Kisan Mandhan Scheme: ತಿಂಗಳಿಗೆ 55 ರೂಪಾಯಿ ಉಳಿಸಿ, ಪ್ರತಿ ತಿಂಗಳು 3000 ಪಿಂಚಣಿ ಪಡೆಯಿರಿ…! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ…!
ನಮಸ್ಕಾರ ಬಂಧುಗಳೇ ಕೇಂದ್ರ ಸರ್ಕಾರವು ದೇಶದ ರೈತರನ್ನು ಸ್ವಾವಲಂಬಿಗಳಾಗಿರಬೇಕು ಹಾಗೂ ಆರ್ಥಿಕವಾಗಿ ಅವರಿಗೆ ಭದ್ರತೆ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆ ಅಡಿಯಲ್ಲಿ ದೇಶದ ರೈತರು ತಿಂಗಳಿಗೆ ರೂ 3000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಉಪಯೋಗವಾಗಲಿ ಎಂದು ಹಲವಾರು ಯೋಜನೆಯನ್ನು ತರುತ್ತಿದರೆ. ಅದರಲ್ಲಿ ಈ ಯೋಜನೆಯು ಒಂದು ಸಹ. ಈ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಅಥವಾ ರೈತರು ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸಲು ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯನ್ನು ತಂದಿದೆ. ಈ ಯೋಜನೆಗೆ ಅರ್ಹತೆ 18 ವರ್ಷದಿಂದ 40 ವರ್ಷಗಳ ನಡುವೆ ಇರುತ್ತದೆ. ಈ ಯೋಚನೆಗೆ ಅರ್ಜಿ ಸಲ್ಲಿಸಲು ರಾಜ್ಯದ ಭೂ ದಾಖಲೆಗಳ ಪ್ರಕಾರ 2 ಹೆಕ್ಟರ್ ಕೃಷಿ ಯೋಗ್ಯ ಭೂಮಿಯನ್ನು ಹೊಂದಿದ್ದರೆ ಸಾಕು ಅಂಥವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಹಾಗಾದರೆ ಈ ಯೋಜನೆಯ ವಿವರ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲ ವಿವರವನ್ನು ಈ ಕೆಳಭಾಗದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆ
ಈ ಯೋಜನೆಯನ್ನು ಕೇಂದ್ರ ಸರ್ಕಾರವು ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿರುವ ರೈತರಿಗೆ ಈ ಯೋಜನೆಯನ್ನು ಅನುಷ್ಠಾನಕ್ಕಾಗಿ ತರಲಾಗಿದೆ. ವೃದ್ಧ ರೈತರಿಗೆ ಆರ್ಥಿಕ ನೆರವು ಮತ್ತು ಭದ್ರತೆಯನ್ನು ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯನ್ನು ತರಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯನ್ನು ಸೆಪ್ಟೆಂಬರ್ 12, 2019 ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯ ಉದ್ದೇಶವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ಮತ್ತು ಭದ್ರತೆಯನ್ನು ಒದಗಿಸುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿತ್ತು. ಈ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧ ರೈತರಿಗೆ ಮಾಸಿಕ 3000 ರೂಗಳನ್ನು ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.
ವೃದ್ಧ ರೈತರು ತಿಂಗಳಿಗೆ 3000 ಪಿಂಚಣಿ ಹಣ ಹೇಗೆ ಪಡೆದುಕೊಳ್ಳುವುದು
ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆ ಅಡಿಯಲ್ಲಿ ರೈತರಿಗೆ ಮಾಸಿಕ 3000 ರೂಗಳನ್ನು ನೀಡಲಾಗುತ್ತದೆ. ಒಂದು ವೇಳೆ ಫಲಾನುಭವಿ ರೈತ ಮೃತಪಟ್ಟಲ್ಲಿ ಅವರ ಪತ್ನಿಗೆ ತಿಂಗಳಿಗೆ ರೂ 1500 ಹಣವನ್ನು ವಿತರಣೆ ಮಾಡಲಾಗುತ್ತದೆ.
ಈ ಯೋಜನೆಗೆ 18 ವರ್ಷದಿಂದ 40 ವರ್ಷದೊಳಗೆ ಇರುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ವಯಸ್ಸಿನಲ್ಲಿರುವ ರೈತರು ಈ ಯೋಜನೆ ಅಡಿಯಲ್ಲಿ ತಿಂಗಳಿಗೆ 55 ರಿಂದ 200ವರೆಗೆ ಡಿಪಾಸಿಟ್ ಮಾಡಬೇಕಾಗುತ್ತದೆ. ಈ ಡಿಪಾಸಿಟ್ ಅನ್ನು 60 ವರ್ಷದವರೆಗೆ ಮಾಡಿದರೆ 60 ವರ್ಷ ದಾಟಿದ ನಂತರ ಅವರಿಗೆ ತಿಂಗಳಿಗೆ 3000 ಪಿಂಚಣಿ ಹಣವನ್ನು ಒದಗಿಸಲಾಗುತ್ತದೆ. ಈ ಯೋಜನೆಯಿಂದ ವೃದ್ಧ ರೈತರು ಅಂದರೆ 60 ವರ್ಷ ಮೇಲ್ಪಟ್ಟ ರೈತರು ಆರ್ಥಿಕ ನೆರವು ಮತ್ತು ಭದ್ರತೆಗೆ ಉಪಯೋಗವಾಗುತ್ತದೆ.
ಈ ಯೋಜನೆಯಿಂದ ಸಿಗುವ ಪ್ರಯೋಜನ
- ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಗೆ ದೇಶದಲ್ಲಿ ಇರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವನ್ನು ಒದಗಿಸುವ ಗುರಿಯನ್ನು ಹೊಂದಿದೆ.
- ರೈತರು ಸಾಮಾನ್ಯವಾಗಿ ತಮ್ಮ ವೃದ್ಧಾಪ್ಯದಲ್ಲಿ ಕನಿಷ್ಠ ಉಳಿತಾಯ ಹೊಂದಿರುವುದಿಲ್ಲ.
- ಈ ಯೋಜನೆ ಅಡಿಯಲ್ಲಿ ರೈತರು 60 ವರ್ಷ ಮೇಲ್ಪಟ್ಟ ನಂತರ ತಿಂಗಳಿಗೆ 3000 ಹಣವನ್ನು ಪಡೆದುಕೊಳ್ಳಬಹುದಾಗಿದೆ.
- ಈ ಯೋಜನೆ ಅಡಿಯಲ್ಲಿ ವೃದ್ಧಾಪ್ಯವನ್ನು ತಲುಪಿದ ನಂತರ ಆರೋಗ್ಯಕರ ಮತ್ತು ಸಂತೋಷ ಜೀವನವನ್ನು ನಡೆಸಲು ಈ ಯೋಜನೆಯ ಹಣ ಸಹಾಯವಾಗುತ್ತದೆ.
ಈ ಯೋಜನೆಗೆ ಯಾರು ಅರ್ಹರಾಗಿರುತ್ತಾರೆ
ಕೇಂದ್ರ ಸರ್ಕಾರವು ರೈತರಿಗೆ ಈ ಯೋಜನೆಯಿಂದ ಉಪಯೋಗವಾಗುತ್ತದೆ ಎಂದು ಭಾವಿಸಬಹುದು. ವೃದ್ಧ ರೈತರಿಗೆ ಆರ್ಥಿಕ ನೆರವು, ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ರೈತ ಬಂಧುಗಳಿಗೆ ಲಾಭದಾಯಕವಾಗುತ್ತದೆ. 2 ಹೆಕ್ಟರ್ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯಲ್ಲಿ ಲಾಭ ಪಡೆದುಕೊಳ್ಳಬಹುದು. ಈ ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರಾಗುತ್ತಾರೆ.
ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯ ವಿವರ
- ಈ ಯೋಜನೆಗೆ ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರಾಗುತ್ತಾರೆ.
- ಭಾರತೀಯ ಜೀವ ವಿಮಾ ನಿಗಮದಿಂದ ನಿರ್ಮಿಸಲ್ಪಟ್ಟಿರುವ ಪಿಂಚಣಿ ಯೋಜನೆಯಾಗಿದೆ, ಈ ನಿಗಮದಿಂದ ಪಿಂಚಣಿ ಪಾವತಿಸಲಾಗುತ್ತದೆ.
- 18 ವರ್ಷ ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ.
- ರೈತರು ಈ ಯೋಜನೆಗೆ ತಿಂಗಳಿಗೆ ರೂ 55 ರಿಂದ 200 ವರೆಗೆ ಡಿಪಾಸಿಟ್ ಮಾಡಬೇಕಾಗುತ್ತದೆ.
- ಸಣ್ಣ ಮತ್ತು ಅತಿ ಸಣ್ಣ ರೈತರು 60 ವರ್ಷ ಮೇಲ್ಪಟ್ಟ ನಂತರ ತಿಂಗಳಿಗೆ 3000 ಹಣವನ್ನು ಪಡೆದುಕೊಳ್ಳಬಹುದಾಗಿದೆ.
- ಒಂದು ವೇಳೆ ಈ ಯೋಜನೆಯಿಂದ ಹೊರಗುಳಿಯಲು ಬಯಸಿದರೆ ಅಂತಹ ಸಮಯದಲ್ಲಿ ರೈತರನ್ನು ಈ ಯೋಜನೆಯಿಂದ ಹೊರಗುಳಿಯಲಾಗುತ್ತದೆ. ಅದಲ್ಲದೆ ಇದುವರೆಗೂ ಪಿಂಚಣಿ ನಿಧಿಗೆ ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ.
- ರೈತರು ನಿವೃತ್ತಿಯ ಮೊದಲು ಮರಣ ಹೊಂದಿದ್ದರೆ ಅಂತಹ ಸಮಯದಲ್ಲಿ ಅವರ ವಯಸ್ಸನ್ನು ತಲುಪುವವರೆಗೆ ಉಳಿದ ಕೊಡಿಗೆಗಳನ್ನು ಪಾವತಿಸುವ ಮೂಲಕ ಸಂಗಾತಿಯು ಅಥವಾ ಹೆಂಡತಿಯು ಯೋಜನೆಯನ್ನು ಮುಂದುವರಿಯಬಹುದು.
- ಒಂದು ವೇಳೆ ನಿವೃತ್ತಿಯ ಮೊದಲು ರೈತರ ಮರಣ ಹೊಂದಿದ್ದರೆ ಅಂತಹ ಸಮಯದಲ್ಲಿ ಸಂಗಾತಿಯು ಅಥವಾ ಹೆಂಡತಿಯು ಮುಂದುವರಿಸಲು ನಿರ್ಧರಿಸಿದರೆ ಆಗ ಬಡ್ಡಿಯೊಂದಿಗೆ ರೈತರು ನೀಡಿದ ಸಂಪೂರ್ಣ ಕೊಡುಗೆಯನ್ನು ಸಂಗಾತಿ ಅಥವಾ ಹೆಂಡತಿಗೆ ಪಾವತಿ ಮಾಡಲಾಗುತ್ತದೆ.
- ಸಂಗಾತಿ ಅಥವಾ ಹೆಂಡತಿ ಇಲ್ಲದಿದ್ದರೆ ಅಂತಹ ಸಮಯದಲ್ಲಿ ಬಡ್ಡಿ ಸೇರಿದಂತೆ ಸಂಪೂರ್ಣ ಕೊಡುಗೆಯನ್ನು ನಾಮಿನಿಗೆ ಪಾವತಿ ಮಾಡಲಾಗುತ್ತದೆ.
- ನಿವೃತ್ತಿಯ ನಂತರ ರೈತರು ಮರಣ ಹೊಂದಿದ್ದರೆ ಅಂತಹ ಸಮಯದಲ್ಲಿ ಈ ಹಣವನ್ನು ಸಂಗಾತಿ ಅಥವಾ ಹೆಂಡತಿಗೆ ಪಿಂಚಣಿಯ ಹಣವನ್ನು 50% ನೀಡಲಾಗುತ್ತದೆ. ಅಂದರೆ ತಿಂಗಳಿಗೆ 1,500 ಅನ್ನು ನೀಡಲಾಗುತ್ತದೆ.
- ಈ ಯೋಜನೆಯಿಂದ ಪ್ರಯೋಜನ ಪಡೆಯಲು ಬಳಸಿದ ಅದೇ ಬ್ಯಾಂಕ್ ಖಾತೆಯಿಂದ ನೇರವಾಗಿ ಚಂದದಾರಿಕೆಯನ್ನು ಪಾವತಿಸಬಹುದು.
- ಈ ಯೋಜನೆಗೆ ಯಾವುದೇ ರೈತರು csc ಕೇಂದ್ರಗಳಲ್ಲಿ ನೋಂದಣಿಗಾಗಿ ಪಾವತಿ ಮಾಡಬೇಕಾಗಿಲ್ಲ.
- ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಉಚಿತವಾಗಿರುತ್ತದೆ.
ಹಾಗಾದರೆ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಬೇಕಾಗುವ ದಾಖಲೆ ಮತ್ತು ನೋಂದಣಿ ಮಾಡಿಕೊಳ್ಳುವ ವಿಧಾನವನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಬೇಕಾಗುವ ಪ್ರಮುಖ ದಾಖಲೆಗಳು
ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕೆಂದರೆ ಈ ಕೆಳಗೆ ನೀಡಲಾಗಿರುವ ಅಗತ್ಯವಿರುವ ದಾಖಲೆಗಳನ್ನು ಹೊಂದಿರಬೇಕು.
- ರೈತರ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಫೋಟೋ
- ಗುರುತಿನ ಚೀಟಿ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ
- ವಯಸ್ಸಿನ ಪ್ರಮಾಣ ಪತ್ರ
- ಕೃಷಿ ಭೂಮಿಯ ದಾಖಲೆಗಳು
ಮುಂತಾದ ದಾಖಲೆಗಳನ್ನು ಹೊಂದಿದರೆ ಸಾಕು ನೀವು ಈ ಯೋಜನೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ವಿಧಾನ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
- ಮೊದಲು ನೀವು ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯ ಅಧಿಕೃತ https://maandhan.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ‘ಸೇವೆಗಳು’ ಎಂಬ ವಿಭಾಗದಲ್ಲಿ ‘ಹೊಸ ನೋಂದಣಿ’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ನಿಮಗೆ ‘ಸ್ವಯಂ ನೊಂದಣಿ’ ಅಥವಾ ‘CSC VLE’ ಗಾಗಿ ಹೊಸಪುಟವು ಕಾಣಿಸುತ್ತದೆ.
- ಅಲ್ಲಿ ನೀವು ಸ್ವಯಂ ನೊಂದಣಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೀವು ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂಂದಿಸಿ, ನಂತರ ‘ಮುಂದುವರಿಸಿ’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯ ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ.
- ಅಲ್ಲಿ ನೀವು ‘ಸೇವೆ’ ವಿಭಾಗದಲ್ಲಿ ‘ರಿಜಿಸ್ಟರ್’ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಕ್ಲಿಕ್ ಮಾಡಿದ ನಂತರ ಅಲ್ಲಿ ನೀವು ‘ಸ್ಕೀಮ್ ಹೆಸರು’ ಅಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.
- ಆಯ್ಕೆ ಮಾಡಿಕೊಂಡು ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಈಗ ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆ ಚಂದದಾರರ ನೋಂದಣಿ ಫಾರಂ ಓಪನ್ ಆಗುತ್ತದೆ.
- ಫಾರಂನಲ್ಲಿ ಕೇಳುವ ಎಲ್ಲ ದಾಖಲೆಗಳನ್ನು ಭರ್ತಿ ಮಾಡಿ ‘ಸಲ್ಲಿಸಿ’ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಈ ರೀತಿ ಮಾಡಿದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಮನಧನ್ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಈ ಯೋಜನೆಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೇವಾಕೇಂದ್ರ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.