UPI: ಯುಪಿಐ ಪೇಮೆಂಟ್ ಮಾಡುವವರು ಇನ್ನು ಮುಂದೆ ಶುಲ್ಕ ವಿಧಿಸಬೇಕು..! ಹಾಗಾದ್ರೆ ದಿನದ ವರ್ಗಾವಣೆಯ ಮಿತಿ ಎಷ್ಟು?
ನಮಸ್ಕಾರ ಬಂಧುಗಳೇ ಕೆಲವು ವರ್ಷಗಳಿಂದ ಡಿಜಿಟಲ್ ಕ್ಷೇತ್ರ ಬಹಳಷ್ಟು ಪ್ರಗತಿ ಸಾಗುತ್ತಿದೆ. ಜನರು ಹೆಚ್ಚಾಗಿ ಡಿಜಿಟಲ್ ಕ್ಷೇತ್ರಕ್ಕೆ ಬೆಂಬಲ ಸಹ ನೀಡುತ್ತಿದ್ದಾರೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ಅದಲ್ಲದೆ ಯಾರಿಗಾದರೂ ಹಣವನ್ನು ಪಾವತಿ ಮಾಡಬೇಕೆಂದರೆ ಸುಲಭವಾಗಿ ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡುತ್ತೇವೆ. ಆದರೆ ಯುಪಿಐ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ವಿವಿಧ ಸೇವೆಗಳಿಗೆ ಶುಲ್ಕವಿಧಿಸಲು ಸಹ ಪ್ರಾರಂಭವಾಗಿದೆ. ಹಾಗಾದರೆ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ? ದಿನದ ವರ್ಗಾವಣೆಯ ಮಿತಿ ಎಷ್ಟು? ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
UPI ಪೇಮೆಂಟ್ ಗೆ ಶುಲ್ಕ ಪಾವತಿಸುವುದು ಕಡ್ಡಾಯವೇ?
ಹೌದು ಗೆಳೆಯರೇ, ಹೆಚ್ಚಾಗಿ ಯುಪಿಐ ಪಾವತಿ ಮಾಡುತ್ತಿರುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ನಿಮ್ಮ ಯುಪಿಐ ಯಲ್ಲಿ ಹಣ ಕಳಿಸುವುದಕ್ಕಾಗಿ ಅಥವಾ ಹಣ ಪಡೆದುಕೊಳ್ಳುವುದಕ್ಕಾಗಿ ಶುಲ್ಕ ಕಟ್ಟಲೇಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಬಹುದು. ಆದರೆ ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ಅಥವಾ ದೊಡ್ಡ ಮೊತ್ತದ ಹಣ ಪಾವತಿ ಮಾಡುವವರಿಗೆ ಶುಲ್ಕವನ್ನು ವಿಧಿಸಬಹುದಾಗಿದೆ.
UPI ಮೂಲಕ ಹಣದ ವಹಿವಾಟು ಹೆಚ್ಚಳ
ಈಗಿನ ಪರಿಸ್ಥಿತಿ ಅಂದರೆ ಈಗಿನ ದಿನಗಳಲ್ಲಿ ಯುಪಿಐ ವಹಿವಾಟುಗಳು ಹೆಚ್ಚಾಗಿದ್ದು ಅದಲ್ಲದೆ ಚಿಕ್ಕ ಮೊತ್ತದ ವಹಿವಾಟುಗಳು ಸಹ ಹೆಚ್ಚಿನ ಜನರು ಮಾಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಹೆಚ್ಚಾಗಿ ಯುಪಿಐ ಬಳಕೆಯನ್ನು ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಹೆಚ್ಚಾಗಿ ಯುಪಿಐ ವ್ಯವಸ್ಥೆಗೆ ಜನರು ಸೇರಿಕೊಳ್ಳಬೇಕಾಗಿದ್ದು, ಇದಕ್ಕಾಗಿ cashback incentives ಗಳನ್ನು ಸಲ್ಲಿಸಬೇಕಾಗುತ್ತದೆ. ಎಲ್ಲಾ ಕೆಲಸಕ್ಕೂ ಹಣ ಅವಶ್ಯಕತೆ ಇರುವುದರಿಂದ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಬಹುದು.
ಶುಲ್ಕದ ಮಿತಿ ಎಷ್ಟಿರಬಹುದು?
ಹೌದು ಗೆಳೆಯರೆ, ಗ್ರಾಹಕರು ತಮ್ಮ ಉಳಿತಾಯ ಖಾತೆಯಿಂದ ಯುಪಿಐ ಮೂಲಕ ಯಾವುದೇ ವ್ಯಕ್ತಿಯು ಹಣವನ್ನು ನೇರವಾಗಿ ವರ್ಗಾವಣೆ ಮಾಡಬಹುದು. ಲಭವಾಗಿ ಆನ್ಲೈನ್ ಮೂಲಕ ಹಣವನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಬಹುದಾಗಿದೆ. ಅದೇ ರೀತಿ ಬೇಕಾದ ಮೂಲಸೌಕರ್ಯಕ್ಕೆ ಹಣ ಒದಗಿಸಲು ಶೇಕಡಾ 0.3 ರಷ್ಟು ಡಿಜಿಟಲ್ ಪಾವತಿ ನಿರ್ವಹಣಾ ಶುಲ್ಕ ಇನ್ಮುಂದೆ ವಿಧಿಸಬಹುದಾಗಿದೆ. ಒಟ್ಟಾರೆಯಾಗಿ ಮುಂದೆ ಯುಪಿಐ ಪೇಮೆಂಟ್ ಮಾಡಲು ಗೂಗಲ್ ಪೇ ಬಳಸುವುದು ಶುಲ್ಕ ಕಟ್ಟೋದು ನಿಮಗೆ ನಷ್ಟ ಉಂಟಾ ಮಾಡಬಹುದು ಎಂದು ಹೇಳಬಹುದು.
ಹಾಗಾದರೆ ದಿನದ ವರ್ಗಾವಣೆಯ ಮಿತಿ ಎಷ್ಟು?
ಎನ್ ಪಿಸಿಐ ಮೂಲಕ ನೀವು ಒಂದು ದಿನಕ್ಕೆ ಯುಪಿಐ ಬಳಸುವುದಾದರೆ 1ಲಕ್ಷ ರೂ ವರೆಗೆ ವರ್ಗಾವಣೆ ಮಾಡಲು ಅವಕಾಶವಿದೆ ಮತ್ತು ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ಹಣವನ್ನು ವರ್ಗಾವಣೆ ಮಾಡಲು ರೂ.25,000 ಅವಕಾಶ ಕಲ್ಪಿಸಲಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಈ ಮೇಲೆ ನೀಡಿರುವ ಮೊತ್ತವನ್ನು ಮೀರಿ ಹಣವನ್ನು ವರ್ಗಾವಣೆ ಮತ್ತು ಪಾವತಿ ಮಾಡಿದರೆ ಅಂಥವರಿಗೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಬಹುದು.
ದಿನಕ್ಕೆ ನೀವು ಒಂದು 1ಲಕ್ಷದವರೆಗೆ ಯುಪಿಐ ಪಾವತಿ ಮಾಡಬಹುದಾಗಿದೆ, ಆದರೆ ನೀವು 1ಲಕ್ಷಕ್ಕಿಂತ ಹೆಚ್ಚಾಗಿ ಯುಪಿಐ ಪಾವತಿ ಮಾಡಿದರೆ ಅಂತವರಿಗೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಒಂದು ದಿನಕ್ಕೆ 1ಲಕ್ಷದ ಯುಪಿಐ ಪಾವತಿ ಮಾಡುವುದು ಕಡಿಮೆ ಹೆಚ್ಚಾಗಿ 1ಲಕ್ಷದ ಯುಪಿಐ ಪಾವತಿಯನ್ನು ದೊಡ್ಡಮಟ್ಟದ ವ್ಯಾಪಾರಸ್ಥರು ಅಥವಾ ದೊಡ್ಡ ಉದ್ಯಮಿಗಳು ಅಥವಾ ದೊಡ್ಡಮಟ್ಟದ ಹಣ ಪಾವತಿಯನ್ನು ಮಾಡುತ್ತಾರೆ. ಅಂತವರಿಗೆ ಮುಂದಿನ ವರ್ಷಗಳಲ್ಲಿ ಶುಲ್ಕ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ.