PM Kisan Scheme: ಹೊಸದಾಗಿ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ದೇಶದ ಕೋಟ್ಯಾಂತರ ರೈತರಿಗೆ ಪ್ರತಿ ತಿಂಗಳು 2000 ಆರ್ಥಿಕ ನೆರವು ನೀಡುತ್ತಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಹಣವನ್ನು ರೈತರು ತಮ್ಮ ಕೃಷಿ ವೆಚ್ಚಗಳಿಗಾಗಿ ವಿನಿಯೋಗಿಸಬಹುದು ಮತ್ತು ಕೃಷಿಯ ವಸ್ತುಗಳಿಗೆ ಈ ಹಣ ಉಪಯೋಗವಾಗುತ್ತದೆ. ಈ ಯೋಜನೆಯ ಹಣ ಕೋಟ್ಯಂತರ ರೈತರು ಲಾಭ ಪಡೆದಿದ್ದಾರೆ. ನೀವೇನಾದರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಈ ಯೋಜನೆಯು 1-12-2018 ರಲ್ಲಿ ಜಾರಿಗೊಳಿಸಲಾಗಿತ್ತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಭಾರತ ಸರ್ಕಾರದಿಂದ 100% ಧನಸಹಾಯ ದೊಂದಿಗೆ ಕೇಂದ್ರವಲಯದ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷಕ್ಕೆ 6000 ಆರ್ಥಿಕ ನೆರವನ್ನು ಸರ್ಕಾರ ನೀಡಲಾಗುತ್ತದೆ. ವರ್ಷಕ್ಕೆ ಮೂರು ಕಂತಿನಂತೆ 4 ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ 2000 ಹಣ ಜಮವಾಗುತ್ತದೆ. ಈ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ನೀವು ರೈತರಾಗಿದ್ದು ಇನ್ನೂ ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಲ ಎಂದರೆ ನೀವು ಸುಲಭವಾಗಿ ಆನ್ಲೈನ್ ಮೂಲಕ ಹಂತ ಹಂತವಾಗಿ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ವಿಧಾನ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅಧಿಕೃತ pmkisan.gov.in ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಹೋಂ ಪೇಜ್ [Home Page] ಓಪನ್ ಆಗುತ್ತದೆ. ಅಲ್ಲಿ ನಿಮಗೆ ಫಾರ್ಮರ್ಸ್ ಕಾರ್ನರ್ [Farmers Corner] ಎಂಬ ಆಯ್ಕೆ ಕಾಣುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಅಲ್ಲಿ ಎರಡನೇ ಆಪ್ಷನ್ ಆದ ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ [New Farmer Register] ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ನೀವು ನೋಂದಣಿ ಮಾಡಬೇಕಾದ ರೈತರ ಆಧಾರ್ ಕಾರ್ಡ್ ಮತ್ತು ಮೊಬೈಲ್ ಮತ್ತು ರಾಜ್ಯವನ್ನು ಆಯ್ಕೆ ಮಾಡಿ.
- ನಂತರ ಕ್ಯಾಪ್ಚವನ್ನು ಎಂಟರ್ ಮಾಡಿ ಗೆಟ್ ಓಟಿಪಿ [Get OTP] ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮ್ಮ ನಂಬರ್ ಅನ್ನು ಆಡ್ ಮಾಡಿರುತ್ತೀರಾ ಅದಕ್ಕೆ ಒಟಿಪಿ [OTP] ಬರುತ್ತದೆ. ಓಟಿಪಿ [OTP]ಯನ್ನು ನಮೂದಿಸಿ ಗೋ [GO] ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ಕೆಲವು ದಾಖಲೆಗಳ ವಿವರವನ್ನು ಕೇಳುತ್ತದೆ ಮತ್ತು ಜಮೀನಿಗೆ ಸಂಬಂಧಿಸಿದ ವಿವರಗಳು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಅರ್ಜಿ ಸಬ್ಮಿಟ್ [Submit] ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ನೋಂದಣಿ ಪೂರ್ಣಗೊಂಡ ಸಂದೇಶವು ಮೊಬೈಲ್ಗೆ ಗೋಚರಿಸುತ್ತದೆ.
- ನಿಮ್ಮ ಅರ್ಜಿ ಪರಿಶೀಲನೆ ಮಾಡಿದ ನಂತರ ಮುಂದಿನ ಕಂತಿನಂತೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಾಗುತ್ತದೆ.
ನಿಮಗೇನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಸೈಬರ್ ಗಳಿಗೆ ಭೇಟಿ ನೀಡುವ ಮೂಲಕ ಅಥವಾ ಅಗ್ರಿಕಲ್ಚರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಪಿಎಂ ಕಿಸಾನ್ ಯೋಜನೆ ಅಡಿಯ ಸ್ಟೇಟಸ್
ನೀವೇನಾದರೂ ಪಿಎಂ ಕಿಸಾನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ಅವರು ಸುಲಭವಾಗಿ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು. ಇದುವರೆಗೂ ಕೇಂದ್ರ ಸರ್ಕಾರವು 16ನೇ ಕಂತಿನವರೆಗೂ ಹಣವನ್ನು ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ನೀವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಕಂತಿನ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಕೆಳಗಿನ ಮಾಹಿತಿಯನ್ನು ಓದಿ.
ಆನ್ಲೈನ್ ಮೂಲಕ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವ ವಿಧಾನ
- ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ pmkisan.gov.in ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಭೇಟಿ ನೀಡಿದ ನಂತರ ನಿಮಗೆ ಹೋಂ ಪೇಜ್ [Home Page] ಓಪನ್ ಆಗುತ್ತದೆ. ಅಲ್ಲಿ ನೀವು ಫಾರ್ಮರ್ಸ್ ಕಾರ್ನರ್ [Farmers Corner] ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಫಲಾನುಭವಿ ಸ್ಥಿತಿ [Beneficiary Status] ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ಪಿಎಂ ಕಿಸಾನ್ ಯೋಜನೆಯ ಖಾತೆಯ ಸಂಖ್ಯೆ ಅಥವಾ ನೋಂದಣಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
- ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ [OTP] ಬರುತ್ತದೆ ಓಟಿಪಿ [OTP] ಯನ್ನು ಹಾಕಿ.
- ಓಟಿಪಿ [OTP] ಯನ್ನು ಹಾಕಿದ ನಂತರ ಗೆಟ್ ಡಾಟಾ [Get Data] ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ..
- ಈಗ ನಿಮಗೆ ನಿಮ್ಮ ಖಾತೆಗೆ ಇದುವರೆಗೂ ಎಷ್ಟು ಹಣ ಬಂದಿದೆ ಎಂಬ ಎಲ್ಲ ವಿವರ ಕಾಣುತ್ತದೆ.
ಪಿಎಂ ಕಿಸಾನ್ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲವೆಂದರೆ ಏನು ಮಾಡಬೇಕು
ಒಂದು ವೇಳೆ ನೀವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರು ಸಹ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮವಾಗಿಲ್ಲವೆಂದರೆ ಮೊದಲು ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಅರ್ಜಿ ಮತ್ತು ನೀವು ಸಲ್ಲಿಸಿರುವ ದಾಖಲೆಗಳು ಸರಿ ಇದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ.
ಹಾಗೆಯೇ ಪ್ರಮುಖ ಕಾರಣವಾದ ಈಕೆವೈಸಿ [e-kyc] ಪೂರ್ಣಗೊಳಿಸಿ ಒಂದು ವೇಳೆ ನೀವು ಈಕೆವೈಸಿ [e-kyc] ಮಾಡಿಲ್ಲವೆಂದರೆ ಹಣ ಬರದೇ ಇರಲು ಇದು ಸಹ ಪ್ರಮುಖ ಕಾರಣವಾಗುತ್ತದೆ ಮತ್ತು ಭೂಮಿ ದಾಖಲೆಗಳನ್ನು ಪರಿಶೀಲನೆ ಬಳಿಕವೂ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲವೆಂದರೆ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕಾರಿಗಳ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಅಥವಾ ನಿಮ್ಮ ಊರಿನ ಹತ್ತಿರವಿರುವ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲು ಕಾರಣವೇನು ಎಂಬುದರ ವಿಷಯದ ಬಗ್ಗೆ ತಿಳಿದುಕೊಳ್ಳಬಹುದು.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು
ಹೌದು ಗೆಳೆಯರೇ, ನೀವೇನಾದರೂ ರೈತರಾಗಿದ್ದು ಇನ್ನೂ ನೀವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿಲ್ಲವೆಂದರೆ ಆದಷ್ಟು ಬೇಗ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಇದುವರೆಗೂ 16ನೇ ಕಂತಿನ ವರೆಗೂ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮವಾಗಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 21000 ಕೋಟಿ ರೂ ಹಣ ರೈತರ ಬ್ಯಾಂಕ್ ಖಾತೆಗೆ ಜಮವಾಗಿದೆ. ಈ ಯೋಜನೆಯು ಪ್ರಾರಂಭವಾಗಿ ಐದು ವರ್ಷ ಪೂರೈಸಿದ್ದು ಇನ್ನು ನೀವು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿಲ್ಲವೆಂದರೆ ಈ ಮೇಲೆ ತಿಳಿಸಿಕೊಟ್ಟಿರುವ ರೀತಿಯಲ್ಲೇ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಯ ಹಣವು ರೈತರ ಕೃಷಿ ವಸ್ತುಗಳನ್ನು ಖರೀದಿ ಮಾಡಲು ಉಪಯೋಗವಾಗುತ್ತದೆ. ವರ್ಷಕ್ಕೆ ಮೂರು ಕಂತಿನಂತೆ ನಾಲ್ಕು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ 2000 ಹಣ ಜಮವಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮವಾಗಿದೆ. ನೀವೇನಾದರೂ ಮೊದಲೇ ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ, ಈ ಯೋಜನೆ ಅಡಿಯಲ್ಲಿ ಬರುವ ಹಣದ ಸ್ಟೇಟಸ್ ಅನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಈ ಯೋಜನೆ ಅಡಿಯಲ್ಲಿ ಹಣ ಬಂದಿಲ್ಲವೆಂದರೆ ಈ ರೀತಿ ಮಾಡಿ
ಹೌದು ಗೆಳೆಯರೇ ಕೆಲವು ರೈತರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಜಮವಾಗಿಲ್ಲ ಏಕೆಂದರೆ ನೀವು ನೀಡಿರುವ ದಾಖಲೆಗಳ ಸಮಸ್ಯೆಗಳಿಂದ ಅವರ ಬ್ಯಾಂಕ್ ಖಾತೆಗೆ ಹಣ ಜಮವಾಗಿಲ್ಲ. ನಿಮ್ಮ ಊರಿನ ಹತ್ತಿರ ಇರುವ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಈ ಮಾಹಿತಿಯನ್ನು ಒದಗಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲು ಕಾರಣವೇನು ಎಂದು ತಿಳಿಸುತ್ತಾರೆ
ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ
ಪಿಎಂ ಕಿಸಾನ್ ಯೋಜನೆಯ ಅರ್ಜಿಯ ಸಮಸ್ಯೆ, ಇನ್ನಿತರ ಸಮಸ್ಯೆಗಳ ಪರಿಹಾರವನ್ನು ಕೇಳಲು ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಿ ದೂರು ನೀಡಲು ಅವಕಾಶ ನೀಡಿದೆ. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266, 155261 ಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದು. ನೀವು ಈ ಮೇಲ್ ಐಡಿ pmkisan-ict@gov.in ಅನ್ನು ಸಹ ಸಂಪರ್ಕಿಸಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು