Google Pay Loan: ಗೂಗಲ್ ಪೇ ಮೂಲಕ 1 ಲಕ್ಷ ರೂಪಾಯಿವರೆಗೆ ಲೋನ್ ಪಡೆಯಿರಿ…! ಇಲ್ಲಿದೆ ಸಂಪೂರ್ಣ ಮಾಹಿತಿ…

Google Pay Loan: ಗೂಗಲ್ ಪೇ ಮೂಲಕ 1 ಲಕ್ಷ ರೂಪಾಯಿವರೆಗೆ ಲೋನ್ ಪಡೆಯಿರಿ…! ಇಲ್ಲಿದೆ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ಭಾರತದಲ್ಲಿ ಹೆಚ್ಚಾಗಿ ಜನರು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಬಳಸುತ್ತಾರೆ, ಈಗ ಭಾರತೀಯ ಗೂಗಲ್ ಪೇ ಬಳಕೆದಾರರಿಗೆ ಸಾಲವನ್ನು ಒದಗಿಸುತ್ತಿದೆ. 15000 ದಿಂದ 1 ಲಕ್ಷದ ವರೆಗೂ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಸಾಲವನ್ನು ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು, ಅರ್ಹತೆ, ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಿಕೊಡಲಾಗಿದೆ.

ಸಾಲ ಸೌಲಭ್ಯ

ಪ್ರತಿಯೊಬ್ಬನಿಗೂ ಅನಿರೀಕ್ಷಿತ ಹಣದ ಅಗತ್ಯವು ಯಾವಾಗಲೂ ಬರುತ್ತದೆ ಮತ್ತು ಕೆಲವು ಕೆಲಸಗಳಿಗೆ ಹೆಚ್ಚಾಗಿ ನಾವು ಸಾಲವನ್ನು ಪಡೆಯುತ್ತೇವೆ.. ಸಾಲವನ್ನು ಪಡೆಯಲು ನಾವು ಹೆಚ್ಚಾಗಿ ಬ್ಯಾಂಕ್ ಗಳಿಗೆ ಹೋಗಿ ವೈಯಕ್ತಿಕ ಸಾಲವನ್ನು ಪಡೆಯುತ್ತೇವೆ. ಬ್ಯಾಂಕ್ ನಲ್ಲಿ ನಾವು ಸಾಲವನ್ನು ಪಡೆಯಲು ಹೆಚ್ಚಾಗಿ ದಾಖಲೆಗಳು, ಅಸ್ತಿ ಪತ್ರಗಳು, ವಾಹನಗಳು ಅಥವಾ ಮುಂತಾದ ದಾಖಲೆಯನ್ನು ನೀಡಿ ಸಾಲವನ್ನು ಪಡೆದುಕೊಳ್ಳುತ್ತೇವೆ. ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ನಾವು ವೈಯಕ್ತಿಕ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ನೀವೇನಾದರೂ ಗೂಗಲ್ ಪೇ ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸವು ಉತ್ತಮವಾಗಿದ್ದರೆ, ನೀವು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಒಂದು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ಗೂಗಲ್ ಪೇ ನ ಬಳಕೆದಾರರಿಗೆ ನೀಡಲಾಗುತ್ತದೆ.

ಗೂಗಲ್ ಪೇ ಲೋನ್

ಹೌದು ಗೆಳೆಯರೇ, ನೀವೇನಾದರೂ ಗೂಗಲ್ ಪೇ ಬಳಕೆದಾರರಾಗಿದ್ದರೆ 15000 ದಿಂದ 1 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ . ಈ ಸಾಲವನ್ನು ವಿಶೇಷವಾಗಿ ಸಣ್ಣ ವ್ಯಾಪಾರಿಗಳಿಗೆ ಉಪಯೋಗವಾಗುತ್ತದೆ ಎಂದು ಹೇಳಬಹುದು, ವ್ಯಾಪಾರಿಗಳು ವಸ್ತುಗಳನ್ನು ಖರೀದಿ ಮಾಡಲು, ಸರಬರಾಜುಗಳಿಗೆ ಖರೀದಿಸಲು ಅಥವಾ ಇನ್ನಿತರ ವ್ಯವಹಾರದ ಬೆಳವಣಿಗೆಗೆ ಹೂಡಿಕೆ ಮಾಡಲು ಹಣವನ್ನು ಬಯಸಿದರೆ ಈ ಸಾಲ ತುಂಬ ಉಪಯೋಗವಾಗುತ್ತದೆ ಎಂದು ಹೇಳಬಹುದು.

ಗೂಗಲ್ ಪೇ ಬಳಕೆದಾರರಿಗೆ ಗೂಗಲ್ ಪೇ ಅಪ್ಲಿಕೇಶನ್ ನಿಂದ ನೀಡುವ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಆದರೆ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನೀವು 1 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಗೂಗಲ್ ಪೇ ತನ್ನ ಗ್ರಾಹಕರಿಗೆ ಸಾಲವನ್ನು ನೀಡುವುದಿಲ್ಲ, ಬದಲಾಗಿ ಇದು ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇತರ ಬ್ಯಾಂಕ್ ಗಳಿಂದ ಸಾಲದ ಹಣಕಾಸು ಕಂಪನಿಗಳ ಮೂಲಕ ಸಾಲವನ್ನು ಒದಗಿಸಿ ಕೊಡಲಾಗುತ್ತದೆ. ಹೀಗಾಗಿ ನೀವೇನಾದರೂ ಸಾಲವನ್ನು ಪಡೆದುಕೊಳ್ಳಲು ಯಾವುದೇ ಬ್ಯಾಂಕ್ ತೆರೆಯಬೇಕಾಗಿಲ್ಲ ಮತ್ತು ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ. ನೀವು ಸುಲಭವಾಗಿ ಫೋನ್ ಪೇ ಅಪ್ಲಿಕೇಷನ್ ನಿಂದ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಒಂದು ಲಕ್ಷದವರೆಗೂ ಸಾಲವನ್ನು ಪಡೆದುಕೊಳ್ಳಬಹುದು. ಹಾಗಾದರೆ ಗೂಗಲ್ ಪ್ಲೇ ಅಪ್ಲಿಕೇಶನ್ ನಿಂದ ಸಾಲವನ್ನು ಪಡೆದುಕೊಳ್ಳಲು ಅರ್ಹತೆ ಮತ್ತು ದಾಖಲೆಗಳ ಬಗ್ಗೆ ಕೆಳಭಾಗದಲ್ಲಿ ತಿಳಿಸಲಾಗಿದೆ.

ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಹತೆ

ನೀವೇನಾದರೂ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಗೆ ನೀಡಲಾಗಿರುವ ಅರ್ಹತೆ ಹೊಂದಿದ್ದರೆ ಮಾತ್ರ ನೀವು ಗೂಗಲ್ ಪ್ಲೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳುವ ಅರ್ಜಿಯನ್ನು ಸಲ್ಲಿಸಬಹುದು.

  • ಮೊದಲು ನೀವು ಭಾರತದ ನಿವಾಸಿಯಾಗಿರಬೇಕು.
  • ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.
  • ಹೊಸ ಬಳಕೆದಾರರು ಅಥವಾ ಹೊಸ ಖಾತೆಯನ್ನು ಹೊಂದಿರುವವರು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ.
  • ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆಯಲು 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
  • ಅರ್ಜಿದಾರರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
  • ಮೊದಲೇ ನೀವು ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಅಥವಾ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಂಡಿರಬಾರದು ಅಥವಾ ಸಾಲ ಬಾಕಿ ಇರಬಾರದು.

ಈ ಎಲ್ಲಾ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ನೀವು ಗೂಗಲ್ ಪೇ ಅಪ್ಲಿಕೇಶನ್ ಅಲ್ಲಿ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು

ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಹೆಚ್ಚಿನ ದಾಖಲೆಗಳು ಬೇಕಾಗಿಲ್ಲ ಈ ಕೆಳಗೆ ನೀಡಲಾಗಿರುವ ಮುಖ್ಯ ದಾಖಲೆಗಳು ಇದ್ದರೆ ಸಾಕು.

  • ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಬ್ಯಾಂಕ್ ನ ವಿವರವನ್ನು ಹೊಂದಿರಬೇಕು.
  • ಆಧಾರ್ ಕಾರ್ಡ್ ಮತ್ತು ಬ್ಯಾಂಕಿಗೆ ಲಿಂಕ್ ಅಗಿರೋ ಮೊಬೈಲ್ ಸಂಖ್ಯೆ ಹೊಂದಿರಬೇಕು.
  • ಪ್ಯಾನ್ ಕಾರ್ಡ್ ಹೊಂದಿರಬೇಕು.
  • ಆಧಾರ್ ಕಾರ್ಡ್ ಹೊಂದಿರಬೇಕು [ಮುಖ್ಯವೇನಲ್ಲ].

ಮುಂತಾದ ದಾಖಲೆಗಳನ್ನು ಹೊಂದಿದ್ದರೆ ಸಾಕು ಸುಲಭವಾಗಿ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು.

ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ

ಮೊದಲೇ ಗೂಗಲ್ ಪೇ ಬಳಕೆದಾರರಾಗಿದ್ದರೆ ನೀವು ಸುಲಭವಾಗಿ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

  • ಮೊದಲು ನೀವು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಬೇಕಾಗುತ್ತದೆ.
  • ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಲೋನ್ ಎಂಬ ಆಪ್ಷನ್ ಅನ್ನು ಹುಡುಕಿ.
  • ನಂತರ ಲೋನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಈಗ ನಿಮಗೆ ಸಾಲದ ವಿಭಾಗದ ಪುಟವು ಕಾಣುತ್ತದೆ.
  • ಇಲ್ಲಿ ನೀವು ಪ್ಯಾನ್ ಕಾರ್ಡ್ ಮತ್ತು ಇನ್ನಿತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
  • ಒದಗಿಸಿದ ನಂತರ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಸಾಲದ ವಿವರವನ್ನು ನೀಡಲಾಗುತ್ತದೆ.
  • ಎಲ್ಲಾ ವಿವರಗಳು ಸರಿ ಹೊಂದಿದ್ದರೆ ನೀವು EMI ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ.
  • EMIಯನ್ನು ಆಯ್ಕೆ ಮಾಡಿಕೊಂಡು ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಿ.
  • ನಂತರ ಅರ್ಜಿಯನ್ನು ಸಲ್ಲಿಸಿ, ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಓಟಿಪಿಯನ್ನು ನಮೂದಿಸಿ.
  • ನಂತರ ನಿಮಗೆ ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಬ್ಯಾಂಕ್ ಅರ್ಜಿ ಪರಿಶೀಲಿಸುತ್ತದೆ.
  • ಅರ್ಜಿಯನ್ನು ಪರಿಶೀಲನೆ ಮಾಡಲು ಕೆಲವು ಸಮಯಗಳನ್ನು ತೆಗೆದುಕೊಳ್ಳುತ್ತದೆ, ನಂತರ ನಿಮ್ಮ ಬ್ಯಾಂಕ್ ಖಾತೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
  • ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಮೊದಲು ಶುಲ್ಕ ಮತ್ತು ಇತರ ಹಣವನ್ನು ಕಟ್ ಮಾಡಿ ನೀಡಲಾಗುತ್ತದೆ.
  • ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ ನಂತರ ಆ ಹಣವನ್ನು EMI ರೀತಿಯಲ್ಲಿ ಹಣವನ್ನು ಕಟ್ಟಬಹುದಾಗಿದೆ.

ಈ ರೀತಿ ನೀವು ಸುಲಭವಾಗಿ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಎಷ್ಟಿದ್ದರೆ ಸಾಲವನ್ನು ಪಡೆದುಕೊಳ್ಳಲು ಉತ್ತಮ

ಹೌದು ಗೆಳೆಯರೇ ನೀವೇನಾದರೂ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಆಸ್ತಿ, ಮುಂತಾದ ದಾಖಲೆಗಳ ಆಧಾರದ ಮೇಲೆ ಸಾಲವನ್ನು ನೀಡುತ್ತಾರೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಬ್ಯಾಂಕ್ ನಲ್ಲಿ ಸಹ ನಿಮಗೆ ಸಾಲವನ್ನು ಒದಗಿಸಲಾಗುತ್ತದೆ. ಬ್ಯಾಂಕ್ ಅಲ್ಲದೆ ಗೂಗಲ್ ಪೇ, ಫೋನ್ ಪೇ, ಇನ್ನಿತರ ಅಪ್ಲಿಕೇಶನ್ ಗಳು ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಸಾಲವನ್ನು ನೀಡಲಾಗುತ್ತದೆ.

ನಿಮ್ಮ ಹತ್ತಿರ 750ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಇದ್ದರೆ ಸಾಲವನ್ನು ಪಡೆದುಕೊಳ್ಳಲು ಉತ್ತಮ ಎಂದು ಹೇಳಬಹುದು. ನೀವೇನಾದರೂ ಮೊದಲೇ ಎಲ್ಲಾದರೂ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಸಾಲವನ್ನು ಪಡೆದುಕೊಂಡಿದ್ದರೆ ಮತ್ತು ಆ ಸಾಲವನ್ನು ಇನ್ನೂ ಬಾಕಿ ಉಳಿಸಿಕೊಂಡಿದ್ದರೆ ಗೂಗಲ್ ಪೇ ಅಪ್ಲಿಕೇಶನ್ ಅಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮೊದಲು ನೀವು ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಮತ್ತು ಎಲ್ಲಾದರೂ ಸಾಲವನ್ನು ಪಡೆದುಕೊಂಡಿದ್ದರೆ ಮೊದಲು ಆ ಸಾಲ ಮುಗಿದ ನಂತರ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೊದಲು ಇದನ್ನು ಗಮನಿಸಿ

ನೀವೇನಾದರೂ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂತ ಇದ್ದರೆ ಮೊದಲು ನೀವು ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ಮುಖ್ಯವಾಗಿ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ನೀಡುವುದು ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಈ ಕಾರಣದಿಂದ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಉತ್ತಮ ಎಂದು ಹೇಳಬಹುದು.

ಅದಲ್ಲದೆ ನೀವು ಮೊದಲೇ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ನಿಂದ ಎಲ್ಲಾದರೂ ಸಾಲವನ್ನು ಪಡೆದುಕೊಂಡು ಆ ಸಾಲವನ್ನು ಬಾಕಿ ಇರಿಸಿದರೆ ಅಥವಾ ಡ್ಯೂ ಮಾಡಿಕೊಂಡಿದ್ದರೆ ಅಂತವರು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಅರ್ಜಿ ಯಶಸ್ವಿಯಾಗುವುದಿಲ್ಲ. ಈ ಕಾರಣದಿಂದ ನೀವು ಮೊದಲೇ ಸಾಲವನ್ನು ಪಡೆದುಕೊಂಡಿದ್ದರೆ ಆ ಸಾಲವನ್ನು ಮುಗಿಸಿ ನಂತರ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಬ್ಯಾಂಕ್ ನಲ್ಲಿ ನೀವೇನಾದರೂ ಸಾಲವನ್ನು ಪಡೆದುಕೊಳ್ಳಲು ಹಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ, ಆದರೆ ಇಲ್ಲಿ ನೀವು ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಕೇವಲ 5 ನಿಮಿಷದಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Comment