Indian Merchant Navy Recruitment 2024: ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ…! 4000 ಖಾಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ…
ನಮಸ್ಕಾರ ಬಂಧುಗಳೇ ಭಾರತೀಯ ಮರ್ಚೆಂಟ್ ನೇವಿ ಇಲಾಖೆಯಿಂದ ಇದೀಗ ಹೊಸ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿದೆ. ಭಾರತೀಯ ಮರ್ಚೆಂಟ್ ನೇವಿ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಆಸಕ್ತ ಇರುವ ಅಭ್ಯರ್ಥಿಗಳು ಮಾರ್ಚ್ 11 ರಿಂದ ಭಾರತೀಯ ಮರ್ಚೆಂಟ್ ನೇವಿ ಹುದ್ದೆಗೆ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಈ ಹುದ್ದೆಗೆ ಬೇಕಾಗುವ ಅರ್ಹತೆ, ವಯೋಮಿತಿ, ಶುಲ್ಕ, ಕೊನೆಯ ದಿನಾಂಕ, ವೇತನ ಮುಂತಾದ ಮಾಹಿತಿಗಳನ್ನು ಈ ಕೆಳಭಾಗದಲ್ಲಿ ತಿಳಿದುಕೊಳ್ಳೋಣ.
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ 2024
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ ಯಲ್ಲಿ ಒಟ್ಟು 4000 ಹುದ್ದೆಗಳು ಲಭ್ಯವಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 30 ಏಪ್ರಿಲ್ 2024 ಕೊನೆಯ ದಿನಾಂಕ ವಾಗಿದೆ. ಎಸ್ಎಸ್ಎಲ್ ಸಿ ಅಥವಾ ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತು 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಮಾತ್ರ ಈ ಹುದ್ದೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗಾದರೆ ಹುದ್ದೆಗಳ ವಿವರ, ವೇತನ, ಅರ್ಜಿ ಶುಲ್ಕ, ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ 2024 ಹುದ್ದೆಯ ವಿವರ
- ಹುದ್ದೆಯ ಸಂಸ್ಥೆ: ಭಾರತೀಯ ಮರ್ಚೆಂಟ್ ನೇವಿ
- ಒಟ್ಟು ಖಾಲಿ ಹುದ್ದೆಗಳು: 4,000
- ಹುದ್ದೆಯ ಹೆಸರು: ವಿವಿಧ ಹುದ್ದೆಗಳು [ಡೆಕ್ ರೇಟಿಂಗ್, ಇಂಜಿನ್ ರೇಟಿಂಗ್, ಸೀಮನ್, ಎಲೆಕ್ಟ್ರಿಷಿಯನ್, ವೆಲ್ಡರ್/ಹೆಲ್ಪರ್, ಮೆಸ್ ಬಾಯ್, ಕುಕ್]
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಮಾರ್ಚ್ 11 2024
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಏಪ್ರಿಲ್ 30 2024
- ಅರ್ಜಿ ಸಲ್ಲಿಸುವ ವೆಬ್ಸೈಟ್: www.sealanemaritime.in
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು
- ಡೆಕ್ ರೇಟಿಂಗ್: 721
- ಇಂಜಿನ್ ರೇಟಿಂಗ್: 236
- ಸೀಮನ್: 1432
- ಎಲೆಕ್ಟ್ರಿಷಿಯನ್: 408
- ವೆಲ್ಡರ್/ಹೆಲ್ಪರ್: 78
- ಮೆಸ್ ಬಾಯ್: 922
- ಕುಕ್: 203
- ಒಟ್ಟು ಹುದ್ದೆಗಳು: 4000
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಯಲ್ಲಿ ಮೇಲೆ ನೀಡಿರುವ ಏಳು ಹುದ್ದೆಗಳು ಲಭ್ಯವಿದೆ ನಿಮಗೆ ಸೂಕ್ತವಾದ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ 17.5 ವರ್ಷ ಅಥವಾ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು. 27 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಅರ್ಹತೆ
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಯ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ, ಖಾಲಿ ಇರುವ ಹುದ್ದೆಗಳ ಆಧಾರದ ಮೇಲೆ ಅರ್ಹತೆಯನ್ನು ನೀಡಲಾಗಿದೆ.
- ಡೆಕ್ ರೇಟಿಂಗ್: 12 ನೇ ಪಾಸಾದ ಅಭ್ಯರ್ಥಿಗಳು
- ಇಂಜಿನ್ ರೇಟಿಂಗ್: 10 ನೇ ಪಾಸಾದ ಅಭ್ಯರ್ಥಿಗಳು
- ಸೀಮನ್: 10 ನೇ ಪಾಸಾದ ಅಭ್ಯರ್ಥಿಗಳು
- ಎಲೆಕ್ಟ್ರಿಷಿಯನ್: 10 ನೇ + ಐಟಿಐ ಎಲೆಕ್ಟ್ರಿಷಿಯನ್ ಪಾಸಾದ ಅಭ್ಯರ್ಥಿಗಳು
- ವೆಲ್ಡರ್/ಹೆಲ್ಪರ್: 10ನೇ + ಐಟಿಐ ಪಾಸಾದ ಅಭ್ಯರ್ಥಿಗಳು
- ಮೆಸ್ ಬಾಯ್: 10 ನೇ ಪಾಸಾದ ಅಭ್ಯರ್ಥಿಗಳು
- ಕುಕ್: 10 ನೇ ಪಾಸಾದ ಅಭ್ಯರ್ಥಿಗಳು
ವೇತನ
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ ಹುದ್ದೆಗೆ ಅರ್ಹರಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಅರ್ಹದ ಹುದ್ದೆಯ ವರ್ಗದ ಮೇಲೆ ವೇತನವನ್ನು ನೀಡಲಾಗುತ್ತದೆ.
- ಡೆಕ್ ರೇಟಿಂಗ್: ರೂ.50000-ರೂ.85000
- ಇಂಜಿನ್ ರೇಟಿಂಗ್: ರೂ.40000-ರೂ.60000
- ಸೀಮನ್: ರೂ.38000-ರೂ.55000
- ಎಲೆಕ್ಟ್ರಿಷಿಯನ್: ರೂ.60000-ರೂ.90000
- ವೆಲ್ಡರ್/ಹೆಲ್ಪರ್: ರೂ.50000-ರೂ85000
- ಮೆಸ್ ಬಾಯ್: ರೂ.40000-ರೂ.60000
- ಕುಕ್: ರೂ.40000-ರೂ.60000
ಆಯ್ಕೆ ಪ್ರಕ್ರಿಯೆ
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ 2024ರ ಅಧಿಸೂಚನೆಯ ಪ್ರಕಾರ ನಾಲ್ಕು ಹಂತಗಳಲ್ಲಿ ಆಯ್ಕೆಯ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.
- ಮೊದಲನೆಯದು ಲಿಖಿತ ಪರೀಕ್ಷೆ ಮಾಡಲಾಗುತ್ತದೆ
- ನಂತರ ವೈಯಕ್ತಿಕ ಸಂದರ್ಶನ
- ಡಾಕ್ಯುಮೆಂಟ್ ಪರಿಶೀಲನೆ
- ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ
ಪರೀಕ್ಷೆಯು 100 ಅಂಕಗಳಿಗೆ ಯೋಗ್ಯವಾಗಿದೆ
- ಸಾಮಾನ್ಯ ಅರಿವು – 25 ಅಂಕಗಳು
- ವಿಜ್ಞಾನ ಜ್ಞಾನ – 25 ಅಂಕಗಳು
- ಇಂಗ್ಲಿಷ್ ಜ್ಞಾನ – 25 ಅಂಕಗಳು
- ರೀಸನಿಂಗ್ – 25 ಅಂಕಗಳು
ವಿದ್ಯಾರ್ಹತೆ
ಭಾರತೀಯ ಮರ್ಚೆಂಟ್ ನೇವಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಅರ್ಹತೆ 10ನೇ ತರಗತಿ, ಐಟಿಐ, ಪಿಯುಸಿ ಮುಗಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಶುಲ್ಕ
ಭಾರತೀಯ ಮರ್ಚೆಂಟ್ ನೇವಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಅರ್ಜಿ ಸಲ್ಲಿಸುವ ಶುಲ್ಕವು ಪ್ರತಿಯೊಬ್ಬರಿಗೂ ರೂ.100 ಗಳನ್ನು ಪಾವತಿಸಬೇಕಾಗುತ್ತದೆ. ಈ ಹಣವನ್ನು ನೀವು ಸುಲಭವಾಗಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್, ಯುಪಿಐ ಮೂಲಕ ಆನ್ಲೈನ್ ನಲ್ಲಿ ಪಾವತಿ ಮಾಡಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ನೀವೇನಾದರೂ ಈ ಹುದ್ದೆಗೆ ಅರ್ಹರಾಗಿದ್ದು ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಕೆಳಭಾಗದಲ್ಲಿ ನೀಡಿಲಾಗಿರುವ ದಾಖಲೆಗಳು ಪ್ರಮುಖವಾಗಿದೆ.
- ವ್ಯಕ್ತಿಗಳ ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ
- ವೈದ್ಯಕೀಯ ಪ್ರಮಾಣಪತ್ರಗಳು
- ಪಾಸ್ಪೋರ್ಟ್
- ಗುರುತಿನ ಪುರಾವೆಗಳು
- ಪಾಸ್ಪೋರ್ಟ್ ಗಾತ್ರದ ಫೋಟೋಗಳು
ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಯ ಅಧಿಕೃತ www.sealanemaritime.in ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಅಲ್ಲಿ ನೀವು ಮೊದಲು ಈ ಹುದ್ದೆ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಚೆನ್ನಾಗಿ ಓದಿಕೊಳ್ಳಿ.
- ನಂತರ ನೀವು ಹೋಂ ಪೇಜ್ ಗೆ ಬಂದಾಗ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಪೋಸ್ಟನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ನಂತರ ಆನ್‌ಲೈನ್‌ನಲ್ಲಿ ಅನ್ವಯಿಸು ಲಿಂಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಒಂದು ಫಾರ್ಮ್ ಓಪನ್ ಆಗುತ್ತದೆ, ಅದನ್ನು ನೀವು ಸರಿಯಾದ ದಾಖಲೆಗಳಲ್ಲಿ ಭರ್ತಿ ಮಾಡಿ.
- ನಂತರ ನಿಮಗೆ ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಲು ಕೇಳುತ್ತದೆ ಅಪ್ಲೋಡ್ ಮಾಡಿ.
- ಕೊನೆಯ ಹಂತದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಲು ಕೇಳುತ್ತದೆ, ನೀವು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬಹುದು.
- ಪಾವತಿ ಮಾಡಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಸುಲಭವಾಗಿ ಅರ್ಜಿ ಸಲ್ಲಿಸಬಹುದು.
- ಅರ್ಜಿಯನ್ನು ಸಲ್ಲಿಸುವ ಮೊದಲು ಫಾರ್ಮ್ ಗೆ ಸರಿಯಾದ ದಾಖಲೆಗಳಲ್ಲಿ ಸಲ್ಲಿಸಿ ಏಕೆಂದರೆ ತಪ್ಪಾದರೆ ಮತ್ತೊಮ್ಮೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ.
ಅರ್ಜಿಯನ್ನು ಸಲ್ಲಿಸುವ ಮೊದಲು ಸೂಚನೆಯನ್ನು ಓದಿಕೊಳ್ಳಿ
ಹೌದು ಗೆಳೆಯರೇ ಕೆಲವು ಅಭ್ಯರ್ಥಿಗಳು ಮಾಡುವ ಮೊದಲ ತಪ್ಪೇ ಇದು ಏಕೆಂದರೆ ಪ್ರತಿಯೊಂದು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಚೆನ್ನಾಗಿ ಓದಿಕೊಳ್ಳಿ. ನಮ್ಮ ಮಾಧ್ಯಮದಲ್ಲಿ ಈ ಹುದ್ದೆಗೆ ಬೇಕಾಗುವ ಪ್ರಮುಖ ಮಾಹಿತಿಯನ್ನು ನೀಡಲಾಗಿರುತ್ತದೆ, ಈ ಕಾರಣದಿಂದ ಅಧಿಸೂಚನೆಯನ್ನು ಚೆನ್ನಾಗಿ ಓದಿಕೊಳ್ಳಿ.
ಭಾರತೀಯ ಮರ್ಚೆಂಟ್ ನೇವಿ ನೇಮಕಾತಿಗೆ ಅವರ ಅಧಿಕೃತ ವೆಬ್ಸೈಟ್ ನಲ್ಲಿ ಅಧಿಸೂಚನೆಯನ್ನು ನೀಡಲಾಗಿದೆ, ಅದನ್ನು ನೀವು ಡೌನ್ಲೋಡ್ ಮಾಡಿಕೊಂಡು ಚೆನ್ನಾಗಿ ಓದಿಕೊಳ್ಳಿ. ಏಕೆಂದರೆ ಈ ಹುದ್ದೆಯಲ್ಲಿ ಬೇಕಾಗುವ ಅರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಕೊನೆಯ ದಿನಾಂಕ, ಪ್ರಾರಂಭದ ದಿನಾಂಕ, ಆಯ್ಕೆ ಪ್ರಕ್ರಿಯೆ ಮುಂತಾದ ಮಾಹಿತಿಗಳು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ. ಅದರಿಂದ ಅಧಿಸೂಚನೆಯನ್ನು ಓದಿಕೊಳ್ಳಿ. ಇಲ್ಲವಾದಲ್ಲಿ ಕೆಲವು ಸಮಸ್ಯೆಗಳಿಗೆ ಅಥವಾ ಕೆಲವು ದಾಖಲೆಗಳ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹ ಆಗಿದ್ದರೆ ಆದಷ್ಟು ಬೇಗ ಕೊನೆಯ ದಿನಾಂಕ ದೊಳಗೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ಹಾಗೆ ನಿಮ್ಮ ಗೆಳೆಯರಿಗೆ ಈ ಮಾಹಿತಿಯನ್ನು ತಿಳಿಸಿ ಏಕೆಂದರೆ ಅವರು ಈ ಹುದ್ದೆಗೆ ಅರ್ಹರಾಗಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು