BEL Recruitment 2026: 350 ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳು, ಅರ್ಹತೆ ಮತ್ತು ವೇತನದ ವಿವರ Apply Now

BEL Recruitment: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಅ ವಕಾಶವಿದೆ. ಸಂಸ್ಥೆಯು 2026 ನೇ ಸಾಲಿನಲ್ಲಿ Electronics ಮತ್ತು Mechanical ವಿಭಾಗಗಳ ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಅರ್ಹ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ online ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಈ ನೇಮಕಾತಿಯ ಮೂಲಕ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ BEL, ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ವಿವಿಧ ಎಲೆಕ್ಟ್ರಾನಿಕ್ ವ್ಯವಸ್ಥೆಗಳು ಮತ್ತು ತಂತ್ರಜ್ಞಾನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಭಾರತ ಸರ್ಕಾರದ ನವರತ್ನ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ.

BEL Recruitment 2026: ಸಂಕ್ಷಿಪ್ತ ಮಾಹಿತಿ

ವಿವರ ಮಾಹಿತಿ
ಸಂಸ್ಥೆ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆ ಪ್ರೊಬೇಷನರಿ ಇಂಜಿನಿಯರ್
ಅಧಿಸೂಚನೆ ಸಂಖ್ಯೆ 17556/HR/All-India/2026
ಅಧಿಸೂಚನೆ Date 28 ಅಕ್ಟೋಬರ್ 2026
ಒಟ್ಟು ಹುದ್ದೆಗಳು 350
Electronics ಹುದ್ದೆಗಳು 200
Mechanical ಹುದ್ದೆಗಳು 150
ವೇತನ ಶ್ರೇಣಿ ₹40,000 – 3% – ₹1,40,000
ಅಂದಾಜು ವಾರ್ಷಿಕ CTC ₹13 ಲಕ್ಷ
ಅರ್ಜಿ ವಿಧಾನ ಆನ್‌ಲೈನ್
CBT ಪರೀಕ್ಷೆಯ ತಾತ್ಕಾಲಿಕ ದಿನಾಂಕ 22 ಡಿಸೆಂಬರ್ 2026
ಅಧಿಕೃತ ವೆಬ್‌ಸೈಟ್ https://bel-india.in/

ಖಾಲಿ ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ಎರಡು ಎಂಜಿನಿಯರಿಂಗ್ ವಿಭಾಗಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಕಟಿಸಿರುವ ಸಂಖ್ಯೆಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿವೆ.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಪ್ರೊಬೇಷನರಿ ಇಂಜಿನಿಯರ್ – Electronics 200
ಪ್ರೊಬೇಷನರಿ ಇಂಜಿನಿಯರ್ – Mechanical 150
ಒಟ್ಟು 350

ಈ ಹುದ್ದೆಗಳು E-II ವೇತನ ದರ್ಜೆಗೆ ಸೇರಿವೆ. ನಿಜವಾದ ನೇಮಕಾತಿ ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡುವ ಅಧಿಕಾರವನ್ನು ಸಂಸ್ಥೆ ಹೊಂದಿರಬಹುದು. ಆದುದರಿಂದ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಿವರಗಳನ್ನು ಪರಿಶೀಲಿಸುವುದು ಅತ್ಯುತ್ತಮ್ .

ವೇತನ ಮತ್ತು ಸೌಲಭ್ಯಗಳು

ಆಯ್ಕೆಯಾದ ವಿದ್ಯಾರ್ಥಿಗಳಿಗೆ ₹40,000ರಿಂದ ಆರಂಭವಾಗುವ ಮೂಲ ವೇತನ ಅನ್ವಯಿಸುತ್ತದೆ. ವಾರ್ಷಿಕ ಒಟ್ಟು ವೇತನ ಪ್ಯಾಕೇಜ್ (CTC) ಸುಮಾರು ₹13 ಲಕ್ಷ ಎಂದು ಅಂದಾಜಿಸಲಾಗಿದೆ.

ಮೂಲ ವೇತನದ ಹೊರತಾಗಿ, ಸಂಸ್ಥೆಯ ನಿಯಮಗಳು ಮತ್ತು ಅನ್ವಯಿಸುವ ಅರ್ಹತೆಯ ಪ್ರಕಾರ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ, ಕಾರ್ಯಕ್ಷಮತೆ ಆಧಾರಿತ ವೇತನ, ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಇತರ ಸೌಲಭ್ಯಗಳು ದೊರೆಯಬಹುದು. ವೇತನ ಶ್ರೇಣಿಯನ್ನು 01 ಜನವರಿ 2027ರಿಂದ ಪರಿಷ್ಕರಿಸುವ ಉದ್ದೇಶವಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಗಮನಿಸಿ: ₹13 ಲಕ್ಷವು ಅಂದಾಜು ವಾರ್ಷಿಕ CTC ಆಗಿದ್ದು, ಅದನ್ನು ಕೈಗೆ ಸಿಗುವ ವಾರ್ಷಿಕ ವೇತನವೆಂದು ಪರಿಗಣಿಸಬಾರದು.

BEL Recruitment ಶೈಕ್ಷಣಿಕ ಅರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು AICTE ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಸಂಬಂಧಿತ ಎಂಜಿನಿಯರಿಂಗ್ ವಿಷಯದಲ್ಲಿ B.E., B.Tech. ಅಥವಾ ನಾಲ್ಕು ವರ್ಷಗಳ B.Sc. Engineering ಪದವಿಯನ್ನು ಪೂರ್ಣಗೊಳಿಸಿರಬೇಕು. ಅಥವಾ ನಾಲ್ಕು ವರ್ಷಗಳ B.Sc. Engineering ಪದವಿ ಪಡೆದಿರಬೇಕು.

Electronics ವಿಭಾಗಕ್ಕೆ ಅರ್ಹವಾದ ವಿಷಯಗಳು:

  • Electronics Engineering
  • Electronics and Communication Engineering
  • Electronics and Telecommunication Engineering
  • Communication Engineering
  • Telecommunication Engineering

Mechanical ವಿಭಾಗಕ್ಕೆ ಅರ್ಹವಾದ ವಿಷಯ: Mechanical Engineering.

ಶೈಕ್ಷಣಿಕ ಅಂಕಗಳ ಮಾನದಂಡದ ಪ್ರಕಾರ, UR, OBC (NCL) ಮತ್ತು EWS ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಪದವಿ ಪೂರ್ಣಗೊಳಿಸಿರಬೇಕು. SC, ST ಹಾಗೂ PwBD ಅಭ್ಯರ್ಥಿಗಳಿಗೆ ಉತ್ತೀರ್ಣರಾಗಿರುವುದು ಅಗತ್ಯವಾಗಿದೆ.

ಮೇಲಿನ ವಿಷಯಗಳಿಗೆ ಸಂಬಂಧಿಸಿದ AMIE, AMIETE ಅಥವಾ GIETE ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳೂ ಅಧಿಸೂಚನೆಯ ಷರತ್ತುಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದು. ಪಟ್ಟಿಯಲ್ಲಿ ಸೇರಿಸದ ಇತರ ವಿಭಾಗಗಳು ಅಥವಾ ಡ್ಯುಯಲ್ ಸ್ಪೆಷಲೈಸೇಷನ್‌ಗಳನ್ನು ಪರಿಗಣಿಸಲಾಗುವುದಿಲ್ಲ.

CGPA ಅಥವಾ SGPA ಅಂಕ ಪದ್ಧತಿಯನ್ನು ಅನುಸರಿಸಿರುವ ಅಭ್ಯರ್ಥಿಗಳು, ತಮ್ಮ ವಿಶ್ವವಿದ್ಯಾಲಯದ ಮಾರ್ಗಸೂಚಿಗಳ ಪ್ರಕಾರ ಶೇಕಡಾವಾರು ಅಂಕಗಳನ್ನು ಲೆಕ್ಕಹಾಕಿದ ಅಧಿಕೃತ ಪ್ರಮಾಣಪತ್ರವನ್ನು ಸಂದರ್ಶನದ ವೇಳೆ ಒದಗಿಸಬೇಕು.

ವಯೋಮಿತಿ ಮತ್ತು ಸಡಿಲಿಕೆ

ಅಭ್ಯರ್ಥಿಗಳ ವಯಸ್ಸನ್ನು 01 ಅಕ್ಟೋಬರ್ 2026ರ ದಿನಾಂಕದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಸಾಮಾನ್ಯ ವರ್ಗ ಮತ್ತು EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 25 ವರ್ಷವಾಗಿದೆ.

ಅಭ್ಯರ್ಥಿಗಳ ವರ್ಗ ಗರಿಷ್ಠ ವಯೋಮಿತಿಯ ಸಡಿಲಿಕೆ
ಸಾಮಾನ್ಯ ವರ್ಗ / EWS ಸಡಿಲಿಕೆ ಇಲ್ಲ; ಗರಿಷ್ಠ 25 ವರ್ಷ
OBC (NCL) 3 ವರ್ಷ
SC / ST 5 ವರ್ಷ
PwBD 10 ವರ್ಷ
Ex-Servicemen ನಿಯಮಾನುಸಾರ 5 ವರ್ಷ

PwBD ಅಭ್ಯರ್ಥಿಗಳಿಗೆ ಅನ್ವಯಿಸುವ ಇತರ ವರ್ಗದ ಸಡಿಲಿಕೆಗಳನ್ನು ಒಳಗೊಂಡಂತೆ ವಯೋಮಿತಿ ಲೆಕ್ಕಹಾಕುವಾಗ, ಅಧಿಕೃತ ಅಧಿಸೂಚನೆಯ ನಿಯಮಗಳನ್ನು ಅನುಸರಿಸಬೇಕು. ವಯಸ್ಸಿನ ಪುರಾವೆಯಾಗಿ 10ನೇ ತರಗತಿ ಅಥವಾ Higher Secondary ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

BEL Recruitment ವರ್ಗವಾರು ಮೀಸಲಾತಿ

Electronics and Mechanical ವಿಭಾಗಗಳಿಗೆ ಸಂಬಂಧಿಸಿರುವ ವರ್ಗವಾರು ಹುದ್ದೆಗಳ ಹಂಚಿಕೆಗಳು ಈ ಕೆಳಗಿನಂತಿವೆ.

ಅಭ್ಯರ್ಥಿಗಳ ವರ್ಗ Electronics Mechanical
UR – ಸಾಮಾನ್ಯ ವರ್ಗ 81 62
EWS 20 15
OBC (NCL) 54 40
SC 30 22
ST 15 11
ಒಟ್ಟು 200 150

PwBD ಅಭ್ಯರ್ಥಿಗಳಿಗೆ backlog ಹುದ್ದೆಗಳು ಸೇರಿದಂತೆ total 45 ಹುದ್ದೆಗಳಿಗೆ ಸಂಬಂಧಿಸಿದ ಮೀಸಲಾತಿ ನೀಡಲಾಗಿದೆ ಎಂದು ಅಧಿಸೂಚನೆಯ ವಿವರಗಳಲ್ಲಿ ಉಲ್ಲೇಖಿಸಲಾಗಿದೆ. ಮೀಸಲಾತಿಯಡಿ ಅರ್ಜಿ ಸಲ್ಲಿಸುವವರು ತಮ್ಮ ವರ್ಗಕ್ಕೆ ಅನ್ವಯಿಸುವ ಮಾನ್ಯ ಪ್ರಮಾಣಪತ್ರಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು.

BEL Recruitment ಅರ್ಜಿ ಶುಲ್ಕ

ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕದಲ್ಲಿ ವ್ಯತ್ಯಾಸವಿದೆ.

ಅಭ್ಯರ್ಥಿಗಳ ವರ್ಗ ಅರ್ಜಿ ಶುಲ್ಕ
General / UR ₹1,180
EWS ₹1,180
OBC (NCL) ₹1,180
SC ಶುಲ್ಕ ವಿನಾಯಿತಿ
ST ಶುಲ್ಕ ವಿನಾಯಿತಿ
PwBD ಶುಲ್ಕ ವಿನಾಯಿತಿ
Ex-Servicemen ಶುಲ್ಕ ವಿನಾಯಿತಿ

ಅರ್ಜಿ ಶುಲ್ಕದ ಒಟ್ಟು ಮೊತ್ತ ₹1,180 ಆಗಿದ್ದು, ಇದರಲ್ಲಿ ₹1,000 ಮೂಲ ಶುಲ್ಕದ ಜೊತೆಗೆ ಅನ್ವಯಿಸುವ GST ಸೇರಿದೆ.ಶುಲ್ಕ ವಿನಾಯಿತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಕೆಯ ವೇಳೆ ಅಧಿಕೃತ ಸೂಚನೆಗಳನ್ನು ಅನುಸರಿಸಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತಗಳು

BEL ನೇಮಕಾತಿಗೆ ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಬಳಸಬೇಕು. ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡದಂತೆ ಮತ್ತು ಅಗತ್ಯ ದಾಖಲೆಗಳು ಸಿದ್ಧವಾಗಿರುವಂತೆ ನೋಡಿಕೊಳ್ಳಿ.

  1. BEL ಅಧಿಕೃತ ವೆಬ್‌ಸೈಟ್ https://bel-india.in/ ಗೆ ಭೇಟಿ ನೀಡಿ.
  2. ವೆಬ್‌ಸೈಟ್‌ನ Careers ವಿಭಾಗವನ್ನು ತೆರೆಯಿರಿ.
  3. Advertisement No. 17556/HR/All-India/2026 ನೇಮಕಾತಿ ಅಧಿಸೂಚನೆಯನ್ನು ಪತ್ತೆಹಚ್ಚಿ.
  4. ಅಧಿಸೂಚನೆಯಲ್ಲಿರುವ ಅರ್ಹತೆ, ವಯೋಮಿತಿ, ಶುಲ್ಕ ಮತ್ತು ಇತರ ನಿಯಮಗಳನ್ನು ಓದಿ.
  5. ಅರ್ಜಿಯನ್ನು ಭರ್ತಿ ಮಾಡುವಾಗ, ಕೇಳಲಾಗಿರುವ ವೈಯಕ್ತಿಕ ವಿವರಗಳು ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ತಪ್ಪುಗಳಿಲ್ಲದೆ ನಮೂದಿಸಿ.
  6. ಸೂಚಿಸಿರುವ ನಿಯಮಗಳಿಗೆ ಅನುಗುಣವಾಗಿ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಬೇಕಾದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಲ್ಕವನ್ನು ಪಾವತಿಸಿ.
  8. ನಮೂದಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.
  9. ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮತ್ತು ಶುಲ್ಕ ಪಾವತಿಯ ರಸೀದಿಯನ್ನು ಉಳಿಸಿಕೊಳ್ಳಿ.

ಅರ್ಜಿ ಸಲ್ಲಿಸುವ ಮೊದಲು ಹೆಸರು, ಜನ್ಮದಿನಾಂಕ, ಪದವಿಯ ವಿವರಗಳು ಮತ್ತು ವರ್ಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅಂತಿಮವಾಗಿ ಅರ್ಜಿ ಸಲ್ಲಿಸಿದ ನಂತರ ವಿವರಗಳನ್ನು ಬದಲಾಯಿಸಲು ಅವಕಾಶವಿಲ್ಲದಿರಬಹುದು.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ

ಅಭ್ಯರ್ಥಿಗಳ ಆಯ್ಕೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಸಂದರ್ಶನವನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಅಂತಿಮ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಪರೀಕ್ಷೆಯ ವಿವರ ಮಾಹಿತಿ
ಪರೀಕ್ಷೆಯ ಹೆಸರು Computer Based Test (CBT)
ಒಟ್ಟು ಪ್ರಶ್ನೆಗಳು 125
ಪರೀಕ್ಷೆಯ ಅವಧಿ 120 ನಿಮಿಷಗಳು
ತಾಂತ್ರಿಕ ಪ್ರಶ್ನೆಗಳು 100
ಸಾಮಾನ್ಯ ಸಾಮರ್ಥ್ಯ ಮತ್ತು ತಾರ್ಕಿಕ ಚಿಂತನೆ 25
ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕ ಪ್ರತಿ ತಪ್ಪು ಉತ್ತರಕ್ಕೆ ¼ ಅಂಕ
CBTಯ ಗರಿಷ್ಠ ಅಂಕಗಳು 85
ಸಂದರ್ಶನದ ಗರಿಷ್ಠ ಅಂಕಗಳು 15

ಕನಿಷ್ಠ ಅರ್ಹತಾ ಅಂಕಗಳ ಪ್ರಮಾಣ General, OBC (NCL) ಮತ್ತು EWS ಅಭ್ಯರ್ಥಿಗಳಿಗೆ 35% ಆಗಿದೆ. SC, ST ಮತ್ತು PwBD ಅಭ್ಯರ್ಥಿಗಳಿಗೆ 30% ಕನಿಷ್ಠ ಅಂಕಗಳ ಅಗತ್ಯವಿದೆ ಎಂದು ತಿಳಿಸಲಾಗಿದೆ.

CBTಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅಂತಿಮ ಮೆರಿಟ್ ಅನ್ನು CBTಯ 85 ಅಂಕಗಳು ಮತ್ತು ಸಂದರ್ಶನದ 15 ಅಂಕಗಳನ್ನು ಸೇರಿಸಿ ನಿರ್ಧರಿಸಲಾಗುತ್ತದೆ. ಪರೀಕ್ಷೆಯ ಭಾಷೆ ಮತ್ತು ಇತರ ಸೂಚನೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

BEL Recruitment ತರಬೇತಿ ಮತ್ತು ಸೇವಾ ಒಪ್ಪಂದ

ಆಯ್ಕೆಯಾದ ಅಭ್ಯರ್ಥಿಗಳು ಮೊದಲಿಗೆ ಆರು ತಿಂಗಳ Orientation ಅಥವಾ On-the-Job Training ಪೂರ್ಣಗೊಳಿಸಬೇಕಾಗುತ್ತದೆ. ತರಬೇತಿಯ ನಂತರ ಎರಡು ವರ್ಷಗಳ ಸೇವಾ ಒಪ್ಪಂದಕ್ಕೆ ಸಹಿ ಹಾಕುವ ಷರತ್ತು ಅನ್ವಯಿಸುತ್ತದೆ.

ಒಪ್ಪಂದದಲ್ಲಿರುವ ನಿಯಮಗಳನ್ನು ಉಲ್ಲಂಘಿಸಿದರೆ ₹2,00,000 ದಂಡ ಪಾವತಿಸಬೇಕಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ನೇಮಕಾತಿಗೆ ಒಪ್ಪಿಗೆ ನೀಡುವ ಮೊದಲು ಸೇವಾ ಒಪ್ಪಂದದ ಸಂಪೂರ್ಣ ಷರತ್ತುಗಳನ್ನು ಓದುವುದು ಅಗತ್ಯ.

ವೈದ್ಯಕೀಯ ಅರ್ಹತೆ ಮತ್ತು ಕೆಲಸದ ಸ್ಥಳ

ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿದ Colour Blindness ಇರುವ ಅಭ್ಯರ್ಥಿಗಳನ್ನು Electronics ಮತ್ತು Mechanical ಎರಡೂ ವಿಭಾಗಗಳ ಹುದ್ದೆಗಳಿಗೆ ಅನರ್ಹರೆಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಅರ್ಹತೆಗೆ ಸಂಬಂಧಿಸಿದ ಸಂಪೂರ್ಣ ಮಾರ್ಗಸೂಚಿಗಳು ಮತ್ತು ಅಗತ್ಯ ಷರತ್ತುಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು BEL ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರು, ಘಾಜಿಯಾಬಾದ್, ಪುಣೆ, ನಾಗ್ಪುರ, ನವಿ ಮುಂಬೈ, ಹೈದರಾಬಾದ್, ಇಬ್ರಾಹಿಂಪಟ್ನಂ, ಚೆನ್ನೈ, ಪಾಲಸಮುದ್ರಂ, ನಿಮ್ಮಲೂರು, ಮಚಿಲಿಪಟ್ನಂ, ಪಂಚಕುಲಾ, ಕೋಟ್ದ್ವಾರಾ ಸೇರಿದಂತೆ BELನ ವಿವಿಧ ಘಟಕಗಳು ಮತ್ತು ಕಚೇರಿಗಳಲ್ಲಿ ನಿಯೋಜನೆ ನೀಡಬಹುದು. ಸಂಸ್ಥೆಯ ಅಗತ್ಯ ಗಳಿಗೆ ಅನುಗುಣವಾಗಿ ಭಾರತದ ಯಾವುದೇ ಘಟಕದಲ್ಲಿ ಕೆಲಸ ನಿರ್ವಹಿಸಲು ಅಭ್ಯರ್ಥಿಗಳು ಸಿದ್ಧರಾಗಿರಬೇಕು.

BEL Recruitment ಪ್ರಮುಖ ದಿನಾಂಕಗಳು

ನೇಮಕಾತಿಯ ಹಂತ ದಿನಾಂಕ ಮತ್ತು ಸಮಯ
ಅಧಿಸೂಚನೆ ಪ್ರಕಟಣೆ 28 ಅಕ್ಟೋಬರ್ 2026
ಆನ್‌ಲೈನ್ ಅರ್ಜಿ ಆರಂಭ 28 ಅಕ್ಟೋಬರ್ 2026, ಮಧ್ಯಾಹ್ನ 2:00
ಅರ್ಜಿ ಸಲ್ಲಿಸಲು ಕೊನೆಯ ದಿನ 18 ನವೆಂಬರ್ 2026, ರಾತ್ರಿ 11:59
CBT ಪರೀಕ್ಷೆ 22 ಡಿಸೆಂಬರ್ 2026 (ತಾತ್ಕಾಲಿಕ)

ಪರೀಕ್ಷೆಯ ದಿನಾಂಕ ತಾತ್ಕಾಲಿಕವಾಗಿರುವುದರಿಂದ, ಪ್ರವೇಶ ಪತ್ರ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮುಂದಿನ ಪ್ರಕಟಣೆಗಳಿಗಾಗಿ BEL ವೆಬ್‌ಸೈಟ್ ಪರಿಶೀಲಿಸುತ್ತಿರಿ.

BEL Recruitment ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ PDF: PDF
  • ಅಧಿಕೃತ ಅಧಿಸೂಚನೆ: Click Here
  • ಆನ್‌ಲೈನ್ ಅರ್ಜಿ: Click Here

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ

ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಪದವಿಯ ವಿಭಾಗ, ಅಂಕಗಳು, ವಯಸ್ಸು ಮತ್ತು ಅಗತ್ಯ ಪ್ರಮಾಣಪತ್ರಗಳು ಅಧಿಸೂಚನೆಯಲ್ಲಿ ನೀಡಿರುವ ನಿಯಮಗಳಿಗೆ ಹೊಂದಿಕೆಯಾಗುತ್ತವೆಯೇ ಎಂದು ಖಚಿತಪಡಿಸಿಕೊಳ್ಳಿ. ಮೀಸಲಾತಿ ಅಥವಾ ಶುಲ್ಕ ವಿನಾಯಿತಿ ಪಡೆಯುವ ಅಭ್ಯರ್ಥಿಗಳು ಮಾನ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದಲೇ ದೃಢಪಡಿಸಿ. ನಿಗದಿತ ಅರ್ಜಿ ಶುಲ್ಕವನ್ನು ಹೊರತುಪಡಿಸಿ, ಉದ್ಯೋಗ ಕೊಡಿಸುವುದಾಗಿ ಹೇಳುವ ಅನಧಿಕೃತ ವ್ಯಕ್ತಿಗಳಿಗೆ ಹಣ ಪಾವತಿಸಬೇಡಿ.

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಲಿಂಕ್

BEL ನೇಮಕಾತಿಯ ಸಂಪೂರ್ಣ ನಿಯಮಗಳು, ಅಧಿಕೃತ ಅಧಿಸೂಚನೆ ಮತ್ತು ಆನ್‌ಲೈನ್ ಅರ್ಜಿ ಲಿಂಕ್‌ಗಾಗಿ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಿ.

ಅಧಿಕೃತ ವೆಬ್‌ಸೈಟ್: https://bel-india.in/

ಅರ್ಜಿ ಸಲ್ಲಿಸುವ ಮುನ್ನ ಮೂಲ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು 18 ನವೆಂಬರ್ 2026ರ ಕೊನೆಯ ದಿನಾಂಕದೊಳಗೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

https://kannadamahiti.com

Leave a Comment