Village Accountant Recruitment 2024: 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ ಆಹ್ವಾನ..! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ…
ನಮಸ್ಕಾರ ಬಂಧುಗಳೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ [KEA] ರಾಜ್ಯದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗಳಿಗೆ ಅರ್ಜಿ ಆಹ್ವಾನ…! ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆಯನ್ನು ಹೊರಡಿಸಿದೆ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ನೀವು ಅರ್ಹರಾಗಿದ್ದರೆ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ
ಹೌದು ಗೆಳೆಯರೇ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಬೇಕು ಎಂಬ ಇರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ [KEA] ಅಧಿಸೂಚನೆಯ ಪ್ರಕಾರ ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 100 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಅಧಿಸೂಚನೆಯ ಪ್ರಕಾರ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 5 ಏಪ್ರಿಲ್ 2024ರಂದು ಪ್ರಾರಂಭವಾಗಲಿದೆ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 4 ಮೇ 2024 ಆಗಿದೆ.
ನೀವೇನಾದರೂ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಹುದ್ದೆಗೆ ಬೇಕಾಗುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ, ವಯೋಮಿತಿ, ಮುಂತಾದ ಮಾಹಿತಿಯನ್ನು ಈ ಕೆಳಭಾಗದಲ್ಲಿ ತಿಳಿಸಲಾಗಿದೆ. ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ಮೊದಲು ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ [KEA] ವು ನೀಡಿರುವ ಅಧಿಸೂಚನೆಯನ್ನು ಮೊದಲು ಓದಿಕೊಳ್ಳಬೇಕು ನಂತರ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ವಿವರ
- ಹುದ್ದೆಯ ಹೆಸರು: ಗ್ರಾಮ ಆಡಳಿತ ಅಧಿಕಾರಿ [VAO]
- ಸಂಘಟಕರ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ [KEA]
- ಒಟ್ಟು ಖಾಲಿ ಇರುವ ಹುದ್ದೆಗಳು: 1000
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
- ಉದ್ಯೋಗದ ಸ್ಥಳ: ಕರ್ನಾಟಕ
- ಅರ್ಜಿ ಸಲ್ಲಿಸುವ ವೆಬ್ಸೈಟ್: cetonline.karnataka.gov.in/kea
- ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 04 ಮೇ 2024
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05 ಏಪ್ರಿಲ್ 2024
ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ
ಕರ್ನಾಟಕ ಕಂದಾಯ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. ನೇಮಕಾತಿಯ ಪ್ರಕಾರ ವಯಸ್ಸಿನ ಮಿತಿಯನ್ನು ನಿರ್ದಿಷ್ಟ ಪಡಿಸುತ್ತದೆ. 35 ವರ್ಷ ಮೇಲೆ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ವಯೋಮಿತಿ ಸಡಲಿಕ್ಕೆ ಮಾಡಲಾಗಿದೆ.
ವಯೋಮಿತಿ ಸಡದಿಕೆ
- SC/ST/Category – I ಅಭ್ಯರ್ಥಿಗಳಿಗೆ: 5 ವರ್ಷ
- ಕ್ಯಾಟ್-2A, 2B, 3A, ಮತ್ತು 3B ವರ್ಗಗಳ ಅಭ್ಯರ್ಥಿಗಳಿಗೆ: 3 ವರ್ಷ
ಈ ಮೇಲೆ ಇರುವ ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಹತೆ
ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ಅಭ್ಯರ್ಥಿಯ ವಯಸ್ಸು ಪಿಯುಸಿ / 12 ನೇ ತರಗತಿಯನ್ನು ಪೂರ್ಣಗೊಂಡಿರಬೇಕು. ಕರ್ನಾಟಕ ಕಂದಾಯ ಇಲಾಖೆ ಅಧಿಸೂಚನೆಯ ಪ್ರಕಾರ ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಲು ನಿರ್ದಿಷ್ಟ ಮಟ್ಟದ ಸಾಮಾನ್ಯ ಶಿಕ್ಷಣವನ್ನು ಪಡೆದಿರಬೇಕು ಅಂದರೆ 12ನೇ ತರಗತಿ ಪೂರ್ಣಗೊಂಡಿರಬೇಕು.
ಅರ್ಜಿ ಸಲ್ಲಿಸಲು ಶುಲ್ಕ
ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳನ್ನು ನೀಡಿ ಅಪ್ಲೋಡ್ ಮಾಡಿದ ನಂತರ ಕೊನೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿ ಶುಲ್ಕವನ್ನು ಅಭ್ಯರ್ಥಿಯ ವರ್ಗದ ಆಧಾರದ ಮೇಲೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಪ್ರವರ್ಗ-2A, 2B, 3A, 3B, ಸಾಮಾನ್ಯ ಅಭ್ಯರ್ಥಿಗಳಿಗೆ: 750 ರೂ
- SC, ST, ಪ್ರವರ್ಗ-1, ಮಾಜಿ ಸೈನಿಕ, PWD ಅಭ್ಯರ್ಥಿಗಳಿಗೆ: 500 ರೂ
ಈ ಹಣವನ್ನು ನೀವು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್, ಯುಪಿಐ ಮೂಲಕ ಸುಲಭವಾಗಿ ಆನ್ಲೈನ್ ನಲ್ಲಿ ಪಾವತಿ ಮಾಡಬಹುದು.
ದಿನಾಂಕಗಳು
- ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 05-04-2024
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 04-05-2024
- ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ: 07-05-2024
ವೇತನ
ಕರ್ನಾಟಕ ಕಂದಾಯ ಇಲಾಖೆ [KEA] ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಹರಾಗಿದ್ದರೆ ವೇತನ 21,400 ರಿಂದ 42,000 ರೂ ನೀಡಲಾಗುತ್ತದೆ.
ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ನೀವೇನಾದರೂ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ [KEA] ದ cetonline.karnataka.gov.in/kea/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನಿಮಗೆ ಮೇಲ್ಭಾಗದಲ್ಲಿ ನೇಮಕಾತಿ ಎಂದು ಕಾಣುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು ಎಲ್ಲ ಹುದ್ದೆಗಳ ವಿವರ ಇರುತ್ತದೆ. ಅಲ್ಲಿ ನೀವು ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 ಎಂಬ ಆಯ್ಕೆಯನ್ನು ಹುಡುಕಿ, ಹುಡುಕಿದ ನಂತರ ಅದರ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 ಈ ಹುದ್ದೆಯ ಎಲ್ಲ ವಿವರ ಕಾಣಿಸುತ್ತದೆ. ಇಲ್ಲಿ ನೀವು ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಆದಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ, ಅದನ್ನು ಚೆನ್ನಾಗಿ ಓದಿಕೊಳ್ಳಿ.
- ನಂತರ ವಿಎ ನೇಮಕಾತಿ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಇಲ್ಲಿ ನೀವು ನಿಮ್ಮ ವೈಯಕ್ತಿಕ ವಿವರ, ಅರ್ಹತೆ, ಸಂಪರ್ಕ ಮಾಹಿತಿ, ಮುಂತಾದ ದಾಖಲೆಗಳ ವಿವರವನ್ನು ಭರ್ತಿ ಮಾಡಿ.
- ಕೆಲವು ದಾಖಲೆಗಳನ್ನು ನೀಡಿ ಭರ್ತಿ ಮಾಡಿದ್ದ ನಂತರ ಎರಡನೇ ಆಪ್ಷನ್ ಆದ ನಿಮ್ಮ ಭಾವಚಿತ್ರ. ಸಹಿ ಅಪ್ಲೋಡ್ ಮಾಡಲು ಕೇಳುತ್ತದೆ. ಅಲ್ಲಿ ನೀವು ಫೋಟೋಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ನಂತರ ಮೂರನೇ ವಿಧಾನವಾದ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ಶುಲ್ಕವನ್ನು ಪಾವತಿಸಲಾಗುತ್ತದೆ. ನೀವು ಆನ್ಲೈನ್ ಮೂಲಕ ಸುಲಭವಾಗಿ ಶುಲ್ಕವನ್ನು ಪಾವತಿಸಬಹುದು.
- ನಂತರ ನಾಲ್ಕನೇ ವಿಧಾನವಾದ ಪಾವತಿ ಸ್ಥಿತಿಯನ್ನು ಪರಿಶೀಲಿಸಿ ನಿಮ್ಮ ಪಾವತಿಯ ಸ್ಥಿತಿಯನ್ನು ಪರಿಶೀಲಿಸಿದ ನಂತರ ಕೊನೆಯ ಹಂತವಾದ ಅರ್ಜಿ ಮುದ್ರಿಸಲು ಅಥವಾ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ನೀವು ಅರ್ಜಿ ಸಲ್ಲಿಸುವ ಮೊದಲು ನೀವು ಅಪ್ಲೋಡ್ ಮಾಡುವ ವಿವರ ಮತ್ತು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.
ನಿಮಗೇನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ ಕೆಲವು ಸೈಬರ್ ಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ನಿಮ್ಮ ದಾಖಲೆಗಳನ್ನು ನೀಡುವ ಮೂಲಕ ಗ್ರಾಮ ಆಡಳಿತ ಅಧಿಕಾರಿ [VAO] ಹುದ್ದೆಗೆ ಆಫ್ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಗಮನಿಸಿ
ಹೌದು ಗೆಳೆಯರೇ, ಮೊದಲು ನೀವು ಗಮನಿಸಬೇಕಾಗಿರುವುದು ಹುದ್ದೆಯ ಅಧಿಸೂಚನೆ ನೀವು ಯಾವುದಾದರೂ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಆ ಹುದ್ದೆಯ ಓದಿ ಸೂಚನೆಯನ್ನು ಗಮನಿಸಿ. ಏಕೆಂದರೆ ಆ ಹುದ್ದೆಯಲ್ಲಿ ಬೇಕಾಗುವ ಅರ್ಹತೆ, ವಯೋಮಿತಿ, ವೇತನ, ಕೊನೆಯ ದಿನಾಂಕ, ಪ್ರಾರಂಭದ ದಿನಾಂಕ, ಮುಂತಾದ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ನೀವೇನಾದರೂ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕೆಂದರೆ ನಾನು ಈ ಮೇಲೆ ಅರ್ಜಿ ಸಲ್ಲಿಸುವ ವಿಧಾನದಲ್ಲೇ ನೀವು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆದಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಚೆನ್ನಾಗಿ ಓದಿಕೊಳ್ಳಿ. ಇಲ್ಲಿ ನಾವು ಹುದ್ದೆಗೆ ಬೇಕಾಗುವ ಪ್ರಮುಖ ಮಾಹಿತಿಯನ್ನು ಮಾತ್ರ ನೀಡಲಾಗಿರುತ್ತದೆ. ಹುದ್ದೆಗೆ ಬೇಕಾಗುವ ಎಲ್ಲ ಮಾಹಿತಿ ಆದಿಸೂಚನೆಯಲ್ಲಿ ಇರುವುದರಿಂದ ಅದನ್ನು ಚೆನ್ನಾಗಿ ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಸರಿಯಾದ ದಾಖಲೆಯನ್ನು ಒಂದರಿಂದ ಎರಡು ಬಾರಿ ಪರಿಶೀಲನೆ ಮಾಡಿ ಅಪ್ಲೋಡ್ ಮಾಡಿ ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು.
ನಿಮ್ಮ ಗೆಳೆಯರು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದರೆ ಅಂಥವರಿಗೆ ಈ ಹುದ್ದೆ ಉತ್ತಮ ಎಂದು ಹೇಳಬಹುದು. 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯು ಖಾಲಿ ಇರುವುದರಿಂದ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 5 ಏಪ್ರಿಲ್ 2024 ಆಗಿದೆ. ಕೊನೆಯ ದಿನಾಂಕ 4 ಮೇ 2024 ಆಗಿದೆ. ಇದರಿಂದ ಈ ಹುದ್ದೆಗೆ ನೀವು ಅರ್ಹರಾಗಿದ್ದರೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಏಕೆಂದರೆ ಅರ್ಜಿಯ ಸ್ಥಿತಿಯನ್ನು ಕೊನೆಯ ಹಂತದವರೆಗೂ ನೋಡಬಹುದು. ಒಂದು ವೇಳೆ ಕೊನೆಯ ಹಂತದಲ್ಲಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಯ ಸ್ಥಿತಿ ಒಂದು ವೇಳೆ ತಪ್ಪಾಗಿದ್ದರೆ ಅಂತಹ ಸಮಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಈ ಕಾರಣದಿಂದ ಆರಂಭದ ಹಂತದಲ್ಲಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು