HSRP Number Plate: ಕರ್ನಾಟಕ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಸುವವರಿಗೆ ಗುಡ್ ನ್ಯೂಸ್ ನೀಡುತ್ತಾ?
ನಮಸ್ಕಾರ ಬಂಧುಗಳೇ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಕೆಲವು ಬಾರಿ ದಿನಾಂಕವನ್ನು ಗಡುವು ಮಾಡಲಾಗಿದೆ. ಈದೀಗ ಅಂದರೆ ಮೇ 31 ವರೆಗೆ ಗಡುವು ಮಾಡಲಾಗಿದೆ ಆದರೆ ಹೆಚ್ಚಿನ ಜನರು ನಂಬರ್ ಪ್ಲೇಟ್ ಅನ್ನು ಅಳವಡಿಸಲಿರುವ ಕಾರಣ ಇನ್ನು ಹೆಚ್ಚಿನ ದಿನಗಳು ವಿಸ್ತರಣೆ ಮಾಡಲು ಸರ್ಕಾರ ವಿಸ್ತರಿಸುತ್ತಾ? ಎಂಬ ಮಾಹಿತಿ ಎಲ್ಲಾ ಕಡೆ ಹರಿದಾಡುತ್ತಿದೆ.
HSRP ನಂಬರ್ ಪ್ಲೇಟ್
ಕೇಂದ್ರ ಸರ್ಕಾರವು ಏಪ್ರಿಲ್ 2019 ವರ್ಷದ ಒಳಗಡೆ ಇರುವ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸುವುದು ಕಡ್ಡಾಯ ಎಂದು ಸರ್ಕಾರ ತಿಳಿಸಲಾಗಿತ್ತು. ಇದರಿಂದ ಕೆಲವು ಜನರು ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಜನರು HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲ ಅಂತವರಿಗೆ ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿತ್ತು. ಅಂದರೆ ಮೇ 31ರವರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು, ಆದರೆ ಇನ್ನೂ ಕೂಡ ಹೆಚ್ಚಿನ ಜನರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಸಿಕೊಂಡಿಲ್ಲ ಇದರಿಂದ ಜನರು ಮತ್ತೊಮ್ಮೆ ಗಡುವು ವಿಸ್ತರಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಆದರೆ ಮೇ 31ಕ್ಕೆ ನೀಡಿರುವ ಅಂತಿಮ ವಿಸ್ತರಣೆಯಿಂದ ಇನ್ನು ಮುಂದೆ ವಿಸ್ತರಣೆ ಆಗುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಜೂನ್ 4 ರಂದು ಲೋಕಸಭಾ ಫಲಿತಾಂಶ ಘೋಷಣೆ ಇರುವುದರಿಂದ ಬಳಿಕ ನೀತಿ ಸಂಹಿತೆ ತೆರವಾಗಲಿದೆ ಈ ಕಾರಣದಿಂದ ವಾಹನಗಳಿಗೆ HSRP ಅಳವಡಿಕೆಯ ಸಂಖ್ಯೆ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಸುಮಾರು 55 ಲಕ್ಷ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಇದಕ್ಕಿಂತ ಹೆಚ್ಚು ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ ಇದರಿಂದ ಸರ್ಕಾರವು ತಲೆನೋವು ಕಾರಣವಾಗಿದೆ.
ಸರ್ಕಾರವು HSRP ನಂಬರ್ ಪ್ಲೇಟ್ ಅನ್ನು ಮಾಡಿಸಲು ಇನ್ನೂ ಗಡುವು ವಿಸ್ತರಣೆ ಮಾಡುತ್ತಾ?
ಲೋಕಸಭಾ ಚುನಾವಣೆ ಇರುವುದರಿಂದ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಮತ್ತು ಬುಕಿಂಗ್ ಮಾಡುವ ಸಂಖ್ಯೆಯು ಕಡಿಮೆಯಾಗಿದೆ ಅದಲ್ಲದೆ ಮೊದಲ ಹಂತದಲ್ಲಿ ನಡೆದ 14 ಕ್ಷೇತ್ರದ ಮತದಾನದ ಬಳಿಕ ಈ ಕ್ಷೇತ್ರಗಳಲ್ಲಿ HSRP ನಂಬರ್ ಪ್ಲೇಟ್ ಬುಕ್ಕಿಂಗ್ ಅಳವಡಿಕೆ ಏರಿಕೆಯಾಗಿದೆ. ಅದೇ ರೀತಿ ಮೇ 7 ರಂದು ಕರ್ನಾಟಕದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಕಾರಣದಿಂದ ಮೇ 8 ರಿಂದ HSRP ನಂಬರ್ ಪ್ಲೇಟ್ ಬುಕ್ಕಿಂಗ್ ಮತ್ತು ಅಳವಡಿಕೆ ಮಾಡಿಕೊಳ್ಳಲು ಹೆಚ್ಚಾಗುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಮತ್ತು ಇನ್ನು ಹೆಚ್ಚಿನ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮತ್ತು ಪ್ಲೇಟ್ ಬುಕ್ಕಿಂಗ್ ಮಾಡಿಲ್ಲದ ಕಾರಣ ಸರ್ಕಾರವು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಗಡುವುವನ್ನು ಕೊನೆಯ ಬಾರಿಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಒಂದು ವೇಳೆ ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಗಡುವು ವಿಸ್ತರಣೆ ಮಾಡಿದರೆ ಮತ್ತೆ ಇನ್ನು ಮೂರು ತಿಂಗಳು ಅಂದರೆ ಆಗಸ್ಟ್ ಅಂತ್ಯದವರೆಗೆ ಡೇಟ್ ನೀಡುವ ಸಾಧ್ಯತೆ ಇದೆ. ಸದ್ಯ ಚುನಾವಣಾ ಹಾಗೂ ನೀತಿ ಸಂಹಿತೆ ಕಾರಣದಿಂದ ಸರ್ಕಾರ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಮುಂಬರುವ ದಿನಗಳಲ್ಲಿ ಎಚ್ಎಸ್ಆರ್ಪಿHSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಗಡುವು ವಿಸ್ತರಣೆ ಅಥವಾ ಅದೇ ದಿನವೇ ಕೊನೆಯ ದಿನಾಂಕ ಎಂಬ ಎಲ್ಲ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಯಾವ ವರ್ಷದ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಬೇಕು
ಹೌದು ಗೆಳೆಯರೇ, ಪ್ರಮುಖ ಜನರಿಗೆ ಈ ಪ್ರಶ್ನೆಗೆ ಗೊಂದಲ ಹೆಚ್ಚಾಗಿದೆ. ನೀವೇನಾದರೂ ಏಪ್ರಿಲ್ 2019 ನಂತರ ಖರೀದಿ ಮಾಡಿರುವ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲಾಗಿದೆ. ಅಂತವರು HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವಂತಿಲ್ಲ. ಒಂದು ವೇಳೆ 2019 ಒಳಗಡೆ ಖರೀದಿ ಮಾಡಿರುವ ವಾಹನಗಳು ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕಾಗಿದೆ.
ಈ ದಿನಾಂಕದ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಬುಕ್ ಮಾಡಿಲ್ಲವೆಂದರೆ ದಂಡ ಕಟ್ಟಬೇಕಾಗುತ್ತದೆ
ಈಗಾಗಲೇ ಸರ್ಕಾರವು ಮೇ 31 ಕೊನೆಯ ದಿನಾಂಕವನ್ನು ನೀಡಲಾಗಿದೆ. ಒಂದು ವೇಳೆ ಸರ್ಕಾರಗಳು ವಿಸ್ತರಣೆ ಮಾಡಿಲ್ಲವೆಂದರೆ ಈ ದಿನಾಂಕದ ಒಳಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಲು ಕಡ್ಡಾಯವಾಗಿದೆ. ದಿನಾಂಕ ವಿಸ್ತರಣೆ ಮಾಡಿರುವ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯಗೊಳಿಸಿದೆ ಒಂದು ವೇಳೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಕನಿಷ್ಠ 500 ರಿಂದ ಸಾವಿರರೂ ದಂಡ ಹಾಕುವ ಸಾಧ್ಯತೆ ಇದೆ.
HSRP ನಂಬರ್ ಪ್ಲೇಟ್ ಅಳವಡಿಕೆಯಿಂದ ಸಿಗುವ ಪ್ರಯೋಜನವೇನು
HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದರಿಂದ ಹಲವು ರೀತಿಯ ಪ್ರಯೋಜನಗಳು ಸಿಗುತ್ತದೆ. ಅವುಗಳನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
- ನೀವೇನಾದ್ರೂ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿದರೆ ನಿಮ್ಮ ವಾಹನದ ಎಲ್ಲ ಮಾಹಿತಿ HSRP ನಂಬರ್ ಪ್ಲೇಟ್ ನಲ್ಲಿ ಹೊಂದಿರುತ್ತದೆ.
- ನಿಮ್ಮ ವಾಹನದ ಮಾಹಿತಿಯು ಸರ್ಕಾರದ ಕಛೇರಿಯಲ್ಲಿ ಸಂಗ್ರಹವಾಗಿರುತ್ತದೆ.
- ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದರೆ ಅಂತಹ ಸಮಯದಲ್ಲಿ ವಾಹನವನ್ನು ಹುಡುಕಲು ಸಹಾಯವಾಗುತ್ತದೆ.
- ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನಧಿಕೃತ ಬದಲಾವಣೆ ಅಸಾಧ್ಯವಾಗಿದೆ.
- HSRP ನಂಬರ್ ಪ್ಲೇಟ್ ನಲ್ಲಿ ಮಾಹಿತಿ ತಿದ್ದಲು ಆಗುವುದಿಲ್ಲ.
- HSRP ನಂಬರ್ ಪ್ಲೇಟ್ ಅನ್ನು ಮರುಬಳಕೆಯು ಸಾಧ್ಯವಿಲ್ಲ.
- ನಿಮ್ಮ ವಾಹನ ಕಳ್ಳತನವಾದ ಸಮಯದಲ್ಲಿ ಕಳ್ಳತನದ ಬೈಕ್ ಅಪರಾಧ ಕೃತ್ಯಕ್ಕೆ ಬಳಕೆ ಆಗುವುದನ್ನು ತಡೆಯಬಹುದು.
ನೀವು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡರೆ ಈ ಮೇಲೆ ನೀಡಲಾಗಿರುವ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಅನ್ನು ಬುಕ್ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ
HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ https://www.siam.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಬುಕ್ HSRP ನಂಬರ್ ಪ್ಲೇಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು ನಿಮ್ಮ ವಾಹನದ RCಯನ್ನು ಇಟ್ಟುಕೊಂಡು ವಾಹನದ ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ, ಫೋನ್ ಸಂಖ್ಯೆ, ಇತರೆ ದಾಖಲೆಗಳನ್ನು ನಮೂದಿಸಿ.
- ನಮೂದಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮ್ಮ ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. ಈಗ ನೀವು ನಿಮ್ಮ ವಾಹನದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನೀವು ನಿಮ್ಮ ವಾಹನದ ಕಂಪನಿಯನ್ನು ನಮೂದಿಸಿ.
- ಅಲ್ಲಿ ನೀಡುವ ಎಲ್ಲ ವಿವರವನ್ನು ನಮೂದಿಸಿದ ನಂತರ ನಿಮಗೆ ಎರಡು ಆಪ್ಷನ್ ಕಾಣುತ್ತದೆ.
- ಹೋಂ ಡೇಲಿವೇರಿ ಮತ್ತು ಶೋರೂಮ್ ಎಂಬ ಎರಡು ಆಪ್ಷನ್ ಕಾಣುತ್ತದೆ, ಇದರಲ್ಲಿ ನಿಮಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ ನೀವು ನೋಂದಣಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ಕೊನೆಯ ಹಂತದಲ್ಲಿ ನೀವು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
- ಆನ್ಲೈನ್ ಮೂಲಕ ಪಾವತಿ ಮಾಡಿದ ನಂತರ HSRP ನಂಬರ್ ಪ್ಲೇಟ್ ನೋಂದಣಿ ಆಗುತ್ತದೆ. ನೋಂದಣಿ ಆದ ನಂತರ ನೀವು ನಿಮ್ಮ ಅರ್ಜಿ ಸಲ್ಲಿಸಿದ ಸಂಖ್ಯೆ ಅಥವಾ ಫೋಟೋವನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಕೆಲವು ದಿನಗಳ ನಂತರ ನೀವು ಶೋರೂಮ್ ಗೆ ಆರ್ಡರ್ ಮಾಡಿದರೆ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ. ಒಂದು ವೇಳೆ ಹೋಂ ಡೇಲಿವೇರಿ ಮಾಡಿಕೊಂಡಿದ್ದಾರೆ ನಿಮ್ಮ ಮನೆಗೆ ಬಂದು ಅವರೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಡುತ್ತಾರೆ.
ಒಂದು ವೇಳೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ವಾಹನದ RC ಕಾರ್ಡ್ ಅನ್ನು ತೆಗೆದುಕೊಂಡು ನಿಮ್ಮ ಊರಿನ ಹತ್ತಿರವಿರುವ ಸೈಬರ್ ಗಳಿಗೆ ಭೇಟಿ ನೀಡಿ ಅಲ್ಲಿ ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬಹುದು.
HSRP ನಂಬರ್ ಪ್ಲೇಟ್ ನ ಸ್ಥಿತಿ[status]ಯನ್ನು ನೋಡಿಕೊಳ್ಳಬಹುದು
ಒಂದು ವೇಳೆ ನೀವು HSRP ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿ ಕೆಲವು ದಿನಗಳಾಗಿದ್ದರೆ ಅದರ ಸ್ಥಿತಿ[status]ಯನ್ನು ನೀವು ಸುಲಭವಾಗಿ ಆನ್ಲೈನ್ ಮೂಲಕ ಅಪರಿಶೀಲನೆ ಮಾಡಬಹುದು.
- ಮೊದಲು ನೀವು ಮೇಲೆ ನೀಡಿರುವ ಅಥವಾ HSRP ನಂಬರ್ ಪ್ಲೇಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ
- ಅಲ್ಲಿ ನೀವು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಮಾಡಿಕೊಳ್ಳಿ. [ಮೊದಲೇ HSRP ನಂಬರ್ ಪ್ಲೇಟ್ ಗೆ ರಿಜಿಸ್ಟರ್ ಮಾಡಿಕೊಂಡಿರುತ್ತೀರ]
- ಹೋಮ್ ಪೇಜ್ ನಲ್ಲಿ ನೀವು HSRP ನೋಂದಣಿ ಸ್ಥಿತಿ[status] ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಅರ್ಜಿಯ ಸಂಖ್ಯೆ ಅಥವಾ ವಾಹನದ ಸಂಖ್ಯೆಯನ್ನು ನಮೂದಿಸಿ, ನಂತರ ಹುಡುಕಾಟ [search] ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ HSRP ನಂಬರ್ ಪ್ಲೇಟ್ ನ ಸ್ಥಿತಿ[status] ಕಾಣುತ್ತದೆ, ನೀವು ಅದನ್ನು ಪರಿಶೀಲನೆ ಮಾಡಬಹುದು.