Aadhaar Card: ನಿಮ್ಮ ಬ್ಯಾಂಕ್ ಖಾತೆಯ ಹಣ ಸುರಕ್ಷತೆಯಾಗಿರಲು ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಿ..! ಆನ್ಲೈನ್ ಮೂಲಕ ಸುಲಭ ವಿಧಾನ ಇಲ್ಲಿದೆ ನೋಡಿ..!
ನಮಸ್ಕಾರ ಬಂಧುಗಳೇ ಪ್ರತಿಯೊಬ್ಬ ಭಾರತದ ಪ್ರಜೆಗಳು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. ಸಾಮಾನ್ಯವಾಗಿ ಆಧಾರ್ ಕಾರ್ಡ್ ಮಾಡಿಸಬೇಕಾದರೆ ಕಣ್ಣುಗಳ ಐರಿಸ್ ಅನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಕೈ ಬೆರಳುಗಳ ಗುರುತು ಪಡೆಯಲಾಗುತ್ತದೆ ಹಾಗೆ ನಿಮ್ಮ ಫೋಟೋವನ್ನು ತೆಗೆಯಲಾಗುತ್ತದೆ ಇದರ ಜೊತೆಗೆ ನಿಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸಿ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ.
ಅದಲ್ಲದೆ ನಿಮ್ಮ ಬ್ಯಾಂಕ್ ವ್ಯವಹಾರವನ್ನು ಮಾಡಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು. ಈಗ ಡಿಜಿಟಲ್ ಹ್ಯಾಕರ್ ಬುದ್ಧಿವಂತಿಕೆಯಿಂದ ಆಧಾರ್ ಸಂಖ್ಯೆ ಇದ್ದರೆ ಸಾಕು ಬ್ಯಾಂಕ್ ಖಾತೆಯ ಹಣವನ್ನು ಲೂಟಿ ಮಾಡುತ್ತಾರೆ. ಈ ಹಿನ್ನೆಲೆಯನ್ನು ನೋಡಿದರೆ ಆಧಾರ್ ಬಯೋಮೆಟ್ರಿಕ್ ಲಾಕ್ ಅವಶ್ಯಕತೆ ಆಗಿದೆ. ಹಾಗಾದರೆ ಆಧಾರ್ ಬಯೋಮೆಟ್ರಿಕ್ ಲಾಕ್ ಹೇಗೆ ಮಾಡಿಕೊಳ್ಳುವುದು ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ಏನಿದು ಆಧಾರ್ ಬಯೋಮೆಟ್ರಿಕ್ ಲಾಕ್
ವರ್ಷಗಳು ಬದಲಾಗುತ್ತಾ ದೇಶದಲ್ಲಿ ಟೆಕ್ನಾಲಜಿ ಹೆಚ್ಚಾಗುತ್ತಿದೆ. ಒಂದು ಕಡೆ ಟೆಕ್ನಾಲಜಿ ಅನುಕೂಲಕರವಾದರೆ ಕಳ್ಳರಿಗೂ ಅಥವಾ ಕೆಟ್ಟವರಿಗು ಹಾಗೂ ಹ್ಯಾಕರ್ ಗಳಿಗೆ ಈ ಟೆಕ್ನಾಲಜಿ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತಿದೆ. ಈಗಾಗಲೇ ಹ್ಯಾಕರ್ ಗಳು ಜನರ ಡಿಜಿಟಲ್ ಡಾಟಾವನ್ನು ಕದಿಯುವ ಹಂತವನ್ನು ಮೀರಿದ್ದಾರೆ. ಈಗ ಮಾತ್ರ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪಗಳು ಈಗಾಗಲೇ ಕೇಳಿರಬಹುದು.
ಆಧಾರ್ ಸಂಖ್ಯೆ ಇದ್ದರೆ ಸಾಕು ಯಾವುದೇ ಓಟಿಪಿಯನ್ನು ಪಡೆಯದೆ ಹ್ಯಾಕರ್ ಗಳು ಹಣ ಕದಿಯಬಲ್ಲರು ಎಂಬೆಲ್ಲ ಆರೋಪ ಈಗಾಗಲೇ ಕೇಳಿರಬಹುದು. ಹಾಗಾದರೆ ಇನ್ನು ಮುಂದೆ ಹ್ಯಾಕರ್ ಗಳು ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಹಾಕಬಾರದು, ಯಾವುದೇ ಡಾಟಾ ಕದಿಯಬಾರದು ಎಂದರೆ ಅದುವೇ ಆಧಾರ್ ಬಯೋಮೆಟ್ರಿಕ್ ಲಾಕ್ ಎಂದು ಹೇಳಬಹುದು.
ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಂಡರೆ ಹ್ಯಾಕರ್ ಗಳು ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕದಿಯಲು ಆಗುವುದಿಲ್ಲ. ಲಾಕ್ ಮಾಡಿಸುವುದರಿಂದ ನಿಮ್ಮ ಆಧಾರ್ ಅನ್ನು ಅಧಿಕೃತವಾಗಿ ಕಾನೂನು ಬಹಿರಾಗವಾಗಿ ಯಾವುದಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.
ಒಂದು ವೇಳೆ ನಿಮ್ಮ ವೈಯಕ್ತಿಕ ಡಾಟಾ ಮತ್ತು ಬ್ಯಾಂಕ್ ಖಾತೆಯಲ್ಲಿ ಹಣವನ್ನು ಕಾಪಾಡಿಕೊಳ್ಳಬೇಕೆಂದರೆ ಅಥವಾ ಹಿತದೃಷ್ಟಿಯಲ್ಲಿ ನೀವು ಏನಾದರೂ ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಬೇಕು ಎಂದರೆ ಆನ್ಲೈನ್ ಮೂಲಕ ಸುಲಭವಾಗಿ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಬಯೋಮೆಟ್ರಿಕ್ ಲಾಕ್ ಮಾಡಿದರೆ ಏನಿಲ್ಲ ಆಗುತ್ತದೆ ಎಂಬ ಮಾಹಿತಿಯನ್ನು ಕೆಳಭಾಗದಲ್ಲಿ ತಿಳಿಸಲಾಗಿದೆ.
ಆಧಾರ್ ಬಯೋಮೆಟ್ರಿಕ್ ಲಾಕ್ ಆದರೆ ಏನಿಲ್ಲ ಆಗುತ್ತದೆ
ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮತ್ತು ನಿಮ್ಮ ವೈಯಕ್ತಿಕ ಡಾಟಾವನ್ನು ಹ್ಯಾಕರ್ ಗಳು ಪಡೆದುಕೊಳ್ಳಬಾರದೆಂದರೆ ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವು ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಂಡರೆ ಅಂತಹ ಸಮಯದಲ್ಲಿ ಬಯೋಮೆಟ್ರಿಕ್ ಲಾಕ್ ಮಾಡಿದರೆ ಏನೆಲ್ಲಾ ಆಗುತ್ತದೆ ಎಂಬ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
- ಬಯೋಮೆಟ್ರಿಕ್ ಲಾಕ್ ಮಾಡಿದರೆ ನಿಮ್ಮ ಬಯೋಮೆಟ್ರಿಕ್ ಇಲ್ಲದೆ ಯಾವುದೇ ಆಧಾರ್ ದೃಢೀಕರಣ ಆಗದಿರಬಹುದು.
- ಬಯೋಮೆಟ್ರಿಕ್ ಲಾಕ್ ಮಾಡಿದ ನಂತರ ಮುಂದೆ ಯಾವುದೇ ಬಯೋಮೆಟ್ರಿಕ್ ಪ್ರಮಾಣೀಕರಣ ಮಾಡಲು ಸಾಧ್ಯವಾಗುವುದಿಲ್ಲ
- ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿದರೆ ಹ್ಯಾಕರ್ ಗಳು ನಿಮ್ಮ ಯಾವುದೇ ಮಾಹಿತಿಗಳು ಇದ್ದರೂ ಸಹ ಏನು ಮಾಡಲು ಸಾಧ್ಯವಾಗುವುದಿಲ್ಲ.
ನಿಮ್ಮ ಬ್ಯಾಂಕ್ ಖಾತೆಯ ಹಣ ಸುರಕ್ಷತೆ ಆಗಿರಬೇಕು ಎನ್ನುವವರು ಬಯೋಮೆಟ್ರಿಕ್ ಲಾಕ್ ಮಾಡುವುದು ಸುರಕ್ಷತೆಯ ವಿಧಾನ ಎಂದು ಹೇಳಬಹುದು.
ಬೇಕಾಗುವ ಸಮಯದಲ್ಲಿ ಬಯೋಮೆಟ್ರಿಕ್ ಲಾಕ್ ತೆಗೆದುಕೊಳ್ಳಿ
ಹೌದು ಗೆಳೆಯರೇ, ಬಯೋಮೆಟ್ರಿಕ್ ಬಳಕೆ ಮಾಡುವ ಸಮಯದಲ್ಲಿ ನೀವು ಬಯೋಮೆಟ್ರಿಕ್ ಲಾಕ್ ಅನ್ನು ತೆಗೆದುಕೊಳ್ಳಿ, ಬೇಡವಿಲ್ಲದ ಸಮಯದಲ್ಲಿ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಿ. ಇದು ಒಂದು ರೀತಿಯ ಸುರಕ್ಷತೆಯ ವಿಧಾನ ಎಂದು ಹೇಳಬಹುದು.
ಉದಾಹರಣೆಗೆ ಹೇಳಬೇಕೆಂದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕೆಂದರೆ ನ್ಯಾಯಬೆಲೆ ಅಂಗಡಿ ಅಥವಾ ಕೆಲವು ಕಚೇರಿಗಳಲ್ಲಿ ಬಯೋಮೆಟ್ರಿಕ್ ನೀಡಿ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವು ಬಯೋಮೆಟ್ರಿಕ್ ಲಾಕ್ ಮಾಡಿಕೊಂಡರೆ ಅಂತಹ ಸಮಯದಲ್ಲಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ನೀವು ಆಧಾರ್ ಬಯೋಮೆಟ್ರಿಕ್ ಅನ್ನು ಅನ್ಲಾಕ್ ಮಾಡಿಕೊಳ್ಳಬಹುದು.
ಹಾಗಾದರೆ ಆನ್ಲೈನ್ ಮೂಲಕ ಸುಲಭವಾಗಿ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವ ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವುದು ಹೇಗೆ
ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆದರ್ಣ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಆದರ್ ಬಯೋಮೆಟ್ರಿಕ್ ಲಾಕ್ ಅನ್ನು ಮಾಡಿಕೊಳ್ಳಬಹುದಾಗಿದೆ
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ.
- ಅಲ್ಲಿ ನೀವು ಸರ್ಚ್ ಬಾರ್ ನಲ್ಲಿ My Adhar ಎಂದು ಟೈಪ್ ಮಾಡಿ.
- ನಂತರ ನಿಮಗೆ My Adhar ನ ವೆಬ್ಸೈಟ್ ಓಪನ್ ಆಗುತ್ತದೆ, ಒಂದು ವೇಳೆ ನಿಮಗೆ ಟೈಪ್ ಮಾಡಿ ವೆಬ್ಸೈಟ್ ಹುಡುಕಲು ಕಷ್ಟಕರವಾದರೆ
- ಇಲ್ಲಿ ನೀಡಿರುವ ವೆಬ್ಸೈಟ್ https://myaadhaar.uidai.gov.in/login ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಈಗ ನಿಮಗೆ My Adhar ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ, ನೀವು Login ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಂತರ ನಿಮಗೆ ಮತ್ತೊಂದು ಪುಟ್ಟ ಓಪನ್ ಆಗುತ್ತದೆ, ಅಲ್ಲಿ ನಿಮಗೆ Enter Aadhaar Number ಎಂದು ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ
- ಆದರ್ ಸಂಖ್ಯೆಯನ್ನು ಎಂಟರ್ ಮಾಡಿದ ನಂತರ ಅಲ್ಲೇ ಪಕ್ಕದಲ್ಲಿರುವ Enter Captcha ವನ್ನು ಎಂಟರ್ ಮಾಡಿಕೊಳ್ಳಿ
- ನಂತರ ನೀವು Login With OTP ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ, ಕ್ಲಿಕ್ ಮಾಡಿದ ನಂತರ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಅಂಕಿಯ ಒಟಿಪಿ ಬರುತ್ತದೆ.
- ಓಟಿಪಿಯನ್ನು ನಮೂದಿಸಿದ ನಂತರ ನಿಮಗೆ ಮತ್ತೊಂದು ವೆಬ್ ಪೇಜ್ ಓಪನ್ ಆಗುತ್ತದೆ, Update My Aadhar section ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು Lock / Unlock Biometrics ಎಂಬ ಆಪ್ಷನ್ ಕಾಣುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ
- ಮತ್ತೆ ನಿಮಗೆ ಆಧಾರ್ ನಂಬರ್ ನಮೂದನೆ ಮಾಡಲು ಕೇಳುತ್ತದೆ, ಆಧಾರ್ ಸಂಖ್ಯೆಯನ್ನು ನಮೂದನೆ ಮಾಡಿ ಓಟಿಪಿ ಎಂಟರ್ ಮಾಡಿಕೊಳ್ಳಿ.
- ನಂತರ ನೀವು ಬಯಸಿದ್ದಲ್ಲಿ Lock Biometrics ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈ ರೀತಿ ನೀವು ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಬಹುದಾಗಿದೆ.
- ಒಂದು ವೇಳೆ ನಿಮಗೆ ಆಧಾರ್ ಬಯೋಮೆಟ್ರಿಕ್ ಲಾಕ್ ಬೇಡವೆಂದರೆ ಅಂತಹ ಸಮಯದಲ್ಲಿ ನೀವು Unlock Biometric / Disable the Locking system ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಬಯೋಮೆಟ್ರಿಕ್ ಲಾಕ್ ಆಗಿರುವುದನ್ನು ಬಯೋಮೆಟ್ರಿಕ್ ಅನ್ಲಾಕ್ ಮಾಡಿಕೊಳ್ಳಬಹುದಾಗಿದೆ.
ಈ ರೀತಿ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವುದು ಸುಲಭ ವಿಧಾನವಾಗಿದೆ. ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವುದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮತ್ತು ನಿಮ್ಮ ವೈಯಕ್ತಿಕ ಡಾಟಾವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಬಯೋಮೆಟ್ರಿಕ್ ಬೇಕಾಗುವ ಸಮಯದಲ್ಲಿ ಆಧಾರ್ ಬಯೋಮೆಟ್ರಿಕ್ ಲಾಕ್ ಅನ್ನು ಆಧಾರ್ ಬಯೋಮೆಟ್ರಿಕ್ ಅನ್ಲಾಕ್ ಮಾಡಿಕೊಳ್ಳಬಹುದಾಗಿದೆ.
10 ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ
ಹೌದು ಗೆಳೆಯರೇ, ಸರ್ಕಾರವು ಈಗಾಗಲೇ ಈ ಮಾಹಿತಿಯನ್ನು ತಿಳಿಸಲಾಗಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ 10 ವರ್ಷದ ಹಳೆಯ ಆಧಾರ್ ಕಾರ್ಡ್ ಆಗಿದ್ದರೆ ಆದಷ್ಟು ಬೇಗ ಆಧಾರ್ ಕಾರ್ಡನ್ನುಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ವ್ಯವಹಾರಗಳಿಗೆ ಮತ್ತು ಇನ್ನಿತರ ವ್ಯವಹಾರಗಳಿಗೆ ತೊಂದರೆ ಆಗಬಹುದು. ಈ ಕಾರಣದಿಂದ 10 ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಆದಷ್ಟು ಅಪ್ಡೇಟ್ ಮಾಡಿಕೊಳ್ಳಿ.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯದ ಹಣವನ್ನು ಪಡೆದುಕೊಳ್ಳಲು ಪ್ರಮುಖವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಆಗಿರಬೇಕು. ಹೆಚ್ಚಿನ ಜನರಿಗೆ 10 ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿಲ್ಲದವರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ. ಈ ಕಾರಣದಿಂದ ಯಾರೆಲ್ಲ 10 ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಹೊಂದಿದ್ದೀರಾ ಅಂತವರು ಆದಷ್ಟು ಬೇಗ ಅಪ್ಡೇಟ್ ಮಾಡಿಕೊಳ್ಳಿ.
ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ನಿಮ್ಮ ಊರಿನ ಹತ್ತಿರವಿರುವ ಸೇವಾಕೇಂದ್ರ ಅಥವಾ ಕೆಲವು ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಆದರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಅದಲ್ಲದೆ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. [ಅಪ್ಡೇಟ್ ಎಂದರೆ ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ಫೋಟೋ, ಇನ್ನಿತರ ದಾಖಲೆಗಳನ್ನು ಬದಲಾವಣೆ ಮಾಡುವುದು] ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳುವ ವಿಧಾನವನ್ನು ಈಗಾಗಲೇ ಈ ಮಾಧ್ಯಮದಲ್ಲಿ ತಿಳಿಸಿದ್ದೇನೆ ಅದನ್ನು ನೀವು ವೀಕ್ಷಣೆ ಮಾಡಬಹುದಾಗಿದೆ.