Labour Card Scholarship: ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ..! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ ಕಾರ್ಮಿಕ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಕಾರ್ಮಿಕರ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಧನಸಹಾಯ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಈ ಯೋಜನೆ ತರಲಾಗಿದೆ. ಈ ಯೋಜನೆಯಿಂದ ಕರ್ನಾಟಕದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ. 2023-24ನೆಯ ಶೈಕ್ಷಣಿಕ ಧನಸಹಾಯ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ಧನಸಹಾಯವನ್ನು ಪಡೆಯಲು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ. ಹಾಗಾದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಹತೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ವಿಧಾನ ಈ ಎಲ್ಲಾ ಮಾಹಿತಿಯನ್ನು ಕೆಳಭಾಗದಲ್ಲಿ ನೀಡಲಾಗಿದೆ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ 2024 [Labour Card Scholarship2024]
ರಾಜ್ಯಸರ್ಕಾರವು ಕಾರ್ಮಿಕ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗವಾಗಲಿ ಎಂದು ಈ ಯೋಜನೆಯನ್ನು ತರಲಾಗಿದೆ. ಈ ಯೋಜನೆ ಅಡಿಯಿಂದ ಕಾರ್ಮಿಕರ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ ಎಂದು ಭಾವಿಸಬಹುದು. ಕಾರ್ಮಿಕ ಇಲಾಖೆಯ ವಿದ್ಯಾರ್ಥಿವೇತನವನ್ನು ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಬೇಕು. ಒಂದು ವೇಳೆ SSP ತಂತ್ರಾಂಶದ ಮುಖಾಂತರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಹಾಗಾದರೆ ಕಟ್ಟಡ ಕಾರ್ಮಿಕರ ಮಕ್ಕಳು ಈ ಯೋಜನೆಯ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಯ ಬಗ್ಗೆ ಈ ಕೆಳಭಾಗದಲ್ಲಿ ನೀಡಲಾಗಿದೆ.
ಕಾರ್ಮಿಕರ ಇಲಾಖೆಯ ವಿದ್ಯಾರ್ಥಿಗಳು ಧನ ಸಹಾಯ ಪಡೆಯಲುಅರ್ಜಿಯನ್ನು ಸಲ್ಲಿಸಲು ಅರ್ಹತೆ
ಹೌದು ಗೆಳೆಯರೇ, ನೀವೇನಾದರೂ ಕಟ್ಟಡ ಕಾರ್ಮಿಕರ ಮಕ್ಕಳಾಗಿದ್ದರೆ ನೀವು ಕಾರ್ಮಿಕ ಇಲಾಖೆಯ ಈ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು. ಈ ಕೆಳಭಾಗದಲ್ಲಿ ನೀಡಲಾಗಿರುವ ಅರ್ಹತೆಯನ್ನು ಹೊಂದಿರಬೇಕು.
- ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಲೇಬರ್ ಕಾರ್ಡ್/ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರ ವಿದ್ಯಾರ್ಥಿಗಳು/ಮಕ್ಕಳು ಕರ್ನಾಟಕದ ನಿವಾಸಿಯಾಗಿರಬೇಕು.
- ಲೇಬರ್ ಕಾರ್ಡ್/ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳು ಈ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
- ಈ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಹತ್ತನೇ ತರಗತಿ ಅಥವಾ ಪದವಿ ಸ್ನಾನಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಅರ್ಜಿಯನ್ನು ಸಲ್ಲಿಸುವ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಯಿಂದ ಕಡಿಮೆ ಇರಬೇಕು
- ಈ ಯೋಜನೆಯಲ್ಲಿ ಲಾಭ ಪಡೆದುಕೊಳ್ಳಬೇಕೆಂದರೆ ಆ ಮನೆಯ ಒಬ್ಬ ಮಗುವಿಗೆ ಮಾತ್ರ.
ಈ ಮೇಲೆ ನೀಡಲಾಗಿರುವ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ನೀವು ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಯ ಬಗ್ಗೆ ಈ ಕೆಳಭಾಗದಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ನೀವೇನಾದರೂ ಕಟ್ಟಡ ಕಾರ್ಮಿಕ ಇಲಾಖೆಯಿಂದ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಕೆಳಗೆ ನೀಡಿರುವ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಸ್ಟೂಡೆಂಟ್ ಐಡಿ ಕಾರ್ಡ್
- ವಿದ್ಯಾರ್ಥಿಯ ಪೋಷಕರ ಆಧಾರ್ ಕಾರ್ಡ್
- ಬ್ಯಾಂಕ್ ನ ವಿವರಗಳು
- ಪಾಸ್ಪೋರ್ಟ್ ಅಳತೆಯ ಫೋಟೋ
- ಕಾರ್ಮಿಕ ಇಲಾಖೆಯಿಂದ ಪಡೆದುಕೊಂಡ ನೋಂದಣಿ ಕಾರ್ಡ್ [ಕಾರ್ಮಿಕರ ಕಾರ್ಡ್]
- ವ್ಯಾಸಂಗ ಪ್ರಮಾಣ ಪತ್ರ
- ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ ಈ ಎಲ್ಲಾ ದಾಖಲೆಯನ್ನು ಹೊಂದಿರಬೇಕು.
ಈ ಮೇಲೆ ನೀಡಲಾಗಿರುವ ಎಲ್ಲಾ ದಾಖಲೆಯನ್ನು ಹೊಂದಿದ್ದರೆ ಮಾತ್ರ ನೀವು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಹರಾಗುತ್ತೀರಾ. ಹಾಗಾದರೆ ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ
ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಮೊದಲು ನೀವು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ https://klwbapps.karnataka.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ವಿದ್ಯಾರ್ಥಿ ಲಾಗಿನ್ ಮಾಡಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಒಂದು ವೇಳೆ ಈ ವೆಬ್ಸೈಟ್ ಅನ್ನು ನೀವು ಮೊದಲೇ ಬಳಸುತ್ತಿದ್ದರೆ ಲಾಗಿನ್ ಮಾಡಿಕೊಳ್ಳಿ.
- ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಿ.
- ಲಾಗಿನ್ ಮಾಡಿಕೊಂಡಿದ ನಂತರ ಅಲ್ಲಿ ಈ ಯೋಜನೆಯ ಸೂಕ್ತವಾದ ವಿಷಯವನ್ನು ಓದಿಕೊಂಡು.
- ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ.
- ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲೋಡ್ ಮಾಡಲು ಕೇಳುತ್ತದೆ ಅಪ್ಲೋಡ್ ಮಾಡಿಕೊಳ್ಳಿ.
- ಅಪ್ಲೋಡ್ ಮಾಡಿಕೊಂಡ ನಂತರ ಕೊನೆಯ ಹಂತದಲ್ಲಿ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಈ ರೀತಿ ಮಾಡಿದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೇವಾ ಕೇಂದ್ರಗಳಿಗೆ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ಕೇಳುವ ಕೆಲವು ದಾಖಲೆಗಳನ್ನು ನೀಡಿ, ಈ ಯೋಜನೆಗೆ ನೀವು ಸುಲಭವಾಗಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಯನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿ. ಏಕೆಂದರೆ ಒಂದು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಈ ಕಾರಣದಿಂದ ಸರಿಯಾದ ದಾಖಲೆಯನ್ನು ಒದಗಿಸಿ, ಸರಿಯಾದ ದಾಖಲೆಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವಾಗ
ಹೌದು ಗೆಳೆಯರೇ, ನೀವೇನಾದರೂ ಕಟ್ಟಡ ಕಾರ್ಮಿಕರ ಮಕ್ಕಳಾಗಿದ್ದರೆ ನೀವು ಸುಲಭವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಮುಖ್ಯವಾಗಿ ನಿಮ್ಮ ತಂದೆಯ ಅಥವಾ ತಾಯಿಯ ಕಟ್ಟಡ ಕಾರ್ಮಿಕರ ಕಾರ್ಡ್ ಅನ್ನು ಹೊಂದಿರಬೇಕಾಗಿದೆ.
ಹಾಗಾದರೆ ಈ ಯೋಜನೆಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈಗಾಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗಿದೆ. ನೀವೇನಾದರೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ. ಅದಲ್ಲದೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಮೇ 2024 ಆಗಿರುವುದರಿಂದ ಈ ಯೋಜನೆ ಅರ್ಹರಾಗಿದ್ದು ಯಾರೆಲ್ಲಾ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಅಂತ ಇದ್ದೀರಾ ಅಂಥವರು ಆದಷ್ಟು ಬೇಗ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಈ ಯೋಜನೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅಥವಾ ಉನ್ನತ ಶಿಕ್ಷಣ ಪಡೆಯಲು ಧನಸಹಾಯವಾಗುತ್ತದೆ.
ಅರ್ಜಿಯನ್ನು ಸಲ್ಲಿಸುವ ಮೊದಲು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ
ಹೌದು ಗೆಳೆಯರೇ, ನೀವೇನಾದರೂ ಯಾವುದೇ ಯೋಜನೆಯಲ್ಲಿ ಸಿಗುವ ಲಾಭದ ಬಗ್ಗೆ ಅಥವಾ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಆ ಯೋಜನೆಯ ಎಲ್ಲಾ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಿ. ಏಕೆಂದರೆ ಕೆಲವು ಸಮಸ್ಯೆಗಳಿಗೆ ಒಳಗಾಗುತ್ತೀರಾ ಅದೇ ರೀತಿ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ಸ್ಕಾಲರ್ಶಿಪ್ ನ ಮಾಹಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಕಾರ್ಮಿಕ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಅದಲ್ಲದೆ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಅಥವಾ ಶಾಲೆಯ ಕ್ಲರ್ಕ್ ಅನ್ನು ಭೇಟಿ ನೀಡುವ ಮೂಲಕ ಈ ಯೋಜನೆಯ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಅಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ. ಈ ಯೋಜನೆಗೆ ಬೇಕಾಗುವ ಅರ್ಹತೆ, ದಾಖಲೆ, ಪ್ರಯೋಜನ ಮುಂತಾದ ಮಾಹಿತಿಯನ್ನು ತಿಳಿದುಕೊಂಡು ನಂತರ ಅರ್ಜಿ ಯನ್ನು ಸಲ್ಲಿಸಿ. ಈ ಯೋಜನೆಯಲ್ಲಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕೆಂದರೆ ಮುಖ್ಯವಾಗಿ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಅನ್ನು ವಿದ್ಯಾರ್ಥಿಗಳ ಪೋಷಕರು ಹೊಂದಿರಬೇಕಾಗಿರುತ್ತದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಸರಿಯಾದ ದಾಖಲೆಯನ್ನು ಒದಗಿಸಿ ಮತ್ತು ಸರಿಯಾದ ದಾಖಲೆಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ. ಇಲ್ಲವಾದಲ್ಲಿ ಸರ್ಕಾರದಿಂದ ನೀಡುವ ಸ್ಕಾಲರ್ಶಿಪ್ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲು ಸಮಸ್ಯೆಗೆ ಒಳಗಾಗಬಹುದು. ಸರ್ಕಾರವು ನೀಡುತ್ತಿರುವ ಈ ಯೋಜನೆ ಅಡಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಧನ ಸಹಾಯ ಉಪಯೋಗವಾಗುತ್ತದೆ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು