Gruhalakshmi Scheme: 8ನೇ ಕಂತಿನ 2000 ಹಣ ಬಿಡುಗಡೆ, ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಬಿಗ್ ಅಪ್ಡೇಟ್..!

Gruhalakshmi Scheme: 8ನೇ ಕಂತಿನ 2000 ಹಣ ಬಿಡುಗಡೆ, ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಬಿಗ್ ಅಪ್ಡೇಟ್..!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಪಯೋಗವಾಗಲಿ ಎಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ತಿಂಗಳಿಗೆ 2000 ಹಣವನ್ನು ನೀಡುತ್ತಿದ್ದಾರೆ. ಇದುವರೆಗೂ ಹಲವು ಮಹಿಳೆಯರು ಬರೋಬ್ಬರಿ 14000 ಹಣವನ್ನು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪಡೆದುಕೊಂಡಿದ್ದಾರೆ. ಹಲವು ಮಹಿಳೆಯರು ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿನಂತೆ 7 ಕಂತಿನವರೆಗೂ ಹಣವನ್ನು ಪಡೆದುಕೊಂಡಿದ್ದಾರೆ, ಆದರೆ ಕೆಲವು ಮಹಿಳೆಯರು ಒಂದಿಷ್ಟು ಸಮಸ್ಯೆಗಳಿಂದ ಆರು ತಿಂಗಳು ಆದರೂ ಸಹ ಇದುವರೆಗೂ ಹಣವನ್ನು ಪಡೆದುಕೊಂಡಿಲ್ಲದ ಮಹಿಳೆಯರಿಗೆ ಬೇಸರ ಉಂಟಾಗಿದೆ. ಇದರಲ್ಲೂ ಕೆಲವು ಮಹಿಳೆಯರು ಎರಡು ಅಥವಾ ಮೂರು ಕಂತಿನ ಹಣ ಬಂದಿದೆ, ಇನ್ನು ಉಳಿದ ಹಣ ಬಂದಿಲ್ಲ ಎಂಬ ಮಹಿಳೆಯರು ಸಹ ಇದ್ದಾರೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಏಕೆ ಹಣ ಬರುತ್ತಿಲ್ಲ ಮತ್ತು ಎಂಟನೇ ಕಂತಿನ ಹಣ ಯಾವಾಗ ಬರಲಿದೆ. ಎಲ್ಲಾ ಮಾಹಿತಿಯನ್ನು ಈ ಕೆಳಭಾಗದಲ್ಲಿ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆ

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಮನೆಯ ಯಜಮಾನನಿಗೆ 2000 ಹಣವನ್ನು ನೀಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ಕುಳಿತು ಅಡುಗೆ ಕೆಲಸ ಮಾಡಿಕೊಂಡು ಸಂಸಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಈ ಯೋಜನೆಯ ಹಣ ಉಪಯೋಗವಾಗುತ್ತದೆ.

ಈ ಯೋಜನೆ ಪ್ರಾರಂಭವಾಗಿ 7 ತಿಂಗಳು ಆಗಿದೆ ಇದುವರೆಗೂ ಪ್ರತಿ ತಿಂಗಳು 2000 ದಂತೆಯೇ 14000 ಹಣವನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಇದೀಗ 8ನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ, ಈಗಾಗಲೇ ಸುಮಾರು 20 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ತಲುಪಿದೆ. ಎಂಟನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಏಪ್ರಿಲ್ ಮೊದಲ ವಾರದಲ್ಲಿ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮವಾಗಲಿದೆ.

ನಿಮಗೇನಾದರೂ 7ನೇ ಕಂತಿನ ಹಣ ಇನ್ನೂ ಬಂದಿಲ್ಲವೆನೆಂದರೆ 7ನೇ ಕಂತಿನ ಹಣ ಮತ್ತು 8ನೇ ಕಂತಿನ ಹಣ ಒಟ್ಟಿಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಬರಲಿದೆ, ಹಾಗಾದರೆ ಇದುವರೆಗೂ ಗೃಹಲಕ್ಷ್ಮಿ ಯೋಚನೆಯಲ್ಲಿ ಹಣ ಬಂದಿಲ್ಲವೆಂದರೆ ಈ ಕೆಳಗಿನ ಕಾರಣಕ್ಕೆ ನೀವು ಒಳಗಾಗಿರಬಹುದು.

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೆಂದರೆ ಈ ಕೆಲಸ ಮಾಡಿ

ಇದುವರೆಗೂ ನಿಮಗೆ ಗೃಹಲಕ್ಷ್ಮಿ ಯೋಚನೆ ಹಣ ಬಂದಿಲ್ಲವೆಂದರೆ ಗೃಹಲಕ್ಷ್ಮಿ ಯೋಜನೆಯ DBT ಹಣ ಆಟೋಮೆಟಿಕ್ ಪ್ರೋಸೆಸ್ ಆಗಿದ್ದು. ಈ ಯೋಜನೆಯಲ್ಲಿ ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿರಬೇಕು, ಒಂದು ವೇಳೆ ನಿಮ್ಮ ಹೆಸರು ತಪ್ಪಾಗಿದ್ದು ಅಥವಾ ಬ್ಯಾಂಕ್ ವಿವರಗಳು ತಪ್ಪಾಗಿದು, ಈಕೆವೈಸಿ [ekyc] ಆಗದೆ ಇದ್ದರೆ ಈ ಯೋಜನೆಯಲ್ಲಿ ಹಣ ಬಿಡುಗಡೆ ಆದರೂ ಸಹ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ. ನಿಮ್ಮ ದಾಖಲೆಗಳು ಆರಂಭದಲ್ಲಿಯೇ ಸರಿಯಾಗಿ ಕೊಟ್ಟಿದ್ದಾರೆ ಮಿಸ್ ಆಗದೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಹಾಗಾಗಿ ನೀವೇನಾದರೂ ಈ ಕೆಳಗೆ ನೀಡಿರುವ ಕೆಲಸವನ್ನು ಮಾಡಿಲ್ಲವೆಂದರೆ ಆದಷ್ಟು ಬೇಗ ಮಾಡಿಕೊಳ್ಳಿ.

  • ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ನೀವು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಲು ಸರ್ಕಾರ ಉಚಿತವಾಗಿ ಜೂನ್ 14ರ ವರೆಗೆ ಅವಕಾಶ ನೀಡಿದೆ. ಹೌದು ನೀವು ಆಧಾರ್ ಕಾರ್ಡ್ ಮಾಡಿ 10 ವರ್ಷ ಹಳೆಯದಾಗಿದ್ದರೆ, ಅಂತವರು ಆಧಾರ್ ಕಾರ್ಡನ್ನು ಆದಷ್ಟು ಬೇಗ ಅಪ್ಡೇಟ್ ಮಾಡಿಕೊಳ್ಳಿ ಇದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಚನೆ ಹಣ ಬರದೆ ಇರಲು ಈ ಕಾರಣವೂ ಸಹ ಆಗಿರಬಹುದು.
  • ಬ್ಯಾಂಕ್ ಖಾತೆಗೆ ಈಕೆವೈಸಿ [ekyc] ಕಡ್ಡಾಯವಾಗಿರುವುದರಿಂದ ಆದಷ್ಟು ಬೇಗ ನಿಮ್ಮ ಬ್ಯಾಂಕ್ ಖಾತೆಗೆ ಈಕೆವೈಸಿ [ekyc] ಯನ್ನು ಮಾಡಿಸಿಕೊಳ್ಳಿ, ಇದರಿಂದ ಸಹ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿಲ್ಲ.
  • ಒಂದು ವೇಳೆ ನೀವು ಈಕೆವೈಸಿ [ekyc] ಮಾಡಿದರು ಸಹ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲವೆಂದರೆ ಮತ್ತೊಮ್ಮೆ ನಿಮ್ಮ ಬ್ಯಾಂಕಿಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ npci mapping ಮಾಡಿಸಿಕೊಳ್ಳಿ.

ದಾಖಲೆಗಳು ಸರಿಯಾಗಿದ್ದರೂ ಸಹ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ

ಹೌದು ಗೆಳೆಯರೇ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಸರಿಯಾದ ದಾಖಲೆಗಳನ್ನು ಒದಗಿಸಿದರು ಸಹ ಇದುವರೆಗೂ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬಂದಿಲ್ಲ, ಆದರೆ ಸಾಕಷ್ಟು ಜನರಿಗೆ ಹಣ ಬಂದಿಲ್ಲವೆಂದರೆ ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ. ಆದ್ದರಿಂದ ಈ ಕಾರಣವನ್ನು ತಿಳಿದುಕೊಳ್ಳಲು ನೀವು ನಿಮ್ಮ ಊರಿನ ಹತ್ತಿರ ಇರುವ ಸಿಡಿಪಿಓ (CDPO) ಕಚೇರಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಈ ಕಾರಣವನ್ನು ತಿಳಿಸಿದರೆ ಏನು ದಾಖಲೆ ತಪ್ಪಾಗಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಮನೆಯಲ್ಲಿ ಅತ್ತೆ ಮರಣ ಹೊಂದಿದ್ದರೆ ಹಣ ಯಾರಿಗೆ ಬರುತ್ತದೆ

ಗೃಹಲಕ್ಷ್ಮಿ ಯೋಜನೆಯು ಮನೆಯ ಯಜಮಾನಿಗೆ ಅಥವಾ ಹಿರಿಯ ಮಹಿಳೆಯರಿಗೆ ಈ ಯೋಜನೆಯ ಹಣವು ಅವರ ಬ್ಯಾಂಕ್ ಖಾತೆಗೆ ಜಮವಾಗುತ್ತದೆ. ಈ ಯೋಜನೆ ಪ್ರಾರಂಭವಾದ ಸಮಯದಲ್ಲಿ ಸಾಕಷ್ಟು ಹಿರಿಯ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದರು. ಒಂದು ವೇಳೆ ಹಿರಿಯ ಮಹಿಳೆಯರು ಮರಣ ಹೊಂದಿದ್ದರೆ, ಅವರ ಬ್ಯಾಂಕ್ ಖಾತೆಗೆ ಹಣ ಜಮಾವಾಗಬೇಕಾದ ಹಣ ಯಾರ ಬ್ಯಾಂಕ್ ಅಕೌಂಟ್ ಗೆ ಜಮಾವಾಗುತ್ತದೆ, ಎಂಬ ಗೊಂದಲ ಎಲ್ಲರಿಗೂ ಇದೆ. ಈಗ ಸರ್ಕಾರ ಪರಿಹಾರ ನೀಡಿದೆ ಒಂದು ವೇಳೆ ಕುಟುಂಬದ ಅತ್ತೆ ಮರಣ ಹೊಂದಿದ್ದರೆ, ಈ ಯೋಜನೆಯ ಹಣವನ್ನು ಕುಟುಂಬದ ಹಿರಿಯ ಸೊಸೆಯ ತನ್ನ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡಿಸಿಕೊಳ್ಳಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.

8ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ

7ನೇ ಕಂತಿನ ಹಣ ಫೆಬ್ರವರಿ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೂ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾವಾಗಿದೆ. ಹಾಗೆಯೇ 8ನೇ ಕಂತಿನ ಹಣವು ಸಹ ಸದ್ಯದಲ್ಲಿ ಬಿಡುಗಡೆ ಆಗಲಿದೆ ಅಂದರೆ ಏಪ್ರಿಲ್ ನ ಮೊದಲನೇ ವಾರ ಅಥವಾ ಎರಡನೇ ವಾರದಲ್ಲಿ 8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮವಾಗಲಿದೆ. ಒಂದು ವೇಳೆ 7ನೇ ಕಂತಿನ ಹಣ ಇದುವರೆಗೂ ಬಂದಿಲ್ಲವೆಂದರೆ 7 ಮತ್ತು 8ನೇ ಕಂತಿನ ಹಣ ಒಟ್ಟಿಗೆ ಬರಲಿದೆ.

ಮೊಬೈಲ್ ಮೂಲಕ ಗೃಹಲಕ್ಷ್ಮಿ ಹಣವನ್ನು ಸ್ಟೇಟಸ್ ಚೆಕ್ ಮಾಡಿ

ಸರ್ಕಾರದ ಅಧಿಕೃತ ವೆಬ್ಸೈಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಗೃಹಲಕ್ಷ್ಮಿ ಯೋಜನೆಯDBT ಅನ್ನು ನೋಡಿಕೊಳ್ಳಬಹುದು. ನಿಮ್ಮ ಹತ್ತಿರ ವಿರುವ ಮೊಬೈಲ್ ಮೂಲಕ ಕರ್ನಾಟಕ ಸರ್ಕಾರ [DBT karnataka] ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ನಂತರ ಈ ಅಪ್ಲಿಕೇಶನ್ ಅನ್ನು ಓಪನ್ ಮಾಡಿ, ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.

ನಂತರ ಪಾಸ್ವರ್ಡ್ ಅನ್ನು ಸೆಟ್ ಮಾಡುವ ಮೂಲಕ್ಕ ಈ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಗೃಹಲಕ್ಷ್ಮಿ ಯೋಚನೆಯ ಹಣದ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

ಹೊಸ ಅರ್ಜಿ ಸಲ್ಲಿಸಲು ಕೂಡ ಅವಕಾಶವಿದೆ

ಹೌದು ಗೆಳೆಯರೇ ಇದುವರೆಗೂ ನೀವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿಲ್ಲವೆಂದರೆ ಹೊಸ ಅರ್ಜಿ ಸಲ್ಲಿಸಲು ಕೂಡ ಸರ್ಕಾರದಿಂದ ಅವಕಾಶ ನೀಡಿದೆ. ಕೆಲವು ಸಮಸ್ಯೆಗಳಿಂದ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ, ಅಂಥವರಿಗೆ ಸರ್ಕಾರದಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಒಂದು ವೇಳೆ ಮೊದಲೇ ಅರ್ಜಿಯನ್ನು ಸಲ್ಲಿಸಿ ಅರ್ಜಿ ಮಾನ್ಯ ಆಗದೆ ಇದ್ದಲ್ಲಿ ಅಂತವರು ಮತ್ತೊಮ್ಮೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು. ನೀವು ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಯನ್ನು ಸಿದ್ದ ಮಾಡಿಕೊಂಡು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಮುಂದಿನ ತಿಂಗಳಿನಂತೆ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗುತ್ತದೆ.

ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ

ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಹಂತದಲ್ಲಿ ಬಂದಿದ್ದು, ಕೆಲವು ಮಹಿಳೆಯರು ತಿಂಗಳಿನ ಕೊನೆಯ ವಾರದಲ್ಲಿ ಹಣ ಜಮಾವಾಗುತ್ತದೆ. ಉದಾರಣೆಗೆ ಹೇಳಬೇಕೆಂದರೆ ಫೆಬ್ರವರಿ ತಿಂಗಳಲ್ಲಿ ಜಮವಾದ ಹಣ ಮಾರ್ಚ್ ತಿಂಗಳಿನ ಕೊನೆಯ ಹಂತದಲ್ಲಿ ಬ್ಯಾಂಕ್ ಖಾತೆಗೆ ಹಣ ಬಿಡುಗಡೆಯಾಗುತ್ತದೆ. ಒಂದು ವೇಳೆ ನಿಮಗೆ ಹಣ ಬೇಗ ಬ್ಯಾಂಕ್ ಗೆ ಜಮವಾಗಿದ್ದರೆ, ಯಾವುದೇ ಬ್ಯಾಂಕ್ ನೋಟಿಫಿಕೇಶನ್ ಬರದಿದ್ದರೆ. ತಕ್ಷಣ ನೀವು ನಿಮ್ಮ ಬ್ಯಾಂಕಿಗೆ ಹೋಗಿ ನಿಮ್ಮ ಪಾಸ್ ಬುಕ್ ಅಪ್ಡೇಟ್ ಮಾಡಿಸಿಕೊಳ್ಳಿ. ಇದರಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕಿಗೆ ಜಮವಾಗಿದೆಯಾ ಇಲ್ಲವೋ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಈ ತಪ್ಪುಗಳನ್ನು ಮಾಡಬೇಡಿ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇದುವರೆಗೂ ಹಣ ಬಂದಿಲ್ಲವೆಂದರೆ ಈ ಯೋಜನೆಗೆ ತಪ್ಪಾದ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಅಥವಾ ಈ ಮೇಲೆ ನೀಡಿರುವ ಕೆಲವು ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಮತ್ತು ಈ ಯೋಜನೆ ಅಡಿಯಲ್ಲಿ ನೀವು ಹಣವನ್ನು ಪಡೆದುಕೊಳ್ಳಲು ಈ ಕೆಲವು ತಪ್ಪುಗಳಿಗೆ ಒಳಗೊಂಡಿರುತ್ತೀರ ಅಂದರೆ ಈಕೆವೈಸಿ [[ekyc], npci mapping ಮತ್ತು ನೀವು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಂಡಿಲ್ಲವೆಂದರೆ ಆದಷ್ಟು ಬೇಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ಕೆಲವು ಸಮಸ್ಯೆಗಳಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ.

ಒಂದು ವೇಳೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಅರ್ಜಿ ಸರಿಯಾಗಿಲ್ಲವೆಂದರೆ ಮತ್ತೊಮ್ಮೆ ನೀವು ಹೊಸದಾಗಿ ಹೊಸ ದಾಖಲೆ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಇದುವರೆಗೂ ಅರ್ಜಿ ಸಲ್ಲಿಸಿಲ್ಲದ ಅಭ್ಯರ್ಥಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಯೊಂದಿಗೆ ಅರ್ಜಿಯನ್ನು ಸಲ್ಲಿಸಿ. ನೀವು ಸುಲಭವಾಗಿ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೈಬರ್ ಗಳಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

ತಡವಾಗಿ ಬರಬಹುದು

ಹೌದು ಗೆಳೆಯರೇ, ಗೃಹಲಕ್ಷ್ಮಿ ಯೋಚನೆಯ ಹಣ ಬೇಗ ಬರುವುದು ಕಡಿಮೆಯಾಗಿದೆ. 7ನೇ ಕಂತಿನ ಹಣ ಫೆಬ್ರವರಿ ತಿಂಗಳು ಅಂದರೆ ಅದು ಮಾರ್ಚ್ ತಿಂಗಳ ಕೊನೆಯವರೆಗೂ ಬರುತ್ತದೆ. ಆದ್ದರಿಂದ 8ನೇ ಕಂತಿನ ಹಣ ಏಪ್ರಿಲ್, ಮೇ ತಿಂಗಳಲ್ಲಿ ಬರಬಹುದು. ಆದರೆ ನೀವು ಈ ಕಾರಣಕ್ಕೆ ಒಳಗಾಗಬೇಡಿ ಒಂದರಿಂದ ಎರಡು ತಿಂಗಳವರೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೆಂದರೆ ಅದು ಏಕೆ ಬಂದಿಲ್ಲ ಎಂದು ತಿಳಿದುಕೊಳ್ಳಬಹುದು.

8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಒಂದು ವೇಳೆ ನಿಮಗೆ 7ನೇ ಕಂತಿನ ಹಣ ಬಂದಿಲ್ಲವೆಂದರೆ 7 ಮತ್ತು 8ನೇ ಕಂತಿನ ಹಣ ಒಟ್ಟಿಗೆ ಬರಲಿದೆ ಈ ಹಣವನ್ನು ಪಡೆದುಕೊಳ್ಳುವ ಮೊದಲು ಈ ಮೇಲೆ ನೀಡಿರುವ ಕೆಲಸವನ್ನು ಮಾಡಿ. ಇಲ್ಲದಿದ್ದರೆ ಹಣ ಬರಲು ಸಮಸ್ಯೆ ಆಗಬಹುದು.

ಇದನ್ನು ಗಮನಿಸಿ

ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ

ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ.

ಧನ್ಯವಾದಗಳು

WhatsApp Group Join Now
Telegram Group Join Now

Leave a Comment