Solar Rooftop Scheme 2024: ಸೋಲಾರ್ ಕರೆಂಟ್ ಕೃಷಿ ಮನೆ ಮೇಲೆ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಿ..! ಇಲ್ಲಿದೆ ಸಂಪೂರ್ಣ ಮಾಹಿತಿ…
ನಮಸ್ಕಾರ ಬಂಧುಗಳೇ ಈಗ ದೇಶದಲ್ಲಿ ಸೋಲಾರ್ ವಿದ್ಯುತ್ ಜನಪ್ರಿಯವಾಗಿದೆ, ಸೋಲಾರ್ ಮೇಲೆ ಹೆಚ್ಚಿನ ಜನರು ಆಸಕ್ತಿ ಇಡುತ್ತಿದ್ದಾರೆ. ಈ ವರ್ಷ ಬರಗಾಲ ಉಂಟಾಗಿದೆ ಈ ಸಮಯದಲ್ಲಿ ವಿದ್ಯುತ್ ಸಮಸ್ಯೆಯೂ ಸಹ ಹೆಚ್ಚಾಗುತ್ತಿದೆ, ಹಾಗೆಯೇ ರೈತರು ನೀರಾವರಿ ಬೇಸಾಯಕ್ಕೂ ಸಹ ಕಷ್ಟವಾಗುತ್ತಿದೆ. ಅಂತರ್ಜಲ ಇದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ರೈತರು ಬೆಳೆಗಳಿಗೆ ನೀರು ಹಾಯಿಸಲು ಕಷ್ಟಕರವಾಗುತ್ತದೆ. ಅಂತಹ ರೈತರು ಸೋಲಾರ್ ಅಳವಡಿಕೆ ಮಾಡಿಕೊಂಡರೆ ತುಂಬಾ ಉಪಯೋಗವಾಗುತ್ತದೆ. ಹಾಗೆಯೇ ಸರ್ಕಾರದಿಂದ ಸೋಲಾರ್ ಪಡೆದುಕೊಳ್ಳಲು ಭರ್ಜರಿ ಸಬ್ಸಿಡಿಯನ್ನು ಸಹ ನೀಡುತ್ತಿದ್ದಾರೆ.
ಏನಿದು ಮನೆ ಮೇಲೆ ವಿದ್ಯುತ್ ಕೃಷಿ
ಬೆಸ್ಕಾಂ ಅಥವಾ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ನಗರವಾಸಿ ಅಥವಾ ರೈತರು ತಮ್ಮ ಮನೆ ಟೆರೆಸ್ ಮೇಲೆ ಸೋಲಾರ್ ವಿದ್ಯುತ್ ಕೃಷಿ ಮಾಡಬಹುದು. ಈ ಯೋಜನೆಗೆ ಸಾರ್ವಜನಿಕರಿಂದ ಸಾಕಷ್ಟು ಸ್ಪಂದನೆ ಸಿಗುತ್ತಿದೆ, ಮನೆಯ ಟೆರಸ್ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ಗ್ರಾಹಕರಿಗೆ ಸರ್ಕಾರದಿಂದ ಸಹಾಯಧನ ಸೌಲಭ್ಯ ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟದ ಮಾಹಿತಿಯುಳ್ಳ ಕರಪತ್ರ ಹಂಚಲಾಗುತ್ತಿದೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಏನೆಲ್ಲ ಲಾಭ ಸಿಗಲಿದೆ? ಏನಿಲ್ಲ ಉಪಯೋಗವಾಗಲಿದೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ.
ಬೆಸ್ಕಾಂನ ಸೋಲಾರ್ ಪ್ಯಾನೆಲ್ ಯೋಜನೆ 2024
ನಿಮ್ಮ ಮನೆಯ ಮೇಲ್ಭಾಗದಲ್ಲಿ ಅಥವಾ ಮನೆಯ ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿ ಅದನ್ನು ಸ್ವಂತ ಬಳಕೆಗಾಗಿ ಬಳಸಿಕೊಳ್ಳುವುದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಹಣ ಗಳಿಸಲು ಈ ಯೋಜನೆ ಉಪಯೋಗವಾಗುತ್ತದೆ. ನೀವೇನಾದರೂ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಬೇಕೆಂದರೆ ಸರ್ಕಾರದಿಂದ ಸಹಾಯಧನವನ್ನು ಸಹ ನೀಡಲಾಗುತ್ತದೆ. ಮನೆಯ ಕರೆಂಟ್ ನ ಕೆಲವು ಸಮಸ್ಯೆಗಳಿಂದ ಪದೇ ಪದೇ ಪವರ್ ಅನ್ನು ಕಟ್ ಮಾಡುವ ಸಮಸ್ಯೆ ಹೆಚ್ಚಾಗುತ್ತಿದೆ. ಇದಲ್ಲದೆ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ ಅಡಿಯಲ್ಲಿ ಪ್ರತಿ ತಿಂಗಳು ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು. ಆದರೆ ಒಂದು ಬಾರಿ ನೀವು ಸರ್ಕಾರದಿಂದ ಸೋಲಾರ್ ಪ್ಯಾನೆಲ್ ಗೆ ಸಬ್ಸಿಡಿ ಯನ್ನು ಪಡೆದುಕೊಂಡು ಖರೀದಿ ಮಾಡಿದರೆ ವರ್ಷಗಟ್ಟಲೆ ಕರೆಂಟ್ ಸಮಸ್ಯೆ ಇಲ್ಲದೆ ಸೋಲಾರ್ ಪ್ಯಾನೆಲ್ ನಿಂದ ಪಡೆದುಕೊಳ್ಳಬಹುದು. ಹಾಗೆಯೇ ಇದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಸಹ ಮಾಡಿರಬಹುದು.
ಈ ಯೋಜನೆಗೆ ಯಾರು ಅರ್ಹರು
ಈ ಯೋಜನೆಗೆ ಸದ್ಯಕ್ಕೆ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಗ್ರಾಹಕರು ಈ ಯೋಜನೆಯನ್ನು ಪಡೆದುಕೊಳ್ಳಬಹುದು. ರಾಜ್ಯದ 8 ಜಿಲ್ಲೆಗಳಲ್ಲಿ ಅಂದರೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಸದ್ಯದ ಮಟ್ಟಿಗೆ ಈ ಜಿಲ್ಲೆಯಲ್ಲಿ ಈ ಯೋಜನೆಯನ್ನು ಪಡೆದುಕೊಳ್ಳಬಹುದು ಅಂದರೆ ಈ ಜಿಲ್ಲೆಗಳು ಬೆಸ್ಕಾಂ ವಾಪ್ತಿಗೆ ಬರಲಿವೆ.
ನೀವೇನಾದರೂ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಬೇಕೆಂದರೆ ಸರ್ಕಾರದಿಂದ ಸಬ್ಸಿಡಿ ಸಹ ನೀಡುತ್ತಿದ್ದಾರೆ. ನಿಮ್ಮ ಊರಿನ ಹತ್ತಿರವಿರುವ ಬೆಸ್ಕಾಂ ಕಚೇರಿಗೆ ಭೇಟಿ ನೀಡುವ ಮೂಲಕ ಈ ಯೋಜನೆಯ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಯೋಜನೆಗೆ ಅರ್ಹರಾಗಿದ್ದರೆ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡು ಸರ್ಕಾರದಿಂದ ಸಹಾಯಧನವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ವಸತಿ ಮನೆ ಹೊಂದಿರುವವರು ಮಾತ್ರವಲ್ಲದೆ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆ ಇನ್ನಿತರ ವಿವಿಧ ಕಟ್ಟಡಗಳಲ್ಲಿ ಈ ಯೋಜನೆ ಅಡಿಯಲ್ಲಿ ಸೋಲಾರ್ ಪ್ಯಾನೆಲ್ ಪಡೆದುಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದು. ಹಾಗಾದರೆ ಈ ಯೋಜನೆಯನ್ನು ನೀವು ಪಡೆದುಕೊಳ್ಳಬೇಕೆಂದರೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಲು ಎಷ್ಟು ಬೆಲೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ವಿದ್ಯುತ್ ಮಾರಾಟ ಮಾಡುವುದು ಹೇಗೆ
ನೀವೇನಾದರೂ ಸರ್ಕಾರದಿಂದ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡರೆ ಸೋಲಾರ್ ಪ್ಯಾನೆಲ್ ನಲ್ಲಿ ದಿನನಿತ್ಯ ವಿದ್ಯುತ್ ಅನ್ನು ಬಳಸಿಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು. ನೀವೇನಾದರೂ ಸೋಲಾರ್ ಪ್ಯಾನೆಲ್ ಅನ್ನು ಸ್ಥಾಪನೆ ಮಾಡಬೇಕೆಂದರೆ 1 ಕಿಲೋ ವ್ಯಾಟ್ ಸಾವಿರ ಸೋಲಾರ್ ಪ್ಯಾನೆಲ್ ಸ್ಥಾಪನೆಗೆ 10 ಚದರ ಮೀಟರ್ ಜಾಗ ಬೇಕಾಗುತ್ತದೆ. 1 ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ನಿಂದ 4 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಎಂಬ ಮಾಹಿತಿ ಇದೆ. ಬೆಸ್ಕಾಂ ಕಂಪನಿಯು 25 ವರ್ಷಗಳ ತನಕ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳಬಹುದಾಗಿದೆ ಸರ್ಕಾರದಿಂದ ಸಬ್ಸಿಡಿ ಯೋಜನೆ ಅಡಿ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದು.
ಎಷ್ಟು ಬೆಲೆ
ನೀವೇನಾದರೂ ಸೋಲಾರ್ ಪ್ಯಾನೆಲ್ ಅನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡಿದ್ದರೆ ಅಥವಾ ಕರ್ನಾಟಕ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮೂಲಕ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡಿದ್ದರೆ. ಸೋಲಾರ್ ಪ್ಯಾನೆಲ್ ನಿಂದ ಪ್ರತಿದಿನ ವಿದ್ಯುತ್ ಅನ್ನು ಬಳಸಿಕೊಂಡು ಉಳಿದ ಅಥವಾ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು. ಬೆಸ್ಕಾಂ ಕಂಪನಿಯು 1 ರಿಂದ 10 ಕಿಲೋವ್ಯಾಟ್ ವರೆಗೆ ಪ್ರತಿ ಯೂನಿಟ್ ಗೆ 2.97 ದರ ನಿಗದಿಪಡಿಸಲಾಗಿದೆ ಮತ್ತು ಗ್ರಾಹಕರು ಸ್ವಂತ ಖರ್ಚಿನಲ್ಲಿ ಸಬ್ಸಿಡಿಯನ್ನು ಪಡೆದುಕೊಳ್ಳದೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿಕೊಂಡಿದ್ದರೆ ಅಂತಹ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 4.5 ರೂಪಾಯಿಯನ್ನು ನಿಗದಿಪಡಿಸಲಾಗಿದೆ ಅಥವಾ ಇತರ ಗ್ರಾಹಕರಿಗೆ 1 ಯೂನಿಟ್ ಗೆ 3.74 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಬೇಕೆಂದರೆ ಇದು ತುಂಬಾ ಒಳ್ಳೆಯ ಯೋಜನೆ ಎಂದು ಹೇಳಬಹುದು.
ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಲು ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತದೆ
ಸೋಲಾರ್ ಪ್ಯಾನೆಲ್ ಹೊಂದಿರುವ ಗ್ರಾಹಕರು 3 ರಿಂದ 10 ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲು ಅವಕಾಶವಿದೆ. ಪ್ರತಿ ಕಿಲೋವ್ಯಾಟ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್ ಗೆ ಸರ್ಕಾರದಿಂದ 9,000 ಸಬ್ಸಿಡಿ ನೀಡಲಾಗುತ್ತಿದೆ ಮತ್ತು ವಸತಿ ಗ್ರಾಹಕರಿಗೆ 1 ಕಿಲೋ ವ್ಯಾಟ್ ನಿಂದ 3 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿಕೊಳ್ಳಬೇಕೆಂದರೆ ಅವರಿಗೆ ಪ್ರತಿ ಕಿಲೋವ್ಯಾಟ್ ಗೆ 18000 ಸಬ್ಸಿಡಿ ಯನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು.
ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಲು ಸರ್ಕಾರದಿಂದ ಹೆಚ್ಚಿನ ಮಟ್ಟದ ಸಬ್ಸಿಡಿಯನ್ನು ನೀಡುತ್ತಿದ್ದಾರೆ. ಕಲ್ಯಾಣ ಮಂಟಪ, ಶಿಕ್ಷಣ ಸಂಸ್ಥೆ, ಇನ್ನಿತರ ಸ್ಥಳಗಳಲ್ಲಿ ಗರಿಷ್ಠ 500 ಕಿಲೋವ್ಯಾಟ್ ವರೆಗೂ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅನ್ನು ಸ್ಥಾಪಿಸಿಕೊಳ್ಳಬಹುದಾಗಿದೆ. ಇವರಿಗೆ ಪ್ರತಿ ಕಿಲೋವ್ಯಾಟ್ ಗೆ 9,000 ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಅಂಥವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಸೋಲಾರ್ ಪ್ಯಾನೆಲ್ ಅನ್ನು ಸಬ್ಸಿಡಿಯಿಂದ ಪಡೆದುಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂ ಗೆ ಮಾರಾಟ ಮಾಡಬಹುದು.. ಇದರಿಂದ ಹಣವನ್ನು ಸಹ ಸಂಪಾದನೆ ಮಾಡಬಹುದು ಹಾಗಾದರೆ ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಬೇಕೆಂದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳುವ ಮೊದಲು ಇದನ್ನು ಗಮನಿಸಿ
ಹೌದು ಗೆಳೆಯರೇ, ನೀವೇನಾದರೂ ಪ್ರತಿಯೊಂದು ಕೆಲಸಕ್ಕೂ ಅಥವಾ ಪ್ರತಿಯೊಂದು ಯೋಜನೆಯಲಿ ಬರುವ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಆ ಯೋಜನೆಯ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಇಲ್ಲವಾದಲ್ಲಿ ಕೆಲವು ದಾಖಲೆಗಳ ಸಮಸ್ಯೆ ಅಥವಾ ಇನ್ನಿತರ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹಾಗೆ ಈ ಯೋಜನೆ ಅಡಿಯಲ್ಲಿ ನೀವೇನಾದರೂ ಸೋಲಾರ್ ಸಬ್ಸಿಡಿಯನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಊರಿನ ಹತ್ತಿರವಿರುವ ಬೆಸ್ಕಾಂ ಅಥವಾ ಇನ್ನಿತರ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಈ ಯೋಜನೆ ಅಡಿಯಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಲು ಎಷ್ಟು ಸಬ್ಸಿಡಿ ನೀಡುತ್ತಿದ್ದಾರೆ ಎಂಬ ಎಲ್ಲಾ ವಿವರವನ್ನು ಅಲ್ಲಿ ನೀವು ತಿಳಿದುಕೊಳ್ಳಬಹುದು ಅಥವಾ ಸೋಲಾರ್ ಸಬ್ಸಿಡಿ ನೀಡುವ ಮಾಹಿತಿಯನ್ನು ಪಡೆದುಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲೂ ಸಹ ನೀವು ಮೊಬೈಲ್ ನಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ನೀವೇನಾದರೂ ಸರ್ಕಾರದಿಂದ ಸೋಲಾರ್ ಸಬ್ಸಿಡಿಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಂಡರೆ ಆ ಸೋಲಾರ್ ಪ್ಯಾನೆಲ್ ನಲ್ಲಿ ದಿನನಿತ್ಯದ ವಿದ್ಯುತ್ ಅನ್ನು ಬಳಸಿಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿಕೊಳ್ಳಬಹುದು. ಇದರಿಂದ ಸ್ವಲ್ಪಮಟ್ಟಿಗೆ ಹಣವನ್ನು ಸಹ ಮಾಡಿಕೊಳ್ಳಬಹುದು. ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂ ಗೆ ಮಾರಾಟ ಮಾಡಬಹುದು ಎಷ್ಟು ವಿದ್ಯುತ್ ಗೆ ಎಷ್ಟು ಹಣ ನೀಡುತ್ತಾರೆ ಎಂಬ ಎಲ್ಲಾ ವಿವರವನ್ನು ಈ ಮೇಲ್ಭಾಗದಲ್ಲಿ ನಾನು ತಿಳಿಸಿಕೊಟ್ಟಿದ್ದೇನೆ. ಬೆಸ್ಕಾಂ ವಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಮಾತ್ರ ವಿದ್ಯುತ್ ಅನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಆ ಜಿಲ್ಲೆಯ ಗ್ರಾಹಕರು ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿಸುವ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಹಣವನ್ನು ಸಂಪಾದನೆ ಮಾಡಿಕೊಳ್ಳಬಹುದು. ಹಾಗೆ ಈ ವಿಷಯವನ್ನು ನಿಮ್ಮ ಸ್ನೇಹಿತರಿಗೆ ಅಥವಾ ಗೆಳೆಯರಿಗೆ ಶೇರ್ ಮಾಡಿ ಅವರು ಸೋಲಾರ್ ಪ್ಯಾನೆಲ್ ಅನ್ನು ಪಡೆದುಕೊಳ್ಳಬೇಕೆಂದರೆ ಸರ್ಕಾರದಿಂದ ಸಬ್ಸಿಡಿಯನ್ನು ಸಹ ಪಡೆದುಕೊಳ್ಳಬಹುದು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಸಹ ಮಾಡಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು