RTC Aadhar Card link: ಸುಲಭವಾಗಿ ಮೊಬೈಲ್ ಮೂಲಕ ನಿಮ್ಮ RTC ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ…!

RTC Aadhar Card link: ಸುಲಭವಾಗಿ ಮೊಬೈಲ್ ಮೂಲಕ ನಿಮ್ಮ RTC ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ…!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ರಾಜ್ಯದಲ್ಲಿ ಇನ್ನೇನು ಮುಂಗಾರು ಪ್ರಾರಂಭವಾಗಲಿದೆ, ರಾಜ್ಯದ ಎಲ್ಲಾ ರೈತರು ಮುಂಗಾರು ಬಿತ್ತನೆ ಮಾಡಲು ಆರಂಭ ಮಾಡಿಕೊಂಡಿದ್ದಾರೆ. ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮಾಡಲು ಮತ್ತು ಬಿತ್ತನೆ ಬೀಜ ಖರೀದಿಸಲು ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಆದರೆ ಆಧಾರ್ ಕಾರ್ಡ್ ಗೆ ಆರ್ ಟಿ ಸಿ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರವು ಈಗಾಗಲೇ ತಿಳಿಸಿದೆ. ಹಾಗಾದರೆ ಆನ್ಲೈನ್ ಮೂಲಕ ಹೇಗೆ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವುದು. ಈ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.

ಆರ್ ಟಿ ಸಿ ಗೆ ಆಧಾರ್ ಲಿಂಕ್

ಹೌದು ಗೆಳೆಯರೇ,ಸುಮಾರು ಎರಡು ತಿಂಗಳುಗಳ ಹಿಂದೆಯೇ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡರವರು ಆದೇಶವನ್ನು ಹೊರಡಿಸಿದರು. ರಾಜ್ಯ ಸರ್ಕಾರವು ತಿಳಿಸಿರುವ ಪ್ರಕಾರ ಎಲ್ಲಾ ಜಮೀನುಗಳ ಸರ್ವೆ ನಂಬರ್ ಗಳು ಮತ್ತು ಆರ್ ಟಿ ಸಿ ಗಳನ್ನು ಡಿಜಿಟಲ್ ಆರ್ ಟಿ ಸಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಕಾರಣದಿಂದ ರಾಜ್ಯದಲ್ಲಿ ಯಾರು ಜಮೀನು ಹೊಂದಿದ್ದಾರೆ, ಎಲ್ಲ ರೈತರು ಜಮೀನುಗಳ ಆರ್ ಟಿ ಸಿ ಗೆ ಅಥವಾ ಪಹಣಿಗೆ ಕಡ್ಡಾಯವಾಗಿ ಪಹಣಿಗೆ ಆಧಾರ್ ಲಿಂಕ್ ಮಾಡಬೇಕಾಗಿದೆ. ಆದರೆ ಎರಡು ತಿಂಗಳಿನಿಂದ ಈ ಆದೇಶ ಹೊರಡಿಸಿದ್ದರು ಸಹ ಹೆಚ್ಚು ರೈತರು ಹೆಚ್ಚಾಗಿ ಲಿಂಕ್ ಮಾಡಿಸಿಕೊಂಡಿಲ್ಲ.

ಆರ್ ಟಿ ಸಿ ಗೆ ಆಧಾರ್ ಲಿಂಕ್ ಮಾಡಿಸುವುದರಿಂದ ರೈತರಿಗೆ ಬಹಳ ಉಪಯೋಗಗಳು ದೊರೆಯುತ್ತದೆ. ಸರ್ಕಾರದಿಂದ ಸಿಗುವ ಎಲ್ಲ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಆರ್ ಟಿ ಸಿ ಗೆ ಆಧಾರ್ ಲಿಂಕ್ ಪ್ರಮುಖವಾಗಿರುತ್ತದೆ. ಈ ಕಾರಣದಿಂದ ಯಾರೆಲ್ಲಾ ರೈತರು ಜಮೀನಿನ ಪಹಣಿಗೆ ಆಧಾರ್ ಲಿಂಕ್ ಅಥವಾ ಆರ್ ಟಿ ಸಿ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಂಡಿಲ್ಲ ಅಂತವರು ಆದಷ್ಟು ಬೇಗ ಲಿಂಕ್ ಮಾಡಿಸಿಕೊಳ್ಳಿ. ಒಂದು ವೇಳೆ ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲವೆಂದರೆ ಸರ್ಕಾರವು ಕಠಿಣ ಪ್ರಮಾಣವನ್ನು ತೆಗೆದುಕೊಳ್ಳಬಹುದು.

ಎಲ್ಲಿ ಲಿಂಕ್ ಮಾಡಿಸಿಕೊಳ್ಳಬೇಕು

ಇದುವರೆಗೂ ಸುಮಾರು 15 ಲಕ್ಷ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಂಡಿದ್ದಾರೆ ಆದರೆ ಇನ್ನೂ ಹೆಚ್ಚು ರೈತರು ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲ. ಈ ಕಾರಣದಿಂದ ಕಂದಾಯ ಇಲಾಖೆಯು ರೈತರಿಗೆ ಕಡ್ಡಾಯವಾಗಿ ಜಮೀನಿನ ಎಲ್ಲಾ ಸರ್ವೆ ನಂಬರ್ ಪಹಣಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಕಂದಾಯ ಇಲಾಖೆಯು ಗ್ರಾಮೀಣ ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿಗೆ ಆಧಾರ್ ಲಿಂಕ್ ಮಾಡಲಾಗುತ್ತದೆ. ಹಾಗಾದ್ರೆ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

rtc aadhar card link
rtc aadhar card link

ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ

ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದು, ಅದರ ಬಗ್ಗೆ ಈ ಕೇಳಭಾಗದಲ್ಲಿ ತಿಳಿಸಲಾಗಿದೆ.

  • ಮೊದಲು ನೀವು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ನಂತರ ನಿಮಗೆ ಲಾಗಿನ್ ಆಪ್ಷನ್ ಕೇಳುತ್ತದೆ, ಅಲ್ಲಿ ನೀವು ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾಪ್ ಕೋಡ್ ಎಂಟರ್ ಮಾಡಿ ಸೆಂಡ್ ಒಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ನೀವು ನೀಡಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿ ಬರುತ್ತದೆ, ಓಟಿಪಿಯನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಲಾಗಿನ್ ಮಾಡಿಕೊಂಡಿದ ನಂತರ ಅರ್ಜಿದಾರರ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಭರ್ತಿ ಮಾಡಿ, ವೆರಿಫೈ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸೂಚನೆ ನೀಡಲಾಗುತ್ತದೆ ನೀವು ಇದಕ್ಕೆ ಓಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
  • ನಂತರ ನಿಮಗೆ ಅಂದರೆ ಇದೇ ಪೇಜ್ ನಲ್ಲಿ ಕೆಳಗೆ ತೋರಿಸುವ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನೀವು ಮತ್ತೊಮ್ಮೆ ಅರ್ಜಿದಾರರ ಆಧಾರ್ ಸಂಖ್ಯೆ ನಂಬರ್ ಅನ್ನು ಹಾಕಿ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ.
  • ಮೊಬೈಲ್ ನಂಬರ್ ಗೆ 6 ಅಂಕಿಯ ಒಟಿಪಿ ಬರುತ್ತದೆ ಓಟಿಪಿಯನ್ನು ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ಈ ಪೇಜ್ ನ ಮುಖಪುಟದ ಎಡಬದಿಯಲ್ಲಿ ಕಾಣುವ ಲಿಂಕ್ ಆಧಾರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಅದೇ ಪುಟದಲ್ಲಿ ಕೆಳಗಡೆ ಕಾಣುವ ನಿಮ್ಮ ಸರ್ವೇ ನಂಬರ್ ಒಂದನ್ನು ಟಿಕ್ ಮಾಡಿಕೊಂಡು ಅದರ ಮೇಲೆ ಕಾಣುವ ಲಿಂಕ್ ಬಟನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನೀವು ಮತ್ತೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ, 6 ಅಂಕಿಯ ಓಟಿಪಿಯನ್ನು ನಮೂದಿಸಿ ನಮೂಂದಿಸಿದ ನಂತರ ವೇರಿಫೈ ಓಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ ಎಂಬ ಆಪ್ಷನ್ ಕಾಣುತ್ತದೆ, ಅಲ್ಲಿ ನೀವು ಎಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ಎಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪಹಣಿ ಜೊತೆಗೆ ಆಧಾರ್ ಲಿಂಕ್ ಆಗಿರುತ್ತದೆ. 

ಈ ರೀತಿ ನೀವು ಸುಲಭವಾಗಿ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಡಬಹುದಾಗಿದೆ.

ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಥವಾ ಕೃಷಿಕಚೇರಿಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Comment