Free Solar Rooftop Scheme: ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ಅಳವಡಿಕೆ..! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ ಭಾರತ ಸರ್ಕಾರವು ಸೋಲಾರ್ ಮೇಲ್ಚಾವಣಿಯ ಸಬ್ಸಿಡಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಅಡಿಯಲ್ಲಿ ಭಾರತದ ಸಾಮಾನ್ಯ ನಾಗರಿಕರು ತಮ್ಮ ಮನೆಯಲ್ಲಿ ಚಾವಣಿಯ ಮೇಲೆ ಸೋಲಾರ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಸೋಲಾರ್ ಅನ್ನು ಪಡೆದುಕೊಳ್ಳಲು ಕಡಿಮೆ ವೆಚ್ಚದಲ್ಲಿ ಸಬ್ಸಿಡಿ ಮೂಲಕ ನೀಡಲಾಗುತ್ತದೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು, ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಈ ಎಲ್ಲಾ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಸೂರ್ಯ ಘರ್ ಯೋಜನೆ 2024 / ಸೋಲಾರ್ ಯೋಜನೆ 2024
ಈಗಿನ ಪರಿಸ್ಥಿತಿಯಲ್ಲಿ ಇಂಧನ ಶಕ್ತಿಯನ್ನು ಬಳಸದೆ ನಗರಗಳಲ್ಲಿ ಜೀವನ ಮಾಡೋದು ಕಷ್ಟಕರವಾದ ವಿಷಯ ಇಂಧನವನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಕರೆಂಟ್ ಬಿಲ್ ತುಂಬಾ ಜಾಸ್ತಿ ಬರುತ್ತದೆ. ಬಡ ಕುಟುಂಬಗಳು ಹೆಚ್ಚಿನ ಕರೆಂಟ್ ಬಿಲ್ ಅನ್ನು ಕಟ್ಟುವಲ್ಲಿ ಅಸಮ್ರತರಾಗಿದ್ದಾರೆ. ಈ ಕಾರಣದಿಂದ ಕೇಂದ್ರ ಸರ್ಕಾರವು ಉಚಿತ ಸೋಲಾರ್ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ಸೋಲಾರ್ ಅನ್ನು ಪಡೆದುಕೊಳ್ಳಲು ಸರ್ಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ. ಈ ಯೋಜನೆಯಿಂದ ಕೆಲವು ಬಡ ಕುಟುಂಬಗಳಿಗೆ ಉಪಯೋಗವಾಗಲಿದೆ.
ಮನೆಗೆ ಸೋಲಾರ್ ಅನ್ನು ಅಳವಡಿಕೆ ಮಾಡಲು ಕೇಂದ್ರ ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 1 ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ಅನ್ನು ಪಡೆದುಕೊಳ್ಳಬಹುದಾಗಿದೆ, ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸೋಲಾರ್ ಅನ್ನು ಪಡೆದುಕೊಂಡರೆ 15 ರಿಂದ 20 ವರ್ಷಗಳ ಕಾಲ ವಿದ್ಯುತ್ ಬಿಲ್ ಕಟ್ಟದೆ ಸೋಲಾರ್ ಕರೆಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸೋಲಾರ್ ಅನ್ನು ಪಡೆದುಕೊಳ್ಳಬೇಕು ಎಂದರೆ ಸೋಲಾರ್ ಪ್ಯಾನಲ್ ಅನ್ನು ಪಡೆದುಕೊಳ್ಳಲು ಸರ್ಕಾರದಿಂದ ಸಬ್ಸಿಡಿಯನ್ನು ನೀಡುತ್ತಿದ್ದಾರೆ.
ಕೇಂದ್ರ ಸರ್ಕಾರ ಬಡ ಕುಟುಂಬಗಳಿಗೆ ಉಪಯೋಗವಾಗಲಿ ಎಂದು ಒಂದಲ್ಲ ಒಂದು ಹೊಸ ಯೋಜನೆಯನ್ನು ತರುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ಜನರಿಗೆ ಉಪಯೋಗವಾಗಲಿದೆ ಏಕೆಂದರೆ ಕೆಲವು ಮನೆಗಳ ಕರೆಂಟ್ ಸಮಸ್ಯೆಗಳಿಂದ ಮತ್ತು ಕರೆಂಟ್ ಇಲ್ಲದ ಕಾರಣಗಳಿಂದ ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸೋಲಾರ್ ಅನ್ನು ಪಡೆದುಕೊಂಡರೆ ಸರ್ಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶ ಮತ್ತು ಲಕ್ಷಣ
ಈ ಯೋಜನೆಯ ಉದ್ದೇಶವೇನಂದರೆ ವಿದ್ಯುತ್ ಪೋರ್ಟ್ಫೋಲಿಯೊವನ್ನು ಕಡಿಮೆ ಮಾಡಲು ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವುದು. ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸೋಲಾರ್ ಪ್ಯಾನಲ್ ಅನ್ನು ಪಡೆದುಕೊಳ್ಳುತ್ತೀರವೆಂದರೆ 30% ರಿಂದ 50% ರಿಯಾಯಿತಿ ಅಥವಾ ಸಬ್ಸಿಡಿಯ ನೀಡಲಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಹಾಗೂ ದೊಡ್ಡ ಫ್ಯಾಕ್ಟರಿಗಳಲ್ಲಿ ಸೌರ ಫಲಕಗಳನ್ನು ಹಾಕುವುದರಿಂದ ಕರೆಂಟ್ ಬಿಲ್ ಅನ್ನು 30% ರಿಂದ 50% ವರೆಗೆ ಕಡಿಮೆ ಮಾಡಬಹುದಾಗಿದೆ. ಈ ಯೋಜನೆಯನ್ನು ಪ್ರಾರಂಭ ಮಾಡುವುದರಿಂದ ವಿದ್ಯುತ್ ಇಲಾಖೆಗೆ ಹೆಚ್ಚುವರಿ ಹೊರ ಬೀಳುವುದಿಲ್ಲ
ಈ ಯೋಜನೆಯ ಲಕ್ಷಣವೇನೆಂದರೆ ದೇಶದ ಒಂದು ಕೋಟಿಗೂ ಹೆಚ್ಚು ಮನೆಗಳಲ್ಲಿ ಸೋಲಾರ್ ಪ್ಯಾನಲ್ ಘಟಕಗಳನ್ನು ಅಳವಡಿಸಲಾಗುವುದು. ಈ ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳು ಕರೆಂಟ್ ಬಿಲ್ ಅನ್ನು ಉಳಿಸಬಹುದಾಗಿದೆ, ಅದಲ್ಲದೆ ಈ ಯೋಜನೆ ಅಡಿಯಲ್ಲಿ 3 ಕಿಲೋ ವ್ಯಾಟ್ ವರೆಗೂ ಸೋಲಾರ್ ಪ್ಯಾನೆಲ್ ಅನ್ನು ಸ್ಥಾಪಿಸಬಹುದಾಗಿದೆ.
ಈ ಯೋಜನೆ ಅಡಿಯಲ್ಲಿ ಸಿಗುವ ಪ್ರಯೋಜನಗಳು
ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸೋಲಾರ್ ಪ್ಯಾನಲ್ ಅನ್ನು ಪಡೆದುಕೊಂಡರೆ ನಿಮಗೆ 40% ವರೆಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ, ಅದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಮಂಡಳಿಗೆ ಮಾರಾಟ ಮಾಡಬಹುದಾಗಿದೆ, ಹೆಚ್ಚುವರಿ ವಿದ್ಯುತ್ ಮಾರಾಟದ ಹೆಚ್ಚಿನ ಮಾಹಿತಿಯನ್ನು ವಿದ್ಯುತ್ ನ ಮಂಡಳಿಯಲ್ಲಿ ತಿಳಿದುಕೊಳ್ಳಬಹುದಾಗಿದೆ. ಸೋಲಾರ್ ಪ್ಯಾನಲ್ ಅನ್ನು ಪಡೆದುಕೊಳ್ಳಬೇಕೆಂದರೆ ನಿಮಗೆ ಸರ್ಕಾರದಿಂದ 30% ರಿಂದ 50% ಅಷ್ಟು ಸಬ್ಸಿಡಿ ಅಥವಾ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದಲ್ಲದೆ ಒಮ್ಮೆ ನೀವು ಸೋಲಾರ್ ಪ್ಯಾನಲ್ ಅನ್ನು ಅಳವಡಿಸಿದರೆ 15 ರಿಂದ 20 ವರ್ಷಗಳವರೆಗೆ ವಿದ್ಯುತ್ ಕಟ್ಟದೆ ಉಚಿತ ಕರೆಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಯ ಬಗ್ಗೆ ತಿಳಿದುಕೊಳ್ಳೋಣ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇರಬೇಕಾಗುವ ಅರ್ಹತೆ
ಈ ಕೆಳಗೆ ನೀಡಲಾಗಿರುವ ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ನೀವು ಸರ್ಕಾರದಿಂದ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಲು ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ.
- ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸೋಲಾರ್ ಪ್ಯಾನಲ್ ಅನ್ನು ಅಳವಡಿಸಿಕೊಳ್ಳಲು ಸುಮಾರು 10 ಚದರ ಮೀಟರ್ ಪ್ರದೇಶವನ್ನು ಹೊಂದಿರಬೇಕು.
- ಈ ಯೋಜನೆ ಅಡಿಯಲ್ಲಿ ನೀವು 3 ಕಿಲೋ ವ್ಯಾಟ್ ವರೆಗೆ ಸೋಲಾರ್ ಪ್ಯಾನೆಲ್ ಅನ್ನು ಹಾಕಲು ಅಧಿಕಾರಿಗಳು ಶೇಕಡಾ 40% ಸಬ್ಸಿಡಿಯನ್ನು ನೀಡಲಾಗುತ್ತದೆ.
- ಕೆಲಸದ ಸ್ಥಳಗಳಲ್ಲಿ ಹಾಗೂ ದೊಡ್ಡ ಫ್ಯಾಕ್ಟರಿಗಳಲ್ಲಿ ಸೋಲಾರ್ ಪ್ಯಾನೆಲ್ ಫಲಕಗಳನ್ನು ಹಾಕುವುದರಿಂದ ಕರೆಂಟ್ ಬಿಲ್ ಅನ್ನು 30% ರಿಂದ 50% ವರೆಗೆ ಕಡಿಮೆ ಮಾಡಲಾಗುತ್ತದೆ.
ಹಾಗಾದರೆ ಈ ಯೋಜನೆ ಅಡಿಯಲ್ಲಿ ನೀವೇನಾದರೂ ಅರ್ಜಿಯನ್ನು ಸಲ್ಲಿಸಬೇಕೆಂದರೆ ಬೇಕಾಗುವ ದಾಖಲೆಗಳ ಬಗ್ಗೆ ಈ ಕೆಳಭಾಗದಲ್ಲಿ ನೀಡಲಾಗಿದೆ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು
- ಅಭ್ಯರ್ಥಿಯ ಆಧಾರ್ ಕಾರ್ಡ್
- ಪಡಿತರ ಚೀಟಿ
- ವಾಸ ಸ್ಥಳ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕಿನ ವಿವರಗಳು
- ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ
- ಹಿಂದಿನ ತಿಂಗಳಿನ ಕರೆಂಟ್ ಬಿಲ್
- ನಿಮ್ಮ ಆದಾಯ ಅಥವಾ ಸ್ಯಾಲರಿ ಸ್ಲಿಪ್
ಮುಂತಾದ ದಾಖಲೆಗಳನ್ನು ಹೊಂದಿದರೆ ಮಾತ್ರ ನೀವು ಈ ಯೋಜನೆ ಅಡಿಯಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಲು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಹೌದು ಗೆಳೆಯರೇ, ನೀವೇನಾದರೂ ಈ ಯೋಜನೆ ಅಡಿಯಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಹತ್ತಿರ ಈ ಮೇಲೆ ನೀಡಲಾಗಿರುವ ಅರ್ಹತೆ, ದಾಖಲೆ ಮುಖ್ಯವಾಗಿ ಹೊಂದಿರಬೇಕು. ನೀವು ಸುಲಭವಾಗಿ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಮೊದಲು ನೀವು ಸೂರ್ಯ ಘರ್ ಯೋಜನೆಯ ಅಧಿಕೃತ https://pmsuryaghar.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಇಲ್ಲಿ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು Solar Rooftop Scheme ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಕ್ಲಿಕ್ ಮಾಡಿದ ನಂತರ ಒಂದು ಹೊಸ ಪುಟ ಓಪನ್ ಆಗುತ್ತದೆ, ಅಲ್ಲಿ ನಿಮಗೆ ಮೇಲ್ಛಾವಣಿಯ ಯೋಜನೆಗಾಗಿ ಅನ್ವಯಿಸು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ನಿಮಗೆ ನೋಂದಣಿ ಫಾರಂ ಓಪನ್ ಆಗುತ್ತದೆ.
- ಅಲ್ಲಿ ನೀವು ನಿಮ್ಮ ರಾಜ್ಯದ ಹೆಸರು, ವಿದ್ಯುತ್ ಪೂರೈಕೆದಾರರ ಕಂಪನಿ ಹೆಸರನ್ನು ಆಯ್ಕೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ವಿಳಾಸ, ಹೆಸರು, ಮೊಬೈಲ್ ಸಂಖ್ಯೆ, ಮುಂತಾದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅದಲ್ಲದೆ ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ.
- ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಕೊನೆ ಹಂತದಲ್ಲಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಈ ರೀತಿ ನೀವು ಮಾಡಿದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ನೀವು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ಯಶಸ್ವಿ ಆದ ನಂತರ ನೀವು ಸೋಲಾರ್ ಪ್ಯಾನೆಲ್ ಅನ್ನು ಅಳವಡಿಕೆ ಮಾಡಿಕೊಂಡು ನಂತರ ಸರ್ಕಾರದಿಂದ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ನೀವೇನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೇವಾಕೇಂದ್ರ ಅಥವಾ ವಿದ್ಯುತ್ ಮಂಡಳಿಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಒದಗಿಸಿ ಮತ್ತು ಕೆಲವು ಫಾರಂ ಗಳನ್ನು ಭರ್ತಿ ಮಾಡಿ ಆಫ್ಲೈನ್ ಮೂಲಕ ಸುಲಭವಾಗಿ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು. ಈ ರೀತಿ ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದರಿಂದ ಏನಾದರೂ ಅರ್ಜಿಯಲ್ಲಿ ಸಮಸ್ಯೆ ಉಂಟಾದರೆ ಬೇಗ ಬಗೆಹರಿಸಬಹುದಾಗಿದೆ. ಈ ಕಾರಣದಿಂದ ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು ಉತ್ತಮ ಎಂದು ಹೇಳಬಹುದು.
ನೀವೇನಾದರೂ ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು ನಿಮ್ಮ ದಾಖಲೆಗಳನ್ನು ಒಂದರಿಂದ ಎರಡು ಬಾರಿ ಪರಿಶೀಲನೆ ಮಾಡಿ ಅರ್ಜಿಯನ್ನು ಸಲ್ಲಿಸಿ. ಇಲ್ಲವಾದಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ, ಈ ಕಾರಣದಿಂದ ಸರಿಯಾದ ದಾಖಲೆಯನ್ನು ನೀಡಿ. ಇದೇ ರೀತಿ ನೀವು ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಯೋಜನೆಯ ಎಲ್ಲಾ ಮಾಹಿತಿಯನ್ನು ಸುಲಭವಾಗಿ ಆನ್ಲೈನ್ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು ಮತ್ತು ನಿಮ್ಮ ಊರಿನ ಹತ್ತಿರವಿರುವ ವಿದ್ಯುತ್ ಮಂಡಳಿಗಳಿಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಬೇಕಾಗುವ ಅರ್ಹತೆ, ದಾಖಲೆ ಮುಂತಾದ ಮಾಹಿತಿಗಳನ್ನು ಸಹ ಆಫ್ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ.