HSRP Number Plate: ಜೂನ್ 12ರವರೆಗೆ ಹಳೆಯ ವಾಹನಗಳಿಗೆ HSRP ಮೇಲೆ ಯಾವುದೇ ಕ್ರಮವಿಲ್ಲ..! ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ 2019 ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು. ಎಂದು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಮೇ 31 ಕೊನೆಯ ದಿನಾಂಕ ವಾಗಿದೆ. ಆದರೆ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಂದರೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್ ಆದೇಶದ ಅನ್ವಯ ಜೂನ್ 12 ರವರೆಗೆ ನೀಡಲಾಗಿದೆ. ಈ ದಿನಾಂಕದ ಒಳಗೆ ಎಲ್ಲಾ ವಾಹನಗಳು ಹೊಸ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವಂತೆ ಸಾರಿಗೆ ಇಲಾಖೆ ತಿಳಿಸಿದೆ.
HSRP ನಂಬರ್ ಪ್ಲೇಟ್ ಅಳವಡಿಸಲು ಜೂನ್ 12ರ ವರೆಗೆ ವಿಸ್ತರಣೆ
ರಾಜ್ಯ ಮತ್ತು ಕೇಂದ್ರ ಸರ್ಕಾರವು HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. HSRP ಅಳವಡಿಕೆಗೆ ಕೊನೆಯ ದಿನಾಂಕ ಮೇ 31ರವರೆಗೆ ವಿಧಿಸಲಾಗಿರುವ ಗಡುವನ್ನು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಬಿಎನ್ ಡಿ ಎನರ್ಜಿ ಲಿಮಿಟೆಡ್ ಕಂಪನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಕಾರಣದಿಂದ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ವಾಹನಗಳಿಗೆ ಜೂನ್ 12ರವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚಿಸಲಾಗಿದೆ.
ನೀವೇನಾದರೂ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಇನ್ನು ಸುಮಾರು 12 ದಿನಗಳವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಜೂನ್ 12ರ ನಂತರ ಅವಧಿಯ ವಿಸ್ತರಣೆ ಅಥವಾ ಇನ್ಯಾವುದೇ ಕ್ರಮಗಳ ಬಗ್ಗೆ ಹೈ ಕೋರ್ಟ್ ಆದೇಶ ಮತ್ತು ಸರ್ಕಾರದ ನಿರ್ಬಂಧನೆಗಳನ್ನು ಅವಲಂಬಿಸಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಸಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಒಂದು ವೇಳೆ ನೀವು ಜೂನ್ 12ರ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಹೆಚ್ಚಿನ ಕ್ರಮ ಮತ್ತು ಶುಲ್ಕವನ್ನು ನೀಡುವಂತೆ ಆದೇಶ ಮಾಡಲಾಗಬಹುದು.
HSRP ನಂಬರ್ ಪ್ಲೇಟ್
2019 ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ತಿಳಿಸಲಾಗಿದೆ. ಇದುವರೆಗೂ ಸುಮಾರು 45 ಲಕ್ಷ ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ 1.5 ಕೋಟಿವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ. ಅಂತವರಿಗೆ ಇನ್ನು 12 ದಿನಗಳ ಕಾಲಾವಕಾಶ ನೀಡಿರುವುದರಿಂದ ಯಾರೆಲ್ಲ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ ಆದಷ್ಟು ಬೇಗ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಸರ್ಕಾರವು ಹೆಚ್ಚಿನ ಕ್ರಮವನ್ನು ಕೈಗೊಳ್ಳಬಹುದಾಗಿದೆ. ಹಾಗಾದ್ರೆ ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವುದು ಹೇಗೆ
HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಲ್ಲದೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು ನೀವು ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಿ, ಇಲ್ಲವಾದಲ್ಲಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
- ಮೊದಲು ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ https://www.siam.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಬುಕ್ HSRP ನಂಬರ್ ಪ್ಲೇಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು ನಿಮ್ಮ ವಾಹನದ RC card ನಲ್ಲಿ ಇರುವ ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ, ಫೋನ್ ಸಂಖ್ಯೆ, ಇತರೆ ದಾಖಲೆಗಳನ್ನು ನಮೂದಿಸಬೇಕು.
- ನಮೂದಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮ್ಮ ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. ಈಗ ನೀವು ನಿಮ್ಮ ವಾಹನದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನೀವು ನಿಮ್ಮ ವಾಹನದ ಕಂಪನಿಯನ್ನು ನಮೂದಿಸಿ.
- ಅಲ್ಲಿ ನೀವು ಎಲ್ಲಾ ವಿವರವನ್ನು ನಮೂದಿಸಿದ ನಂತರ ಎರಡು ಆಪ್ಷನ್ ಕಾಣುತ್ತದೆ.
- ಹೋಂ ಡೇಲಿವೇರಿ ಮತ್ತು ಶೋರೂಮ್ ಎಂಬ ಎರಡು ಆಪ್ಷನ್ ಕಾಣುತ್ತದೆ, ಇದರಲ್ಲಿ ನಿಮಗೆ ಯಾವುದು ಸೂಕ್ತ ಆಯ್ಕೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ ನೀವು ನೋಂದಣಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ಕೊನೆಯ ಹಂತದಲ್ಲಿ ನೀವು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
- ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡಿದ ನಂತರ HSRP ನಂಬರ್ ಪ್ಲೇಟ್ ನೋಂದಣಿ ಆಗುತ್ತದೆ. ನೋಂದಣಿ ಆದ ನಂತರ ನೀವು HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದ ಸಂಖ್ಯೆ ಅಥವಾ ಫೋಟೋವನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಕೆಲವು ದಿನಗಳ ನಂತರ ನೀವು ಆಯ್ಕೆ ಮಾಡಿಕೊಂಡಿರೋ ಶೋರೂಮ್ ಗೆ ಆರ್ಡರ್ ಬಂದರೆ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ. ಒಂದು ವೇಳೆ ಹೋಂ ಡೇಲಿವೇರಿ ಮಾಡಿಕೊಂಡಿದ್ದಾರೆ ನಿಮ್ಮ ಮನೆಗೆ ಬಂದು ಅವರೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಡುತ್ತಾರೆ.
ಈ ರೀತಿ ನೀವು ಸುಲಭವಾಗಿ ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರ ಇರುವ ಸೇವ ಕೇಂದ್ರ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ಕೇಳುವ ಕೆಲವು ದಾಖಲೆಗಳು ಅಂದರೆ RC ಕಾರ್ಡ್ ಅನ್ನು ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.