PM Kisan Status: ಪಿಎಂ ಕಿಸಾನ್ ಸ್ಥಿತಿ ಪರಿಶೀಲನೆ ಮಾಡಿಕೊಳ್ಳಿ…! 17ನೇ ಕಂತಿನ ಹಣ ಪಾವತಿ ದಿನಾಂಕ ಯಾವಾಗ, ಇಲ್ಲಿದೆ ಸಂಪೂರ್ಣ ಮಾಹಿತಿ..!
ನಮಸ್ಕಾರ ಬಂಧುಗಳೇ ಫೆಬ್ರವರಿ 2019 ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾಯಿತು, ಈ ಯೋಜನೆ ಅಡಿಯಲ್ಲಿ ಉಪಕ್ರಮಣವು ಸಣ್ಣ ಮತ್ತು ಅಂತಿ ಸಣ್ಣ ರೈತರಿಗೆ ಹಣಕಾಸಿನ ನೆರವು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದ್ದು. ಈ ಯೋಜನೆ ಅಡಿಯಲ್ಲಿ ಭಾರತದ ಕೋಟಿಗಟ್ಟಲೆ ರೈತರು ಲಾಭವನ್ನು ಪಡೆಯುತ್ತಿದ್ದಾರೆ. ಹಾಗಾದರೆ ಈ ಯೋಜನೆಯ 17ನೇ ಕಂತಿನ ಹಣ ಯಾವಾಗ ಮತ್ತು ಪಿಎಂ ಕಿಸಾನ್ ಸ್ಥಿತಿ ಪರಿಶೀಲನೆ ಮಾಡಿಕೊಳ್ಳುವುದು ಹೇಗೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ [Pradhan Mantri Kisan Samman Nidhi Yojana]
ಈ ಯೋಜನೆಯ 2019 ರಲ್ಲಿ ಪ್ರಾರಂಭವಾಗಿತ್ತು, ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳ ರೈತರಿಗೆ ವರ್ಷಕ್ಕೆ 6000 ನೀಡಲಾಗುತ್ತದೆ. ಈ ಹಣವನ್ನು ಕಂತುಗಳ ರೀತಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮವಾಗುತ್ತದೆ, ಅಂದರೆ ಪ್ರತಿ ಕಾಂತಿನಲ್ಲೂ 4 ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ 2000 ಹಣವನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಲಾಗುತ್ತದೆ. ಇದುವರೆಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 16ನೇ ಕಂತಿನ ವರೆಗೂ ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಯೋಜನೆಯ 17ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದುವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಏಕೆಂದರೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ಜುಲೈ ಅಥವಾ ಜೂನ್ ನಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತನ್ನು ಹಣ ಬಿಡುಗಡೆ ಮಾಡಬಹುದಾಗಿದೆ.
16ನೇ ಕಂತಿನ ಹಣ ಸ್ವೀಕರಿಸದಿದ್ದರೆ ಏನು ಮಾಡಬೇಕು
ಫೆಬ್ರವರಿ ತಿಂಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಈ ಯೋಜನೆ ಅಡಿಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ತಲುಪಿಲ್ಲವೆಂದರೆ ಮೊದಲು ನೀವು ಮಾಡಬೇಕಾಗಿರುವುದು ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಬೇಕು. ನಿಮ್ಮ ಅರಜಿಯೂ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ, ನಂತರ ಈ ಕೆವೈಸಿ [e-kyc] ಪೂರ್ಣಗೊಳಿಸಿ, ಭೂ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರು ಸಹ ನಿಮಗೆ 16ನೇ ಕಂತಿನ ಅಥವಾ ಪಿಎಂ ಕಿಸಾನ್ ಯೋಜನೆ ಹಣ ಬರುತಿಲ್ಲವೆಂದರೆ ನಿಮ್ಮ ಊರಿನ ಹತ್ತಿರವಿರುವ ಕೆಲವು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನೀವು ಪರಿಶೀಲನೆ ಮಾಡಿಕೊಳ್ಳಬಹುದು.
ರೈತರು ಈ ಕೆವೈಸಿ [e-kyc] ಮಾಡಿಕೊಳ್ಳುವುದು ಕಡ್ಡಾಯವಾಗಿದೆ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ರೈತರು ಈ ಕೆವೈಸಿ [e-kyc] ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಕೆವೈಸಿ [e-kyc] ಮಾಡಿಸಿಕೊಂಡಿಲ್ಲವೆಂದರೆ ಈ ಯೋಜನೆಯಲ್ಲಿ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಆದಲ್ಲದೆ ಈ ಯೋಜನೆಯ ಹಣವು ಸಹ ಬ್ಯಾಂಕ್ ಖಾತೆಗೆ ಬರುವುದಿಲ್ಲ. ನೀವು ಸುಲಭವಾಗಿ ಆನ್ಲೈನ್ ಮೂಲಕ ಈ ಕೆವೈಸಿ [e-kyc] ಮಾಡಿಕೊಳ್ಳಬಹುದಾಗಿದೆ ಹಾಗಾದರೆ ಅದರ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
- ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ https://pmkisan.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಅಲ್ಲಿ ನಿಮಗೆ ಫಾರ್ಮರ್ಸ್ ಕಾರ್ನರ್ ಎಂಬ ಆಪ್ಷನ್ ನಲ್ಲಿ ಈ ಕೆವೈಸಿ [e-kyc] ಆಯ್ಕೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು ಆಧಾರ್ ಕಾರ್ಡ್, ಮುಂತಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನನತರ ಹುಡುಕಾಟ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ, ಓಟಿಪಿಯನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಈ ರೀತಿ ಮಾಡಿದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಈ ಕೆವೈಸಿ [e-kyc] ಯನ್ನು ಮಾಡಿಕೊಳ್ಳಬಹುದಾಗಿದೆ.
- ಒಂದು ವೇಳೆ ಈ ಕೆವೈಸಿ [e-kyc] ಮಾಡಿಕೊಳ್ಳಲು ಬಯೋಮೆಟ್ರಿಕರಣಕ್ಕಾಗಿ ಹತ್ತಿರದ ಸಿಎಸ್ಸಿ [CSC] ಕೇಂದ್ರಗಳಿಗೆ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನೀವು ಸುಲಭವಾಗಿ ಈ ಕೆವೈಸಿ [e-kyc] ಯನ್ನು ಮಾಡಿಕೊಳ್ಳಬಹುದಾಗಿದೆ.
ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದುವರೆಗೂ ಸರ್ಕಾರವು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಏಕೆಂದರೆ ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ 17ನೇ ಕಂತಿನ ಹಣವನ್ನು ಮೇ ಅಥವಾ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ.
ಇದರಿಂದ ನೀವು ಯಾವುದೇ ಸುಳ್ಳು ಮಾಹಿತಿಗೆ ಒಳಗಾಗಬೇಡಿ, 17ನೇ ಕಂತಿನ ಹಣದ ಬಿಡುಗಡೆಯ ಮಾಹಿತಿ ಇದುವರೆಗೂ ನೀಡಿಲ್ಲ. ನೀವೇನಾದರೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವಿವರ
- ಯೋಜನೆಯ ಅಥವಾ ಸಂಸ್ಥೆಯ ಹೆಸರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
- ಯೋಜನೆಗೆ ಯಾರು ಅರ್ಹರು: ಭಾರತದ ರೈತರು
- ಈ ಯೋಜನೆಯ ಅಡಿಯಲ್ಲಿ ರೈತರಿಗೆ ಎಷ್ಟು ಮೊತ್ತವನ್ನು ಪಡೆಯುತ್ತಾರೆ: ವರ್ಷಕ್ಕೆ 6000 [ಕಂತುಗಳ ರೀತಿಯಲ್ಲಿ]
- ಈ ಯೋಜನೆಯ ಹಿಂದಿನ ಕಂತು ಬಿಡುಗಡೆಯಾಗಿದೆ: 28 ಫೆಬ್ರವರಿ 2024ರಂದು
- 17ನೆಯ ಕಂತಿನ ಹಣ ಬಿಡುಗಡೆ ಯಾವಾಗ: ಮೇ ಅಥವಾ ಜುಲೈ ತಿಂಗಳಲ್ಲಿ
- ಅಧಿಕೃತ ವೆಬ್ಸೈಟ್: https://pmkisan.gov.in/
ಪಿಎಂ ಕಿಸಾನ್ ಯೋಜನೆಯ ಸ್ಥಿತಿ ಪರಿಶೀಲನೆ ಮಾಡಿಕೊಳ್ಳುವ ವಿಧಾನ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ನೀವು ಸುಲಭವಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಪಿಎಂ ಕಿಸಾನ್ ಯೋಜನೆಯ ಸ್ಥಿತಿಯನ್ನು ಪರಿಶೀಲನೆ ಮಾಡಿ ಕೊಡಬಹುದಾಗಿದೆ.
- ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ https://pmkisan.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ಕಾಣುವ ಎಡ ಭಾಗದಲ್ಲಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಫಾರ್ಮರ್ಸ್ ಕಾರ್ನರ್ ಎಂಬ ಆಯ್ಕೆ ಕಾಣುತ್ತದೆ.
- ಅದರಲ್ಲಿ ನೀವು ನಿಮ್ಮ ಸ್ಥಿತಿಯನ್ನು ತಿಳಿಯಿರಿ [know your status] ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ಅಗತ್ಯವಿರುವ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ, ಅಂದರೆ ನಿಮ್ಮ ಅರ್ಜಿಯ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ನಂತರ ಕ್ಯಾಪ್ಚವನ್ನು ಎಂಟರ್ ಮಾಡಿ, ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ, ಓಟಿಪಿಯನ್ನು ಹಾಕಿ ಡೇಟಾ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಈ ರೀತಿ ನೀವು ಮಾಡಿದರೆ ಸಾಕು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪಾವತಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
- ಇದುವರೆಗೂ ನಿಮ್ಮ ಬ್ಯಾಂಕ್ ಖಾತೆ ಎಷ್ಟು ಹಣ ಬಂದಿದೆ ಎಂಬ ಎಲ್ಲಾ ವಿವರವನ್ನು ಮೊಬೈಲ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳಿ
ಹೌದು ಗೆಳೆಯರೇ, ನೀವೇನಾದರೂ ಇದುವರೆಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿ ಮಾದಿಕೊಂಡಿಲ್ಲವೆಂದರೆ ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ. ಈ ಯೋಜನೆ ಅಡಿಯಲ್ಲಿ 4 ತಿಂಗಳಿಗೆ 2,000 ಹಣವನ್ನು ಪಡೆದುಕೊಳ್ಳಬಹುದಾಗಿದೆ, ಈ ಹಣದಿಂದ ರೈತರಿಗೆ ಉಪಯೋಗವಾಗುವ ಕೆಲವು ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗುತ್ತದೆ. ಹಾಗಾದರೆ ಹೊಸದಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆ ಮತ್ತು ದಾಖಲೆಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಭೂಮಿ ದಾಖಲೆಗಳ ಪ್ರಕಾರ ಸಾಗುವಳಿ ಭೂಮಿಯನ್ನು ಹೊಂದಿರುವವರು. ಸ್ವಂತ ಭೂಮಿಯನ್ನು ಹೊಂದಿರುವ ರೈತರು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗಾದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆ ಬಗ್ಗೆ ತಿಳಿದುಕೊಳ್ಳೋಣ.
ಬೇಕಾಗುವ ದಾಖಲೆಗಳು
- ಅರ್ಜಿ ಸಲ್ಲಿಸುವ ರೈತರ ಆಧಾರ್ ಕಾರ್ಡ್
- ನಿವಾಸ ಪ್ರಮಾಣ ಪತ್ರ
- ಬ್ಯಾಂಕ್ ನ ವಿವರಗಳು
- ಭೂಮಿಯ ಮಾಲೀಕತ್ವವನ್ನು ಘೋಷಿಸು ದಾಖಲೆಗಳು [ಪಹಣಿ / ಆರ್ ಟಿ ಸಿ]
- ಆದಾಯ ಪ್ರಮಾಣ ಪತ್ರ
- ಮುಂತಾದ ದಾಖಲೆಗಳು ನಿಮ್ಮ ಹತ್ತಿರವಿದ್ದರೆ ಸಾಕು, ನೀವು ಸುಲಭವಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ ಪಿಎಂ ಕಿಸಾನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ https://pmkisan.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಎಂಬ ವಿಭಾಗವನ್ನು ಓಪನ್ ಮಾಡಿಕೊಳ್ಳಬೇಕಾಗುತ್ತದೆ.
- ನಂತರ ನಿಮಗೆ ಹೊಸ ರೈತರ ನೋಂದಣಿ ಎಂಬ ಆಪ್ಷನ್ ಕಾಣುತ್ತದೆ, ನೀವು ಅದರ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ರಾಜ್ಯ, ಮುಂತಾದ ದಾಖಲೆಗಳನ್ನು ಕೇಳುತ್ತದೆ. ನೀವು ದಾಖಲೆಗಳನ್ನು ಸರಿಯಾಗಿ ಒದಗಿಸಿ ಮತ್ತು ಕೆಲವು ದಾಖಲೆಗಳು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ಕೇಳುತ್ತದೆ.
- ಅಪ್ಲೋಡ್ ಮಾಡಿದ ನಂತರ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಈ ರೀತಿ ಸುಲಭವಾಗಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಕೆಲವು ಸೈಬರ್ ಗಳಿಗೆ ಅಥವಾ ರೈತರ ಕಚೇರಿಗೆ ಭೇಟಿ ನೀಡುವ ಮೂಲಕ ಅಲ್ಲಿ ಕೇಳುವ ಎಲ್ಲ ದಾಖಲೆಗಳನ್ನು ನೀಡಿ ಸುಲಭವಾಗಿ ಪಿಎಂ ಕಿಸಾನ್ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು