Good news for Jio SIM users: ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್, ಏನಿದು ಸಿಹಿ ಸುದ್ದಿ ಬನ್ನಿ ತಿಳಿದುಕೊಳ್ಳೋಣ…!
ನಮಸ್ಕಾರ ಬಂಧುಗಳೇ ಭಾರತದಲ್ಲಿ ಕೆಲವು ಟೆಲಿಕಾಂ ಸಂಸ್ಥೆಗಳು ಇವೆ ಅದರಲ್ಲಿ ನಂಬರ್ ಒನ್ ಆದ ಜಿಯೋ ಟೆಲಿಕಾಂ ಕಂಪನಿಯು ಬಳಕೆದಾರರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಇನ್ನು ಹೆಚ್ಚಿನ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಜಿಯೋ ಕಂಪನಿಯು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಟೆಲಿಕಾಂ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಹೊಸ ರಿಯಾಯಿತಿಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ಸೆಳೆಯಬಹುದಂತಹ ಎಲ್ಲಾ ವಿಧಾನಗಳನ್ನು ಟೆಲಿಕಾಂ ಕಂಪನಿಗಳು ಮಾಡುತ್ತಿವೆ. ಜಿಯೋ ಕಂಪನಿಯು ತಮ್ಮ ಬಳಕೆದಾರರಿಗೆ ಹೊಸ ಯೋಜನೆಯನ್ನು ತೆಗೆದುಕೊಂಡು ಬಂದಿದೆ. ಈ ಯೋಜನೆಯಲ್ಲಿ ಮೂರು ರೀತಿಯಲ್ಲಿ ಹೊಸ ಯೋಜನೆಯ ರಿಚಾರ್ಜ್ ಅನ್ನು ತಂದಿದೆ.
ಜಿಯೋ ಕಂಪನಿಯ ಹೊಸ ಯೋಜನೆಗಳು
ಜಿಯೋ ಕಂಪನಿಯು ತಮ್ಮ ಬಳಕೆದಾರರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ. ಇನ್ನಷ್ಟು ಬಳಕೆದಾರರನ್ನು ಜಿಯೋ ಕಂಪನಿಯು ಸೆಳೆಯಲು ಹೊಸ ಪ್ಲಾನ್ ಅನ್ನು ಅನುಷ್ಠಾನ ತಂದಿದೆ. ₹123, ₹234, ₹1234 ಈ ಮೂರು ರೀತಿಯ ಮೊತ್ತದಲ್ಲಿ ಒಂದು ಹೊಸ ಯೋಜನೆಯನ್ನು ತಂದಿದೆ. ಹಾಗಾದರೆ ಅದರ ಬಗ್ಗೆ ತಿಳಿದುಕೊಳ್ಳೋಣ.
ಜಿಯೋ ಕಂಪನಿಯ ಮೂರು ಹೊಸ ಯೋಜನೆಗಳು
123 ರೂಗಳ ರಿಚಾರ್ಜ್
123 ರೂಗಳ ಹೊಸ ರಿಚಾರ್ಜ್ ಅನ್ನು ಜಿಯೋ ಕಂಪನಿಯು ತಂದಿದೆ. ಈ ಯೋಜನೆಯ ರಿಚಾರ್ಜ್ ಮಾಡಿಸಿದರೆ 28 ದಿನಗಳು ಅನ್ಲಿಮಿಟೆಡ್ ವಾಯ್ಸ್ ಕಾಲ್, 100 ಮೆಸೇಜ್ ಮತ್ತು ಪ್ರತಿದಿನ 500MB [ಅಂದರೆ 28 ದಿನಕ್ಕೆ 14 GB ಡಾಟಾ ಆಗುತ್ತದೆ]ಡೇಟಾವನ್ನು ನೀಡಲಾಗುತ್ತದೆ. ಮತ್ತು ಅದಲ್ಲದೆ ಜಿಯೋ ಸಿನಿಮಾ ಚಂದಾದಾರಿಕೆ ಅನ್ನು ಕೂಡ ಈ ಯೋಜನೆಯಲ್ಲಿ ನೀಡಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಜನರಿಗೆ ಉಪಯೋಗವಾಗಬಹುದು. ಈಗ 5g ಇರುವ ಯುಗದಲ್ಲಿ ಈ ಪ್ಲಾನ್ ಅನ್ನು ಬಳಸಿಕೊಂಡು ಉಚಿತ ಕರೆ ಮತ್ತು ಮೆಸೇಜ್ ಅನ್ನು ಬಳಸಿಕೊಂಡು 5g ಮೂಲಕ ಅನ್ಲಿಮಿಟೆಡ್ ಡೇಟಾವನ್ನು ಪಡೆದುಕೊಳ್ಳಬಹುದು.
234 ರೂಗಳ ರಿಚಾರ್ಜ್
123 ರೂಗಳ ಹೊಸ ರಿಚಾರ್ಜ್ ರೀತಿಯಲ್ಲಿ 234 ರೂಗಳ ರಿಚಾರ್ಜ್ ಅಂದರೆ 123 ರೀಚಾರ್ಜ್ ನಲ್ಲಿ 28 ದಿನಗಳು ನೀಡಲಾಗುತ್ತದೆ. 234 ರಿಚಾರ್ಜ್ ನಲ್ಲಿ 56 ದಿನಗಳು ನೀಡಲಾಗುತ್ತದೆ. ಈ ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡರೆ ನಿಮಗೆ 56 ದಿನಗಳು ಅನ್ಲಿಮಿಟೆಡ್ ವಾಯ್ಸ್ ಕಾಲ್, 300 ಮೆಸೇಜ್ ಮತ್ತು ಪ್ರತಿದಿನ 500GB [ಅಂದರೆ 56 ದಿನಕ್ಕೆ 28 GB ಸಿಗುತ್ತದೆ] ಡೇಟಾವನ್ನು ನೀಡಲಾಗುತ್ತದೆ. ಅದಲ್ಲದೆ ಈ ಯೋಜನೆಯನ್ನು ನೀವು ಪಡೆದುಕೊಂಡರೆ ಜಿಯೋ ಸಿನಿಮಾ ಚಂದಾದಾರಿಕೆ ಸಹ ಸಿಗಲಿದೆ. ಒಂದು ರೀತಿಯಲ್ಲಿ ಈ ಯೋಜನೆ ತುಂಬಾ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಹೇಳಬಹುದು.
1234 ರೂಗಳ ರಿಚಾರ್ಜ್
ನೀವು ಈ ಯೋಜನೆಯ ರಿಚಾರ್ಜ್ ಅನ್ನು ಮಾಡಿಸಿದರೆ ನಿಮಗೆ 336 ದಿನಗಳ ಕಾಲ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 300 ಮೆಸೇಜ್ ಇದರ ಜೊತೆಗೆ 28 ದಿನಗಳ ವರೆಗೆ ಅನ್ಲಿಮಿಟೆಡ್ sms ಸಹ ನೀವು ಮಾಡಬಹುದು. ಇದು ಒಂದು ರೀತಿಯಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ ಮತ್ತು ಪ್ರತಿದಿನ 500MB [ಅಂದರೆ 336 ದಿನಕ್ಕೆ 168 GB ಡೇಟಾ ಸಿಗುತ್ತದೆ]ಡೇಟಾವನ್ನು ಪಡೆದುಕೊಳ್ಳಬಹುದು. ಈ ಯೋಜನೆಯನ್ನು ನೀವು ಪಡೆದುಕೊಂಡರೆ ಜಿಯೋ ಸಿನಿಮಾ ಚಂದಾದಾರಿಕೆ ಅನ್ನು ಕೂಡ ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದು.
ಈ ಯೋಜನೆಗಳು ಒಂದು ರೀತಿಯಲ್ಲಿ ಜನರಿಗೆ ಉಪಯೋಗವಾಗಲಿದೆ. ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಈ ಮೂರು ಯೋಜನೆಗಳನ್ನು ತರುವುದರಿಂದ ಜಿಯೋ ಕಂಪನಿಯ ಗ್ರಾಹಕರು ಹೆಚ್ಚು ಹೆಚ್ಚು ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ನೀವೇನಾದರೂ ಮುಂದೆ ಈ ಯೋಜನೆಯನ್ನು ಪಡೆದುಕೊಳ್ಳಬೇಕೆಂದರೆ ಈ ಯೋಜನೆಯ ಮೇಲೆ ಸ್ವಲ್ಪ ಗಮನವನ್ನು ಇಟ್ಟು ಈ ಯೋಜನೆಯ ರಿಚಾರ್ಜ್ ಅನ್ನು ಮಾಡಿಕೊಳ್ಳಿ.
ಈ ಮೂರು ಯೋಜನೆ ಹೇಗೆ ಉಪಯೋಗವಾಗುತ್ತದೆ
ಹೌದು ಗೆಳೆಯರೇ ನನ್ನ ಪ್ರಕಾರ ಈ ಮೂರು ಯೋಜನೆ ತುಂಬಾ ಉಪಯೋಗವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಅದು ಹೇಗೆ ಎಂದರೆ ನಿಮ್ಮ ಹತ್ತಿರ 5g ಮೊಬೈಲ್ ಇದ್ದು ಈಗ ಭಾರತದಲ್ಲಿ ಅನ್ಲಿಮಿಟೆಡ್ 5g ಇರುವುದರಿಂದ ಈ ಯೋಜನೆ ಉಪಯೋಗವಾಗುತ್ತದೆ. ಅಂದರೆ ನೀವು ಮೊದಲನೇ ಯೋಜನೆಯ ರಿಚಾರ್ಜ್ ಮಾಡಿದರೆ ನಿಮಗೆ 28 ದಿನಗಳ ಕಾಲ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಮೆಸೇಜ್ ಸಿಕ್ಕೆ ಸಿಗುತ್ತದೆ ಆದರೆ ಡೇಟಾ ವಿಷಯಕ್ಕೆ ಬಂದರೆ ಒಂದು ದಿನಕ್ಕೆ ಕೇವಲ 500MB ಆಗಿರುವುದರಿಂದ ಅಂತಹ ಸಮಯದಲ್ಲಿ ನಿಮ್ಮ ಹತ್ತಿರ 5g ಮೊಬೈಲ್ ಇದ್ದರೆ ಅನ್ಲಿಮಿಟೆಡ್ 5g ಡಾಟಾವನ್ನು ಪಡೆದುಕೊಳ್ಳಬಹುದು. ಅಂತವರಿಗೆ ಈ ಯೋಜನೆ ಉಪಯೋಗವಾಗುತ್ತದೆ ಎಂದು ನಾನು ಭಾವಿಸುತ್ತೇನೆ.
ಭಾರತದಲ್ಲಿ ಕೆಲವು ತಿಂಗಳುಗಳ ಕಾಲ ಮಾತ್ರ 5g ಅನ್ಲಿಮಿಟೆಡ್ ಇರುವುದರಿಂದ ನೀವು ಮೊದಲನೇ ಹಂತದ ಅಥವಾ ಎರಡನೇ ಹಂತದ ಯೋಜನೆಯ ರಿಚಾರ್ಜ್ ಮಾಡಿದರೆ ಅದು ತುಂಬಾ ಒಳ್ಳೆಯದು ಎಂದು ಹೇಳಬಹುದು. ಏಕೆಂದರೆ ಕೆಲವು ತಿಂಗಳು ಮಾತ್ರ ಅನ್ಲಿಮಿಟೆಡ್ ಇರುವುದರಿಂದ ಇದು ಉಪಯೋಗವಾಗುತ್ತದೆ. ನೀವೇನಾದರೂ ಮುಂದೆ ಈ ರಿಚಾರ್ಜ್ ಮಾಡಿಕೊಳ್ಳಬೇಕೆಂದರೆ 5g ಯೂಸರ್ಸ್ ಗಳಿಗೆ ಇದು ತುಂಬಾ ಒಳ್ಳೆಯ ಯೋಜನೆ ಎಂದು ಹೇಳಬಹುದು.
ಈ ಕೆಲವು ಯೋಜನೆಗಳ ರಿಚಾರ್ಜ್ ಮಾಡಿಕೊಂಡರೆ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಎಲ್ಲವೂ ಫ್ರೀ
ಹೌದು ಗೆಳೆಯರೇ ನೀವೇನಾದರೂ ಜಿಯೋ ಬಳಕೆದಾರರಾಗಿದ್ದರೆ ಅಂತವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಈ ಯೋಜನೆಯು ಕೆಲವು ತಿಂಗಳುಗಳು ಹಿಂದೆಯೇ ನೀಡಲಾಗಿತ್ತು, ಆದರೆ ಇದುವರೆಗೂ ಗೊತ್ತಿಲ್ಲದ ಗ್ರಾಹಕರಿಗೆ ಇದು ಉಪಯೋಗವಾಗಬಹುದು ಎಂದು ನಾನು ಭಾವಿಸುತ್ತೇನೆ. ನೀವು ರಿಚಾರ್ಜ್ ಮಾಡುವ ಮೊದಲು ನಾನು ನಿಮಗೆ ಹೇಳುವ ಕೆಲವು ರಿಚಾರ್ಜ್ ಗಳನ್ನು ಮಾಡಿದರೆ ನಿಮಗೆ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಫ್ರೀಯಾಗಿ ಸಿಗುತ್ತದೆ. ಈ ಯೋಜನೆ ಉಪಯೋಗವಾದರೆ ಮಾತ್ರ ನೀವು ಬಳಸಿ.
OTT ಯ ಬಳಕೆಯ ಬೇಡಿಕೆಯನ್ನು ನೋಡಿ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಉಚಿತ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಅನ್ನು ನೀಡುತ್ತಿದ್ದಾರೆ. ಇವುಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ನೀವು ಜಿಯೋ ಕಂಪನಿಯ ಕೆಲವು ರಿಚಾರ್ಜ್ ಗಳನ್ನು ಮಾಡಿಸಿದರೆ ಮಾತ್ರ ಉಚಿತವಾಗಿ ಪಡೆದುಕೊಳ್ಳಬಹುದು. ಹಾಗಾದ್ರೆ ಜಿಯೋ ಕಂಪನಿಯ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಸಿಗುವ ಉಚಿತ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ರಿಪೇಯ್ಡ್ ಯೋಜನೆ
- ಜಿಯೋ ಕಂಪನಿಯ ರೂ 1499 ಪ್ರಿಪೇಯ್ಡ್ ಯೋಜನೆ: ಈ ಯೋಜನೆಯನ್ನು ನೀವು ಪಡೆದುಕೊಂಡರೆ 84 ದಿನಗಳ ಕಾಲ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನ 3 GB ಡೇಟಾವನ್ನು ಪಡೆದುಕೊಳ್ಳುತ್ತೀರಾ ಅದಲ್ಲದೆ ಈ ಯೋಚನೆ ಅಡಿಯಲ್ಲಿ ಉಚಿತವಾಗಿ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಅನ್ನು 30 ದಿನಗಳ ವರೆಗೆ ಉಚಿತವಾಗಿ ಪಡೆದುಕೊಳ್ಳುತ್ತೀರಾ. ಈ ಯೋಜನೆಯು ಜನರಿಗೆ ಉಪಯೋಗವಾಗಬಹುದು ಎಂದು ಹೇಳಬಹುದು. ಏಕೆಂದರೆ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಬಳಸುವ ಅಭ್ಯರ್ಥಿಗಳಿಗೆ ಈ ಯೋಜನೆ ತುಂಬಾ ಒಳ್ಳೆಯದು.
- ಜಿಯೋ ಕಂಪನಿಯ ರೂ 999 ಪ್ರಿಪೇಯ್ಡ್ ಯೋಜನೆ: ಈ ಯೋಜನೆಯ ರಿಚಾರ್ಜ್ ಅನ್ನು ನೀವು ಮಾಡಿಕೊಂಡರೆ ನಿಮಗೆ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ನೀಡಲಾಗುತ್ತದೆ. ಅದಲ್ಲದೆ ಉಚಿತವಾಗಿ ಹಾಫ್ ಸ್ಟಾರ್ ಚಂದಾದಾರಿಕೆ 30 ದಿನಗಳ ಕಾಲ ಸೇವೆಯನ್ನು ಪಡೆದುಕೊಳ್ಳಬಹುದು.
- ಜಿಯೋ ಕಂಪನಿಯ 2499 ಪ್ರಿಪೇಯ್ಡ್ ಯೋಜನೆ: ಈ ಯೋಜನೆಯ ರಿಚಾರ್ಜ್ ಅನ್ನು ನೀವು ಪಡೆದುಕೊಂಡರೆ ನಿಮಗೆ ಅನಿಯಮಿತ ಡೇಟಾ ಕರೆ ಮತ್ತು ಉಚಿತವಾಗಿ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್) ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆ ಅನ್ನು 30 ದಿನಗಳ ಕಾಲ ವರೆಗೆ ಪಡೆದುಕೊಳ್ಳಬಹುದು.
ಪೋಸ್ಟ್‌ಪೇಯ್ಡ್ ಯೋಜನೆ
- ಜಿಯೋ ಕಂಪನಿಯ ರೂ 599 ಪೋಸ್ಟ್‌ಪೇಯ್ಡ್ ಯೋಜನೆ: ಈ ಯೋಜನೆಯನ್ನು ನೀವು ಪಡೆದುಕೊಂಡರೆ ನಿಮಗೆ ಅನಿಯಮಿತ ಡೇಟಾ ಮತ್ತು ಉಚಿತ ಕರೆ ಗಳನ್ನು ನೀಡಲಾಗುತ್ತದೆ. ಅದರ ಜೊತೆಗೆ ಹಾಟ್‌ಸ್ಟಾರ್ ಚಂದಾದಾರಿಕೆಅನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ.
- ಜಿಯೋ ಕಂಪನಿಯ ರೂ 899 ಪೋಸ್ಟ್‌ಪೇಯ್ಡ್ ಯೋಜನೆ: ಈ ಯೋಜನೆಯನ್ನು ನೀವು ಪಡೆದುಕೊಂಡರೆ ನಿಮಗೆ ಅನಿಯಮಿತ ಡೇಟಾ ಅನ್ಲಿಮಿಟೆಡ್ ಕರೆಗಳು ಹಾಗೆಯೇ ಹಾಟ್‌ಸ್ಟಾರ್ ಚಂದಾದಾರಿಕೆ ಅನ್ನು ಸಹ ಪಡೆದುಕೊಳ್ಳಬಹುದು.
- ಜಿಯೋ ಕಂಪನಿಯ ರೂ 999 ಪೋಸ್ಟ್‌ಪೇಯ್ಡ್ ಯೋಜನೆ: ಈ ಯೋಜನೆಯನ್ನು ನೀವು ಪಡೆದುಕೊಂಡರೆ ನಿಮಗೆ ಅನಿಯಮಿತ ಡೇಟಾ ಮತ್ತು ಅನ್ಲಿಮಿಟೆಡ್ ಕರೆ ಸಿಗುತ್ತದೆ. ಹಾಗೆಯೇ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆ ಅನ್ನು ಸಹ ಸಿಗುತ್ತದೆ.
- ಜಿಯೋ ಕಂಪನಿಯ ರೂ 1499 ಪೋಸ್ಟ್‌ಪೇಯ್ಡ್ ಯೋಜನೆ: ಈ ಯೋಜನೆಯ ನೀವು ಪಡೆದುಕೊಂಡರೆ ನಿಮಗೆ ಅನಿಯಮಿತ ಡೇಟಾ ಮತ್ತು ಉಚಿತ ಕರೆಗಳು ಸಿಗುತ್ತದೆ ಅದಲ್ಲದೆ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆ ಸೇವೆಯನ್ನು ಪಡೆದುಕೊಳ್ಳಬಹುದು.
ನೀವು ಜಿಯೋ ಕಂಪನಿಯ ಬಳಕೆದಾರರಾಗಿದ್ದು ನೀವು ಹೆಚ್ಚಾಗಿ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆ ಅನ್ನು ನೋಡುತ್ತಿದ್ದರೆ, ಅಂತವರಿಗೆ ಒಂದು ರೀತಿಯಲ್ಲಿ ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈ ಮೇಲೆ ನೀಡಿರುವ ಕೆಲವು ಯೋಜನೆಗಳ ರಿಚಾರ್ಜ್ ಅನ್ನು ಮಾಡಿಕೊಂಡರೆ ನೀವು ಸುಲಭವಾಗಿ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆ ಅನ್ನು ಕೆಲವು ದಿನಗಳ ವರೆಗೆ ನೋಡಬಹುದು. ಜಿಯೋ ಕಂಪನಿಯ ಬಳಕೆದಾರರಿಗೆ ಉಪಯೋಗವಾಗಲಿ ಎಂದು ಜಿಯೋ ಕಂಪನಿಯು ಒಂದು ಹೊಸ ಯೋಜನೆಯನ್ನು ತಂದಿದೆ. ಇದರಿಂದ ಇನ್ನಷ್ಟು ಬಳಕೆದಾರರನ್ನು ಸೆಳೆಯಲು ಜಿಯೋ ಕಂಪನಿಯ ಮುಂದಾಗಿದೆ.
ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆ ಉಚಿತವಾಗಿ ಬಳಕೆ ಮಾಡುವ ಯೋಜನೆ ಕೆಲವು ತಿಂಗಳಗಳ ಹಿಂದೆಯೇ ನೀಡಲಾಗಿತ್ತು. ಆದರೆ ಕೆಲವು ಜನರಿಗೆ ಈ ಯೋಜನೆಯ ಬಗ್ಗೆ ಗೊತ್ತಿಲ್ಲ ಅಂಥವರಿಗೆ ಈ ಮಾಹಿತಿ ಉಪಯೋಗವಾಗಬಹುದು ಎಂದು ನಾನು ಭಾವಿಸುತ್ತೇನೆ. ಹಾಗೆಯೇ ಯುಗಾದಿ ಹಬ್ಬದ ಪ್ರಯುಕ್ತ ಭಾರತದ ಜಿಯೋ ಸಿಮ್ ಬಳಕೆದಾರರಿಗೆ ಜಿಯೋ ಕಂಪನಿಯ ಸಿಹಿ ಸುದ್ದಿ ನೀಡಿದೆ. ಅಂದರೆ 3 ಹಂತದಲ್ಲಿ ಹೊಸ ಯೋಜನೆ ತಂದಿದ್ದು ಇದರಲ್ಲಿ ನೀವು ಯಾವ ಯೋಜನೆಯನ್ನು ಪಡೆದುಕೊಂಡರು ಸಹ ಉಪಯೋಗವಾಗಲಿದೆ. ಅಂದರೆ ನಿಮ್ಮ ಹತ್ತಿರ 5g ಮೊಬೈಲ್ ಇದ್ದರೆ ಅಂತವರು ಈ ಮೂರು ಯೋಜನೆಯಲ್ಲಿ ಯಾವುದಾದರೂ ಒಂದು ಯೋಜನೆಯ ರಿಚಾರ್ಜ್ ಅನ್ನು ಮಾಡಿಸಿಕೊಂಡರೆ ಅಂತವರಿಗೆ ಉಪಯೋಗವಾಗಲಿದೆ. ಅಂದರೆ 5g ಬಳಕೆದಾರರಿಗೆ ಅನ್ಲಿಮಿಟೆಡ್ ಡೇಟಾ ಇರುವುದರಿಂದ ಈ ಯೋಜನೆ ಉಪಯೋಗವಾಗಲಿದೆ.
ನಿಮ್ಮ ಸ್ನೇಹಿತರು ಅಥವಾ ಗೆಳೆಯರು ಹೆಚ್ಚಾಗಿ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆ ಯನ್ನು ಬಳಕೆ ಮಾಡುತ್ತಿದ್ದರೆ ಅಂತವರಿಗೆ ಈ ಮಾಹಿತಿಯನ್ನು ತಿಳಿಸಿ ಇದರಿಂದ ಅವರಿಗೆ ಉಪಯೋಗವಾಗಬಹುದು. ಹಾಗೆಯೇ ಜಿಯೋ ಕಂಪನಿಯಿಂದ ನೀಡಿರುವ ಹೊಸ ಯೋಜನೆಗಳ ಬಗ್ಗೆಯೂ ಸಹ ನಿಮ್ಮ ಗೆಳೆಯರಿಗೆ ತಿಳಿಸಿ. ಜಿಯೋ ಕಂಪನಿಯು ಅವರ ಬಳಕೆದಾರರಿಗೆ ಒಂದು ರೀತಿಯಲ್ಲಿ ಸಿಹಿ ಸುದ್ದಿ ಎಂದು ಹೇಳಬಹುದು. ಈ ಯೋಜನೆ ಕೆಲವರಿಗೆ ಉಪಯೋಗವಾಗುತ್ತದೆ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು