ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರಲು E-KYC ಕಡ್ಡಾಯ..! ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಬಂಧುಗಳೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ಮೊದಲನೆಯದಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕುಟುಂಬದ ಹಿರಿಯ ಮಹಿಳೆಯರಿಗೆ ತಿಂಗಳಿಗೆ 2,000ಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಉದ್ದೇಶವನ್ನು ಹೊಂದಿದೆ. ಅದೇ ರೀತಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿಯನ್ನು ನೀಡುವ ಬದಲು ಅದಕ್ಕೆ ಹಣವನ್ನು ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕೆಂದರೆ ಈ ಕೆವೈಸಿ [E-KYC] ಕಡ್ಡಾಯವಾಗಿದೆ.
ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣವು ಕೆಲವು ಜನರಿಗೆ ಬರುತ್ತಿಲ್ಲ, ಅದರಲ್ಲೂ 2 ರಿಂದ 3 ತಿಂಗಳು ಹಣ ಬಂದರೆ ಇನ್ನು ಕೆಲವು ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬರುತ್ತಿಲ್ಲ. ಈ ಎಲ್ಲಾ ಸಮಸ್ಯೆಗೆ ಈ ಕೆವೈಸಿ [E-KYC] ಪ್ರಮುಖ ಕಾರಣವಾಗಿದೆ. ಸರ್ಕಾರವು ಈಗಾಗಲೇ ತಿಳಿಸಿರುವಂತೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ [E-KYC] ಮಾಡಿಕೊಳ್ಳದಿದ್ದರೆ ಸರ್ಕಾರದಿಂದ ಪಡೆದುಕೊಳ್ಳುವ ಗ್ಯಾರಂಟಿಗಳ ಹಣವನ್ನು ನಿಮಗೆ ಸಿಗುವುದಿಲ್ಲ.
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ
ಕರ್ನಾಟಕದಲ್ಲಿ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣ ಪಡೆಯುತ್ತಿದ್ದಾರೆ. ಅದೇ ರೀತಿ ಅನ್ನ ಭಾಗ್ಯ ಯೋಜನೆ ಹಣವನ್ನು ಸಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮವಾಗುತ್ತಿದೆ. ಆದರೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಮತ್ತು ಅನ್ನ ಭಾಗ್ಯ ಯೋಜನೆ ಯ ಹಣವು ಸಹ ಬರುತ್ತಿಲ್ಲ. ಏಕೆ ಹಣ ಬರುತ್ತಿಲ್ಲ ಎಂಬ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸರ್ಕಾರವು ತಿಳಿಸಿರುವ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲವೆಂದರೆ ನೀವು ಈ ಕೆವೈಸಿ [E-KYC] ಮಾಡಿಸಿಕೊಂಡಿಲ್ಲ. ಇದರಿಂದ ಕಡ್ಡಾಯವಾಗಿ ಈ ಕೆವೈಸಿ [E-KYC] ಯನ್ನು ಮಾಡಿಸಿಕೊಳ್ಳಬೇಕು. ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರವು ಡಿಬಿಟಿ [DBT] ಮಾಡುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯು ಅಪ್ಡೇಟ್ ಆಗದೆ ಇದ್ದರೆ ಅಂತಹ ಸಮಯದಲ್ಲಿ ಆಟೋಮೆಟಿಕ್ ಆಗಿ ಹಣ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ [E-KYC] ಮಾಡುವುದು ಮುಖ್ಯವಾಗಿದೆ.
ಸುಲಭವಾಗಿ ಈ ಕೆವೈಸಿ [E-KYC] ಯನ್ನು ಮಾಡಿಕೊಳ್ಳಿ
- ಮೊದಲು ನೀವು ಆಹಾರ ಇಲಾಖೆಯ https://ahara.kar.nic.in/home/eservices ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ಅಲ್ಲೇ ಕಾಣುವ e – Services ವಿಭಾಗದ ಮೇಲ್ಭಾಗದಲ್ಲಿ ಇರುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನೀವು e-Status ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಕಾಣಬಹುದು LINKING UID ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಲಿಂಕಿಂಗ್ ವಿಥ್ ಆರ್ ಸಿ ಮೆಂಬರ್ [linking with rc member] ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ. ನಂತರ ಪಡಿತರ ಚೀಟಿಯ ವಿವರವನ್ನು ಕಾಣಿಸುತ್ತದೆ.
- ನಂತರ ನಿಮ್ಮ ಎಲ್ಲಾ ಕುಟುಂಬದ ಸದಸ್ಯರಿಗೂ ಈ ಕೆವೈಸಿ [E-KYC] ಆಗಿದೆಯೋ ಇಲ್ಲವೋ ಎಂದು ಕಾಣಿಸುತ್ತದೆ.
- ಒಂದು ವೇಳೆ ಈ ಕೆವೈಸಿ [E-KYC] ಆಗಿಇಲ್ಲ ವೆಂದರೆ ಅಲ್ಲಿ ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸುಲಭವಾಗಿ ಈ ಕೆವೈಸಿ [E-KYC] ಯನ್ನು ಮಾಡಿಕೊಳ್ಳಬಹುದು.
ಆಫ್ಲೈನ್ ಮೂಲಕ್ಕೂ ಸಹ ಈ ಕೆವೈಸಿ [E-KYC] ಯನ್ನು ಮಾಡಿಕೊಳ್ಳಬಹುದು
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಈ ಕೆವೈಸಿ [E-KYC] ಮಾಡಿಕೊಳ್ಳಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರ ಇರುವ ಆಹಾರ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡುವ ಮೂಲಕ್ಕ ಅಲ್ಲಿ ನೀವು ಸುಲಭವಾಗಿ ಈ ಕೆವೈಸಿ [E-KYC] ಮಾಡಬಹುದು.
ಈಗಿನ ಮಾಹಿತಿಯ ಪ್ರಕಾರ ನೀವು ಈ ಕೆವೈಸಿ [E-KYC] ಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು, ಹಾಗಾದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಪಡೆದುಕೊಳ್ಳುತ್ತಿರುವ ಗ್ಯಾರೆಂಟಿ ಹಣ ಖಾತೆಗೆ ಜಮಾ ವಾಗುತ್ತದೆ. ಇಲ್ಲದಿದ್ದರೆ ಜಮವಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆ
ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಪಯೋಗವಾಗಲಿ ಇಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬದ ಹಿರಿಯ ಮಹಿಳೆಗೆ 2000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದರಲ್ಲೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ, ಸರ್ಕಾರವು ತಿಳಿಸಿರುವ ಪ್ರಕಾರ ಈ ಕೆವೈಸಿ [E-KYC] ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮವಾಗುವುದಿಲ್ಲ. ಅದಲ್ಲದೆ ಗೃಹಲಕ್ಷ್ಮಿ ಯೋಜನೆಯ ಮತ್ತು ಅನ್ನ ಭಾಗ್ಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ಲೊವೋ ಎಂದು ನೀವು ಸುಲಭವಾಗಿ ಆನ್ಲೈನ್ ಮೂಲಕ ನೋಡಿಕೊಳ್ಳಬಹುದು.
DBT ನೇರ ನಗದು ನೋಡುವ ವಿಧಾನ
ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಯ ಹಣವನ್ನು ಸರ್ಕಾರವು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವ ಸ್ಥಿತಿಯನ್ನು ಸುಲಭವಾಗಿ ಮೊಬೈಲ್ ನಿಂದಲೇ ನೋಡಿಕೊಳ್ಳಬಹುದು.
- ಮೊದಲು ನೀವು ಸರ್ಕಾರದ ಅಧಿಕೃತವಾದ DBT Karnataka application ವೆಬ್ಸೈಟ್ ಅಥವಾ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
- ನಂತರ ಆಪ್ ಅನ್ನು ಓಪನ್ ಮಾಡಿ ಫಲಾನುಭವಿಯ ಆಧಾರ್ ನಂಬರ್ ಹಾಕಿ, ಗೆಟ್ ಓಟಿಪಿ [Get OTP] ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಿಂದ ಬರುವ ಓಟಿಪಿಯನ್ನು ಹಾಕಿದ ನಂತರ ವೇರಿಫೈ ಓಟಿಪಿ [verify OTP] ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ನಿಮ್ಮ ಆಧಾರ್ ಕಾರ್ಡ್ ಎಲ್ಲಾ ಡೀಟೇಲ್ಸ್ ಕಾಣಿಸುತ್ತದೆ
- ನಂತರ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಿ ಕೊಲ್ಲಬೇಕಾಗುತ್ತದೆ. ನಿಮಗೆ ಬೇಕಾದ ನಾಲ್ಕು ಅಂಕಿಯಲ್ಲಿ ಎಂಪಿನ್ [mpin] ಕ್ರಿಯೇಟ್ ಮಾಡಿಕೊಳ್ಳಿ.
- ಎಂಪಿನ್ [mpin] ಕ್ರಿಯೇಟ್ ಮಾಡಿಕೊಂಡ ನಂತರ ಕನ್ಫರ್ಮ್ ಎಂಪಿನ್ [Confirm mPIN] ಹಾಕಿ, ಸಬ್ಮಿಟ್ [Submit] ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಅನ್ನ ಭಾಗ್ಯದ ಡಿಬಿಟಿ [DBT] ಸ್ಟೇಟಸ್ ಮತ್ತು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಮತ್ತು ಪಕ್ಕದಲ್ಲಿರುವ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ [Seeding status of Adhaar in bank account] ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು.
- ಅದಲ್ಲದೆ ಸರ್ಕಾರದಿಂದ ಇದುವರೆಗೂ ಬರುತ್ತಿರುವ ಯಾವುದೇ ನೇರ ನಗದು ವರ್ಗಾವಣೆಯ ಸ್ಥಿತಿಯನ್ನು ನೀವು ಸುಲಭವಾಗಿ ಈ ಆಪ್ ಮೂಲಕ ತಿಳಿದುಕೊಳ್ಳಬಹುದು.
- ಈ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಬಳಸುವ ಮೂಲಕ್ಕ ಗ್ಯಾರೆಂಟಿಗಳ ಹಣದ ವರ್ಗಾವಣೆಯ ಡಿಬಿಟಿ [DBT] ಯನ್ನು ನೋಡಿಕೊಳ್ಳಬಹುದು.
ಈ ಆಪ್ ನ ಮೂಲಕ ಕೆಲವು ಯೋಜನೆಯ ಹಣವನ್ನು ಸಹ ಚೆಕ್ ಮಾಡಬಹುದು
ಹೌದು ಗೆಳೆಯರೇ DBT ಕರ್ನಾಟಕ ಅಪ್ಲಿಕೇಶನ್ [DBT Karnataka application] ಅನ್ನು ಬಳಸಿಕೊಂಡು ನೀವು ಕೆಲವು ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬಹುದು. ಈ ಆಪ್ ಕೆಲವರಿಗೆ ಉಪಯೋಗವಾಗುತ್ತದೆ ಎಂದು ಸಹ ಹೇಳಬಹುದು. ಆಗದರೆ ಯಾವೆಲ್ಲ ಯೋಜನೆಯ ಹಣವನ್ನು ನೋಡಿಕೊಳ್ಳಬಹುದು
- ಅನ್ನಭಾಗ್ಯ ಯೋಜನೆಯ ಹಣ
- ಗೃಹಲಕ್ಷ್ಮಿ ಯೋಜನೆ ಹಣ
- ಪಿಎಂ ಕಿಶನ್ ಯೋಜನೆ ಹಣ
- ರೈತ ಶಕ್ತಿ ಯೋಜನೆ ಹಣ
- ಎಸ್ಎಸ್ ಪಿ [SSP] ಸ್ಕಾಲರ್ಶಿಪ್ ಹಣ
ಇದೇ ರೀತಿ ಹಲವು ಯೋಜನೆ ಡಿಬಿಟಿ [DBT] ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಇದು ಒಂದು ರೀತಿಯಲ್ಲಿ ಉಪಯೋಗವಾಗುವ ಅಪ್ಲಿಕೇಶನ್ ಅಥವಾ ಆಪ್ ಎಂದು ಹೇಳಬಹುದು.
ಹಣ ಬಂದಿಲ್ಲದವರು ಆದಷ್ಟು ಬೇಗ ಈ ರೀತಿ ಮಾಡಿ
ಹೌದು ಗೆಳೆಯರೇ ಹಲವಾರು ಮಹಿಳೆಯರಿಗೆ ಪ್ರತಿ ತಿಂಗಳು ಏಳು ಕಂತಿನಂತೆ 14000 ಹಣವನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಕೆಲವು ಮಹಿಳೆಯರು ಎರಡರಿಂದ ಮೂರು ತಿಂಗಳು ಹಣ ಬ್ಯಾಂಕಿಗೆ ಜಮವಾದರೆ ಇನ್ನು ಕೆಲವು ತಿಂಗಳು ಹಣ ಬಂದಿಲ್ಲ ಮತ್ತು ಇನ್ನು ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಅಂಥವರಿಗೆ ಏಕೆ ಬಂದಿಲ್ಲವೆಂದರೆ ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಲವು ದಾಖಲೆಗಳ ಸಮಸ್ಯೆಯಿಂದ ಅವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮವಾಗಿಲ್ಲ.
ಅಂಥವರು ಸೈಬರ್ಗಳಿಗೆ ಅಥವಾ ಕೆಲವು ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಹಣ ಬರದಿರಲು ಏನು ಸಮಸ್ಯೆ ಉಂಟಾಗಿದೆ ಎಂದು ತಿಳಿದುಕೊಳ್ಳಬಹುದು. ಅದರಲ್ಲೂ ಸರ್ಕಾರ ತಿಳಿಸಿರುವ ಪ್ರಕಾರ ಈ ಕೆವೈಸಿ [E-KYC] ಮಾಡಿಸಿಕೊಂಡಿಲ್ಲದವರಿಗು ಸಹ ಗೃಹಲಕ್ಷ್ಮಿ ಯೋಚನೆ ಹಣ ಬರುವುದಿಲ್ಲ ಎಂದು ತಿಳಿಸಿದೆ.
ಆದಷ್ಟು ಬೇಕಾ ಬ್ಯಾಂಕ್ ಖಾತೆಗೆ ಈ ಕೆವೈಸಿ [E-KYC] ಮಾಡಿಲ್ಲವೆಂದರೆ ಮಾಡಿಸಿಕೊಳ್ಳಿ. ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮವಾಗಬೇಕೆಂದರೆ ಈಗ ಈ ಕೆವೈಸಿ [E-KYC] ಸಹ ಕಡ್ಡಾಯವಾಗಿದೆ. ಈ ಕೆವೈಸಿ [E-KYC] ಮಾಡಿಕೊಂಡಿಲ್ಲದವರು ಆದಷ್ಟು ಬೇಗ ಈ ಕೆವೈಸಿ [E-KYC] ಮಾಡಿಸಿಕೊಳ್ಳಿ.