವಾಗಿದ್ದರೆ ಮಾತ್ರ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸಿ, ಇಲ್ಲದಿದ್ದರೆ ಈ ಅಪ್ಲಿಕೇಶನ್ ಗಳು ನಿಮ್ಮ ಪರ್ಸನಲ್ ಡೇಟಾವನ್ನು ಪಡೆಯುತ್ತದೆ. ಇದರಿಂದ ಸಮಸ್ಯೆಗೆ ಒಳಗಾಗುತ್ತೀರಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸಿದ ನಂತರ ಅಪ್ಲಿಕೇಶನ್ ನನ್ನು ಡಿಲೀಟ್ ಮಾಡಿಕೊಳ್ಳಿ ಇದರಿಂದ ಸುರಕ್ಷಿತವಾಗಿರಬಹುದು.
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು