KPSC recruitment 2024: KPSC ಲ್ಯಾಂಡ್ ಸರ್ವೇಯರ್ ನೇಮಕಾತಿ…! 364 ಭೂಮಾಪಕ ಹುದ್ದೆಗೆ ಅರ್ಜಿ ಆಹ್ವಾನ…!

KPSC recruitment 2024: KPSC ಲ್ಯಾಂಡ್ ಸರ್ವೇಯರ್ ನೇಮಕಾತಿ…! 364 ಭೂಮಾಪಕ ಹುದ್ದೆಗೆ ಅರ್ಜಿ ಆಹ್ವಾನ…!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ಕರ್ನಾಟಕ ಲೋಕಸೇವಾ ಆಯೋಗ [KPSC] ದ ಅಧಿಸೂಚನೆಯ ಪ್ರಕಾರ KPSC ಲ್ಯಾಂಡ್ ಸರ್ವೇಯರ್ ನಲ್ಲಿ 364 ಹುದ್ದೆಗಳಿಗೆ ನೇಮಕಾತಿ ಪ್ರಾರಂಭ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ. ಏಪ್ರಿಲ್ 10 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ಕೆಳಗೆ ನೀಡಿರುವ KPSC ಲ್ಯಾಂಡ್ ಸರ್ವೇಯರ್ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ.

KPSC ಲ್ಯಾಂಡ್ ಸರ್ವೇಯರ್ ನೇಮಕಾತಿ 2024

ಕರ್ನಾಟಕ ಲೋಕಸೇವಾ ಆಯೋಗ [KPSC] ಅಧಿಸೂಚನೆಯ ಪ್ರಕಾರ 364 KPSC KPSC ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಕೆಲಸವನ್ನು ಸೇರಿಕೊಳ್ಳಬೇಕು ಎಂಬ ಆಸೆ ಇರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಪಿಯುಸಿ ಪಾಸಾದವರು ಸಹ ಈ ಹುದ್ದೆಗೆ ಅರ್ಜಿಯನ್ನು ಹಾಕಬಹುದು. ಆನ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಮಾರ್ಚ್ 11 ಪ್ರಾರಂಭದ ದಿನಾಂಕವಾಗಿದೆ. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? ಲ್ಯಾಂಡ್ ಸರ್ವೇಯರ್ ಹುದ್ದೆಗೆ ಪ್ರತಿ ತಿಂಗಳ ಸಂಬಳ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಅರ್ಜಿ ಹಾಕಲು ಅರ್ಹತೆ? ಈ ಹುದ್ದೆಗೆ ಯಾವ ರೀತಿ ಆಯ್ಕೆ ಮಾಡಿಕೊಳ್ಳುತ್ತಾರೆ? ಎಲ್ಲ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಿಕೊಡಲಾಗಿದೆ.

KPSC ಲ್ಯಾಂಡ್ ಸರ್ವೇಯರ್ ನೇಮಕಾತಿ ವಿವರ

  • ಸಂಸ್ಥೆಯ ಹೆಸರು: ಕರ್ನಾಟಕ ಲೋಕಸೇವಾ ಆಯೋಗ
  • ಖಾಲಿ ಹುದ್ದೆಯ ಸಂಖ್ಯೆ: 364
  • ಪೋಸ್ಟ್ ನ ಹೆಸರು: ಲ್ಯಾಂಡ್ ಸರ್ವೇಯರ್ ಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 10 2024
  • ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಮಾರ್ಚ್ 11 2024
  • ಈ ಹುದ್ದೆಗೆ ಆಯ್ಕೆ ಮಾಡುವ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ, ಕನ್ನಡ ಭಾಷಾ ಪರೀಕ್ಷೆ
  • ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್: https://kpsc.kar.nic.in

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. KPSC ಲ್ಯಾಂಡ್ ಸರ್ವೇಯರ್ ನೇಮಕಾತಿ 2024 ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿದೆ.

ವಯೋಮಿತಿ

ಕರ್ನಾಟಕ ಲೋಕಸೇವಾ ಆಯೋಗ [KPSC] ದ ಅಧಿಸೂಚನೆಯ ಪ್ರಕಾರ 10 ಏಪ್ರಿಲ್ ರಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಮತ್ತು 35 ವರ್ಷಕ್ಕಿಂತ ಮೀರಿರಬಾರದು. 35 ವರ್ಷದ ಮೇಲಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಈ ಹುದ್ದೆಗೆ ವಯೋಮಿತಿ ಸಡಿಲಿಕೆ ಸಹ ಮಾಡಲಾಗಿದೆ.

ವಯೋಮಿತಿ ಸಡಿಲಿಕೆ

  • SC/ST/Cat-1 ಅಭ್ಯರ್ಥಿಗಳಿಗೆ: 05 ವರ್ಷ
  • PWD/ವಿಧವೆ ಅಭ್ಯರ್ಥಿಗಳಿಗೆ: 10 ವರ್ಷ
  • Cat-2A/2B/3A/3B ಅಭ್ಯರ್ಥಿಗಳಿಗೆ: 03 ವರ್ಷ

ವೇತನ

KPSC ಲ್ಯಾಂಡ್ ಸರ್ವೇಯರ್ ನೇಮಕಾತಿ ಹುದ್ದೆಗೆ ಅರ್ಜಿಯನ್ನು ಹಾಕಿ ಎಕ್ಸಾಮ್ ಬರೆದು ಟ್ರೈನಿಂಗ್ ತೆಗೆದು ಕೊಂಡು ಆಯ್ಕೆಯಾದ ಮೇಲೆ ಅಭ್ಯರ್ಥಿಗಳಿಗೆ ರೂ.23500 ರಿಂದ ರೂ.47650 ರವರಿಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ. ಲ್ಯಾಂಡ್ ಸರ್ವೇಯರ್ [HK] ಮತ್ತು ಲ್ಯಾಂಡ್ ಸರ್ವೇಯರ್ [RPC] ಈ ಎರಡು KPSC ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಒಂದೇ ರೀತಿಯಲ್ಲಿ ವೇತನವನ್ನು ನೀಡಲಾಗುತ್ತದೆ.

KPSC ಲ್ಯಾಂಡ್ ಸರ್ವೇಯರ್ ನಲ್ಲಿ ಖಾಲಿ ಇರುವ ಹುದ್ದೆಗಳು

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಆಸಕ್ತಿ ಇರುವ ಅಭ್ಯರ್ಥಿಗಳು 364 ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅದರಲ್ಲಿ 264 ಹುದ್ದೆಗಳಿಗೆ ಕರ್ನಾಟಕ ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಮತ್ತು ಇನ್ನುಳಿದ 100 ಹುದ್ದೆಗಳಿಗೆ ಹೈದರಾಬಾದ್ ಮತ್ತು ಕರ್ನಾಟಕದ ವಿಭಾಗಕ್ಕೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಭಾಗದಲ್ಲಿ ನೀಡಲಾಗಿದೆ.

  • ಲ್ಯಾಂಡ್ ಸರ್ವೇಯರ್ [HK]: 264
  • ಲ್ಯಾಂಡ್ ಸರ್ವೇಯರ್ [RPC]: 100

ಅರ್ಹತೆ

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ [KPSC] ವು ತಿಳಿಸಿರುವ ಅರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳ ಅರ್ಹತೆ ಕಡ್ಡಾಯವಾಗಿದೆ.

  • KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹತೆ. ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪಿಯುಸಿ, ಐಟಿಐ ಡಿಪ್ಲೋಮಾ, ಬಿಇ, ಅಥವಾ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿರಬೇಕು.
  • ಪಿಯುಸಿಯಲ್ಲಿ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಗಣಿತ ವಿಷಯದಲ್ಲಿ 60% ಮೇಲೆ ಅಂಕಗಳನ್ನು ಗಳಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಕೆಲಸದ ಸ್ಥಳ

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿಯನ್ನು ಹಾಕಿದ ನಂತರ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ತರಬೇತಿಯೂ ಸಹ ನೀಡಲಾಗುತ್ತದೆ. ಕರ್ನಾಟಕದಲ್ಲಿ ಈ ಹುದ್ದೆಗೆ ಖಾಲಿ ಇರುವ ಸ್ಥಳದಲ್ಲಿ ನಿಮ್ಮ ಕೆಲಸವನ್ನು ನೀಡಲಾಗುತ್ತದೆ.

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಶುಲ್ಕ

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ವರ್ಗಗಳ ಆಧಾರದ ಮೇಲೆ ಅರ್ಜಿಯ ಶುಲ್ಕವನ್ನು ವಿಧಿಸಲಾಗುತ್ತದೆ

  • SC/ST/Cat-I/PWD ಅಭ್ಯರ್ಥಿಗಳಿಗೆ ಹಣ ಪಾವತಿ ಮಾಡುವಂತತಿಲ್ಲ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ.50
  • ಕ್ಯಾಟ್-2A/2B/3A/3B ಅಭ್ಯರ್ಥಿಗಳಿಗೆ: ರೂ.300
  • ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.600

ಈ ಹಣವನ್ನು ನೀವು ಸುಲಭವಾಗಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್, ಯುಪಿಐ ಮೂಲಕ ಸುಲಭವಾಗಿ ಆನ್ಲೈನ್ ನಲ್ಲಿ ಹಣವನ್ನು ಪಾವತಿಸಬಹುದು. ಹಣವನ್ನು ಪಾವತಿಸುವ ಮೊದಲು ಎಲ್ಲ ಮಾಹಿತಿಯನ್ನು ಸರಿಯಾಗಿ ಒದಗಿಸಿ ಸೂಕ್ಷ್ಮವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಆಯ್ಕೆ ಮಾಡುವ ಪ್ರಕ್ರಿಯೆ

ಕರ್ನಾಟಕ ಲೋಕಸೇವಾ ಆಯೋಗ [KPSC] ದ ಅಧಿಸೂಚನೆಯ ಪ್ರಕಾರ KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು.

  • ಮೊದಲು ಕನ್ನಡ ಭಾಷಾ ಪರೀಕ್ಷೆ
  • ಸ್ಪರ್ಧಾತ್ಮಕ ಪರೀಕ್ಷೆ

ಎರಡು ಹಂತದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗುತ್ತಾರೆ.

KPSC ಲ್ಯಾಂಡ್ ಸರ್ವೇಯರ್ ಹುದ್ದೆಯ ಪ್ರಮುಖ ದಿನಾಂಕಗಳು

ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ದಿನಾಂಕಗಳು ಕೆಳಭಾಗದಲ್ಲಿ ನೀಡಲಾಗಿದೆ

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 11 ಮಾರ್ಚ್ 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಏಪ್ರಿಲ್ 2024
  • ಕನ್ನಡ ಭಾಷಾ ಪರೀಕ್ಷೆ ದಿನಾಂಕ: 20 ಜುಲೈ 2024
  • ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ; 21 ಜುಲೈ 2024

KPSC ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಆಧಾರ್ ಕಾರ್ಡಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಗ್ರಾಮೀಣ ಮಧ್ಯಮ ಅಥವಾ ಕನ್ನಡ ಮಾಧ್ಯಮ [ ದಾಖಲೆಗಳು]
  • ಅಭ್ಯರ್ಥಿಗಳ ಮಾರ್ಕ್ಸ್ ಕಾರ್ಡ್
  • ಮಾಜಿ ಸೈನಿಕರಾಗಿದ್ದರೆ ಪ್ರಮಾಣ ಪತ್ರ
  • ಅಂಗವಿಕಲರಾಗಿದ್ದರೆ ಪ್ರಮಾಣ ಪತ್ರ

KPSC ಲ್ಯಾಂಡ್ ಸರ್ವೇಯರ್ ಅರ್ಜಿ ಸಲ್ಲಿಸುವ ವಿಧಾನ

KPSC ಲ್ಯಾಂಡ್ ಸರ್ವೇಯರ್ ನೇಮಕಾತಿ 2024 ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ [KPSC] ದ ಅಧಿಸೂಚನೆಯನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಏಕೆಂದರೆ ಈ ಮಾಧ್ಯಮದಲ್ಲಿ ಹುದ್ದೆಗೆ ಬೇಕಾಗಿರುವ ಪ್ರಮುಖ ವಿಷಯವನ್ನು ಮಾತ್ರ ತಿಳಿಸಲಾಗಿರುತ್ತದೆ ಇದರಿಂದ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಚೆನ್ನಾಗಿ ಓದಿಕೊಳ್ಳಿ.

  • ಮೊದಲು ನೀವು KPSC ಲ್ಯಾಂಡ್ ಸರ್ವೇಯರ್ ಯ ಅಧಿಕೃತ https://kpsc.kar.nic.in ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ. ನೀವು ಮೊದಲೇ ಬಾರಿ KPSC ಹುದ್ದೆಗೆ ಅರ್ಜಿ ಹಾಕುತ್ತಿದ್ದಾರೆ ನಿಮ್ಮ ಹೆಸರು, ಫೋನ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.
  • ರಿಜಿಸ್ಟರ್ ಮಾಡಿಕೊಂಡ ನಂತರ ಲಾಗಿನ್ ಮಾಡಿಕೊಳ್ಳಿ. ಅಲ್ಲಿ ನಿಮಗೆ ಕಾಣಬಹುದು KPSC ಲ್ಯಾಂಡ್ ಸರ್ವೇಯರ್ 2024 ಅಧಿಸೂಚನೆಯನ್ನು ಹುಡುಕಿ.
  • ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಚೆನ್ನಾಗಿ ಓದಿ.
  • KPSC ಲ್ಯಾಂಡ್ ಸರ್ವೇಯರ್ 2024 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ.
  • ಮತ್ತು ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ.
  • ಕೊನೆಯ ಹಂತದಲ್ಲಿ ನೀವು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ದಾಖಲೆಗಳನ್ನು ಭರ್ತಿ ಮಾಡುವ ಮೊದಲು 2 ರಿಂದ 3 ಬಾರಿ ಪರಿಶೀಲನೆ ಮಾಡಿ ದಾಖಲೆಗಳನ್ನು ಭರ್ತಿ ಮಾಡಿ. ಇಲ್ಲವಾದಲ್ಲಿ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ.
  • ನಂತರ ನೀವು ಅರ್ಜಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಈ ರೀತಿ ಮಾಡಿದರೆ ಸಾಕು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಗಮನಿಸಿ

ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ

ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.

ಧನ್ಯವಾದಗಳು

WhatsApp Group Join Now
Telegram Group Join Now

Leave a Comment