New Ration Card: ಹೊಸ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡುವ ವಿಧಾನ..! ಅರ್ಜಿ ಸಲ್ಲಿಸಲು ಇಲ್ಲಿಗೆ ಸಂಪೂರ್ಣ ಮಾಹಿತಿ…
ನಮಸ್ಕಾರ ಬಂಧುಗಳೇ ಹೊಸದಾಗಿ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿಯನ್ನು ಸಲ್ಲಿಸಿದರೆ ನೀವು ಅದನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮತ್ತು ನೀವೇನಾದರೂ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗಾಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ನೀವು ಆನ್ಲೈನ್ ಮೂಲಕ ಇ -ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಇ -ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇ -ಪಡಿತರ ಚೀಟಿ [ರೇಷನ್ ಕಾರ್ಡ್] ನಿಮಗೆ ಪಡಿತರ ಅಂಗಡಿಯಿಂದ ಆಹಾರವನ್ನು ಪಡೆಯಲು ಅನುಮತಿಸುತ್ತದೆ. ಹಾಗಾದರೆ ಇ -ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಹಂತ ಹಂತ ವಿಧಾನದ ಮೂಲಕ ಈ ಕೆಳಭಾಗದಲ್ಲಿ ನೀಡಲಾಗಿದೆ.
ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಡೌನ್ಲೋಡ್ ಮಾಡುವ ವಿಧಾನ
ನೀವೇನಾದರೂ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿಯನ್ನು ಸಲ್ಲಿಸಿ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕೆಂದರೆ ನಿಮ್ಮ ಹತ್ತಿರ ಮೊಬೈಲ್ ಅಥವಾ ಕಂಪ್ಯೂಟರ್, ಲ್ಯಾಪ್ಟಾಪ್ ಇದ್ದರೆ ಸಾಕು ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
- ಮೊದಲು ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನಿಮಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನ ಹೋಂ ಪೇಜ್ ಓಪನ್ ಆಗುತ್ತದೆ. ಇಲ್ಲಿ ನೀವು ಇ-ಸೇವೆಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಇ -ಪಡಿತರ ಚೀಟಿ [ರೇಷನ್ ಕಾರ್ಡ್], ಇ-ಸ್ಥಿತಿ, ಇ-ನ್ಯಾಯಬೆಲೆ ಅಂಗಡಿ ಮುಂತಾದ ಅಂಶಗಳು ಕಾಣುತ್ತದೆ.
- ನೀವು ಅದರಲ್ಲಿ ಇ-ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಹೊಸ ಅಥವಾ ಹಾಲಿ ಪಡಿತರ ಚೀಟಿ [ರೇಷನ್ ಕಾರ್ಡ್] ಎಂಬ ಆಪ್ಷನ್ ಕಾಡುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಆಹಾರ ಇಲಾಖೆಯ ಮುಖ್ಯ ಪೇಜ್ ಓಪನ್ ಆಗುತ್ತದೆ. ಇಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ.
- ಮುಂದುವರೆದ ನಂತರ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ] ಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ, ಪಡಿತರ ಚೀಟಿ [ರೇಷನ್ ಕಾರ್ಡ್] ವಿವರ, ಪಡಿತರ ಚೀಟಿ [ರೇಷನ್ ಕಾರ್ಡ್]ಯ ಬದಲಾವಣೆ ಕೋರಿಕೆ ಅರ್ಜಿ ಸ್ಥಿತಿ ಮುಂತಾದ ಆಪ್ಷನ್ ಗಳು ಕಾಣುತ್ತದೆ. ನೀವು ಅದರಲ್ಲಿ ಪಡಿತರ ಚೀಟಿ [ರೇಷನ್ ಕಾರ್ಡ್] ವಿವರ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಓಟಿಪಿ ಒಪ್ಶನ್ ಮೇಲೆ ಕ್ಲಿಕ್ ಮಾಡಿ, ನಂತರ ನೀವು ಪಡಿತರ ಚೀಟಿ [ರೇಷನ್ ಕಾರ್ಡ್] ನಂಬರನ್ನು ಎಂಟರ್ ಮಾಡಬೇಕಾಗುತ್ತದೆ, ಎಂಟರ್ ಮಾಡಿದ ನಂತರ ಗೋ ಮೇಲೆ ಕ್ಲಿಕ್ ಮಾಡಿ.
- ಗೋ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪಡಿತರ ಚೀಟಿ [ರೇಷನ್ ಕಾರ್ಡ್] ಸದಸ್ಯರ ಎಲ್ಲ ಮಾಹಿತಿ ಕಾಣುತ್ತದೆ.
- ಅಲ್ಲಿ ನೀವು ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ನಿಮ್ಮ ಹೆಸರನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿಕೊಂಡು ಗೋ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಆ ಒಟಿಪಿಯನ್ನು ನೀವು ಎಂಟರ್ ಮಾಡಬೇಕಾಗುತ್ತದೆ.
- ಸಾಮಾನ್ಯವಾಗಿ ಓಟಿಪಿಯು 6 ಅಂಕಿಯಲ್ಲಿ ಇರುತ್ತದೆ, ಓಟಿಪಿಯನ್ನು ಹಾಕಿ ಗೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಪಡಿತರ ಚೀಟಿ [ರೇಷನ್ ಕಾರ್ಡ್] ನ ಸ್ಥಿತಿ ಓಪನ್ ಆಗುತ್ತದೆ. ನಿಮಗೆ ಬೇಕಾಗಿರುವುದು ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳೋ ವಿಧಾನ.
- ಪಡಿತರ ಚೀಟಿ [ರೇಷನ್ ಕಾರ್ಡ್] ಸ್ಥಿತಿ ಓಪನ್ ಆದ ನಂತರ ಕೆಳಭಾಗದಲ್ಲಿ ನ್ಯೂ ರೇಷನ್ ಕಾರ್ಡ್ ಡೀಟೇಲ್ಸ್ ಎಂಬ ಆಪ್ಷನ್ ದೊರೆಯುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಕಾಣುತ್ತದೆ, ನೀವು ಅದನ್ನು ಪ್ರಿಂಟ್ ಅಥವಾ ಡೌನ್ಲೋಡ್ ಮಾಡಿಕೊಳ್ಳಬಹುದು.
- ಅದನ್ನು ನೀವು ಸ್ಕ್ರೀನ್ಶಾಟ್ ಅಥವಾ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.
ನೀವು ಯಾವುದೇ ಖರ್ಚು ಇಲ್ಲದೆ ಸುಲಭವಾಗಿ ಆನ್ಲೈನ್ ಮೂಲಕ ಡೌನ್ಲೋಡ್ ಅಥವಾ ಸೇವ್ ಮಾಡಿಕೊಳ್ಳಬಹುದು. ಇ-ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಪಡೆದುಕೊಂಡ ನಂತರ ನಿಮಗೆ ಪಡಿತರ ಅಂಗಡಿಯಲ್ಲಿ ಆಹಾರವನ್ನು ಪಡೆದುಕೊಳ್ಳಲು ಇ-ಪಡಿತರ ಚೀಟಿ [ರೇಷನ್ ಕಾರ್ಡ್]ಲಭ್ಯವಿದೆ.
ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸಿ
ಈಗಿನ ಪರಿಸ್ಥಿತಿಯಲ್ಲಿ ಪಡಿತರ ಚೀಟಿ [ರೇಷನ್ ಕಾರ್ಡ್] ಪ್ರಮುಖ ದಾಖಲೆಯಾಗಿದೆ, ಏಕೆಂದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಯೋಜನೆಗೆ ಪಡಿತರ ಚೀಟಿ [ರೇಷನ್ ಕಾರ್ಡ್] ಬೇಡಿಕೆ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಳ್ಳಲು ಪಡಿತರ ಚೀಟಿ [ರೇಷನ್ ಕಾರ್ಡ್] ಪ್ರಮುಖವಾಗಿದೆ. ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿ [ರೇಷನ್ ಕಾರ್ಡ್] ಪ್ರಮುಖವಾಗಿದ್ದು ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಅನ್ನು ಮಾಡಿಸಿಕೊಳ್ಳಲು ಅಥವಾ ಅರ್ಜಿಯನ್ನು ಸಲ್ಲಿಸಲು ಜನಗಳು ಕಾದು ಕುಳಿತಿದ್ದಾರೆ. ಹಾಗಾದರೆ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳು? ಇನ್ನಿತರ ವಿವರಗಳನ್ನು ಈ ಕೆಳಭಾಗದಲ್ಲಿ ತಿಳಿದುಕೊಳ್ಳೋಣ.
ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸಲು ಏಪ್ರಿಲ್ 1 ರಿಂದ ಪ್ರಾರಂಭ
ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ವಿತರಣೆ ಮಾಡಲು ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಅರ್ಜಿ ಸಲ್ಲಿಸಲು ಹಲವು ಜನರು ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಸ್ ಮುನಿಯಪ್ಪ ರವರು ಏಪ್ರಿಲ್ 1 ರಿಂದ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಹಾಗಾದರೆ ನೀವೇನಾದರೂ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸಬೇಕೆಂದರೆ ಬೇಕಾಗುವ ದಾಖಲೆಗಳ ಬಗ್ಗೆ ತಿಳಿದುಕೊಳ್ಳೋಣ.
ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು [ಈ ದಾಖಲೆಗಳು ಕಡ್ಡಾಯ]
ಹಲವು ಜನರು ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ, ಆದರೆ ನೀವೇನಾದರೂ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿ ಸಲ್ಲಿಸಲು ಈ ಕೆಲವು ದಾಖಲೆಗಳು ಪ್ರಮುಖವಾಗಿದೆ.
- ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
- ನಿಮ್ಮ ಕುಟುಂಬದ ಎಲ್ಲ ಸದಸ್ಯರ ಪೈಕಿಯ ಒಬ್ಬರ ಆದಾಯ ಪ್ರಮಾಣ ಪತ್ರ ಇರಬೇಕು.
- ನಿಮ್ಮ ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದರೆ ಅವರ ಜನ್ಮ ದಾಖಲೆಯಾದ ಪ್ರಮಾಣ ಪತ್ರ ಹೊಂದಿರಬೇಕು.
- ನಿಮ್ಮ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆಯು ಲಿಂಕ್ ಆಗಿರಬೇಕು.
- ನಿಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ ಕೂಡಲೇ ಅದನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಥವಾ ಮೊಬೈಲ್ ನಿಮ್ಮ ಹತ್ತಿರ ಇರಬೇಕು [ಒಟಿಪಿಯನ್ನು ಹೇಳಲು].
ಕೆಲವೊಂದು ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ಸಾಕು ನೀವು ಸುಲಭವಾಗಿ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರ ಆದಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ಕೂಡಲೇ ಅಪ್ಡೇಟ್ ಮಾಡಿಕೊಳ್ಳಿ ಏಕೆಂದರೆ ಅಪ್ಡೇಟ್ ಮಾಡಿ ಕೊಳದಿದ್ದರೆ ಕೆಲವು ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ.
ಇಂಥವರು ಮಾತ್ರ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿಯನ್ನು ಸಲ್ಲಿಸಬಹುದು
- ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ನೀವು ಕರ್ನಾಟಕದ ನಿವಾಸಿಯಾಗಿರಬೇಕು.
- ಹೊಸದಾಗಿ ಮದುವೆಯಾದ ದಂಪತಿಗಳು ಮಾತ್ರ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಆದಾಯ ಒಂದು ಲಕ್ಷ ರೂಪಾಯಿಗಳಿಂದ ಕಡಿಮೆ ಇದ್ದರೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಅದಕ್ಕಿಂತ ಜಾಸ್ತಿ ಇದ್ದರೆ ಎಪಿಎಲ್ ಕಾರ್ಡ್ ಅನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಈ ಮೇಲೆ ಇರುವ ದಾಖಲೆಗಳು ನಿಮ್ಮ ಹತ್ತಿರವಿದ್ದರೆ ಅವರು ಸುಲಭವಾಗಿ ಹೊಸ ಪಡಿತರ ಚೀಟಿ [ರೇಷನ್ ಕಾರ್ಡ್] ಗೆ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಊರಿನ ಹತ್ತಿರವಿರುವ ಗ್ರಾಮ ಒನ್ ಮತ್ತು ಇತರೆ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ನೀವು ಆನ್ಲೈನ್ ಮೂಲಕ ಸಹ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಈ ಕಾರಣದಿಂದ ನೀವು ಕೆಲವು ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು