RTC News: ತಂದೆ, ತಾತ, ಮುತ್ತಾತನ ಹೆಸರಲ್ಲಿ ಪಹಣಿ ಇದ್ದವರಿಗೆ ಗುಡ್ ನ್ಯೂಸ್..! ಸರ್ಕಾರದ ಹೊಸ ರೂಲ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ..!

RTC News: ತಂದೆ, ತಾತ, ಮುತ್ತಾತನ ಹೆಸರಲ್ಲಿ ಪಹಣಿ ಇದ್ದವರಿಗೆ ಗುಡ್ ನ್ಯೂಸ್..! ಸರ್ಕಾರದ ಹೊಸ ರೂಲ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ..!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರು ರಾಜ್ಯದ ಎಲ್ಲಾ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇರುವ ಪಹಣಿ ಜಮೀನನ್ನು ಬಳಸಿಕೊಂಡು ಉಳಿಮೆ ಮಾಡುತ್ತಿರುವವರು ಅಂತವರು ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಳ್ಳುವ ಮಾರ್ಗದ ಬಗ್ಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿರುವ ಪಹಣಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಸರ್ಕಾರ ಒಂದು ಹೊಸ ರೂಲ್ಸ್ ಅನ್ನು ತಂದಿದೆ. ಹಾಗಾದರೆ ಯಾವುದೇ ದಾಖಲೆ ಇಲ್ಲದೆ ಹೋದರೆ ಅಥವಾ ಆಸ್ತಿಗೆ ಸಂಬಂಧ ಪಟ್ಟಂತಹ ವ್ಯಕ್ತಿಗಳು ಮರಣ ಹೊಂದಿದ್ದರೆ ಅವರ ಆಸ್ತಿಯನ್ನು ಹೇಗೆ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದು ಎಂಬ ಎಲ್ಲ ವಿವರವನ್ನು ಹಂತ ಹಂತವಾಗಿ ಈ ಕೆಳಭಾಗದಲ್ಲಿ ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ರೈತರಿಗೆ ನೀಡಿರುವ ಹೊಸ ರೂಲ್ಸ್

ರೈತರು ತಮ್ಮ ಜಮೀನಿನ ಪಕ್ಕದಲ್ಲಿ ಇರುವ ರಸ್ತೆ, ನೀರು ಮತ್ತು ಜಮೀನಿನಲ್ಲಿ ಇರುವ ಮರಗಳು ನಮ್ಮ ಜಮೀನಿಗೆ ಬರುತ್ತದೆ, ಇದು ನನ್ನ ಪಾಲು ಎಂಬ ವಿಷಯಕ್ಕೆ ಹಲವು ರೈತರು ಜಗಳಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರು ರೈತರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಎಲ್ಲಾ ರೈತರು ತಮ್ಮ ಜಮೀನಿನ ದಾಖಲೆ ಪತ್ರಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ. ಈ ರೀತಿ ಮಾಡುವುದರಿಂದ ಕೆಲವು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ರಾಜ್ಯ ಸರ್ಕಾರವು ಮುಂದಾಗಿದೆ ಇನ್ನು ಮುಂದೆ ಜಮೀನಿನ ಪಹಣಿಗಳು ಡಿಜಿಟಲ್ ರೂಪದಲ್ಲಿ ಬರಲಿದೆ.

ಇನ್ನು ಮುಂದೆ ಜಮೀನಿನ ಪಹಣಿ ಡಿಜಿಟಲ್ ರೂಪದಲ್ಲಿ

ಹೌದು ಗೆಳೆಯರೇ, ಈ ಹಿಂದೆಯೇ ಜಮೀನಿನ ಎಲ್ಲಾ ಮಾಹಿತಿಯನ್ನು ಕಾಗದದ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು. ಆದರೆ ಅದರಲ್ಲಿ ಸರಿಯಾಗಿ ಯಾರಿಗೆ ಎಷ್ಟು ಭಾಗದ ಜಮೀನು ಸೇರ್ಪಡೆಯಾಗುತ್ತದೆ ಎಂಬುದರ ಮಾಹಿತಿ ನಮೂದಿಸುತ್ತಿರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ಪಹಣಿಯನ್ನು ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ. ಈ ರೀತಿ ಮಾಡುವುದರಿಂದ ರೈತರಿಗೆ ಉಪಯೋಗವಾಗಲಿದೆ ಹಾಗೆಯೇ ಕೆಲವು ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ನೀಡಿದೆ.

ಪಹಣಿ ಡಿಜಿಟಲೀಕರಣ ಯಾವಾಗ ಪ್ರಾರಂಭವಾಗಲಿದೆ

ರಾಜ್ಯ ಸರ್ಕಾರವು ರೈತರಿಗೆ ಉಪಯೋಗವಾಗಲಿ ಎಂದು ಅವರ ಜಮೀನಿನ ಎಲ್ಲ ಮಾಹಿತಿಯನ್ನು ಮೊಬೈಲ್ ಮೂಲಕ ತಿಳಿದುಕೊಳ್ಳಲು ಒಂದು ಹೊಸ ಸೇವೆಯನ್ನು ತರಲ್ಲಿದೆ. ರಾಜ್ಯದ ರೈತರು ತಮ್ಮ ಜಮೀನಿನ ಮಾಹಿತಿಯನ್ನು ಮತ್ತು ಅಳತೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲು ಈ ಯೋಜನೆಯನ್ನು ತರಲಿದ್ದಾರೆ. ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರು ಈ ಪ್ರಕ್ರಿಯೆಯನ್ನು 2024ರ ಒಳಗಡೆ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಈ ಯೋಜನೆಯಿಂದ ತಂದೆ, ತಾತ, ಮುತ್ತಾತನ ಆಸ್ತಿಯನ್ನು ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು

ಹೌದು ಗೆಳೆಯರೇ, ರಾಜ್ಯ ಸರ್ಕಾರವು ತಂದಿರುವ ಈ ಹೊಸ ಪ್ರಕ್ರಿಯೆಯು ಪೂರ್ಣಗೊಂಡರೆ ರೈತರಿಗೆ ಉಪಯೋಗವಾಗಲಿದೆ ಎಂದು ಭಾವಿಸಬಹುದು. ಇನ್ನೇನು ಕೆಲವೇ ತಿಂಗಳುಗಳಲ್ಲಿ ರೈತರ ಜಮೀನಿನ ಆಸ್ತಿಯನ್ನು ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದೆ. ಈ ಪ್ರಕ್ರಿಯೆಯು ಕೆಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ರಾಜ್ಯ ಸರ್ಕಾರವು ರೈತರ ಜಮೀನನ ಮಾಹಿತಿಯನ್ನು ಹಾಗೂ ಅಳತೆಯನ್ನು ಸ್ಕ್ಯಾನ್ ಮಾಡಿ ಅದರ ದಾಖಲೆ ಸಂಗ್ರಹಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ರೀತಿ ಮಾಡುವುದರಿಂದ ರೈತರು ತಮ್ಮ ಮೊಬೈಲ್ ನಲ್ಲಿ ಜಮೀನಿನ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಅದಲ್ಲದೆ ನಿಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿರುವ ಜಮೀನನ್ನು ತಮ್ಮ ಹೆಸರಿಗೆ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ ಅಥವಾ ನೀವು ವ್ಯವಸಾಯ ಮಾಡುತ್ತಿರುವ ಜಮೀನು ನಿಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿದ್ದು ಅವರು ಮರಣ ಹೊಂದಿದ್ದರೆ, ಅವರ ಮರಣ ಪ್ರಮಾಣ ಪತ್ರವನ್ನು ಒದಗಿಸಿ ಸುಲಭವಾಗಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.

ಈ ಪ್ರಕ್ರಿಯೆ ಯಾವುದಕ್ಕೆ ಉಪಯೋಗವಾಗಲಿದೆ

ರಾಜ್ಯ ಸರ್ಕಾರವು ರೈತರ ಜಮೀನಿನ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದರೆ ರೈತರಿಗೆ ಹಲವು ರೀತಿಯಲ್ಲಿ ಉಪಯೋಗವಾಗಲಿದೆ. ರೈತರು ತಮ್ಮ ಹೊಲದ ಪಕ್ಕದಲ್ಲಿರುವ ಮರ ಗಿಡಗಳು ನನ್ನ ಪಾಲು ಎಂಬ ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ಜನರು ಜಗಳವಾಡಿಕೊಳ್ಳುತ್ತಾರೆ. ಈ ಸಮಸ್ಯೆಯನ್ನು ದೂರ ಮಾಡಲು ಪಹಣಿ ಡಿಜಿಟಲೀಕರಣ ಉಪಯೋಗವಾಗುತ್ತದೆ.

ಹಾಗೆಯೇ ವಿಭಾಗ ರೂಪದಲ್ಲಿ ಪಿತ್ರಾರ್ಜಿತ ಅಥವಾ ಪೌತಿ ಖಾತೆಯ ರೂಪದಲ್ಲಿ ಒಂದು ರೈತನಿಂದ ಮತ್ತೊಂದು ರೈತನಿಗೆ ಆಸ್ತಿಯ ಬದಲಾವಣೆ ಉಂಟಾಗಿರುತ್ತದೆ. ಹಿಂದೆಲ್ಲ ಈ ಎಲ್ಲಾ ದಾಖಲೆಗಳ ಮಾಹಿತಿಯನ್ನು ಕಾಗದ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು. ಆದರೆ ಅದರಲ್ಲಿ ಸರಿಯಾಗಿ ಯಾರಿಗೆ ಎಷ್ಟು ಭಾಗದ ಜಮೀನನ್ನು ಸೇರ್ಪಡೆಯಾಗಬೇಕು ಎಂಬುದನ್ನು ನಮೂಂದಿಸುತ್ತಿರಲಿಲ್ಲ. ಈ ಕಾರಣಗಳಿಂದ ಪಹಣಿಯನ್ನು ಡಿಜಿಟಲೀಕರಣ ಮಾಡುವುದರಿಂದ ರೈತರಿಗೆ ಉಪಯೋಗವಾಗುತ್ತದೆ ಎಂದು ಸರ್ಕಾರವು ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಮುಂದಾಗಿದೆ. ಹಾಗಾದರೆ ಭೂಮಿಯ RTC ಯನ್ನು ಆನ್ಲೈನ್ ಮೂಲಕ ಪಡೆಯುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಆನ್ಲೈನ್ ಮೂಲಕ ಭೂಮಿಯ RTC ಪಡೆದುಕೊಳ್ಳುವ ವಿಧಾನ

ಹೌದು ಗೆಳೆಯರೇ, ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ನೀವು ಸುಲಭವಾಗಿ ಭೂಮಿಯ RTC ಯನ್ನು ಪಡೆದುಕೊಳ್ಳಬಹುದಾಗಿದೆ. ಕರ್ನಾಟಕದ ಭೂಮಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು RTC ಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಆ ವಿಧಾನದ ಬಗ್ಗೆ ಹಂತ ಹಂತವಾಗಿ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.

  • ಮೊದಲು ನೀವು ಭೂಮಿ ಕರ್ನಾಟಕ ಭೂ ದಾಖಲೆ ಅಧಿಕೃತ https://landrecords.karnataka.gov.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ‘ಭೂಮಿ’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ‘ನಾಗರಿಕ ಸೇವೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ’ ಎಂಬ ಆಪ್ಷನ್ ಕಾಣುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ‘View RTC ಮತ್ತು RC’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ ಈಗ ನೀವು ಮುಂದಿನ ಪುಟಕ್ಕೆ ಹೋಗುತ್ತೀರಾ.
  • ಅಲ್ಲಿ ನೀವು ಕೇಳುವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ಸಂಖ್ಯೆ, ಸುರ್ನೋಕ್, ಹಿಸ್ಸಾ ಸಂಖ್ಯೆ, ಅವಧಿ ವರ್ಷ, ಮಾಲೀಕರ ವಿವರಗಳು ಎಲ್ಲಾ ಮಾಹಿತಿಯನ್ನು ತಿಳಿಸಿ ‘ಗೋ’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ನಿಮ್ಮ ಪಹಣಿಯ ಅಥವಾ ನಿಮ್ಮ ಭೂಮಿಯ RTC ಯನ್ನು ಇಲ್ಲಿ ಕಾಣಿಸುತ್ತದೆ.

ಈ ರೀತಿ ನೀವು ಸುಲಭವಾಗಿ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ನಿಮ್ಮ ಭೂಮಿಯ RTC ಯನ್ನು ನೋಡಿಕೊಳ್ಳಬಹುದಾಗಿದೆ. ಹಾಗಾದರೆ ನಿಮ್ಮ ಭೂಮಿಯ RTC ಯನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.

ಆನ್ಲೈನ್ ಮೂಲಕ ಭೂಮಿ RTC ಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

ನೀವೇನಾದರೂ ಕೆಲವು ಯೋಜನೆಗಳಿಗೆ ಅಥವಾ ಸಾಲ ಮತ್ತು ಕಾನೂನು ಅರ್ಜಿ ಸಲ್ಲಿಕೆ ಮಾಡಬೇಕೆಂದರೆ RTC ಅಥವಾ ಪಹಣಿ ಮುಖ್ಯವಾಗುತ್ತದೆ. ನೀವು RTC ಯನ್ನು ತೆಗೆಸಬೇಕೆಂದರೆ ನೀವು ಅಂಗಡಿಗಳಿಗೆ ಅಲೆಯಬೇಕಾಗುತ್ತದೆ. ಆದರೆ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ RTC ಯನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

  • ಮೊದಲು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತೆ, ಅಲ್ಲಿ ನೀವು ‘ಪಹಣಿ [ಆನ್ಲೈನ್ RTC] ಎಲ್ಲಿಯಾದರೋ ಯಾವುದೇ ಸಮಯದಲ್ಲಿ’ ಈ ಸೇವೆಯನ್ನು ಪರಿಶೀಲಿಸಲು ಲಾಗಿನ್ ಮಾಡಿ.
  • ಅಲ್ಲಿ ಕೇಳುವ ಅಗತ್ಯದ ಮಾಹಿತಿಯನ್ನು ನಮೂದಿಸಿ ಮತ್ತು ಅದನ್ನು ಸಲ್ಲಿಸಿ.
  • ನಂತರ ನೀವು ಐ-ವ್ಯಾಲೆಟ್ ಸೇವೆಗಳ ಪುಟಕ್ಕೆ ನಿಮ್ಮನ್ನು ನಿರ್ಧರಿಸಲಾಗುತ್ತದೆ, ಅಲ್ಲಿ ನೀವು iRTC ಟ್ಯಾಬ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ನಿಮಗೆ ಹೊಸ ಪುಟ್ಟ ತೆರೆಲಾಗುತ್ತದೆ, ಇಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ಅನ್ನು ನಮೂಂದಿಸಿ ‘ಗೋ ಅಥವಾ ಹೋಗಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನೀವು ಸುರ್ನೋಕ್, ಹಿಸ್ಸಾ ಸಂಖ್ಯೆ, ಮತ್ತು RTC ಮಾನ್ಯತೆ ಎಲ್ಲಾ ದಾಖಲೆಗಳನ್ನು ನಮೂದಿಸಿ ‘ವಿವರಗಳನ್ನು ಪಡೆದುಕೊಳ್ಳಿ’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ RTC ಯ ಎಲ್ಲ ವಿವರ ಕಾಣಿಸುತ್ತದೆ, ನಂತರ ನೀವು ‘View RTC’ ಎಂಬ ಬಟನ್ ಮೇಲೆ ಒತ್ತಿ ಮತ್ತು ಪೇ ಮತ್ತು ಪ್ರಿಂಟ್ iRTC ಬಟನ್ ಅನ್ನು ಒತ್ತುವ ಮೊದಲು ವಿವರಗಳನ್ನು ಪರಿಶೀಲಿಸಿ.
  • ಪರಿಶೀಲಿಸಿದ ನಂತರ ಮೊತ್ತವನ್ನು ನಿಮ್ಮ i-wallet ನಿಂದ ಕಡಿತಗೊಳಿಸಲಾಗುತ್ತದೆ ಅದರ ನಂತರ ನೀವು iRTC ನಕಲನ್ನು ಮುದ್ರಿಸಲಾಗುತ್ತದೆ ಅಥವಾ ಡೌನ್ಲೋಡ್ ಮಾಡಲಾಗುತ್ತದೆ.

ಈ ರೀತಿ ನೀವು ಸುಲಭವಾಗಿ ಆನ್ಲೈನ್ ಮೂಲಕ ಭೂಮಿ RTC ಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Comment