Farmers Loan: ರೈತರು 3 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು…! ಹೀಗೆ ಅರ್ಜಿ ಸಲ್ಲಿಸಿ…
ನಮಸ್ಕಾರ ಬಂಧುಗಳೇ ಸರ್ಕಾರವು ರೈತರ ಕೃಷಿಗೆ ಉಪಯೋಗವಾಗಲಿ ಎಂದು ಪ್ರಧಾನ ಮಂತ್ರಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ತರಲಾಗಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ವಿಶೇಷ ರೀತಿಯ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನಿಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯದಿಂದ ದೇಶದ ಎಲ್ಲಾ ರೈತರು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಸಾಲಕ್ಕೆ ಕಡಿಮೆ ಅಥವಾ ಹಗ್ಗದ ಬಡ್ಡಿ ದರವನ್ನು ನೀಡಲಾಗುತ್ತದೆ. ಹಾಗಾದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು? ಅರ್ಜಿ ಸಲ್ಲಿಸುವುದು ಹೇಗೆ? ಇದರ ಪ್ರಯೋಜನಗಳು, ಬೇಕಾಗುವ ದಾಖಲೆಗಳು ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್
ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು 1988 ರಲ್ಲಿ ಪ್ರಾರಂಭ ಮಾಡಲಾಗಿತ್ತು. ಈ ಯೋಜನೆಯ ಉದ್ದೇಶವು ರೈತರಿಗೆ ಅವರ ಕೃಷಿ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸಲು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿಯ ಸಾಲವನ್ನು ಪಡೆದುಕೊಳ್ಳಬಹುದು. ರೈತರು ಕೃಷಿ ಆಧಾರದ ಮೇಲೆ ಬೇರೆ ಕಡೆ ಸಾಲವನ್ನು ಮಾಡಿದರೆ ಅದಕ್ಕೆ ಹೆಚ್ಚಾಗಿ ಬಡ್ಡಿದರವನ್ನು ನೀಡಬೇಕಾಗುತ್ತದೆ. ರೈತರು ಈ ಸಮಸ್ಯೆಗೆ ಒಳಗಾಗಬಾರದು ಎಂದು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಲಾಗಿದೆ.
ಈ ಯೋಜನೆ ಅಡಿಯಲ್ಲಿ ರೈತರು ಸುಲಭವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಸಾಲವನ್ನು ಪಡೆದುಕೊಂಡ ರೈತರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ಪಡೆದ ಸಾಲವಲ್ಲ, ಅಂತಹ ಪರಿಸ್ಥಿತಿಯಲ್ಲಿ ಅವರು ಬಡ್ಡಿ ದರದಲ್ಲಿ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ರೈತರ ತಮ್ಮ ಬೆಳೆಗಳಿಗೆ ವಿಮೆಯನ್ನು ಸಹ ಪಡೆದುಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ
ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಭಾರತ ಸರ್ಕಾರವು ಪರಿಚಯಿಸಿದ ಪ್ರಧಾನ ಮಂತ್ರಿ ಕ್ರೆಡಿಟ್ ಕಾರ್ಡ್ ಯೋಜನೆ ಎಂದು ಕರೆಯಲಾಗುತ್ತದೆ. ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕೃಷಿ ಉತ್ಪಾದನೆಗೆ ಹಣಕಾಸು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯಿಂದ ಅಲ್ಪಾವಧಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಪಡೆದುಕೊಂಡ ಸಾಲಕ್ಕೆ ಅಲ್ಪಾವಧಿ ಬಡ್ಡಿದರವನ್ನು ವಿಧಿಸಲಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ವಾಣಿಜ್ಯ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಹಣಕಾಸು ಸಂಸ್ಥೆಗಳು ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲ ರೈತರಿಗೆ ಸಾಲವನ್ನು ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ರೈತರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅನ್ವಯಿಸಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯ ಪ್ರಯೋಜನಗಳು
- ಪ್ರಧಾನ್ ಮಂತ್ರಿ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ 1.60 ಲಕ್ಷದಿಂದ 3 ಲಕ್ಷದ ವರೆಗೂ ಹಣವನ್ನು ಪಡೆದುಕೊಳ್ಳಬಹುದು.
- ಈ ಯೋಜನೆ ಅಡಿಯಲ್ಲಿ ಕಡಿಮೆ ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ.
- ರೈತರು ಪಡೆದುಕೊಂಡ ಸಾಲವನ್ನು ಸಣ್ಣ ಮಾಸಿಕ ಕಂತಿನಲ್ಲಿ ಮರುಪಾವತಿ ಮಾಡಬಹುದು.
- ಕ್ರೆಡಿಟ್ ಕಾರ್ಡ್ ಸಾಲ ಯೋಜನೆ ಅಡಿಯಲ್ಲಿ ರೈತರು 50 ಸಾವಿರ ವರೆಗೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಸಹ ಒದಗಿಸಲಾಗಿದೆ.
- ಈ ಯೋಜನೆಯಲ್ಲಿ ಪಡೆದುಕೊಂಡ ಕಾರ್ಡ್ ದಾರರು ಕೃಷಿ ಸರಬರಾಜುಗಳಿಗೆ ಸರ್ಕಾರದ ಸಹಾಯಧನದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೇಲಿನ ಬಡ್ಡಿ ಮತ್ತು ಇತರ ಶುಲ್ಕಗಳ ವಿವರ
ನೀವೇನಾದರೂ ಬ್ಯಾಂಕಿನಲ್ಲಿ ಕೃಷಿ ವ್ಯವಹಾರಗಳಿಗೆ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕುಗಳ ಬಡ್ಡಿ ದರ ಹೆಚ್ಚಾಗಿರುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಮಿತಿ ಮತ್ತು ಬಡ್ಡಿಗಳು ವಿಭಿನ್ನವಾಗಿದೆ. ಈ ಯೋಜನೆಯ ಅಡಿಯಲ್ಲಿ ಸರಾಸರಿ 2% ರಿಂದ 4% ವರೆಗೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ರೈತರಿಗೆ ಉಪಯೋಗವಾಗಲಿ ಎಂದು ಸರ್ಕಾರವು ಬಡ್ಡಿ ದರಗಳಿಗೆ ಸಂಬಂಧಿಸಿದ ಹಲವಾರು ಪ್ರೋತ್ಸಾಹ ಮತ್ತು ಕಾರ್ಯಗಳು ಒದಗಿಸುತ್ತವೆ. ಇವುಗಳು ಕಾರ್ಡ್ ದಾರರ ಒಟ್ಟಾರೆ ಕ್ರೆಡಿಟ್ ಇತಿಹಾಸ ಮತ್ತು ಮರುಪಾವತಿ ಇತಿಹಾಸವನ್ನು ಹೊಂದಿರುತ್ತದೆ.
ಈ ಯೋಜನೆಯ ಮೇಲೆ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆದುಕೊಳ್ಳಲು ಸಂಸ್ಕರಣಾ ವೆಚ್ಚಗಳು, ವಿಮಾ ಕಂತುಗಳು, ಭೂ ಅಡಮಾನ ಪತ್ರ ವೆಚ್ಚಗಳು ಇತ್ಯಾದಿಗಳನ್ನು ಒಳಗೊಂಡಂತೆ ಯಾವುದೇ ಹೆಚ್ಚುವರಿ ಶುಲ್ಕ ಮತ್ತು ಶುಲ್ಕಗಳನ್ನು ನಿಗದಿಪಡಿಸುವ ಅಧಿಕಾರವನ್ನು ನೀಡುವ ಬ್ಯಾಂಕ್ ಗಳು ಹೊಂದಿರುತ್ತವೆ. ಬ್ಯಾಂಕುಗಳ ಆಧಾರದ ಮೇಲೆ ಬಡ್ಡಿ ಮತ್ತು ಇತರ ಶುಲ್ಕಗಳನ್ನು ನೀಡಲಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯ ಅರ್ಹತೆಯ ಮಾನದಂಡಗಳು
ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಗೆ ನೀಡಲಾಗಿರುವ ಅರ್ಹತೆಯ ಮಾನದಂಡವನ್ನು ಹೊಂದಿರಬೇಕು. ಹಾಗಾದರೆ ಮಾತ್ರ ಈ ಯೋಜನೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತೀರಾ.
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ವ್ಯಕ್ತಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 75
- ಮೊದಲನೇದಾಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಭಾರತೀಯ ಪ್ರಜೆಯಾಗಿರಬೇಕು.
- ರೈತರು ವೈಯಕ್ತಿಕ ಉಳಿತಾಯ ಬ್ಯಾಂಕ್ ಖಾತೆಯನ್ನು ಸಹ ಹೊಂದಿರಬೇಕು.
- ಕೃಷಿ ಉದ್ದೇಶಕ್ಕಾಗಿ ರೈತರು ಭೂ ಹಿಡುವಳಿ ಹೊಂದಿರಬೇಕು.
- ಸ್ವಂತ ಜಮೀನು ಹೊಂದಿಲ್ಲದಿದ್ದರೆ ಕೃಷಿಗಾಗಿ ಬಾಡಿಗೆ ಭೂಮಿಯನ್ನು ರೈತರು ಹೊಂದಿರಬೇಕು.
- ಪಶು ಸಂಗೋಪನೆಗೆ ಸಂಬಂಧಿಸಿದ ಜನರ ಅರ್ಜಿಗಳನ್ನು ಸಹ ಸ್ವೀಕರಿಸಲಾಗುತ್ತದೆ.
- ಈ ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರಯೋಜನವನ್ನು ಪಡೆದುಕೊಳ್ಳಬಹುದು.
- ಸಾಲಗಾರರು ಹಿರಿಯ ನಾಗರಿಕನಾಗಿದ್ದರೆ ಸಹಸಾಲಗಾರರು ಕಡ್ಡಾಯವಾಗಿದೆ.
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು
ಹೌದು ಗೆಳೆಯರೇ, ನೀವೇನಾದರೂ ಪ್ರಧಾನ ಮಂತ್ರಿ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಕೆಳಗೆ ನೀಡಲಾಗಿರುವ ಅಗತ್ಯವಿರುವ ದಾಖಲೆಯನ್ನು ಹೊಂದಿರಬೇಕು. ಹಾಗಾದರೆ ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತೀರಾ.
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಯುಟಿಲಿಟಿ ಬಿಲ್ ಗಳು
- ಬಾಡಿಗೆಗೆ ಒಪ್ಪಂದ
- ಪ್ರಸ್ತುತ ವಿಳಾಸದೊಂದಿಗೆ ಬ್ಯಾಂಕ್ ಹೇಳಿಕೆ
- ಭೂಮಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕ್ರೆಡಿಟ್ ನೀಡುವ ಹಣಕಾಸು ಸಂಸ್ಥೆಯ ವಿನಂತಿಸಿದರೆ PDC
- ಮುಂತಾದ ದಾಖಲೆಗಳನ್ನು ಪ್ರಮುಖವಾಗಿ ಹೊಂದಿರಬೇಕಾಗಿರುತ್ತದೆ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇನ್ನೂ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ನೀವು ಆಯ್ಕೆ ಮಾಡಿಕೊಂಡಿರುವ ಬ್ಯಾಂಕ್ ಶಾಖೆಗೆ ಹೋಗಿ ಈ ಯೋಜನೆಗೆ ಬೇಕಾಗುವ ಎಲ್ಲ ಮಾಹಿತಿಯನ್ನು ಅಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ ಅಥವಾ ನಿಮ್ಮ ಮೊಬೈಲ್ ನಲ್ಲಿ ಬ್ಯಾಂಕ್ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಈ ಯೋಜನೆಯ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸು ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಆನ್ಲೈನ್ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ
ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು ಪ್ರಧಾನ ಮಂತ್ರಿ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಆಯ್ಕೆಯ ಪಟ್ಟಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಅಥವಾ ಹೋಂ ಪೇಜ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಆಪ್ಷನ್ ಅನ್ನು ಹುಡುಕಿ ನೀವು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಕ್ಲಿಕ್ ಮಾಡಿದ ನಂತರ ಅನ್ವಯಿಸು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ವೆಬ್ಸೈಟ್ ನ ಅಪ್ಲಿಕೇಶನ್ ಪುಟಕ್ಕೆ ಮರುನಿರ್ದೇಶಿಸುತ್ತದೆ.
- ಅಲ್ಲಿ ಕೇಳುವ ಅಗತ್ಯದ ವಿವರಗಳನ್ನು ಸರಿಯಾಗಿ ಫಾರಂ ಅನ್ನು ಭರ್ತಿ ಮಾಡಿಕೊಳ್ಳಿ. ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ಉಲ್ಲೇಖ ಸಂಖ್ಯೆಯನ್ನು ಕಳಿಸಲಾಗುತ್ತಿದೆ. ನೀವು ಅರಹರಾಗಿದ್ದರೆ ಮುಂದಿನ ಪ್ರಕ್ರಿಯೆಗಾಗಿ 3-4 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು.
- ಈ ರೀತಿ ನೀವು ಸುಲಭವಾಗಿ ಆನ್ಲೈನ್ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ನೀವು ಆಯ್ಕೆ ಮಾಡಿರುವ ಬ್ಯಾಂಕ್ ಶಾಖೆಗೆ ಭೇಟಿ. ಅಲ್ಲಿ ಕೇಳುವ ಕೆಲವು ದಾಖಲೆಗಳನ್ನು ನೀಡಿ, ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಾಲದ ಮೊತ್ತವು 1.6 ಲಕ್ಷಕ್ಕಿಂತ ಹೆಚ್ಚಿದ್ದರೆ ಭದ್ರತಾ ಉದ್ದೇಶಕ್ಕಾಗಿ ಮೇಲಾಧಾರವನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ನಿಗದಿತ ಸಮಯದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾಮಾಡಲಾಗುತ್ತದೆ.
ನೀವು ಆಯ್ಕೆ ಮಾಡಿಕೊಂಡಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಲ್ಲಿ ನೀಡುವ ಫಾರಂ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಫಾರಂ ಅನ್ನು ನೀವು ಸುಲಭವಾಗಿ ಬ್ಯಾಂಕ್ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯನ್ನು ಪರಿಶೀಲನೆ ಮಾಡಲಾಗುತ್ತದೆ. ಅರ್ಜಿ ಪರಿಶೀಲನೆ ಯಶಸ್ವಿಯಾದ ನಂತರ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.