Hassan AYUSH Recruitment 2026:ಹಾಸನ ಜಿಲ್ಲಾ ಆಯುಷ್ ಇಲಾಖೆ ನೇಮಕಾತಿ 2026 Vacancies, Eligibility & Salary Apply Now

Hassan AYUSH Recruitment 2026: ಹಾಸನ ಜಿಲ್ಲೆಯಲ್ಲಿ ಆಯುಷ್ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟವಾಗಿದ್ದು, ಸಂಬಂಧಿತ ವಿದ್ಯಾರ್ಹತೆ ಮತ್ತು ಕೆಲಸದ ಅನುಭವ ಹೊಂದಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಜಿಲ್ಲಾ ಆಯುಷ್ ಇಲಾಖೆಯು ವೈದ್ಯಕೀಯ ತಜ್ಞರು, ಔಷಧಿ ವಿತರಕರು ಮತ್ತು ಆಸ್ಪತ್ರೆಯ ಇತರ ಸಿಬ್ಬಂದಿ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಕೆಲಸದ ಅನುಭವಕ್ಕೆ ಹೊಂದಿಕೆಯಾಗುವ ಹುದ್ದೆಯನ್ನು ಗುರುತಿಸಿಕೊಂಡು, ನೇಮಕಾತಿಯ ನಿಯಮಗಳನ್ನು ಪರಿಶೀಲಿಸುವುದು ಮುಖ್ಯ.ಏಕೆಂದರೆ ಪ್ರತಿಯೊಂದು ಹುದ್ದೆಗೂ ಒಂದೇ ವಿದ್ಯಾರ್ಹತೆ ಅಥವಾ ಅನುಭವದ ನಿಯಮ ಅನ್ವಯಿಸುವುದಿಲ್ಲ.

AYUSH Recruitment ಬಗ್ಗೆ ಮೊದಲು ತಿಳಿದುಕೊಳ್ಳಿ

ಹಾಸನ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯು ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ. 19 ಅಕ್ಟೋಬರ್ 2026ರಂದು ಪ್ರಕಟವಾದ ಅಧಿಸೂಚನೆಯಲ್ಲಿ ಒಟ್ಟು 24 ಹುದ್ದೆಗಳನ್ನು ಗುರುತಿಸಲಾಗಿದೆ.

ಇದು ಖಾಯಂ ಸರ್ಕಾರಿ ನೇಮಕಾತಿಯಲ್ಲ.ಆಯ್ಕೆಯಾದ ಅಭ್ಯರ್ಥಿಗಳು ಇಲಾಖೆಯು ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಅರ್ಜಿ ಸಲ್ಲಿಸುವ ಮೊದಲು ಉದ್ಯೋಗದ ಅವಧಿ ಮತ್ತು ಸೇವಾ ನಿಯಮಗಳನ್ನು ಓದುವುದು ಮುಖ್ಯ.

AYUSH Recruitment ಪ್ರಮುಖ ವಿವರಗಳು

  • ಕೆಲಸದ ಸ್ಥಳ: ಹಾಸನ ಜಿಲ್ಲೆ
  • ಅರ್ಜಿಯ ಪ್ರಕಾರ: ಕಾಗದದ ಅರ್ಜಿ, ಅಂದರೆ ಆಫ್‌ಲೈನ್
  • ಅರ್ಜಿ ಶುಲ್ಕ: ಇಲ್ಲ
  • ಅರ್ಜಿ ಸ್ವೀಕಾರದ ಅಂತಿಮ ಸಮಯ: 5-11- 2026
  • ಅಧಿಕೃತ ಪ್ರಕಟಣೆ: ಹಾಸನ ಜಿಲ್ಲಾಡಳಿತದ ವೆಬ್‌ಸೈಟ್

ಯಾವ ವಿಭಾಗದಲ್ಲಿ ಎಷ್ಟು ಅವಕಾಶಗಳಿವೆ?

ನೇಮಕಾತಿ ಅಧಿಸೂಚನೆಯ ಪ್ರಕಾರ, ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳಿಗೆ 12 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಔಷಧಿ ವಿತರಕ ಹುದ್ದೆಗಳಿಗೆ 6 ಸ್ಥಾನಗಳಿದ್ದು, ಉಳಿದ ಹುದ್ದೆಗಳ ಸಂಖ್ಯೆಯು ಅದಕ್ಕಿಂತ ಕಡಿಮೆಯಾಗಿದೆ.

ಹಾಸನ ಆಯುಷ್ ನೇಮಕಾತಿ: ಹುದ್ದೆಗಳ ವಿವರ | Hassan AYUSH Recruitment: Vacancy Details

ಸಂಖ್ಯೆ / No.ಹುದ್ದೆಯ ಹೆಸರು / Post Nameಹುದ್ದೆಗಳ ಸಂಖ್ಯೆ / Vacancies
01ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯರು (Yoga & Naturopathy Specialist)01
02ಆಯುರ್ವೇದ ತಜ್ಞ ವೈದ್ಯರು (Ayurveda Specialist Doctor)01
03ಔಷಧಿ ವಿತರಕರು (Pharmacist / Medicine Distributor)06
04ಮಸಾಜ್ ಚಿಕಿತ್ಸಕರು (Massage Therapist)02
05ಸ್ತ್ರೀರೋಗ ವಿಭಾಗದ ಸಹಾಯಕರು (Female Disease Attendant)01
06ಬಹುಉದ್ದೇಶ ಕಾರ್ಯಕರ್ತರು (Multipurpose Worker)01
07ಸಮುದಾಯ ಆರೋಗ್ಯ ಅಧಿಕಾರಿಗಳು (Community Health Officers – CHO)12
ಒಟ್ಟು ಹುದ್ದೆಗಳು / Total Vacancies24

ನಿಮ್ಮ ಓದಿಗೆ ಹೊಂದುವ ಹುದ್ದೆ ಯಾವುದು?

ಈ ನೇಮಕಾತಿಯಲ್ಲಿ ಪದವೀಧರರು ಮತ್ತು ಕೆಲವು ಸಹಾಯಕ ಹುದ್ದೆಗಳಿಗೆ ಅಗತ್ಯವಾದ ಮೂಲ ವಿದ್ಯಾರ್ಹತೆ ಹೊಂದಿರುವವರಿಗೂ ಅವಕಾಶವಿದೆ. ಆದರೆ ಸಂಬಂಧಿತ ಕೆಲಸದ ಅನುಭವವನ್ನು ಅನೇಕ ಹುದ್ದೆಗಳಿಗೆ ಕಡ್ಡಾಯಗೊಳಿಸಲಾಗಿದೆ.

  • BAMS ಪದವೀಧರರು: ಆಯುರ್ವೇದ ತಜ್ಞ ವೈದ್ಯರ ಹುದ್ದೆಗೆ ಅಧಿಸೂಚನೆಯಲ್ಲಿ ತಿಳಿಸಿರುವ ಸ್ನಾತಕೋತ್ತರ ಅರ್ಹತೆ ಮತ್ತು ಅನುಭವ ಬೇಕಾಗುತ್ತದೆ. ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗೆ BAMS ಪದವಿ ಅಗತ್ಯ.
  • BNYS ಪದವೀಧರರು: ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ತಜ್ಞ ವೈದ್ಯರ ಹುದ್ದೆಗೆ ಸಂಬಂಧಿತ ಸ್ನಾತಕೋತ್ತರ ವಿದ್ಯಾರ್ಹತೆ ಹಾಗೂ ಅನುಭವದ ನಿಯಮಗಳನ್ನು ಪರಿಶೀಲಿಸಬೇಕು.
  • ಫಾರ್ಮಸಿ ಪದವೀಧರರಿಗೆ: ಔಷಧಿ ವಿತರಕ ಹುದ್ದೆಗೆ B.Pharm ಪದವಿ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಅಗತ್ಯವಿದೆ.. B.Pharm ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭಕ್ಕೆ D.Pharm ಅಭ್ಯರ್ಥಿಗಳನ್ನು ಪರಿಗಣಿಸುವ ಷರತ್ತೂ ಇದೆ.
  • 10ನೇ ತರಗತಿ ಉತ್ತೀರ್ಣರಾದವರಿಗೆ 10th Pass : ಮಸಾಜ್ ಚಿಕಿತ್ಸಕ, ಸ್ತ್ರೀರೋಗ ವಿಭಾಗದ ಸಹಾಯಕ ಮತ್ತು ಬಹುಉದ್ದೇಶ ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಅರ್ಹತೆಯ ವಿವರಗಳನ್ನು ಪರಿಶೀಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು, ಅಧಿಸೂಚನೆಯಲ್ಲಿ ತಿಳಿಸಿರುವ ಕೆಲಸದ ಅನುಭವದ ಷರತ್ತುಗಳನ್ನು ಗಮನಿಸಿ.ಇವುಗಳಿಗೆ ಸಂಬಂಧಿತ ಆಸ್ಪತ್ರೆ ಅಥವಾ ಚಿಕಿತ್ಸಾಲಯದ ಅನುಭವವೂ ಬೇಕಾಗುತ್ತದೆ.

ವೈದ್ಯಕೀಯ ಹುದ್ದೆಗಳಿಗೆ ಬೇಕಾದ ವಿಶೇಷ ಅರ್ಹತೆಗಳನ್ನು ಸಾಮಾನ್ಯ ಪದವಿ ಅಥವಾ ಬೇರೆ ಕ್ಷೇತ್ರದ ಅನುಭವದಿಂದ ಬದಲಾಯಿಸಲಾಗುವುದಿಲ್ಲ. ನಿಮ್ಮ ಪ್ರಮಾಣಪತ್ರಗಳು ಅಧಿಸೂಚನೆಯ ಷರತ್ತುಗಳಿಗೆ ಸರಿಹೊಂದಬೇಕು.

ವಯಸ್ಸಿನ ನಿಯಮಗಳು

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು. ಗರಿಷ್ಠ ವಯೋಮಿತಿಯನ್ನು ವರ್ಗದ ಪ್ರಕಾರ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳ ವರ್ಗಗರಿಷ್ಠ ವಯೋಮಿತಿ ವರ್ಷ
ಸಾಮಾನ್ಯ ವರ್ಗ40
2A, 2B, 3A, 3B43
SC, ST ಮತ್ತು ಪ್ರವರ್ಗ-145

ಮೀಸಲಾತಿ ಸೌಲಭ್ಯ ಪಡೆಯುವವರು ಅರ್ಜಿಯೊಂದಿಗೆ ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಪ್ರಮಾಣಪತ್ರದ ನಮೂನೆ ಮತ್ತು ಮಾನ್ಯತೆಯ ಷರತ್ತುಗಳನ್ನು ಮೂಲ ಅಧಿಸೂಚನೆಯಲ್ಲಿ ಪರಿಶೀಲಿಸಿ.

ಸಂಬಳದ ಮಾಹಿತಿ

ಹಾಸನ ಜಿಲ್ಲಾ ಆಯುಷ್ ಇಲಾಖೆಯ ನೇಮಕಾತಿಯಲ್ಲಿ ಹುದ್ದೆಗಳಿಗೆ ಅನುಗುಣವಾಗಿ ವೇತನದ ಮೊತ್ತವನ್ನು ನಿಗದಿಪಡಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ.

ಹುದ್ದೆಯ ಹೆಸರುಮಾಸಿಕ ವೇತನ
ತಜ್ಞ ವೈದ್ಯರು₹52,550 + ಅನ್ವಯಿಸಿದರೆ ₹5,000 ಸ್ನಾತಕೋತ್ತರ ಭತ್ಯೆ
ಔಷಧ ವಿತರಕರು₹27,550
ಮಸಾಜ್ ಚಿಕಿತ್ಸಕರು₹18,500
ಸ್ತ್ರೀರೋಗ ವಿಭಾಗದ ಸಹಾಯಕರು₹18,500
ಬಹುಉದ್ದೇಶ ಸಹಾಯಕ ಸಿಬ್ಬಂದಿ₹16,900

|ಸಮುದಾಯ ಆರೋಗ್ಯ ಅಧಿಕಾರಿ (CHO)|₹25,000 ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಹೆಚ್ಚುವರಿ.

ಇವು ಗುತ್ತಿಗೆ ಆಧಾರದ ಸಂಚಿತ ವೇತನದ ವಿವರಗಳು. ಖಾಯಂ ಸರ್ಕಾರಿ ನೌಕರರಿಗೆ ಅನ್ವಯಿಸುವ ಎಲ್ಲ ಸೌಲಭ್ಯಗಳು ಈ ಹುದ್ದೆಗಳಿಗೂ ಅನ್ವಯಿಸುತ್ತವೆ ಎಂದು ಭಾವಿಸಬಾರದು.

ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದು ಮುಖ್ಯ?

ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಇತರ ಅರ್ಹತಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಅರ್ಹ ಅಭ್ಯರ್ಥಿಗಳನ್ನು ಅವರ ಹುದ್ದೆಗೆ ಸಂಬಂಧಿಸಿದ ಮಾನದಂಡಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗುತ್ತದೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿದ್ಯಾರ್ಹತೆಗೆ 70%, ಸಂಬಂಧಿತ ಕೆಲಸದ ಅನುಭವಕ್ಕೆ 20% ಹಾಗೂ ಸಂದರ್ಶನಕ್ಕೆ 10% ಅಂಕಗಳನ್ನು ನಿಗದಿಪಡಿಸಲಾಗಿದೆ. ಅನುಭವದ ಆಧಾರದ ಮೇಲೆ ಅಂಕಗಳನ್ನು ಪಡೆಯಲು, ಅಧಿಸೂಚನೆಯಲ್ಲಿ ಸೂಚಿಸಿರುವ ಮಾನದಂಡಗಳಿಗೆ ಹೊಂದಿಕೆಯಾಗುವ ಮಾನ್ಯ ದಾಖಲೆಗಳನ್ನು ಸಲ್ಲಿಸುವುದು ಅಗತ್ಯ.

ಆದ್ದರಿಂದ ಅನುಭವದ ಪ್ರಮಾಣಪತ್ರ ಮಾತ್ರವಲ್ಲದೆ, ಅನ್ವಯಿಸುವ ಸಂದರ್ಭದಲ್ಲಿ ಕೊನೆಯ ಮೂರು ತಿಂಗಳ ವೇತನದ ಪ್ರಮಾಣಪತ್ರವನ್ನೂ ಸಿದ್ಧಪಡಿಸಿಕೊಳ್ಳಿ.

ಅರ್ಜಿ ಕಳುಹಿಸುವ ಮೊದಲು ಈ ಕೆಲಸಗಳನ್ನು ಮುಗಿಸಿ

ಈ ನೇಮಕಾತಿಗೆ ವೆಬ್‌ಸೈಟ್‌ನಲ್ಲಿ ಫಾರ್ಮ್ ತುಂಬಿ ಸಲ್ಲಿಸುವ ವ್ಯವಸ್ಥೆಯ ಬದಲು, ಪ್ರಕಟಣೆಯೊಂದಿಗೆ ನೀಡಿರುವ ಅರ್ಜಿ ನಮೂನೆಯನ್ನು ಬಳಸಬೇಕು.

  1. ಹಾಸನ ಜಿಲ್ಲಾಡಳಿತದ ನೇಮಕಾತಿ ಪುಟ ತೆರೆಯಿರಿ.
  2. ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  3. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸೂಕ್ತವಾದ ಹುದ್ದೆಯನ್ನು ಆಯ್ಕೆ ಮಾಡಿಕೊಂಡು, ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
  4. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಮತ್ತು ಕೆಲಸದ ಅನುಭವವನ್ನು ದೃಢೀಕರಿಸುವ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  5. ಅಭ್ಯರ್ಥಿಗಳು 2 (or more )ಅಥವಾ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದರೆ, ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ಅರ್ಜಿಯನ್ನು ಸಿದ್ಧಪಡಿಸಿ ಸಲ್ಲಿಸುವುದು ಕಡ್ಡಾಯವಾಗಿದೆ.
  6. ಲಕೋಟೆಯ ಮೇಲೆ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಬರೆಯಿರಿ.
  7. ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ 5 ನವೆಂಬರ್ 2026ರ ಸಂಜೆ 5:30ರೊಳಗೆ ತಲುಪಿಸಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ,
ಹೊಸಲೈನ್ ರಸ್ತೆ,
ಹಾಸನ – 573201, ಕರ್ನಾಟಕ.

ಅರ್ಜಿಯನ್ನು ಖುದ್ದಾಗಿ ನೀಡಬಹುದು ಅಥವಾ ಅಂಚೆ ಮೂಲಕ ಕಳುಹಿಸಬಹುದು. ಅಂಚೆ ಮೂಲಕ ಅರ್ಜಿ ಕಳುಹಿಸುವವರು, ಕೊನೆಯ ದಿನಾಂಕದೊಳಗೆ ಅರ್ಜಿ ಸಂಬಂಧಿತ ಕಚೇರಿಗೆ ತಲುಪುವಂತೆ ಮುಂಚಿತವಾಗಿಯೇ ಕಳುಹಿಸಬೇಕು.

ಕೊನೆಯ ದಿನಾಂಕದ ಬಗ್ಗೆ ನಿರ್ಲಕ್ಷ್ಯ ಬೇಡ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ, ನಿಗದಿತ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಅಪೂರ್ಣವಾಗಿರುವ ಅಥವಾ ಗಡುವಿನ ನಂತರ ತಲುಪುವ ಅರ್ಜಿಗಳನ್ನು ತಿರಸ್ಕರಿಸುವ ಸಾಧ್ಯತೆ ಇರುವುದರಿಂದ, ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿಕೊಳ್ಳಿ.

ಈ ನೇಮಕಾತಿಯ ಮತ್ತೊಂದು ಮುಖ್ಯ ಅಂಶವೆಂದರೆ, ಹುದ್ದೆಗಳು ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿವೆ. ಅಧಿಸೂಚನೆಯಲ್ಲಿ ನೀಡಿರುವ ಅವಧಿ ಮತ್ತು ಸೇವಾ ಷರತ್ತುಗಳನ್ನು ತಿಳಿದುಕೊಂಡ ನಂತರವೇ ಅರ್ಜಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಿ.

ಅಧಿಕೃತ ಮಾಹಿತಿ ಮತ್ತು ಅರ್ಜಿ ನಮೂನೆ: https://hassan.nic.in/en/notice/ayush-recruitment-2026/

ಅಧಿಕೃತ ಪ್ರಕಟಣೆ: ಹಾಸನ ಜಿಲ್ಲಾಡಳಿತದ ವೆಬ್‌ಸೈಟ್

ಅಧಿಕೃತ ಪ್ರಕಟಣೆ PDF : ಹಾಸನ ಜಿಲ್ಲಾಡಳಿತದ PDF

ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅನುಭವ ಮತ್ತು ಆಯ್ಕೆಮಾಡುವ ಹುದ್ದೆಗೆ ನಿಗದಿಪಡಿಸಿರುವ ಅರ್ಹತೆಗಳನ್ನು ಪರಿಶೀಲಿಸಿಕೊಳ್ಳಬೇಕು. ವೇತನ ಮತ್ತು ಹುದ್ದೆಯ ಹೆಸರಿನ ಜೊತೆಗೆ, ಕೆಲಸದ ಸ್ವರೂಪ ಹಾಗೂ ನೇಮಕಾತಿಯ ಷರತ್ತುಗಳನ್ನೂ ಪರಿಗಣಿಸಿ ಸೂಕ್ತ ಹುದ್ದೆಗೆ ಅರ್ಜಿ ಸಲ್ಲಿಸುವುದು ಉತ್ತಮ. ನಿಮ್ಮ ವಿದ್ಯಾರ್ಹತೆ, ಅನುಭವ ಮತ್ತು ಪ್ರಮಾಣಪತ್ರಗಳು ನಿಗದಿತ ಮಾನದಂಡಗಳಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಪರಿಶೀಲಿಸುವುದೇ ಸರಿಯಾದ ಮೊದಲ ಹೆಜ್ಜೆ.

https://kannadamahiti.com

Leave a Comment