Sim Port: ಆನ್ಲೈನ್ ಮೂಲಕವೇ ಜಿಯೋಗೆ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಪೋರ್ಟ್ ಮಾಡಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ…
ನಮಸ್ಕಾರ ಬಂಧುಗಳೇ ಈಗಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಮಾರ್ಟ್ ಫೋನ್ ಅನ್ನು ಬಳಕೆ ಮಾಡುತ್ತಾರೆ. ನಾವು ಸ್ಮಾರ್ಟ್ಫೋನ್ ಬಳಕೆ ಮಾಡುತ್ತೇವೆ ಎಂದರೆ ಸ್ಮಾರ್ಟ್ಫೋನ್ ಜೊತೆಗೆ ಸಿಮ್ ಕಾರ್ಡ್ ಸಹ ಇರಬೇಕು. ಕೆಲವು ಟೆಲಿಕಾಂ ಕಂಪನಿಗಳು ಸಿಮ್ ಅನ್ನು ಖರೀದಿ ಮಾಡಿರುತ್ತೇವೆ. ಕೆಲವು ಟೆಲಿಕಾಂ ಕಂಪನಿಗಳ ಸಿಮ್ ಅಥವಾ ನೆಟ್ವರ್ಕ್ ಅಭಾವದಿಂದ ಸಿಮ್ ಅನ್ನು ಪೋರ್ಟ್ ಮಾಡಲು ಬಯಸಿದರೆ. ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡಲು ಬಯಸಿದರೆ ನೀವು ಮನೆಯಲ್ಲಿ ಕುಳಿತುಕೊಂಡು ಅರ್ಜಿಯನ್ನು ಕಲಿಸಬಹುದು.
ಆನ್ಲೈನ್ ನಲ್ಲಿ ಪೋರ್ಟ್ ಮಾಡುವ ಪ್ರಕ್ರಿಯೆ ತುಂಬಾ ಸುಲಭ ಡಾಕ್ಯುಮೆಂಟ್ ಪರಿಶೀಲನೆ ಅಥವಾ ಬಯೋಮೆಟ್ರಿಕ್ ಗಳಿಗಾಗಿ ನೀವು ನಿಮ್ಮ ಜಿಯೋ ಸ್ಟೋರ್ ಗೆ ಭೇಟಿ ನೀಡಬೇಕಾಗುತ್ತದೆ. ಆದರೆ ಆನ್ಲೈನ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಲು ಯಾವುದೇ ಏಜೆನ್ಸಿ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಅಗತ್ಯವಿಲ್ಲ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಜಿಯೋ [JIO]
ದೇಶದಲ್ಲಿ ಸಾಕಷ್ಟು ಜನರು ನಂಬರ್ ಒನ್ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ ಸಿಮ್ ಅನ್ನು ಬಳಸುತ್ತಾರೆ. ಏಕೆ ಹೆಚ್ಚಿನ ಜನರು ಜಿಯೋ ಸಿಮ್ ಅನ್ನು ಬಳಸುತ್ತಾರೆ ಎಂದರೆ ಜಿಯೋ ಸಿಮ್ ನಲ್ಲಿ ಕಡಿಮೆ ಬೆಲೆಯ ಡೇಟಾ, ಅನಿಯಮಿತ ಕರೆ, ಇತರ ಆಫರ್ ಇರುವುದರಿಂದ ಹೆಚ್ಚಿನ ಜನರು ಜಿಯೋ ಸಿಮ್ ಅನ್ನು ಬಳಸುತ್ತಾರೆ. ಹೀಗಾಗಿ ಅನೇಕ ಮಂದಿಗಳು ಜಿಯೋ ಸಿಮ್ ಕಡೆ ವಾಲುತ್ತಿದ್ದಾರೆ. ನೀವೇನಾದರೂ ನಿಮ್ಮ ಮೊಬೈಲ್ ನಂಬರ್ ಅನ್ನು ಜಿಯೋ ಸಿಮ್ ಗೆ ಪೋರ್ಟ್ ಮಾಡಬೇಕು ಎಂದರೆ ನೀವು ಸುಲಭವಾಗಿ ಆನ್ಲೈನ್ ಮೂಲಕ ಪೋರ್ಟ್ ಮಾಡಿಕೊಳ್ಳಬಹುದು. ಬಯೋಮೆಟ್ರಿಕ್ ಅಥವಾ ಡಾಕ್ಯುಮೆಂಟ್ ಪರಿಶೀಲನೆಗಾಗಿ ಜಿಯೋ ಸ್ಟೋರ್ ಗೆ ಭೇಟಿ ನೀಡಬೇಕಾಗುತ್ತದೆ.
ಜಿಯೋ ಸಿಮ್ ಗೆ ಪೋರ್ಟ್ ಮಾಡುವ ವಿಧಾನ
- ಮೊದಲು ನೀವು ಯಾವ ನಂಬರ್ ಅನ್ನು ಪೋರ್ಟ್ ಮಾಡಬೇಕು ಆ ನಂಬರ್ ನಲ್ಲಿ 1900 ನಂಬರ್ ಗೆ ಈ ರೀತಿ ಮೆಸೇಜ್ ಮಾಡಬೇಕು.
- ಅದು ಏನು ಎಂದರೆ <PORT<10-digit mobile number>> ಮತ್ತು ನಂತರ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಈ ರೀತಿ ಮೇಲೆ ನೀಡಿರುವ ನಂಬರಿಗೆ ಮೆಸೇಜ್ ಕಳಿಸಬೇಕು.
- ನೀವು ಮೆಸೇಜ್ ಕಳಿಸಿದ್ದ ನಂತರ ನಿಮ್ಮ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ ಎಂಬ ಸಂದೇಶ ಬರುತ್ತದೆ.
- ಆ ಸಂದೇಶದಲ್ಲಿ ನಿಮಗೆ ಯುಪಿಸಿ ಕೋಡ್ [UPC CODE] ನೀಡಲಾಗುತ್ತದೆ. ಇದಕ್ಕಾಗಿ ನೀವು ಆಪ್ ಸ್ಟೋರ್ ಗೆ ಹೋಗಬೇಕಾಗುತ್ತದೆ.
- ನಂತರ ನೀವು ಮೈ ಜಿಯೋ [MY JIO] ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ನಂತರ ಓಪನ್ ಮಾಡಿ ಜಿಯೋ ಕೂಪನ್ ಕೋಡ್ [JIO COUPON CODE] ರಚಿಸಬೇಕು.
- ಈಗ ನಿಮಗೆ ಯುಪಿಸಿ ಕೋಡ್ [UPC CODE] ಮತ್ತು ಜಿಯೋ ಕೂಪನ್ ಕೋಡ್ [JIO COUPON CODE] ನಿಮಗೆ ಸಿಗುತ್ತದೆ ಅದನ್ನು ತೆಗೆದುಕೊಂಡು ನಿಮ್ಮ ಊರಿನ ಹತ್ತಿರವಿರುವ ಜಿಯೋ ಸ್ಟೋರ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ಆಧಾರ್ ಕಾರ್ಡ್, ವಿಳಾಸ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ನೀಡಬೇಕಾಗುತ್ತದೆ.
- ಈ ಎಲ್ಲ ದಾಖಲೆ ನೀಡಿದ ನಂತರ ಈ ಕೆವೈಸಿ [eKYC] ಪರಿಶೀಲನೆ ಯಾಗುತ್ತದೆ. ಇಲ್ಲಿ ನಿಮಗೆ ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸಲಾಗುತ್ತದೆ.
- ಈ ರೀತಿ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಜಿಯೋಗೆ ಸಕ್ರಿಯಗೊಳ್ಳುತ್ತದೆ.
ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋ ಸಿಮ್ ಗೆ ಪೋಟ್ ಮಾಡಿ ಬೇಕೆಂದರೆ ನೀವು ಸುಲಭವಾಗಿ ಆಫ್ಲೈನ್ ಮೂಲಕ ಸಹ ಪೋರ್ಟ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಪೋರ್ಟ್ ಮಾಡೋದು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಜಿಯೋ ಸ್ಟೋರ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋ ಸಿಮ್ ಗೆ ಪೋರ್ಟ್ ಮಾಡಿಸಿಕೊಳ್ಳಬಹುದು.
ಹೊಸ ಸಿಮ್ ಖರೀದಿ ಮಾಡುವವರು ಇದನ್ನು ತಿಳಿದುಕೊಳ್ಳಿ
ಹೌದು ಗೆಳೆಯರೇ ನಕಲಿ ಸಿಮ್ ಕಾರ್ಡ್ ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಗಟ್ಟಲು ಈಗಾಗಲೇ ದೇಶದಲ್ಲಿ ಹೊಸ ನಿಯಮವನ್ನು ಜಾರಿ ತಂದಿದೆ. ನಕಲಿ ಸಿಮ್ ಕಾರ್ಡ್ ಗಳಿಗೆ ಲಿಂಕ್ ಮಾಡಲಾದ ವಂಚನೆಗಳನ್ನು ಪರಿಹರಿಸಲು ಸರ್ಕಾರ ಒಂದು ಹೊಸ ನಿಯಮವನ್ನು ತಂದಿದೆ. ದೇಶದಲ್ಲಿ ಟೆಲಿಕಾಂ ಕ್ಷೇತ್ರಗಳಿಗೆ ಒಂದು ದೊಡ್ಡ ಬದಲಾವಣೆ ಯಾಗಲಿದೆ, ಸಿಮ್ ಗಳ ಮಾರಾಟ ಮಾಡುವ ನಿಯಮವನ್ನು ಬದಲಾಯಿಸಲು ಮುಂದಾಗಿದೆ. ಇನ್ನು ಮುಂದೆ ಸಿಮ್ ಮಾರಾಟ ಮಾಡಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಒಂದು ವೇಳೆ ದೂರ ಸಂಪರ್ಕ ಇಲಾಖೆ [DoT] ಈ ಹೊಸ ನಿಯಮವನ್ನು ಪಾಲಿಸದ್ದಿದರೆ 10 ಲಕ್ಷ ರೂಪಾಯಿವರೆಗೂ ದಂಡ ಕಟ್ಟಬೇಕಾಗುತ್ತದೆ. ಏಕೆಂದರೆ ದೇಶದಲ್ಲಿ ಹೆಚ್ಚಾಗುತ್ತಿರುವ ಸಿಮ್ ಕಾರ್ಡ್ ಗಳ ವಂಚನೆಯನ್ನು ತಡೆಗಟ್ಟಲು ಸರ್ಕಾರ ಒಂದು ದೊಡ್ಡ ಕಠಿಣ ಕಾರ್ಯಕ್ರಮವನ್ನು ಕೈಗೊಂಡಿದೆ. ಹೆಚ್ಚಾಗಿ ಬರುತ್ತಿರುವ ನಕಲಿ ಸಿಮ್ ಕಾರ್ಡ್ ಸಮಸ್ಯೆಯನ್ನು ದೂರಗೊಳಿಸಲು ಈ ನಿಯಮ ಸ್ವಲ್ಪಮಟ್ಟಿಗೆ ಪರಿಹಾರ ನೀಡಲಿದೆ. ನಕಲಿ ಸಿಮ್ ಕಾರ್ಡ್ ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರು ಸಹ ಖರೀದಿದಾರರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಆ ಹೊಸ ನಿಯಮವೇನು ಅದರ ಬಗ್ಗೆ ತಿಳಿದುಕೊಳ್ಳೋಣ.
ಹೊಸ ನಿಯಮ
ದೇಶದಲ್ಲಿ ದಿನದಿಂದ ದಿನಕ್ಕೆ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ ಮಾರಾಟವಾಗುತ್ತಿದೆ. ಅಂತಹ ಸಿಮ್ ಗಳು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಕೆಲವು ಕಾರಣಗಳಿಂದ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಮುಂದಾಗಿದೆ. ಇಲ್ಲವಾದಲ್ಲಿ ಅಂತಹ ವಂಚನೆಗಳ ಪ್ರಕಾರಗಳು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಹಕರ ಸಮಸ್ಯೆಯನ್ನು ಹೋಗಲಾಡಿಸಲು ದೂರ ಸಂಪರ್ಕ ಇಲಾಖೆಯು [DoT] ಮುಂದಾಗಿದೆ. ಹಾಗಾದರೆ ಆ ನಿಯಮ ಏನು ತಿಳಿದುಕೊಳ್ಳೋಣ.
ಇನ್ನು ಮುಂದೆ ಸಿಮ್ ಮಾರಾಟಗಾರ ತಮ್ಮ ಅಂಗಡಿಯ ಸಿಬ್ಬಂದಿಯ ಎಲ್ಲಾ ಮಾಹಿತಿ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದೂರ ಸಂಪರ್ಕ ಇಲಾಖೆಯ [DoT] ಹೊಸ ನಿಯಮದ ಪ್ರಕಾರ ಕಾರ್ಪೊರೇಟ್ ಐಡಿ ಸಂಖ್ಯೆ ಅಥವಾ ಸಿಐಎನ್ ಸಂಖ್ಯೆಯನ್ನು ಪ್ರತಿ ಸಿಮ್ ಕಾರ್ಡ್ ಅಂಗಡಿಗಳಿಗೆ ನೀಡಲಾಗುತ್ತದೆ. ಈ ಸಂಖ್ಯೆ ಇಲ್ಲದೆ ಯಾವುದೇ ಅಂಗಡಿಗಳು ಸಿಮ್ ಅನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಪ್ರತಿ ಅಂಗಡಿಯೂ ಕಾರ್ಪೊರೇಟ್ ಐಡಿ ಸಂಖ್ಯೆ ಅಥವಾ ಸಿಐಎನ್ ಸಂಖ್ಯೆಯನ್ನು ಹೊಂದಿರಬೇಕು.
ದೂರ ಸಂಪರ್ಕ ಇಲಾಖೆಯ [DoT] ನಿಯಮದ ಪ್ರಕಾರ ಅಂಗಡಿಯೂ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ಪೋರ್ಟ್ ಮತ್ತು ಜಿಎಸ್‌ಟಿ ವಿವರಗಳನ್ನು ಒದಗಿಸಬೇಕಾಗುತ್ತದೆ. ಇವುಗಳನ್ನು ಒದಗಿಸಿ ನೊಂದಣಿ ಮಾಡಿಕೊಳ್ಳಬೇಕು ನಂತರ ಅವರಿಗೆ ಕಾರ್ಪೊರೇಟ್ ಐಡಿಯನ್ನು ನೀಡಲಾಗುತ್ತದೆ. ಒಂದು ವೇಳೆ ನೋಂದಣಿ ಮಾಡಿಕೊಂಡಿಲ್ಲವೆಂದರೆ ಅಂಗಡಿಗಳು ಸಿಮ್ ಕಾರ್ಡ್ ಅನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.
ನೀವೇನಾದ್ರೂ ಹೊಸ ಸಿಮ್ ಅನ್ನು ಖರೀದಿ ಮಾಡಬೇಕೆಂದರೆ ಸರ್ಕಾರದ ಹೊಸ ಸಿಮ್ ಕಾರ್ಡ್ ನೀಡುವ ನಿಯಮಗಳನ್ನು ಬದಲಾಯಿಸಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಇದರ ಜೊತೆಗೆ ಪ್ರತಿಗ್ರಹಕನಿಗೆ ಕೆವೈಸಿ ಕಡ್ಡಾಯವಾಗಿದೆ.
ಏಪ್ರಿಲ್ 15ಕ್ಕೆ ಈ ಸೇವೆ ಸ್ಥಗಿತ ವಾಗಲಿದೆ
ಹೌದು ಗೆಳೆಯರೇ ನಿಮ್ಮ ಫೋನ್ ನಲ್ಲಿ *121# ಅಥವಾ *#99# ನಂತಹ ಯುಎಸ್‌ಎಸ್‌ಡಿ [USSD] ಸೇವೆಗಳನ್ನು ಬಳಸುತ್ತಿದ್ದರೆ ಅಂತಹ ಸೇವೆಗಳನ್ನು ಟೆಲಿಕಾಂ ಇಲಾಖೆಯು ನಿಷೇಧಿಸುತ್ತಿದೆ. ಏಪ್ರಿಲ್ 15 ರಿಂದ ಯುಎಸ್‌ಎಸ್‌ಡಿ [USSD] ಆಧಾರಿತ ಕರೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸುವಂತೆ ದೂರ ಸಂಪರ್ಕ ಇಲಾಖೆಯ [DoT] ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಮುಂದಿನ ದಿನಗಳಲ್ಲಿ ಆದೇಶದ ಪ್ರಕಾರ ಈ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಒಂದು ವೇಳೆ ಕರೆ ಫಾರ್ವರ್ಡ್ ಮಾಡಲು ಗ್ರಾಹಕರಿಗೆ ಪರ್ಯಾಯ ಆಯ್ಕೆಗಳನ್ನು ಮಾಡಬಹುದು. ಇದರಿಂದ ಈ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಸಿಮ್ ಕಾರ್ಡ್ ಖರೀದಿ ಮಾಡುವಾಗ ಈ ತಪ್ಪು ಮಾಡಬೇಡಿ
ಕೆಲವು ಜನರು ಸಿಮ್ ಕಾರ್ಡ್ ಖರೀದಿ ಮಾಡುವಾಗ ನಕಲಿ ಸಿಮ್ ಕಾರ್ಡ್ ಖರೀದಿ ಮಾಡಿ ಸಮಸ್ಯೆಗೆ ಒಳಗಾಗುತ್ತಾರೆ. ಹೌದು ಗೆಳೆಯರೇ ಬೀದಿ ಬದಿಯಲ್ಲಿ ಯಾರಾದರೂ ಸಿಮ್ ಕಾರ್ಡ್ ಮಾರಾಟ ಮಾಡುತ್ತಿದ್ದರೆ, ಅಲ್ಲಿ ನೀವು ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬೇಡಿ. ಒಂದು ವೇಳೆ ನೀವು ಸಿಮ್ ಕಾರ್ಡ್ ಅನ್ನು ಖರೀದಿ ಮಾಡಿದರೆ ವಂಚನೆಗೆ ಒಳಗಾಗಬೇಕಾಗುತ್ತದೆ. ಅದಲ್ಲದೆ ಪ್ರತಿದಿನ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ ಗಳನ್ನು ದೇಶದಲ್ಲಿ ಮಾರಾಟವಾಗುತ್ತಿದೆ. ಇದರಿಂದ ವಂಚನೆಯಿಂದ ದೂರವಿರಲು ಕೆಲವು ಸ್ಥಳಗಳಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಬೇಡಿ. ಒಂದು ವೇಳೆ ನೀವು ಹೊಸ ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬೇಕೆಂದರೆ ಸರಿಯಾದ ಸಿಮ್ ಕಾರ್ಡ್ ಅಂಗಡಿಗಳಿಗೆ ಅಥವಾ ಟೆಲಿಕಾಂ ಅಂಗಡಿಗೆ ಭೇಟಿ ನೀಡಿ ಸಿಮ್ ಖರೀದಿ ಮಾಡಿ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ
ಧನ್ಯವಾದಗಳು